ನೀವು ಮನೆಯಲ್ಲಿ ದೇವರ ಪೂಜೆಯನ್ನು ಮಾಡಬೇಕಾದರೆ ಪೂಜೆಗಾಗಿ ಸಮರ್ಪಿಸಿದ ತೆಂಗಿನಕಾಯಿ ಏನನ್ನು ಸೂಚಿಸುತ್ತದೆ ಅಂದರೆ ಆ ತೆಂಗಿನಕಾಯಿ ಒಡೆದಾಗ ಕಾಣುವ ಬಿಳಿ ಭಾಗ ನಮ್ಮ ಆತ್ಮದ ಸಂಕೇತವಾಗಿರುತ್ತದೆ
ಮತ್ತು ಕಾಯಿಯಲ್ಲಿ ಇರುವಂತಹ ಆ ಮೂರು ಕಣ್ಣುಗಳು ಈಶ್ವರನನ್ನು ಪ್ರತಿನಿಧಿಸುತ್ತದೆ. ಹೌದು ಮೂರು ಕಣ್ಣುಗಳು ಅಂದರೆ ಮುಕ್ಕಣ್ಣ ಮುಕ್ಕಣ್ಣನವರ ಪ್ರತೀಕಾ ಅಂತ ಹೇಳಬಹುದು ತೆಂಗಿನಕಾಯಿ.
ತೆಂಗಿನ ಕಾಯಿಯನ್ನು ಪೂಜೆಯಲ್ಲಿ ಇಡುವುದು ಕೂಡ ಶ್ರೇಷ್ಠ ತೆಂಗಿನಕಾಯಿಯನ್ನು ನೈವೇದ್ಯ ಆಗಿ ಸಮರ್ಪಿಸುವುದರಿಂದ ಪೂಜೆಗೆ ಶ್ರೇಷ್ಠ ಅಂತ ಹೇಳಲಾಗುತ್ತದೆ ಈ ತೆಂಗಿನ ಕಾಯಿಯನ್ನು ಪ್ರತಿಷ್ಠಾಪನೆ ಮಾಡುವ ಮುಖಾಂತರ ಪ್ರಾಣ ಪ್ರತಿಷ್ಟಾಪನೆ ಆಯಿತು ಅಂತ ಕೂಡ ಹೇಳುವುದುಂಟು.
ಹೀಗೆ ತೆಂಗಿನ ಕಾಯಿ ಪೂಜೆಗೆ ಸಮರ್ಪಣೆ ಮಾಡಿದಾಗ ಆ ತೆಂಗಿನ ಕಾಯಿ ಕೆಟ್ಟಿದ್ದರೆ ಅದನ್ನು ಅಶುಭ ಅಂತ ಎಲ್ಲರೂ ಅಂದುಕೊಳ್ಳುತ್ತಾರೆ ಯಾಕೆ ಅಂದರೆ ಕೆಟ್ಟ ಕಾಯಿ ಮುಂದಿನ ದಿವಸಗಳಲ್ಲಿ ಯಾವುದಾದರೂ ಸಮಸ್ಯೆಗಳನ್ನು ಉಂಟು ಮಾಡಬಹುದೇನೋ ಅಥವಾ ಕೆಟ್ಟ ತೆಂಗಿನಕಾಯಿ ಯಾವುದಾದರೂ ಅಶುಭವನ್ನು ಸೂಚಿಸುತ್ತಿದೆಯೇ ಅಂತಾ ಕೆಲವರು ಗಾಬರಿಯಾಗುತ್ತಾನೆ
ಆದರೆ ಪೂಜೆಗೆ ಸಮರ್ಪಿಸಿದಂತೆ ತೆಂಗಿನಕಾಯಿ ಕೆಟ್ಟಿದ್ದರೆ ಅಥವಾ ತೆಂಗಿನ ಕಾಯಿಯನ್ನು ಹೊಡೆದಾಗ ಕಾಯಿಯಲ್ಲಿ ಹೂವು ಬಂದಿದ್ದರೆ ಅದರ ಅರ್ಥ ಅಶುಭ ಅಂತ ಅಲ್ಲ ಅದನ್ನು ಹಿರಿಯರು ಹೇಳುವುದೇನೆಂದರೆ
ಪೂಜೆ ಮಾಡುವಾಗ ತೆಂಗಿನಕಾಯಿ ಕೆಟ್ಟಿದ್ದರೆ ಅಥವಾ ಹೂವಾ ಬಂದಿದ್ದರೆ ಅದು ಮುಂದಿನ ದಿವಸಗಳಲ್ಲಿ ಎದುರಾಗುತ್ತಿರುವ ಯಾವುದಾದರೂ ಕಷ್ಟಗಳನ್ನು ನಿವಾರಣೆ ಮಾಡಿದೆ ಎಂಬುದರ ಅರ್ಥವನ್ನು ತಿಳಿಸುತ್ತ ಇರುತ್ತದೆ.
ಹಾಗಾಗಿ ಪೂಜೆ ಮಾಡುವಾಗ ತೆಂಗಿನಕಾಯಿ ಶೆಟ್ಟರೆ ಯೋಚನೆ ಬೇಡ ಆಗ ನೀವು ಮಾಡಬೇಕಾಗಿರುವುದು ಏನು ಅಂದರೆ ಪೂಜೆಯನ್ನು ಮತ್ತೆ ಶುರುವಿನಿಂದ ಮಾಡಬೇಕು. ಆ ತೆಂಗಿನಕಾಯಿಯನ್ನು ಆಚೆ ಹಾಕಿ ಮತ್ತೊಂದು ತೆಂಗಿನಕಾಯಿಯನ್ನು ದೇವರಿಗೆ ಸಮರ್ಪಿಸಬೇಕು.
ಪೂಜೆಯನ್ನು ಶುರು ಮಾಡುವಾಗ ಮೊದಲು ಕೈಕಾಲುಗಳನ್ನ ಮತ್ತೆ ಸ್ವಚ್ಛ ಪಡಿಸಿಕೊಂಡು ಆನಂತರ ಪೂಜೆಯನ್ನು ಶುರು ಮಾಡಬೇಕು ಅಷ್ಟೇ ಅಲ್ಲ ದೇವಸ್ಥಾನಗಳಿಗೆ ಹೋದಾಗ ಕಾಯಿಯನ್ನು ನೀಡಿದ್ದರೆ
ಆ ತೆಂಗಿನಕಾಯಿ ಕೆಟ್ಟಿದ್ದರೂ ಕೂಡ ಅದರ ಸೂಚನೆ ಕೂಡ ಆ ತೆಂಗಿನಕಾಯಿಯನ್ನು ಬದಿಯಲ್ಲಿಟ್ಟು ಮತ್ತೊಂದು ತೆಂಗಿನಕಾಯಿಯನ್ನು ಪೂಜೆಗಾಗಿ ಬಳಕೆ ಮಾಡಲಾಗುತ್ತದೆ ಅಷ್ಟೇ.
ಆದರೆ ಮನೆಯಲ್ಲಿ ಪೂಜೆಗೆ ಸಮರ್ಪಿಸಿದಾಗ ತೆಂಗಿನಕಾಯಿ ಕೆಟ್ಟರೆ ಮತ್ತೆ ಶುರುವಿನಿಂದ ಪೂಜೆ ಮಾಡಿ ಇದರಿಂದ ಯಾವುದೇ ತರಹದ ಅಶುಭ ಜರುಗುವುದಿಲ್ಲ ಎನೋ ತೆಂಗಿನಕಾಯಿಯನ್ನು ವಾಹನಗಳಿಗೆ ಅಡ್ಡವಾಗಿ ಹೊಡೆಯಲಾಗುತ್ತದೆ
ಈ ರೀತಿ ತೆಂಗಿನಕಾಯಿಯನ್ನು ಹೊಡೆದಾಗ ಆ ತೆಂಗಿನಕಾಯಿ ಕೆಟ್ಟಿದ್ದರೆ ಗಾಡಿಗೆ ಆದ ದೃಷ್ಟಿ ಅಥವಾ ಗಾಡಿಗೆ ಯಾವುದೋ ದುಷ್ಟಶಕ್ತಿಯ ಪ್ರಭಾವ ಆಗಿದ್ದರೆ ಅಂತಹ ಎಲ್ಲ ಸಮಸ್ಯೆಯು ಪರಿಹಾರ ಆದಂತೆ ಎಂಬುದರ ಸೂಚನೆ ಇದಾಗಿರುತ್ತದೆ ಅಷ್ಟೆ.
ತೆಂಗಿನಕಾಯಿ ಕೆಟ್ಟಿದ್ದರೆ ಅಥವಾ ತೆಂಗಿನಕಾಯಿ ಹೊಡೆದಾಗ ಆ ತೆಂಗಿನಕಾಯಿ ಹೂವು ಬಿಟ್ಟಿದೆ ಅಂದರೆ ಅದೆಲ್ಲ ಅಶುಭ ಎಂಬುದು ಒಂದು ಗಾಳಿಸುದ್ದಿ ಅಥವಾ ಮೂಢ ನಂಬಿಕೆ
ಆದ್ದರಿಂದ ಅದನ್ನು ಯೋಚನೆ ಮಾಡದೆ ಪೂಜೆಯಲ್ಲಿ ಗಮನವಹಿಸಿ ಭಕ್ತಿಪೂರ್ವಕವಾಗಿ ದೇವನಿಗೆ ಪೂಜೆ ಸಮರ್ಪಿಸಿದರೆ ಅಷ್ಟೇ ಸಾಕು. ದೈವ ಎಂದಿಗೂ ಅಷ್ಟೈಶ್ವರ್ಯಗಳನ್ನು ಭಕ್ತರಿಂದ ಬಯಸುವುದಿಲ್ಲ ಆತ ಬಯಸುವುದು ಭಕ್ತಿಯನ್ನು ಮಾತ್ರ ಧನ್ಯವಾದಗಳು.