ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಬೆಳಗ್ಗೆ ಏಳುವಾಗ ನೀವು ಯಾವ ರೀತಿಯಲ್ಲಿ ಎದ್ದರೆ ನಿಮಗೆ ಆ ದಿನ ಜಯದ ದಿನವಾಗಿರುತ್ತದೆ ಎನ್ನುವ ಮಾಹಿತಿಯನ್ನು ಸಂಪೂರ್ಣವಾಗಿ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ.ಸಾಮಾನ್ಯವಾಗಿ ಬೆಳಗ್ಗೆ ಎದ್ದೇಳುವಾಗ ಕೆಲವರು ಮಾಡುವ ತಪ್ಪಿನಿಂದಲೇ ಅವರಿಗೆ ಆ ದಿನ ತುಂಬಾನೇ ದುರದೃಷ್ಟಕರ ದಿನವಾಗಿರುತ್ತದೆ.ಹಾಗಾಗಿ ನಾವು ಎದ್ದೇಳುವಾಗ ಕೂಡ ಕೆಲವು ನಿಯಮಗಳನ್ನು ಪಾಲಿಸಿದರೆ ನಮಗೆ ಆ ದಿನವನ್ನು ಸಂತೋಷ ವಾಗಿ ಹಾಗೂ ನೆಮ್ಮದಿಯಾಗಿ ಕಳೆಯಬಹುದು ಸ್ನೇಹಿತರೆ.
ಸಾಮಾನ್ಯವಾಗಿ ಎಲ್ಲರೂ ಕೂಡ ಬೆಳಗ್ಗೆ ಎದ್ದೇಳುವಾಗ ಬಲಕ್ಕೆ ತಿರುಗಿ ಏಳುತ್ತಾರೆ. ಹೌದು ಸಾಮಾನ್ಯವಾಗಿ ಬೆಳಗ್ಗೆ ಏಳುವಾಗ ಬಲಕ್ಕೆ ತಿರುಗಿ ಏಳಬೇಕು.ಹೀಗೆ ನೀವು ಬಲಕ್ಕೆ ತಿರುಗಿದರೆ ನಿಮ್ಮ ಆ ದಿನ ಸಂಪೂರ್ಣವಾಗಿ ಜಯವನ್ನು ಸಾಧಿಸುವಂತಹ ದಿನವಾಗಿರುತ್ತದೆ.ಹಾಗೆಯೇ ಬೆಳಗ್ಗೆ ಏಳುವಾಗ ಗಡಿಬಿಡಿಯಲ್ಲಿ ಯಾವಾಗಲೂ ಏಳಬಾರದು . ಪ್ರಶಾಂತತೆಯಿಂದ ನೆಮ್ಮದಿಯಾಗಿ ಸಂತೋಷವಾಗಿ ಬೆಳಗ್ಗೆ ಹೇಳಬೇಕು ಹೀಗೆ ಇದ್ದರೆ ನಿಮ್ಮ ದಿನವೂ ಅಂದರೆ ಆ ದಿನವೂ ಜಯವಾಗಿರುತ್ತದೆ ಎನ್ನುವ ನಂಬಿಕೆಯಿದೆ ಸ್ನೇಹಿತರೆ. ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಬಲಕ್ಕೆ ತಿರುಗಿ ಏಳುವಂತಹ ನಿಯಮವನ್ನು ಪಾಲಿಸುತ್ತಾರೆ.
ಹೀಗೆ ಬಲಕ್ಕೆ ತಿರುಗಿದ ನಂತರ ನೀವು ಕಣ್ಣುಗಳನ್ನು ಮುಚ್ಚಿ ಮೊದಲು ನಿಮ್ಮ ಕೈಗಳನ್ನು ನೋಡಬೇಕು.ಯಾಕೆಂದರೆ ನಿಮ್ಮ ಕೈಗಳಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ ಸ್ನೇಹಿತರೆ.ನಿಮ್ಮ ಅಂಗೈಗಳನ್ನು ನೋಡಿಕೊಂಡ ನಂತರ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ಮಂಚದಿಂದ ಕೆಳಗೆ ಇಳಿಯಬೇಕು ಹೀಗೆ ಮಾಡುವುದರಿಂದ ನಿಮ್ಮ ದಿನವೂ ಸಂತೋಷಕರವಾಗಿ ಇರುವುದೆಲ್ಲಿ ಎರಡುಮಾತಿಲ್ಲ ಸ್ನೇಹಿತರೆ.ಹೌದು ಸಾಮಾನ್ಯವಾಗಿ ನೀವು ಎದ್ದನಂತರ ಪೂರ್ವದಿಕ್ಕಿನಲ್ಲಿ ಇರುವಂತಹ ಬಾಗಿಲನ್ನು ತೆರೆದು ಮೊದಲು ನೀವು ನಿಮ್ಮ ಮನೆಯಲ್ಲಿರುವ ಅಂತಹವುಗಳನ್ನು ಅಥವಾ ಎಲ್ಲಿಯಾದರೂ ಕಾಣುವಂತಹ ಗೋವುಗಳನ್ನು ನೋಡಬೇಕು.
ನಿಮಗೆ ಅವುಗಳನ್ನು ನೋಡಲು ಸಾಧ್ಯವಾಗಲಿಲ್ಲ ಎಂದರೆ ಒಂದು ತೆಂಗಿನ ಮರವನ್ನು ನೋಡಬೇಕು ಹೀಗೆ ನೋಡಿದರೆ ನೀವು ದಿನವೆಲ್ಲ ಸಂತೋಷವಾಗಿರುತ್ತೀರಿ.ಹಾಗೂ ಅದರಲ್ಲಿ ನೀವು ಅಂದುಕೊಂಡಿರುವಂತೆ ಕೆಲಸಗಳು ಕೂಡ ನೆರವೇರುತ್ತವೆ.ಹೌದು ಸಾಮಾನ್ಯವಾಗಿ ಗೋವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿರುವುದರಿಂದ ನೀವು ಎದ್ದ ತಕ್ಷಣ ಗೋವುಗಳನ್ನು ನೋಡುವುದರಿಂದ ನಿಮಗೆ ಪುಣ್ಯ ಲಭಿಸುತ್ತದೆ ಸ್ನೇಹಿತರೆ.ಹಾಗು ತೆಂಗಿನ ಮರವನ್ನು ಮುಕ್ಕಣ್ಣೇಶ್ವರ ನಿಗೆ ಹೋಲಿಸಲಾಗಿದೆ ಹೀಗಾಗಿ ನೀವು ತೆಂಗಿನ ಮರವನ್ನು ಬೆಳಗ್ಗೆ ಎದ್ದ ತಕ್ಷಣ ನೋಡಿದರೆ ನಿಮ್ಮ ದಿನ ತುಂಬಾನೇ ಉಲ್ಲಾಸಕರ ವಾಗಿರುತ್ತದೆ.
ಹಾಗೂ ಈಶ್ವರನ ಅಂದರೆ ಶಿವನ ಅನುಗ್ರಹ ನಿಮ್ಮ ಮೇಲೆ ಯಾವಾಗಲೂ ಇರುತ್ತದೆ ಸ್ನೇಹಿತರೆ.ಹೀಗೆ ನೀವು ಬೆಳಗ್ಗೆ ಹೇಳುವಾಗ ಅದೃಷ್ಟ ನಿಮ್ಮ ಕೈಯಲ್ಲೇ ಇರುತ್ತದೆ ಹೀಗಾಗಿ ಕೆಲವು ನಿಯಮಗಳನ್ನು ಪಾಲಿಸಿಕೊಂಡು ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಿ ಸ್ನೇಹಿತರೆ.ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.