ನೀವೇನಾದ್ರು ಭಾನುವಾರದಂದು ಅಕ್ಕಿಹಿಟ್ಟಿನಿಂದ ಈ ಸಣ್ಣ ಪ್ರಯೋಗ ಮಾಡಿದರೆ ನೀವು ಕೋರಿಕೊಂಡ ಉದ್ಯೋಗ ವ್ಯಾಪಾರ ಧನಲಾಭ ಪ್ರಾಪ್ತಿ!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಜೀವನದಲ್ಲಿ ಮುಂದೆ ಬರಬೇಕು ಎಂಬ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ ಆದರೆ ಆ ಆಸೆಗೆ ತಕ್ಕಂತೆ ಕೆಲಸ ಮಾಡಿದರೂ ಕೂಡ ದೇವರ ಅನುಗ್ರಹ ಕಡಿಮೆ ಇರುತ್ತದೆ. ಅದರಲ್ಲೂ ಕೂಡ ಉದ್ಯೋಗದ ವಿಷಯಕ್ಕೆ ಬಂದರೆ ನಾವು ಎಷ್ಟು ಪ್ರಯತ್ನಪಟ್ಟರೂ ಕೂಡ ನಮಗೆ ಪ್ರಮೋಶನ್ ಸಿಗುತ್ತಿರುವುದಿಲ್ಲ ಉನ್ನತ ಸ್ಥಾನಕ್ಕೆ ಹೋಗಬೇಕು ಎಂದು ಹಲವಾರು ರೀತಿ ಪ್ರಯತ್ನಪಟ್ಟರೂ ಕೂಡ ನಮಗೆ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತಿರುವುದಿಲ್ಲ.

ಈ ರೀತಿ ನಿಮಗೆ ಯಾವುದಾದರೂ ಸಮಸ್ಯೆಗಳು ಕಾಡುತ್ತಿದ್ದರೆ ಈಗ ನಾವು ಹೇಳುವಂತಹ ಸರಳವಾದ ಪೂಜಾ ವಿಧಾನವನ್ನು ಅನುಸರಿಸಿ ಸಾಮಾನ್ಯವಾಗಿ ಗ್ರಹಗಳಲ್ಲಿ ಎಲ್ಲಾ ಗ್ರಹಗಳು ಕೂಡ ನಾವು ತುಂಬಾ ಭಕ್ತಿಯಿಂದ ಪೂಜೆ ಮಾಡುತ್ತೇವೆ ಆದರೆ ಕೆಲಸದ ವಿಷಯಕ್ಕೆ ಬಂದರೆ ಹೆಚ್ಚಾಗಿ ನಾವು ಪೂಜೆ ಮಾಡಬೇಕಾದುದು ಕೇವಲ ಸೂರ್ಯದೇವನನ್ನು ಅಂದರೆ ಸೂರ್ಯನಾರಾಯಣನನ್ನು.

ಕೆಲಸದ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ತೊಂದರೆ ತಾಪತ್ರಯಗಳಿದ್ದರೂ ಅದನ್ನ ನಿವಾರಣೆ ಮಾಡುವುದು ಕೇವಲ ಸೂರ್ಯನೇ ಈ ಸೂರ್ಯನನ್ನು ಪೂಜೆ ಮಾಡಲು ಒಂದು ವಿಧಾನವಿದೆ ಆ ವಿಧಾನವನ್ನ ಅನುಸರಿಸಿ ಪೂಜೆ ಮಾಡಿದರೆ ಖಂಡಿತವಾಗಿಯೂ ನಿಮಗೆ ಕೆಲಸದಲ್ಲಿ ಎಲ್ಲಾ ರೀತಿಯಾದಂತಹ ಯಶಸ್ಸು ಕೂಡ ದೊರೆಯುತ್ತದೆ

ಆ ಪೂಜೆ ಮಾಡುವ ವಿಧಾನ ಯಾವುದೆಂದರೆ ಈ ಪೂಜೆ ಕೇವಲ ಭಾನುವಾರದಂದು ಮಾತ್ರ ಮಾಡಬೇಕು ಮನೆಯಲ್ಲಿ ಯಾರೂ ಇಲ್ಲದ ಸ್ಥಳಕ್ಕೆ ಹೋಗಿ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಒಂದು ಸರ್ಕಲ್ಲನ್ನು ಹಾಕಿ ಅಂದರೆ ಒಂದು ವೃತ್ತಾಕಾರವನ್ನು ಬರೆಯಿರಿ

ಅದರ ಒಳಗೆ ಒಂದು ಬಿಂದಿಗೆ ನೀರನ್ನ ಇಡಿ ಪ್ಲಾಸ್ಟಿಕ್ ಬಿಂದಿಗೆ ಬಳಸಬೇಡಿ ಬದಲು ತಾಮ್ರ ಅಥವಾ ಸ್ಟೀಲ್ ಬಿಂದಿಗೆ ಬಳಸಿ ಅದು ಉತ್ತಮ ಪ್ಲಾಸ್ಟಿಕ್ ಬಳಕೆ ಬೇಡ ನಿಮಗೆ ಸ್ನಾನ ಮಾಡಲು ಎಷ್ಟು ನೀರು ಬೇಕಾಗುತ್ತದೆ ಅಷ್ಟು ನೀರನ್ನು ಆ ಬಿಂದಿಗೆ ಇಡಿಸಿದರೆ ಸಾಕು ಅದಾದ ನಂತರ ಸೂರ್ಯದೇವನನ್ನ ನೆನೆದುಕೊಂಡು, ನೀವು ಆ ನೀರನ್ನ ಸ್ನಾನ ಮಾಡಿ.

ಮತ್ತೊಂದು ವಿಧಾನವೆಂದರೆ ನೀವು ಭಾನುವಾರದಂದು ಬೆಳಿಗ್ಗೆ ಬೇಗ ಎದ್ದು ಒಂದು ತಾಮ್ರದ ಚೊಂಬನ್ನು ತೆಗೆದುಕೊಳ್ಳಿ ತೆಗೆದುಕೊಂಡು ಅದಕ್ಕೆ ಒಣ ಮೆಣಸಿನ ಕಾಯಿಯ ಒಳಗೆ ಬರುವಂಥ ಬೀಜಗಳಲ್ಲಿ ಹನ್ನೊಂದು ಬೀಜಗಳನ್ನು ತೆಗೆದುಕೊಂಡು ಆ ತಾಮ್ರದ ಚೊಂಬಿ ನೊಳಕ್ಕೆ ಹಾಕಿ ಅದಾದ ನಂತರ ಪೂರ್ವ ದಿಕ್ಕಿಗೆ ನಿಂತುಕೊಂಡು

ಯಾವುದಾದರೂ ಒಂದು ಗಿಡಕ್ಕೆ ಈ ತಾಮ್ರದ ಚೊಂಬಿನಲ್ಲಿರುವ ನೀರನ್ನ ಸೂರ್ಯನಿಗೆ ಅರ್ಘ್ಯ ಅಂದರೆ ಸೂರ್ಯ ನಿಗೆ ಅರ್ಪಿಸಿ. ಇದರಿಂದ ಖಂಡಿತವಾಗಿಯೂ ನಿಮಗೆ ಕೆಲಸದಲ್ಲಿ ಯಾವುದೇ ಅಡೆ ತಡೆಗಳಿದ್ದರೂ ಕೂಡ ಆ ಅಡೆತಡೆಗಳೆಲ್ಲ ಸರಿಯುತ್ತವೆ ಮತ್ತು ನೀವು ಕೆಲಸಕ್ಕೆ ಸೇರಬೇಕು ಎಂಬ ಆಸೆ ಇದ್ದರೆ ಖಂಡಿತವಾಗಿಯೂ ಅದು ಬೇಗ ಈಡೇರುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂಶಯವಿಲ್ಲ.

ಇದು ಸರಳವಾದಂಥ ಪೂಜಾಬವಿಧಾನವಾಗಿದೆ ಅದನ್ನ ಬಿಟ್ಟು ನಾವು ನವಗ್ರಹ ಶಾಂತಿಯನ್ನು ಮಾಡಿಸಲು ಹೋಗಬಾರದು ಏಕೆಂದರೆ ಸೂರ್ಯನಿಗೆ ಮಾಡಬೇಕಾದಂಥ ಪೂಜಾ ವಿಧಾನವನ್ನೇ ಮಾಡಬೇಕು ಅದನ್ನು ಹೊರತುಪಡಿಸಿ ಎಲ್ಲಾ ಗ್ರಹಗಳಿಗೂ ಮಾಡುವಂಥ ಪೂಜೆಯನ್ನು ಮಾಡಿದರೆ ನಮಗೆ ಫಲ ದೊರೆಯುವುದಿಲ್ಲ

ಈಗ ಮೇಲೆ ಹೇಳಿದಂತಹ ವಿಧಾನದಲ್ಲಿ ಯಾವುದಾದರೂ ಒಂದು ವಿಧಾನವನ್ನು ಬಳಸಿ ನಿಮಗೆ ಕೆಲಸದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕೂಡ ಬಹುಬೇಗ ನಿವಾರಣೆಯಾಗುತ್ತದೆ ಎಂಬುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ನಿಮಗೆ ಇದರಿಂದ ಪರಿಣಾಮ ದೊರೆತ ನಂತರ ಬೇರೆಯವರಿಗೂ ಕೂಡ ಈ ಸರಳವಾದ ಮಾಹಿತಿಯನ್ನು ತಲುಪಿಸುವ ಪ್ರಯತ್ನವನ್ನು ಮಾಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *