ಮನೆಯಲ್ಲಿ ಇಂತಹ ಕೆಲವೊಂದು ಪರಿಹಾರಗಳನ್ನು ನೀವು ಕೈಗೊಳ್ಳುವುದರಿಂದ ಕಾರ್ಯಕ್ಷೇತ್ರದಲ್ಲಿ ಲಾಭವು ಉಂಟಾಗಲಿದೆ ಮತ್ತು ಲಕ್ಷ್ಮೀದೇವಿಯ ಸಾನ್ನಿಧ್ಯವನ್ನು ನೀವು ಪಡೆದುಕೊಳ್ಳಲಿದ್ದೀರಿ.
ಇದೊಂದು ವಾಸ್ತು ಶಾಸ್ತ್ರಕ್ಕೆ ಸಂಬಂಧಪಟ್ಟ ಕೆಲವೊಂದು ಪರಿಹಾರವಾಗಿದ್ದು ನೀವು ಇಂತಹ ಸಣ್ಣ ಪುಟ್ಟ ಪರಿಹಾರಗಳನ್ನು ಕೈಗೊಳ್ಳಿ ಇದರಿಂದ ನಿಮ್ಮ ಮನೆಯಲ್ಲಿ ಅಗಾಧವಾದ ಬೆಳವಣಿಗೆಗಳಾಗುವ ಜೊತೆಗೆ ಬದಲವಣೆಗಳು ಕೂಡ ಆಗುತ್ತದೆ. ತಿಳಿಯೋಣ ಬನ್ನಿ.
ಇಂದಿನ ಮಾಹಿತಿಯಲ್ಲಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವುದಕ್ಕಾಗಿ ವಾಸ್ತು ಶಾಸ್ತ್ರದ ಪ್ರಕಾರ ಹೇಗೆ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು.
ಹೌದು ಸಾಮಾನ್ಯವಾಗಿ ಮನೆಯಲ್ಲಿ ವಾಸ್ತು ದೋಷಗಳಿದ್ದರೆ ಆ ಮನೆಯಲ್ಲಿ ಏಳಿಗೆ ಆಗುತ್ತಿರುವುದಿಲ್ಲ ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಪರಿ ತಡೆ ಆಗುತ್ತಿರುತ್ತದೆಯೊ ಹೊರತು ಯಾವ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತಾ ಇರುವುದಿಲ್ಲ .
ಹಾಗೆಯೇ ವಾಸ್ತು ದೋಷವಿದ್ದರೆ ಮನೆಯಲ್ಲಿ ಕಿರಿಕಿರಿ ಉಂಟಾಗುತ್ತಲೇ ಇರುತ್ತದೆ ಮನಸ್ಸಿಗೆ ಶಾಂತಿ ಕೂಡ ಇರುವುದಿಲ್ಲ.ವಾಸ್ತು ಶಾಸ್ತ್ರ ಪ್ರಕಾರ ಈ ಕೆಲವೊಂದು ಪರಿಹಾರವನ್ನು ಕೈಗೊಳ್ಳಿ ಲಕ್ಷ್ಮೀ ದೇವಿಯ ಸಾನ್ನಿಧ್ಯ ಮನೆಯಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತದೆ.
ಹಾಗಾದರೆ ಮೊದಲನೆಯ ಪರಿಹಾರವೇನು ಎಂಬುದನ್ನು ಹೇಳುವುದಾದರೆ ಮುಖ್ಯ ದ್ವಾರವು ಲಕ್ಷ್ಮಿ ಪ್ರವೇಶಿಸುವ ತಾಣ ಇದಾಗಿರುತ್ತದೆ ಈ ಒಂದು ತಾಣ ಯಾವಾಗಲೂ ಸ್ವಚ್ಛತೆ ಯಿಂದ ಕೂಡಿರಬೇಕು, ಹಾಗೇ ಮನೆಯ ಮುಖ್ಯ ದ್ವಾರದ ಹೊಸ್ತಿಲನ್ನು ಕೆಂಪು ಅಥವಾ ಮೆರೂನ್ ಬಣ್ಣದಿಂದ ಅಲಂಕರಿಸಬೇಕು.
ಮನೆಯ ಮುಖ್ಯ ದ್ವಾರವನ್ನು ಗಾಢ ಬಣ್ಣದಿಂದ ಅಲಂಕರಿಸಲು ಸಾಧ್ಯವಾಗದೇ ಇದ್ದಾಗ ಮನೆಯ ಮುಖ್ಯದ್ವಾರದಲ್ಲಿ ಕೆಂಪು ಅಥವಾ ಮರೂನ್ ಬಣ್ಣದ ವಿನ್ಯಾಸಗಳನ್ನು ತಂದು ಮನೆಯ ಮುಖ್ಯದ್ವಾರವನ್ನು ಅಲಂಕರಿಸಬೇಕು.
ಗಾಢ ಬಣ್ಣದಿಂದ ಅಲಂಕರಿಸಬೇಕು ಅಂತ ಅನ್ನುವುದಾದರೆ ಯಾವುದೇ ಕಾರಣಕ್ಕೂ ಕಪ್ಪು ಬಣ್ಣವನ್ನು ಹೊಸ್ತಿಲಿಗೆ ಅಥವಾ ಮನೆಯ ಮುಂದೆ ಹಚ್ಚಬೇಡಿ ಇದರಿಂದ ದಾರಿದ್ರ್ಯವೂ ಎದುರಾಗಬಹುದು.
ಪ್ರತಿ ದಿನ ಮನೆಯ ಮುಖ್ಯ ದ್ವಾರವನ್ನು ಸ್ವಚ್ಛ ಪಡಿಸಬೇಕು ವಾರಕ್ಕೆ ಒಮ್ಮೆ ಗಂಜಲ ಅಥವಾ ಅರಿಶಿನದ ನೀರಿನಿಂದ ಆ ಮನೆಯ ಮುಖ್ಯದ್ವಾರವನ್ನು ಸ್ವಚ್ಛ ಮಾಡುವುದರಿಂದ ಮನೆಗೆ ಯಾವುದೇ ದುಷ್ಟ ಶಕ್ತಿಗಳ ಪ್ರವೇಶ ಆಗುವುದಿಲ್ಲ ಹಾಗೆಯೇ ಯಾವಾಗಲೂ ಮನೆಯ ಮುಖ್ಯ ದ್ವಾರದ ಹೊಸ್ತಿಲಿಗೆ ಅರಿಶಿನ ಕುಂಕುಮ ಮತ್ತು ರಂಗೋಲಿಯನ್ನು ಹಾಕಿರುವುದು ಉತ್ತಮ.
ಮನೆಯ ಮುಖ್ಯ ದ್ವಾರದಲ್ಲಿ ಓಂ ಅಥವಾ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು ಇದರಿಂದ ಮನೆಯ ಒಳಗೆ ಲಕ್ಷ್ಮೀದೇವಿ ಪ್ರವೇಶಿಸುತ್ತಾಳೆ ಮತ್ತು ಈ ರೀತಿಯ ಸ್ವಸ್ತಿಕ್ ಮತ್ತು ಓಂ ಚಿಹ್ನೆಯು ಮನೆಗೆ ಸಕಾರಾತ್ಮಕ ಶಕ್ತಿಯನ್ನು ಪಸರಿಸುತ್ತದೆ ಈ ಚಿಹ್ನೆಗಳ ಮಹತ್ವವನ್ನು ಕೂಡ ನಾನು ಈ ಹಿಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಟ್ಟಿದ್ದೇನೆ.
ಈ ರೀತಿಯಾಗಿ ಲಕ್ಷ್ಮೀದೇವಿಯು ಪ್ರಸನ್ನಳಾಗಬೇಕಾದರೆ ಮನೆಯ ಮುಖ್ಯ ದ್ವಾರವು ಸ್ವಚ್ಛವಾಗಿರಬೇಕು ಮನೆಯ ಮುಖ್ಯ ದ್ವಾರದ ಹೊಸ್ತಿಲು ಹರಿಶಿನ ಕುಂಕುಮದಿಂದ ಅಲಂಕಾರ ಮಾಡಿರಬೇಕು ಮನೆಯ ಮುಂದೆ ರಂಗೋಲಿಯನ್ನು ಹಾಕಿರಬೇಕು ಇವೆಲ್ಲವೂ ಕೂಡ ಲಕ್ಷ್ಮೀದೇವಿಯನ್ನು ಆಕರ್ಷಿಸುವಂತಹ ಕೆಲವೊಂದು ಪರಿಹಾರಗಳಾಗಿವೆ.
ಇನ್ನು ವಾಸ್ತು ದೋಷ ನಿವಾರಣೆಗಾಗಿಯೂ ಕೂಡ ಇಂತಹ ಕೆಲವೊಂದು ಪರಿಹಾರಗಳನ್ನು ಪಾಲಿಸುವುದರಿಂದ ಆಗುತ್ತದೆ ಅನೇಕ ಪ್ರಯೋಜನಗಳು ಮತ್ತು ವಾಸ್ತು ದೋಷಗಳು ಕಡಿಮೆಯಾಗುತ್ತಾ ಬರುತ್ತದೆ.
ಇಂದಿನ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ನೀವು ಕೂಡ ವಾಸ್ತು ಶಾಸ್ತ್ರವನ್ನು ನಂಬುವುದಾದರೆ ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಮತ್ತು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದ ಶುಭ ದಿನ.