Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ಪ್ರತೀ ಶನಿವಾರದ ದಿವಸ ಸಾಸವೆ ಎಣ್ಣೆಯಿಂದ ಹೀಗೆ ಮಾಡಿದರೆ ಸಾಕು .. ನಿಮ್ಮ ಮನೆಯಲ್ಲಿ ಯಾವುದೇ ಕಷ್ಟಗಳಿದ್ದರೂ ಕೂಡ ಬಹಳ ಬೇಗ ನಿವಾರಣೆಯಾಗುತ್ತದೆ…!!!

ಶನಿವಾರದ ದಿನ ಸಾಸವೆ ಎಣ್ಣೆಯಿಂದ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿನ ಕಷ್ಟಗಳು ದೂರವಾಗುತ್ತವೆ ಶನಿದೇವರ ಕೆಲವೊಂದು ಮಹತ್ವಪೂರ್ಣ ವಿಷಯಗಳು ಯಾವುವು ಎಂಬುದನ್ನು ನೀವೇ ನೋಡಿ.ಸ್ನೇಹಿತರೆ ಶನಿವಾರ ತುಂಬಾ ವಿಶೇಷವಾದ ದಿನ ಈ ದಿನದಲ್ಲಿ ಕೆಟ್ಟ ಕಾರ್ಯಗಳನ್ನು ಅಂದರೆ ಮಾಟ-ಮಂತ್ರಗಳನ್ನು ಕೂಡ ಮಾಡುತ್ತಾರೆ ಹಾಗೆಯೇ ಕೆಲವೊಂದು ಒಳ್ಳೆಯ ಪರಿಹಾರಗಳನ್ನು ಕೂಡ ಮಾಡುತ್ತಾರೆ. ನೀವು ಮಾಡುವ ಕಾರ್ಯಗಳು ಎಲ್ಲರಿಗೂ ಒಳ್ಳೆಯದಾಗಿರಬೇಕು. ನಿಮಗೇನಾದರೂ ಶನಿದೇವರ ವಕ್ರದೃಷ್ಟಿ ಬಿದ್ದರೆ ನಿಮ್ಮ ಮನೆಯಲ್ಲಿ ಆರೋಗ್ಯದ ಸಮಸ್ಯೆ ಅಭಿವೃದ್ಧಿಯ ಸಮಸ್ಯೆ ಹಾಗೂ ನೆಮ್ಮದಿಯು ಸಹ ಇರುವುದಿಲ್ಲ.

ಹಾಗಾದರೆ ಇಂತಹ ಎಲ್ಲಾ ಸಮಸ್ಯೆಗಳಿಂದ ನೀವು ಹೇಗೆ ಹೊರಗೆ ಬರಬೇಕು ಎಂದು ತಿಳಿದುಕೊಳ್ಳಿ. ಪ್ರತಿದಿನ ಮನೆಯ ಮುಖ್ಯ ದ್ವಾರಕ್ಕೆ ಗಂಗಾಜಲವನ್ನು ಸಿಂಪಡಿಸಿ ಪೂಜೆಯನ್ನು ಮಾಡಬೇಕು. ಗಂಗಾಜಲವಿಲ್ಲದಿದ್ದರೆ ರಾತ್ರಿಯ ವೇಳೆ ಒಂದು ತಾಮ್ರದ ಚೊಂಬಿನಲ್ಲಿ ನೀರನ್ನು ಹಾಕಿ ಇಡಬೇಕು ಇದನ್ನು ಬೆಳಿಗ್ಗೆ ಮನೆಯ ಮುಖ್ಯ ದ್ವಾರಕ್ಕೆ ಸಿಂಪಡಿಸಬೇಕು ಆದರೆ ಶನಿವಾರ ಮೊದಲು ಈ ನೀರನ್ನು ಮನೆಯ ಮುಖ್ಯ ದ್ವಾರಕ್ಕೆ ಸಿಂಪಡಿಸಿ ನಂತರ ಕಸ ಗೂಡಿಸಿ ನೀರನ್ನು ಹಾಕಬೇಕು ಹಾಗೆ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ಅತೃಪ್ತ ಆತ್ಮಗಳು ತೃಪ್ತಿಯಾಗುತ್ತದೆ

ಹಾಗೆಯೇ ನಿಮ್ಮ ಜೀವನದ ಕಷ್ಟಗಳು ಪರಿಹಾರವಾಗುತ್ತದೆ. ಎರಡನೆಯ ಮುಖ್ಯ ವಿಷಯವೇನೆಂದರೆ ನೀವು ಮನೆಯನ್ನು ಸ್ವಚ್ಛ ಮಾಡುವಾಗ ನೀರಿನಲ್ಲಿ ಸ್ವಲ್ಪ ಉಪ್ಪನ್ನು ಹಾಕಿಕೊಳ್ಳಬೇಕು ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ಯಾರು ಮಾಟ-ಮಂತ್ರ ಮಾಡಿಸಲು ಸಾಧ್ಯವಾಗುವುದಿಲ್ಲ ಹಾಗೆಯೇ ನಿಮ್ಮ ಮನೆಯವರ ಆರೋಗ್ಯವು ಕೂಡ ಚೆನ್ನಾಗಿರುತ್ತದೆ. ಮೂರನೆಯದಾಗಿ ಶನಿವಾರದಂದು ಆಂಜನೇಯ ದೇವರನ್ನು ಪೂಜಿಸಬೇಕು ಶನಿವಾರ ಸಂಜೆ ನಿಮ್ಮ ಮನೆಯ ಹತ್ತಿರದ ಯಾವುದಾದರೂ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಪಾನ್ ಅನ್ನು ಆಂಜನೇಯ ಸ್ವಾಮಿಯ ಪಾದಕ್ಕೆ ಅರ್ಪಿಸಬೇಕು ಪಾನ್ ಒಳಗಡೆ ಸುಣ್ಣ ಹಾಗೂ ತಂಬಾಕನ್ನು ಹಾಕಬಾರದು ಬದಲಾಗಿ ಏಲಕ್ಕಿ ಲವಂಗಗಳನ್ನು ಹಾಗೂ ಸಿಹಿ ಹಾಕಬೇಕು.

ಹೀಗೆ ಮಾಡುವುದರಿಂದ ನಿಮ್ಮನೆಯ ಸಂಕಷ್ಟಗಳೆಲ್ಲ ದೂರವಾಗುತ್ತವೆ. ಹಾಗಾದರೆ ಸಾಸುವೆ ಎಣ್ಣೆಯಿಂದ ಶನಿವಾರ ಯಾವ ರೀತಿಯಾಗಿ ಪರಿಹಾರ ಮಾಡಬೇಕು ಎಂದು ನಾನು ನಿಮಗೆ ತಿಳಿಸುತ್ತೇನೆ. ಒಂದು ಬಟ್ಟಲಿನಲ್ಲಿ ಸಾಸುವೆ ಎಣ್ಣೆಯನ್ನು ಹಾಕಿ ಅದರೊಳಗೆ ನಿಮ್ಮ ಮುಖವನ್ನು ನೋಡಬೇಕು ನಂತರ ಅದಕ್ಕೆ ಉದ್ದಿನಬೇಳೆ ಹಾಕಿ ಒಂದು ರೊಟ್ಟಿಯನ್ನು ಮಾಡಿ ಇದನ್ನು ನಾಯಿಗೆ ಹಾಕುವುದರಿಂದ ಶನಿದೇವರ ಆಶೀರ್ವಾದ ನಿಮಗೆ ಸಿಗುತ್ತದೆ. ಹೀಗೆ ಮಾಡಲು ಆಗದಿದ್ದರೆ ನೀವು ಮನೆಯಲ್ಲಿ ರೊಟ್ಟಿ ಸುಡುವಾಗ ಕೊನೆಯದಾಗಿ ಒಂದು ರೊಟ್ಟಿಯನ್ನು ಸಾಸಿವೆ ಎಣ್ಣೆಯನ್ನು ಹಾಕಿ ಬೇಯಿಸಿ

ಅದಕ್ಕೆ ಕಪ್ಪು ಬೊಟ್ಟನ್ನು ಇಟ್ಟು ಸಾಧ್ಯವಾದರೆ ಸ್ವಲ್ಪ ಬೆಲ್ಲವನ್ನು ಹಾಕಿ ನಿವಾಳಿಸಿ ಇದನ್ನು ನಾಯಿಗೆ ಹಾಕಬೇಕು ಅಥವಾ ನಿಮ್ಮ ಮನೆಯಲ್ಲಿ ಹಠ ಮಾಡುವ ಮಕ್ಕಳಿದ್ದರೆ ಅವರಿಗೆ ರೊಟ್ಟಿಯನ್ನು ನಿವಾಳಿಸಿ ಯಾವುದಾದರೂ ನಾಯಿಗೆ ಇದನ್ನು ತಿನ್ನಿಸಬೇಕು. ಹಾಗೆಯೇ ಶನಿವಾರದಂದು ನಿಮ್ಮ ತಲೆಗೆ ಯಾವುದಾದರೂ ಎಣ್ಣೆಯನ್ನು ಹಾಕಿದರೆ ಯಾವುದೇ ತರಹದ ವಕ್ರ ದೃಷ್ಟಿಯು ನಿಮ್ಮ ಮೇಲೆ ಬಿಳುವುದಿಲ್ಲ. ಹಾಗೆಯೇ ಶನಿವಾರದಂದು ಹೊಕ್ಕಳಿಗೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಹಾಕಿಕೊಂಡು ಮಲಗಬೇಕು ಅಥವಾ ಕೊಬ್ಬರಿ ಎಣ್ಣೆಯನ್ನು ಹಾಕಿಕೊಂಡು ಮಲಗಬೇಕು ಹೀಗೆ ಮಾಡಿದರೆ ನಿಮ್ಮ ಆರೋಗ್ಯವೂ ವೃದ್ಧಿಸುತ್ತದೆ ಹಾಗೆಯೇ ಶನಿಕಾಟ ನಿಮಗೆ ಇರುವುದಿಲ್ಲ. ಶನಿದೇವರನ್ನು ಶನಿವಾರದಂದು ಪೂಜಿಸುತ್ತಾರೆ.

ಇದರ ಮೇಲೆ ಒಂದು ಕಥೆಯಿದೆ ಯಾವಾಗ ರಾವಣನು ಶನಿಯ ಮೇಲೆ ಕಾಲಿಟ್ಟಾಗ ಆಂಜನೇಯ ಸ್ವಾಮಿಯು ಬಂದು ಶನಿದೇವರನ್ನು ಬಂಧನದಿಂದ ಪಾರು ಮಾಡುತ್ತಾರೆ ಆಗ ಶನಿದೇವರು ಒಂದು ವರವನ್ನು ಕೊಡುತ್ತಾರೆ ಅದು ಏನೆಂದರೆ ಯಾರು ಶನಿವಾರದಂದು ಶನಿದೇವರ ಪೂಜೆ ಆದ ಮೇಲೆ ಆಂಜನೇಯ ದೇವರನ್ನು ಪೂಜಿಸುತ್ತಾರೆ ಅವರಿಗೆ ನಾನು ನನ್ನ ವಕ್ರದೃಷ್ಟಿ ಬೀರುವುದಿಲ್ಲ ಎಂದು ಹೇಳುತ್ತಾನೆ ಹಾಗಾದರೆ ನೀವು ಶನಿವಾರದಂದು ಒಂದು ಶನಿಯ ಶಿಲೆಯನ್ನು ಪೂಜೆ ಮಾಡಿ ನಂತರ ಆಂಜನೇಯಸ್ವಾಮಿಯ ದೇವಸ್ಥಾನಕ್ಕೆ ಹೋಗಬೇಕು.

ಹಾಗೆಯೇ ಅರಳಿ ಮರಕ್ಕೆ ಒಂದು ಲೋಟ ಹಾಲನ್ನು ಹಾಕುವುದರಿಂದ ಶನಿದೇವರ ಕಾಟ ನಿಮಗೆ ಇರುವುದಿಲ್ಲ. ನಿಮ್ಮ ಮನೆಯಲ್ಲಿ ಏನಾದರೂ ಸಂಕಷ್ಟಗಳು ಇದ್ದರೆ ಬಿಲ್ಪತ್ರೆ ಗಿಡಕ್ಕೆ ಹೋಗಿ ಪೂಜೆಯನ್ನು ಮಾಡಿ ಎರಡು ದೀಪವನ್ನು ಹಚ್ಚಿದರೆ ಮನೆಯ ಸಂಕಷ್ಟಗಳು ದೂರವಾಗುತ್ತವೆ. ಆಂಜನೇಯ ಸ್ವಾಮಿಯನ್ನು ಪೂಜೆ ಮಾಡಿದವರಿಗೆ ಯಾವುದೇ ಶನಿಯ ವಕ್ರದೃಷ್ಟಿ ನಿಮ್ಮ ಮೇಲೆ ಬರುವುದಿಲ್ಲ ಹಾಗೆಯೇ ಶನಿವಾರದಂದು ನೀವು ಯಾರಿಗೂ ಸಾಲವನ್ನು ಕೊಡಬಾರದು ಸಾಲವನ್ನು ತರಬಾರದು. ಹೀಗೆ ಶನಿವಾರ ಸಾಲವನ್ನು ತಂದರೆ ಅದು ಬೇಗ ತೀರುವುದಿಲ್ಲ.

ನೀವೇನಾದರೂ ಶನಿ ದೇವರನ್ನು ಒಲಿಸಿಕೊಳ್ಳಬೇಕು ಎಂದರೆ ಅರಳಿ ಮರಕ್ಕೆ ಶನಿವಾರ ಸಾಯಂಕಾಲ ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಬೇಕು. ಹಾಗೆ ಇದಕ್ಕೆ ಎಳ್ಳುಗಳನ್ನು ಹಾಕಬೇಕು. ಹತ್ತಿರದಲ್ಲಿ ಅರಳಿಮರ ಇರದಿದ್ದರೆ ನಿಮ್ಮ ಮನೆಯ ಬಲಭಾಗದಲ್ಲಿ ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಬೇಕು ಈ ದೀಪವನ್ನು ಯಾವುದಾದರೂ ಒಂದು ಹೂವಿನ ಎಲೆಯ ಮೇಲೆ ಇಡಬೇಕು ದೀಪವು ದಕ್ಷಿಣ ದಿಕ್ಕಿಗೆ ಇರಬೇಕು ಹೀಗೆ ಮಾಡುವುದರಿಂದ ನೀವು ನೆಮ್ಮದಿ ಆರೋಗ್ಯ ಹಾಗೂ ಸಂತೃಪ್ತಿಯಿಂದ ಇರುತ್ತೀರಾ. ನಿಮಗೇನಾದರೂ ನೌಕರಿಯಲ್ಲಿ ತೊಂದರೆ ಇದ್ದರೆ ಶುಕ್ರವಾರ ರಾತ್ರಿ ಕಡ್ಲೆಬೇಳೆ ಗಳನ್ನು ನೆನೆಹಾಕಬೇಕು ಶನಿವಾರ ಇದಕ್ಕೆ ಸಾಸುವೆ ಎಣ್ಣೆಯನ್ನು ಹಾಕಿ ಬೇಯಿಸಬೇಕು

ಇದಕ್ಕೆ ಉಪ್ಪು ಕಾರ ಮಸಾಲೆ ಏನನ್ನು ಸೇರಿಸಬಾರದು. ಹಾಗೆಯೇ ಇದನ್ನು ಯಾವುದಾದರೂ ಪ್ರಾಣಿಗೆ ಹಾಕಬೇಕು. ಸ್ನೇಹಿತರೆ ಈ ಮಾಹಿತಿಯಲ್ಲಿ ನಿಮಗೆ ಶನಿದೇವರಿಗೆ ಮಾಡುವ ಪರಿಹಾರಗಳು ತಿಳಿದವು ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ