ನೀವೇನಾದ್ರು ನೆಲ್ಲಿಕಾಯಿ ರಸವನ್ನು ಸೇವನೆ ಮಾಡಿದ್ರೆ ಸಾಕು ಈ ಕಾಯಿಲೆಗಳಿಂದ ನಿಮಗೆ ತಕ್ಷಣವೇ ಮುಕ್ತಿ ಸಿಗತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೆಲ್ಲಿಕಾಯಿಯಲ್ಲಿ ರಕ್ತಶೋಧಕ ಗುಣವಿದೆ ಈ ಕಾಯಿಯನ್ನು ಸೇವಿಸುತ್ತಿದ್ದರೆ ಆರೋಗ್ಯ ವರ್ಧಿಸುವುದು ನೆಲ್ಲಿಕಾಯಿ ಯು ಸಿ ಜೀವಸತ್ವ ಗಣಿ ಒಂದು ಊಟದ ಚಮಚ ನೆಲ್ಲಿಕಾಯಿ ರಸವನ್ನು ಅಷ್ಟೇ ಪ್ರಮಾಣ ಜೇನುತುಪ್ಪದೊಂದಿಗೆ ಪ್ರತಿದಿನ ಬೆಳಗ್ಗೆ ಸೇವಿಸುತ್ತಾ ಬಂದರೆ.ಸಿ ಜೀವಸತ್ವದ ಕೊರತೆಯಿಂದ ತಲೆದೋರುವ ಯಾವುದೇ ರೋಗ ಸಂಪೂರ್ಣವಾಗಿ ಗುಣವಾಗುವುದು ಮೆದುಳಿಗೆ ಸಂಬಂಧಿಸಿದ ರೋಗಗಳಿಂದ ತಯಾರಿಸಿದ ಯಾವುದೇ ವ್ಯಂಜನ ಉತ್ತಮ ಪ್ರತೀಕದಂತೆ ವರ್ತಿಸುವುದು.ನೆಲ್ಲಿಕಾಯಿ ರಸವನ್ನು ಸ್ವಲ್ಪ ಸಕ್ಕರೆಯೊಂದಿಗೆ ಸೇರಿಸುವುದರಿಂದ ಪಿತ್ತಾಧಿಕ್ಯಾದಿಂದ ಉಂಟಾಗುವ ಹೊಟ್ಟೆನೋವು ಶಾಂತವಾಗುತ್ತದೆ. ನೆಲ್ಲಿಕಾಯಿಯನ್ನು ಉಪ್ಪಿನಕಾಯಿ ಚಟ್ಟು ಇತ್ಯಾದಿ ರೂಪಗಳಲ್ಲಿ ಸೇವಿಸಬಹುದು ಆದರೆ ನೆಲ್ಲಿಕಾಯಿಯನ್ನು ಬೇಯಿಸಿ ಉಪಯೋಗಿಸುವುದರಿಂದ ಯಾವ ಪ್ರಯೋಜನವೂ ಇರದು ಬೇಯಿಸಿದಾಗ ಸಿ ಜೀವಸತ್ವ ನಾಶವಾಗುವುದು.

ನೆಲ್ಲಿಕಾಯಿ ಉಪಯೋಗದಿಂದ ನೆಗಡಿ ಉಬ್ಬಸ ಜ್ಞಾಪಕ ಶಕ್ತಿ ಇಲ್ಲದಿರುವಿಕೆ ಮಕ್ಕಳ ಅಕಾಲ ಮುಪ್ಪು ಮಧುಮೇಹ ಕೂದಲು ಉದುರುವಿಕೆ ಕೂದಲು ನೆರೆಯುವಿಕೆ ಇತ್ಯಾದಿ ಶಾರೀರಿಕ ದೋಷಗಳಲ್ಲಿ ಹೆಚ್ಚು ಗುಣ ಕಂಡುಬರುವುದು.ನೆಲ್ಲಿಕಾಯಿ ರಸದ ಸೇವನೆಯಿಂದ ಅನೇಕ ದೃಷ್ಟಿ ದೋಷಗಳು ನಿವಾರಣೆಯಾಗುವುದು.ಯಾವುದೇ ಕಾರಣದಿಂದ ಅಧಿಕ ರಕ್ತಸ್ರಾವವಾಗಿದ್ದು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವಾಗ ನೆಲ್ಲಿಕಾಯಿ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಉತ್ತಮ ಉತ್ತಮ ತ್ರಾಣಿಕದಿಂದ ಪಡೆಯುವುದಕ್ಕಿಂತ ಹೆಚ್ಚು ಪ್ರಯೋಜನ ಪಡೆಯಬಹುದು.

ಒಣಗಿದ ನೆಲ್ಲಿಕಾಯಿ ಚಟ್ಟನ್ನು ಎರಡು ಮೂರು ಗಂಟೆಗಳ ಕಾಲ ಬಿಸಿ ನೀರಿನಲ್ಲಿ ನೆನೆಹಾಕಬೇಕು ಆನಂತರ ಚಟ್ಟನ್ನು ನೀರಿನಲ್ಲಿ ಚೆನ್ನಾಗಿ ಕಿವುಚಿ ಶೋಧಿಸಿಕೊಳ್ಳಬೇಕು ಆ ನೀರಿಗೆ ಸಕ್ಕರೆ ಬೆರೆಸಿ ಸೇವಿಸುವುದರಿಂದ ಆಮಶಂಕೆ ನಿಲ್ಲುವುದು ಮೂಗು ಬಾಯಿ ಮತ್ತು ಗುದದ್ವಾರದ ಮೂಲಕ ರಕ್ತ ಬೀಳುತ್ತಿದ್ದರೆ ಶೀಘ್ರ ಗುಣ ಕಂಡು ಬರುವುದು.ಅತಿಯಾಗಿ ಬೆವರುತ್ತಿದ್ದರೆ ನೆಲ್ಲಿಕಾಯಿ ರಸವನ್ನು ಅಂಗೈಗೆ ಹಚ್ಚಿ ತೊಳೆಯದೆ ಬಿಟ್ಟರೆ ಬೆವರು ನಿಲ್ಲುವುದು.ಒಂದು ಟೀ ಚಮಚ ನೆಲ್ಲಿಕಾಯಿ ಚೂರ್ಣವನ್ನು ಒಂದು ಬಟ್ಟಲು ಮಜ್ಜಿಗೆಯಲ್ಲಿ ಕದಡಿ ದಿನಕ್ಕ್ಕೊಂದವರ್ತಿ ಸೇವಿಸಿದರೆ ಅಂಗಾಲು ಉರಿ ಆಸನಾಗ್ರದಲ್ಲಾಗುವ ಉರಿ ನಿಂತುಹೋಗುವುದು.

ನೆಲ್ಲಿಯ ಎಲೆಗಳ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಗುಣವಾಗುವುದು.ಕಿರು ನೆಲ್ಲಿಕಾಯಿ ಎಂಬ ಮತ್ತೊಂದು ಜಾತಿಯ ನೆಲ್ಲಿಕಾಯಿ ಉಂಟು ಇದು ಬೆಟ್ಟದನೆಲ್ಲಿಕಾಯಿ ಎಷ್ಟು ಉತ್ತಮವಲ್ಲ ಕಿರು ನೆಲ್ಲಿಕಾಯಿಯನ್ನು ಉಪ್ಪು ಸಹಿತ ತಿನ್ನುವುದರಿಂದ ವಾಕರಿಕೆ ತಲೆಸುತ್ತು ಬರುವಿಕೆ ಅಜೀರ್ಣ ರಕ್ತಹೀನತೆ ಸಂಧಿವಾತ ಈ ರೋಗಗಳಲ್ಲಿ ಗುಣ ಕಂಡುಬರುವುದು ಕಿರುನೆಲ್ಲಿಯಿಂದ ಉಪ್ಪಿನಕಾಯಿ ತಯಾರಿಸಿಯಾದರೂ ಬಳಸಬಹುದು. ನೆಲ್ಲಿಕಾಯಿ ರಸದ ಸೇವನೆಯಿಂದ ಅನೇಕ ದೃಷ್ಟಿ ದೋಷಗಳು ನಿವಾರಣೆಯಾಗುವುದು.ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನೀವು ತಪ್ಪದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗು ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ..ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿಕೊಡಿ . ಧನ್ಯವಾದ ಶುಭದಿನ ನೋಡಿದ್ರಲ್ಲಾ ಸ್ನೇಹಿತರೇ, ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೆಂಟ್ ಮೂಲಕ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *