disadvantages of drinking tea

ನೀವೇನಾದ್ರು ಪ್ರತಿದಿನ ಚಹಾ ಕುಡಿಯುತ್ತಿದ್ದೀರಾ ಹಾಗಾದ್ರೆ ಚಹಾ ಕುಡಿಯುವುದರಿಂದ ಆಗುವ ಅನಾನುಕೂಲಗಳನ್ನು ಕೇಳಿ ನೀವು ನಿಜವಾಗಲೂ ಗಾಬರಿ ಆಗುತ್ತೀರ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಚಹಾವನ್ನು ಕುಡಿಯುವಂತಹ ಅಭ್ಯಾಸವನ್ನು ಇಟ್ಟುಕೊಂಡಿದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಲೇಬೇಕು ಯಾಕೆಂದರೆ ಇದನ್ನು ಕುಡಿಯುವುದರಿಂದ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು.

ಈ ರೀತಿಯಾಗಿ ನಾವು ಚಹಾವನ್ನು ಕುಡಿಯುವುದರಿಂದ ಯಾವ ರೀತಿ ಅನಾನುಕೂಲಗಳು ನಮ್ಮ ದೇಹಕ್ಕೆ ಉಂಟಾಗುತ್ತದೆ ಹಾಗೆಯೇ ಚಹಾವು ನಮ್ಮ ಆರೋಗ್ಯದ ಮೇಲೆ ಯಾವ ರೀತಿಯಾಗಿ ಪರಿಣಾಮವನ್ನು ಬೀರುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಈ ದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ .

ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ.ಕೆಲವರಂತೂ ಅದರಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುತ್ತಾರೆ ಅವರಿಗೆ ಚಹಾವನ್ನು ಕುಡಿಯದಿದ್ದರೆ ಆದಿನ ಅವರ ಮನಸ್ಸು ಉಲ್ಲಾಸಾಭರಿತವಾಗಿರುವುದಿಲ್ಲ

ಅಷ್ಟು ಚಹಾದ ಮೇಲೆ ಅವಲಂಬಿತರಾಗಿರುತ್ತಾರೆ. ಹಿಂದಿನ ಕಾಲದಲ್ಲಿ ಅಷ್ಟಾಗಿ ಜನರು ಈ ಚಹವನ್ನು ಉಪಯೋಗಿಸುತ್ತಿರಲಿಲ್ಲ ಆದರೆ ಬ್ರಿಟಿಷರು ಈ ಒಂದು ಚಹವನ್ನು ಪರಿಚಯಿಸಿ ಹೋದಮೇಲೆ ಈಗಿನ ಆಧುನಿಕ ಕಾಲದಲ್ಲಿ ಚಹಾವನ್ನು ಕುಡಿಯುವಂತಹ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ.

ಚಹಾವನ್ನು ಕುಡಿಯುವುದರಿಂದ ಆ ನಮ್ಮ ಆರೋಗ್ಯದ ಮೇಲೆ ಹಲವಾರು ರೀತಿಯಾಗಿ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಅವುಗಳೆಂದರೆ ನೀವು ಹೆಚ್ಚಾಗಿ ಚಹಾವನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಅಂದರೆ ಆರೋಗ್ಯದಲ್ಲಿ ಅಸಿಡಿಟಿ ಎನ್ನುವುದು ಉಂಟಾಗುತ್ತದೆ

ಈ ರೀತಿಯಾಗಿ ಅಸಿಡಿಟಿಯನ್ನು ಹೆಚ್ಚಾಗಿ ನಿಮ್ಮ ದೇಹದಲ್ಲಿ ಮಲಬದ್ಧತೆ ಉಂಟಾಗುತ್ತದೆ ಈ ರೀತಿಯಾಗಿ ನಿಮ್ಮ ದೇಹದಲ್ಲಿ ಮಲಬದ್ಧತೆ ಉಂಟಾಗುವುದರಿಂದ ನಿಮ್ಮ ದೇಹದಲ್ಲಿ ಬೇಡ ವಾದಂತಹ ವಸ್ತುಗಳು ನಿಮ್ಮ ದೇಹದಲ್ಲಿ ಶೇಖರಣೆಯಾಗಿ ಇನ್ನೂ ಹಲವಾರು ರೋಗಗಳು ಬರುವಂತಹ ಸಾಧ್ಯತೆಯಿರುತ್ತದೆ.

ಹಾಗೆಯೇ ದಿನಕ್ಕೆ ಮೂರರಿಂದ ನಾಲ್ಕು ಲೋಟ ಒಂದು ಚಹಾವನ್ನು ಕುಡಿಯುವ ಅಭ್ಯಾಸ ವಿಟ್ಟುಕೊಂಡು ನಿದ್ರಾಹೀನತೆ ಸಮಸ್ಯೆಯಿಂದ ಬಳಲಬೇಕಾಗುತ್ತದೆ.ನೀವು ಒಮ್ಮೆ ಪರೀಕ್ಷಿಸಿ ನೋಡಿ ಯಾರು ದಿನಕ್ಕೆ ಮೂರರಿಂದ ನಾಲ್ಕು ಲೋಟ ಚಹಾವನ್ನು ಕುಡಿಯುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ ಅಂಥವರಿಗೆ ರಾತ್ರಿ ನಿದ್ರೆ ಅಷ್ಟಾಗಿ ಬರುವುದಿಲ್ಲ.

ಉಪಹಾರಗಳನ್ನು ತಿಂದು ನಂತರ ಯಾರು ಚಹಾ ಕುಡಿಯುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ ಅಂತವರಿಗೆ ಕಬ್ಬಿಣಾಂಶದ ಕೊರತೆಯು ಉಂಟಾಗುತ್ತದೆ ಅದು ಹೇಗೆಂದರೆ ಒಂದು ಚಹಾದಲ್ಲಿ ಆಸಿಡ್ ಇರುವುದರಿಂದ ಕಬ್ಬಿಣದ ಅಂಶಗಳನ್ನು ತಡೆ ಹಿಡಿಯುತ್ತದೆ

ಆದ್ದರಿಂದ ನಮ್ಮ ದೇಹಕ್ಕೆ ಕಬ್ಬಿಣದ ಅಂಶಗಳು ಸರಾಗವಾಗಿ ಪೂರೈಕೆಯಾಗುವುದಿಲ್ಲ. ಕಬ್ಬಿಣ ಅಂಶದ ಕೊರತೆ ನಮ್ಮ ದೇಹಕ್ಕೆ ಉಂಟಾಗುತ್ತದೆ. ಹಾಗಾಗಿ ನೀವು ಚಹವನ್ನು ಕುಡಿಯುವುದನ್ನು ಕಡಿಮೆ ಮಾಡಿಕೊಂಡರೆ ನೀವು ಆರೋಗ್ಯವಂತರಾಗಿ ಇರಬಹುದು. ದೇಹಕ್ಕೆ ಕಬ್ಬಿಣಾಂಶದ ಕೊರತೆಯಾದರೆ ರಕ್ತಹೀನತೆಯು ಉಂಟಾಗುತ್ತದೆ.

ಇನ್ನು ನೋಡುವುದಾದರೆ ಈ ಒಂದು ಚಹಾದಲ್ಲಿ ಕೆಫಿನ್ ಅಂಶ ಹೆಚ್ಚಾಗಿ ಇರುತ್ತದೆ ಇದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಹೋಟೆಲ್ಗಳಲ್ಲಿ ಅಥವಾ ಹೊರಗಡೆ ಎಲ್ಲಾದರೂ ಟೀ ಮಾಡುವಾಗ ಅಲ್ಲಿ ಒಂದು ಸಾರಿ ಮಾಡಿದ ಟಿ ಪೌಡರನ್ನು ಪದೇಪದೇ ಉಪಯೋಗಿಸುತ್ತಿರುತ್ತಾರೆ ಈ ರೀತಿಯಾಗಿ ಮಾಡಿದರೆ ನಮ್ಮ ದೇಹಕ್ಕೆ ಹಾನಿಕಾರಕ.

ಹಾಗಾಗಿ ನೀವು ಚಹಾವನ್ನು ಕುಡಿಯುವುದನ್ನು ಕಡಿಮೆ ಮಾಡಿಕೊಂಡರೆ ನಿಮ್ಮ  ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *