Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವೇನಾದ್ರು ಪ್ರತಿ ದಿನ ರಾಗಿ ಅಂಬಲಿಯನ್ನು ಕುಡಿಯುತ್ತಾ ಬಂದರೆ ನಿಮ್ಮ ದೇಹದಲ್ಲಿ ಎಷ್ಟು ಚಮತ್ಕಾರಿ ಬದಲಾವಣೆಗಳು ಆಗುತ್ತವೆ ಗೊತ್ತ ನೀವು ಊಹೆ ಮಾಡಲಾಗದ ಸತ್ಯ …!!!

ನಮಸ್ಕಾರ ಸ್ನೇಹಿತರೇ ,ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ .ನಮ್ಮ ಅರೋಗ್ಯ ಚೆನ್ನಾಗಿದ್ದರೆ ನಾವು ಏನನ್ನಾದರೂ ಸಾಧಿಸಬಹುದು ,ಹಾಗಾಗಿ ನಮ್ಮ ಆರೋಗ್ಯವನ್ನು ನಾವು ಚೆನ್ನಾಗಿ ಇಟ್ಟುಕೊಳ್ಳುವುದು ನಮ್ಮ ಕೈಯಲ್ಲೇ ಇದೆ .ಹಾಗಾಗಿ ನಾವು ಆರೋಗ್ಯವನ್ನು ವೃದ್ಧಿಸುವ ಆಹಾರವನ್ನು ಮತ್ತು ಪಾನೀಯಗಳನ್ನು ಸೇವಿಸಬೇಕಾಗುತ್ತೆ .ಆರೋಗ್ಯಯುಕ್ತವಾದ ಆಹಾರವನ್ನು ಸೇವಿಸುವುದರಿಂದ ನಮ್ಮ ಅರೋಗ್ಯ ಚೆನ್ನಾಗಿರುತ್ತೆ .ಆದ್ದರಿಂದ ಇಂದು ನಾವು ಹೇಳುವ ಹಾಗೆ ಎಲ್ಲಾ ಕಡೆಯಲ್ಲಿಯೂ ಸಿಗುವ ರಾಗಿಯಿಂದ ಈ ಒಂದು ಪದಾರ್ಥವನ್ನು ಸೇವಿಸುವುದರಿಂದ ನೂರಾರು ಕಾಲ ಬದುಕುವ ಹಾಗೆ ನೀವು ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು .ಹಾಗಾದ್ರೆ ರಾಗಿಯಿಂದ ತಯಾರಿಸುವ ಈ ಒಂದು ಪದಾರ್ಥವನ್ನು ಹೇಗೆ ತಯಾರಿಸುವುದು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ .

ನಿಮಗಿದು ಗೊತ್ತಾ ರಾಗಿ ಅಂಬಲಿಯನ್ನು ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಅಂತ ಹೌದು ರಾಗಿ ಅಂಬಲಿಯನ್ನು ನಾವು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುತ್ತಾ ಬರುವುದರಿಂದ ನಮಗೆ ಬೇಕಾದ ಪ್ರತಿಯೊಂದು ಪ್ರಯೋಜನಕಾರಿಯಾದ ಆರೋಗ್ಯಕರ ಲಾಭಗಳು ನಮಗೆ ದೊರೆಯುತ್ತದೆ ಆ ಒಂದು ಮಾಹಿತಿಯನ್ನು ನಿಮಗೆ ಈ ದಿನದ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸಂಪೂರ್ಣವಾಗಿ ನೀವು ಈ ಮಾಹಿತಿಯನ್ನು ತಿಳಿದು ನೀವು ಕೂಡ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಯಾಕೆಂದರೆ ರಾಗಿ ಅಂಬಲಿಯನ್ನು ಕುಡಿಯುವುದರಿಂದ ಏನೆಲ್ಲಾ ಆರೋಗ್ಯಕರ ಲಾಭಗಳಿವೆ ಅಂತ ಪ್ರತಿಯೊಬ್ಬರಿಗೂ ತಿಳಿಸಿಕೊಡಿ ರಾಗಿಯ ಮಹತ್ವವನ್ನು ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮುಖಾಂತರ ಪ್ರತಿಯೊಬ್ಬರಿಗೂ ತಿಳಿಸಿಕೊಡಿ.

ರಾಗಿ ಬಗ್ಗೆ ಹೇಳೋಕೆ ಎರಡನೇ ಮಾತೇ ಇಲ್ಲ ಇದನ್ನು ಅನೇಕ ಖಾದ್ಯಗಳನ್ನು ಮಾಡಿಕೊಂಡು ತಿನ್ನೋದರಿಂದ ಬಹಳ ಆರೋಗ್ಯಕರ ಲಾಭಗಳೂ ನಮಗೆ ದೊರೆಯುತ್ತದೆ ಈಗಾಗಲೇ ಸಾಕಷ್ಟು ಜನರಿಗೆ ರಾಗಿಯ ಮಹತ್ವ ತಿಳಿದು ಇದರಿಂದ ಮುದ್ದೆ ಅಂಬಲಿ ಮತ್ತು ರೋಟಿ ಇಂತಹ ಖಾದ್ಯಗಳನ್ನು ತಯಾರಿಸಿಕೊಂಡು ತಿಂತಾ ಬರುತ್ತಿದ್ದಾರೆ. ಈ ರಾಗಿ ಮುದ್ದೆ ಹಳ್ಳಿಯಲ್ಲಿ ತುಂಬಾನೆ ಪ್ರಸಿದ್ಧವಾದದ್ದು ಅಂತ ಹೇಳಬಹುದು ಆದರೆ ಇತ್ತೀಚಿನ ದಿನಗಳಲ್ಲಿ ಪೇಟೆ ಮಂದಿ ಕೂಡ ಮಧ್ಯಾಹ್ನದ ಸಮಯದಲ್ಲಿ ಅಥವಾ ರಾತ್ರಿ ಸಮಯದಲ್ಲಿ ಕಡ್ಡಾಯವಾಗಿ ಮುದ್ದೆಯನ್ನು ಸೇವನೆ ಮಾಡ್ತಾರೆ ಕೇವಲ ಮುದ್ದೆ ಮಾತ್ರ ಸೇವನೆ ಮಾಡುವುದರಿಂದ ಲಾಭ ದೊರೆಯುವುದಷ್ಟೇ ಅಲ್ಲ ಮುದ್ದೆ ತಿನ್ನೋಕೆ ಆಗಲ್ಲ ನೂರು ಬೆಳಗ್ಗೆ ಸಮಯದಲ್ಲಿ ಈ ರಾಗಿ ಅಂಬಲಿಯನ್ನು ಕುಡಿಯಬಹುದು.

ಯಾರಿಗಾದರೂ ಹೆಚ್ಚು ಕೆಲಸ ಬಿಸಿಲಿನಲ್ಲಿ ಅಥವಾ ಸೈಟ್ ನಲ್ಲಿ ಕೆಲಸ ಮಾಡ್ತೀವಿ ಅಥವಾ ರೈತರು ಬಿಸಿಲಿನಲ್ಲಿ ಹೆಚ್ಚು ಸಮಯ ಕೆಲಸ ಮಾಡೋರು ಅನ್ನೋರು ಬೆಳಿಗ್ಗೆ ರಾಗಿ ಅಂಬಲಿಯನ್ನು ಕುಡಿಯೋದ್ರಿಂದ ಆ ದಿನವಿಡಿ ದೇಹ ತಂಪಾಗಿ ಇರುತ್ತದೆ ಉಷ್ಣಾಂಶ ಸಮತೋಲನದಲ್ಲಿ ಇರುತ್ತದೆ. ಹಾಗೆ ಇದರಿಂದ ನಿಶ್ಯಕ್ತಿ ಸಮಸ್ಯೆ ಎದುರಾಗುವುದಿಲ್ಲ. ಈ ರೀತಿಯಾಗಿ ರಾಗಿ ಅಂಬಲಿ ಅನ್ನು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಬಹಳಾನೆ ಲಾಭಗಳು ಉಂಟು.ಅಷ್ಟೇ ಅಲ್ಲದೆ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಅದರಲ್ಲಿಯೂ ಹೆಣ್ಣು ಮಕ್ಕಳು ಈ ರಕ್ತಹೀನತೆಯಿಂದ ತುಂಬಾ ಬಾಧೆಯನ್ನು ಪಡ್ತಾ ಇರ್ತಾರೆ. ರಕ್ತಹೀನತೆ ಆದರೆ ಸುಸ್ತು ನಿಶ್ಯಕ್ತಿ ಯಾವ ಕೆಲಸ ಮಾಡುವುದಕ್ಕೂ ಆಸಕ್ತಿ ಇರುವುದಿಲ್ಲ ಅಂತಹವರು ರಾಗಿ ಅಂಬಲಿಯನ್ನು ಅಥವಾ ರಾಗಿ ಮುದ್ದೆಯನ್ನು ತಿನ್ನುತ್ತಾ ಬರುವುದರಿಂದ ಇದರಲ್ಲಿರುವ ಐರನ್ ಅಂಶ ರಕ್ತಹೀನತೆ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ.

ರಾಗಿ ಅಂಬಲಿಯನ್ನು ಕುಡಿಯುತ್ತಾ ಬರುವುದರಿಂದ ಉತ್ತಮ ಗುಣಮಟ್ಟದ ಕ್ಯಾಷ್ ದೊರೆಯುತ್ತದೆ ಇದರಿಂದ ಮೂಳೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆ ಆಗುತ್ತದೆ ಅಷ್ಟೆ ರಾಗಿ ಅನ್ನು ಬೆಳಸಿ ಮಲೆನಾಡ ಮಂದಿ ಒಂದು ಸಿಹಿ ಖಾದ್ಯವನ್ನು ಕೂಡ ತಯಾರಿಸುತ್ತಾರೆ ಇದನ್ನು ಕಿಲ್ಸ ಅಂತ ಕೂಡ ಹೇಳ್ತಾರೆ.ಇನ್ನೂ ಕೆಲವರು ರಾಗಿ ಹಲ್ವಾ ಅಂತ ಕೂಡ ಅಂತರ ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ ಮತ್ತು ಆರೋಗ್ಯಕ್ಕೂ ಕೂಡಾ ಉತ್ತಮ ಆಗಿರುತ್ತದೆ ಯಾಕೆಂದರೆ ಈ ರಾಗಿ ಕೆಲ್ಸದಲ್ಲಿ ರಾಗಿ ಗೋಧಿ ಮತ್ತು ಬೆಲ್ಲ ಕೊಬ್ಬರಿ ತುರಿ ಇದನ್ನೆಲ್ಲ ಬಳಸುತ್ತಾರೆ ಇದು ಆರೋಗ್ಯಕ್ಕೆ ಬಹಳ ಲಾಭಗಳನ್ನು ನೀಡುತ್ತದೆ. ಹೀಗೆ ರಾಗಿಯಿಂದ ಅನೇಕ ಖಾದ್ಯಗಳನ್ನು ಮಾಡಿ ಪ್ರತಿದಿನ ನಿಮ್ಮ ಆಹಾರ ಪದ್ಧತಿಯಲ್ಲಿ ಸೇವಿಸುತ್ತಾ ಬನ್ನಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ …

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ