Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವೇನಾದ್ರು ನಿಮ್ಮ ಮನೆಯ ಹೊಸ್ತಿಲ ಹತ್ತಿರ ಈ ತಪ್ಪನ್ನು ಮಾಡಿದರೆ ಮನೆಯಲ್ಲಿ ನೆಮ್ಮದಿ ಅನ್ನುವುದು ಇರುವುದಿಲ್ಲ !!!

ಸಾಮಾನ್ಯವಾಗಿ ನಾವು ಮನೆಯಲ್ಲಿ ಮಾಡುವ ಕೆಲವೊಂದು ತಪ್ಪುಗಳಿಂದಲೇ ನಮಗೆ ಗ್ರಹಚಾರಗಳು ಕೆಡುತ್ತದೆ ಆದರೆ ಗ್ರಹಚಾರ ಕೆಟ್ಟ ಮೇಲೆ ನಾವು ಅದಕ್ಕಾಗಿ ಪರಿಹಾರಗಳನ್ನ ಹುಡುಕಿಕೊಂಡು ಹೋಗುತ್ತೇವೆ. ಅದರ ಬದಲು ನಾವು ಮುಂಚೆಯೇ ಕೆಲವೊಂದು ವಿಚಾರಗಳನ್ನು ತಿಳಿದು ಅದನ್ನು ನಾವು ಪ್ರತಿದಿನ ಪಾಲಿಸಿಕೊಂಡು ಬಂದರೆ ನಮ್ಮ ಜೀವನದಲ್ಲಿ ಕೆಲವೊಂದು ಕಷ್ಟಗಳು ತೊಂದರೆಗಳು ಬರುವ ಮುನ್ನವೆ ಅವುಗಳನ್ನು ನಾವು ಪಾಲಿಸಬಹುದು ಆದರೆ ನಾವು ಕೆಲವೊಂದು ವಿಚಾರಗಳನ್ನು ತಿಳಿದುಕೊಂಡಿದ್ದರೆ ಮಾತ್ರ. ಅಂತಹ ವಿಚಾರಗಳನ್ನು ನಾವು ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ, ಅದರಲ್ಲಿ ನೀವು ಕೆಲವೊಂದು ವಿಚಾರಗಳನ್ನು ತಪ್ಪದೆ ಪಾಲಿಸಿ ಮುಂದೆ ಆಗುವಂತಹ ತೊಂದರೆಗಳನ್ನು ಪರಿಹಾರ ಮಾಡಿಕೊಳ್ಳಿ.

ಕೆಲವರ ಜೀವನದಲ್ಲಿ ಅವರಿಗೆ ತಿಳಿಯದೇ ಕೆಲವೊಂದು ಸಂಕಷ್ಟಗಳು ಉಂಟಾಗಿರುತ್ತದೆ ಆ ಸಮಸ್ಯೆ ಹೇಗೆ ಉಂಟಾಯಿತು ಎಂದು ಯೋಚನೆ ಮಾಡುವುದಕ್ಕಿಂತ ಮುನ್ನವೇ ಅದರಿಂದ ನಮಗೆ ಸಾಕಷ್ಟು ತೊಂದರೆಗಳು ಆಗಲೇ ಶುರು ಆಗಿರುತ್ತದೆ ಅದಕ್ಕಾಗಿ ನಾವು ಪರಿಹಾರಗಳನ್ನು ಮಾಡಿಕೊಳ್ಳಬೇಕೋ ಜೊತೆಗೆ ಆ ಸಮಸ್ಯೆ ಹೇಗೆ ಉಂಟಾಯಿತು ಎಂಬುದನ್ನು ಕೂಡ ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಪೂಜೆ ಮಾಡುತ್ತಾ ಇರುತ್ತಾರೆ ಅಂತಹವರು ಲಕ್ಷ್ಮೀ ದೇವಿಯ ಪೂಜೆಯನ್ನು ಮಾಡುವಾಗ ಲಕ್ಷ್ಮೀ ದೇವಿಯನ್ನು ಆರಾಧಿಸುವಾಗ ತಾಯಿಗೆ ಕೆಂಪು ವರ್ಣದ ಹೂವನ್ನು ಹೌದು ಅದರಲ್ಲಿಯು ಕಮಲದ ಹೂವನ್ನು ತಾಯಿಗೆ ಅರ್ಪಣೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ನೀವು ಊಹಿಸಲಾಗದಷ್ಟು ಬದಲಾವಣೆ ಅನ್ನು ನೀವು ಕಾಣಬಹುದು.

ಈ ಪರಿಹಾರ ಒಂದಾದರೆ ಮತ್ತೊಂದು ವಿಚಾರವನ್ನು ನೀವು ತಪ್ಪದೆ ತಿಳಿಯಲೇಬೇಕು ನಮ್ಮ ಸಂಪ್ರದಾಯವನ್ನು ಪಾಲಿಸುವ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಹೊಸ್ತಿಲಿಗೆ ಮಹತ್ವದ ಗೌರವವನ್ನು ನಾವು ನೀಡುತ್ತೇವೆ ಎನ್ನುವ ಮನೆಯಲ್ಲಿ ಹಿರಿಯರಿದ್ದರೆ ಯಾರು ಕೂಡ ಹೊಸ್ತಿಲಿನ ಮೇಲೆ ನಿಲ್ಲುವುದಕ್ಕೂ ಬಿಡುವುದಿಲ್ಲ ಮತ್ತು ಮನೆಯಲ್ಲಿ ಒಂಟಿ ಕಾಲಿನಲ್ಲಿ ನಿಲ್ಲುವುದು ಕೂಡ ಬಿಡುವುದಿಲ್ಲ ಯಾಕೆ ಅಂದರೆ ಹೊಸ್ತಿಲಿನ ಮೂಲಕವೇ ಲಕ್ಷ್ಮೀದೇವಿಯ ಪ್ರವೇಶ ಆಗುವುದು. ಈ ಹೊಸ್ತಿಲಿನ ಭಾಗದಲ್ಲಿ ಗೌರಿ ಮತ್ತು ಲಕ್ಷ್ಮೀ ದೇವಿಯು ನೆಲೆಸಿರುತ್ತಾರೆ ಅಂತ ನಂಬಲಾಗಿದ್ದು ಯಾರೂ ಕೂಡ ಹೊಸ್ತಿಲನ್ನು ತುಳಿಯಲು ವುದಕ್ಕಾಗಲೀ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದಕ್ಕಾಗಲಿ ಬಿಡುವುದಿಲ್ಲ.

ಅಕಸ್ಮಾತ್ ಹೊಸ್ತಿಲನ್ನು ತುಳಿದರೆ ಯಾವುದಾದರೂ ದೋಷ ಉಂಟಾಗಬಹುದು ಅಂತ ಕೂಡ ಹಿರಿಯರು ತಿಳಿಸುತ್ತಾರೆ ಆದ್ದರಿಂದ ನೀವು ಈ ರೀತಿ ಹೊಸ್ತಿಲನ್ನು ಏಡವುದಗಲಿ ಅಥವಾ ಹೊಸ್ತಿಲನ್ನು ನೀವು ತುಳಿದರೆ ಆಗ ಆ ಹೊಸ್ತಿಲಿನಿಂದ ಸ್ವಲ್ಪ ಮುಂದೆ ನಿಂತು ನಿಮ್ಮ ತಂದೆಯ ಹೆಸರು ಮತ್ತು ನಿಮ್ಮ ಹೆಸರು ಹಾಗೆ ನೀವು ಹುಟ್ಟಿದ ಗೋತ್ರವನ್ನು ಹೇಳಿಕೊಂಡು ಮುಂದಕ್ಕೆ ಹೋದರೆ ನಿಮಗೆ ಮುಂದೆ ಆಗುವಂತಹ ತೊಂದರೆಯಾಗಲಿ ಅಥವಾ ಕಷ್ಟಗಳಾಗಲಿ ಉಂಟಾಗುವುದಿಲ್ಲ.

ಇನ್ನೂ ಹೊಸ್ತಿಲಿನ ಮೇಲೆ ಸೀನಿದರೆ, ಆ ಹೊಸ್ತಿಲಿನ ಮೇಲ್ಭಾಗದಿಂದ ಶುದ್ಧವಾದ ನೀರು ಅಂದರೆ ತುಂಬಿದ ಕೊಡಪಾನದಲ್ಲಿ ಇರುವ ನೀರನ್ನು ತೆಗೆದುಕೊಂಡು ಬಂದು ಆ ಹೊಸ್ತಿಲಿನ ಮೇಲಿನಿಂದ ಹೊಸ್ತಿಲಿಗೆ ಹಾಕಬೇಕು ಅಂದರೆ ಪ್ರೋಕ್ಷಣೆ ಮಾಡಬೇಕು. ಈ ರೀತಿ ಮಾಡುವುದರಿಂದ ಕೂಡ ನಿಮ್ಮ ಜೀವನದಲ್ಲಿ ಯಾವುದೇ ತರಹದ ಮುಂದೆ ಉಂಟಾಗಬಹುದಾದ ಕಷ್ಟಗಳು ಬರುವುದಿಲ್ಲ

ಮತ್ತು ಹೊಸ್ತಿಲನ್ನು ತುಳಿಯುವುದಾಗಲಿ ಅಥವಾ ಎಡವಿದಾಗ ಅಥವಾ ಸೀನಿದಾಗ ನಿಮಗೆ ಇದರಿಂದ ಮುಂದೆ ಆಗುವ ಸಂಕಷ್ಟವನ್ನು ಪರಿಹಾರ ಮಾಡಿಕೊಳ್ಳಬಹುದು, ಈ ರೀತಿ ನೀರನ್ನು ಪ್ರೋಕ್ಷಣೆ ಮಾಡುವದರಿಂದ. ಅದ್ದರಿಂದ ಮನೆಯಲ್ಲಿ ಒಂಟಿ ಕಾಲಿನಲ್ಲಿ ನಿಲ್ಲುವುದಾಗಲಿ ಹೊಸ್ತಿಲನ್ನು ತುಳಿಯುವುದಾಗಲಿ ಮಾಡಬೇಡಿ ಇದರಿಂದ ಕೂಡಾ ಕೆಲವೊಂದು ದೋಷಗಳು ಉಂಟಾಗಬಹುದು ಧನ್ಯವಾದಗಳು.

Leave a Reply

Your email address will not be published. Required fields are marked *