ಸ್ನೇಹಿತರೆ ಸಾಮಾನ್ಯವಾಗಿ ಕೆಲವರಿಗೆ ನರ ದೃಷ್ಟಿದೋಷ ಅಥವಾ ದೃಷ್ಟಿದೋಷ ಆಗಿರುತ್ತದೆ. ಈ ದೃಷ್ಟಿದೋಷವು ಆಗಿದೆ ಎಂದು ನಮಗೆ ಹೇಗೆ ಸೆಳೆಯುತ್ತಿದೆ ಎಂದರೆ ನಾವು ಕೆಲವು ಹೊಸ ಕಾರ್ಯಗಳನ್ನು ಮಾಡುತ್ತೇವೆ
ಅಂದರೆ ಹೊಸ ಮನೆ ಕಟ್ಟುವುದು ಹೊಸದಾಗಿ ಬಾಡಿಗೆ ಹೋಗುವುದು ಹೊಸ ಕಾರು ಖರೀದಿಸುವುದು ಹೊಸದಾಗಿ ಅಂಗಡಿ ತೆರೆಯುವುದು ಈ ರೀತಿಯಲ್ಲಿ ಹೊಸದಾಗಿ ಕೆಲಸಗಳನ್ನು ಆರಂಭಿಸುತ್ತೇವೆ.
ಈ ರೀತಿ ಆರಂಭಿಸಿದಾಗ ನಮಗೆ ಇದರಿಂದ ಯಾವುದೇ ರೀತಿಯ ಫಲ ದೊರೆಯುವುದಿಲ್ಲ ಹಾಗೆಯೇ ನಮ್ಮ ಮನಸ್ಸಿಗೆ ನೆಮ್ಮದಿ ಕೊಡುತ್ತಿರಲಿಲ್ಲ. ನಾವು ಹೊಸಾ ಮನೆಯನ್ನು ಕಟ್ಟಿಕೊಂಡು ಆ ಮನೆಗೆ ಹೋದಾಗ ಅದರಲ್ಲಿ ನಮಗೆ ಅನೇಕ ರೀತಿಯ ತೊಡಕುಗಳು ಆಗುತ್ತಿರುತ್ತದೆ
ಮತ್ತು ನಮ್ಮ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಮತ್ತು ಕುಟುಂಬದವರ ಜೊತೆ ಕಲಹಗಳು ಹೆಚ್ಚಾಗಿ ನಡೆಯುತ್ತಿರುತ್ತವೆ ಇನ್ನೂ ಹೊಸದಾಗಿ ಕಾರು ತೆಗೆದುಕೊಂಡಾಗ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತಿರುತ್ತವೆ ಮತ್ತು ಹೊಸದಾಗಿ ವ್ಯಾಪಾರವನ್ನು ಶುರು ಮಾಡಿದಾಗ ಆ ವ್ಯಾಪಾರದಲ್ಲಿ ಅನೇಕ ರೀತಿಯ ತೊಂದರೆಗಳು ನಷ್ಟಗಳು ಹೀಗೆ ಅನೇಕ ತೊಂದರೆಗಳು ಆಗುತ್ತಿರುತ್ತವೆ
ಈ ರೀತಿ ಆದಾಗ ಕೆಲವರು ಹೇಳುತ್ತಾರೆ. ನಿಮಗೆ ದೃಷ್ಟಿ ದೋಷ ಅಂದರೆ ನರ ದೃಷ್ಟಿದೋಷ ಆಗಿದೆ ಎಂದು ಹಾಗಾದರೆ ಈ ನರ ದೃಷ್ಟಿ ದೋಷವನ್ನು ಹೇಗೆ ತೆಗೆಯುವುದು ಎಂಬುದನ್ನು ನಾನು ಇಂದು ನಿಮಗೆ ತಿಳಿಸಿಕೊಡುತ್ತೇನೆ ಈ ನರ ದೃಷ್ಟಿದೋಷ ಅಥವಾ ಕಣ್ಣು ದೃಷ್ಟಿ ದೋಷವನ್ನು ತೆಗೆಯುವುದು ತುಂಬಾ ಸುಲಭ.
ಮೊದಲು 2ನಿಂಬೆ ಹಣ್ಣನ್ನು ತೆಗೆದುಕೊಂಡು ಒಂದು ನಿಂಬೆಹಣ್ಣಿಗೆ ಕೆಂಪು ಕುಂಕುಮವನ್ನು ಚೆನ್ನಾಗಿ ಹಚ್ಚಬೇಕು ಈ ರೀತಿ ಅಚ್ಚಲು ಕುಂಕುಮವನ್ನು ನೀರಿನಲ್ಲಿ ನೆನೆಸಿ ಆ ನೀರಿನಲ್ಲಿ ಮಿಶ್ರ ಮಾಡಿದ ಕುಂಕುಮವನ್ನು ನಿಂಬೆಹಣ್ಣಿಗೆ ಹಚ್ಚಬೇಕು. ಇನ್ನೊಂದು ನಿಂಬೆಹಣ್ಣಿಗೆ ಕಣ್ಣಿಗೆ ಹಚ್ಚುವ ಕಾಡಿಗೆಯನ್ನು ಹಚ್ಚಬೇಕು
ಈ ರೀತಿ 2ನಿಂಬೆ ಹಣ್ಣುಗಳನ್ನು ನಿಮ್ಮ ಎಡಗೈನಲ್ಲಿ ಹಿಡಿದುಕೊಂಡು ಮನೆಯ ತುಂಬೆಲ್ಲ ಸುತ್ತಾಡಬೇಕು ಅಡುಗೆಮನೆ ರೂಮ್ ಬಾತ್ ಮಲಗುವ ಕೋಣೆ ದೇವರ ಮನೆ ಊಟ ಮಾಡುವ ಸ್ಥಳ ಹಾಲು ಎಲ್ಲಾ ಕಡೆ ಇದನ್ನು ಹಿಡಿದುಕೊಂಡು ಸುತ್ತಬೇಕು. ಈ ರೀತಿ ಮಾಡುವಾಗ ಯಾರ ಜೊತೆಯೂ ಕೂಡ ಮಾತಾಡಬಾರದು.
ನಂತರ ಮನೆಯಿಂದ ಹೊರಗಡೆ ಬಂದು ಮನೆಗೆ 7ಬಾರಿ ಈ ನಿಂಬೆಹಣ್ಣನ್ನು ನೀವಾಳಿಸಿ. ಈ ರೀತಿ 7ಬಾರಿ ಮಾಡಿದ ನಂತರ ಯಾರೂ ತುಳಿಯದ ಜಾಗದಲ್ಲಿ ಈ ನಿಂಬೆ ಹಣ್ಣನ್ನು ಹಾಕಿ ಮನೆಯ ಒಳಗಡೆ ಹೋಗುವ ಮುನ್ನ ಕಾಲನ್ನು ತೊಳೆದು ಕೊಂಡು ಒಳಗಡೆ ಹೋದರೆ ಇಪ್ಪತ್ನಾಲ್ಕು ಗಂಟೆಗಳಲ್ಲಿ ಈ ನರ ದೃಷ್ಟಿ ದೋಷವು ನಿವಾರಣೆಯಾಗುತ್ತದೆ.
ಹಾಗೆಯೇ ಮಕ್ಕಳಿಗೆ ಏನಾದರೂ ಈ ನರ ದೃಷ್ಟಿದೋಷವು ಆಗಿದ್ದಲ್ಲಿ ಅಂತಹ ಮಕ್ಕಳು ಓದುವುದರಲ್ಲಿ ಅಥವಾ ಬೆಳವಣಿಗೆಯಲ್ಲಿ ರುಚಿಯಾಗಿರುವುದಿಲ್ಲ ಅಂತಹ ಮಕ್ಕಳಿಗೆ ನೀವು 2ನಿಂಬೆಹಣ್ಣನ್ನು ತೆಗೆದುಕೊಂಡು 1ನಿಂಬೆಹಣ್ಣಿಗೆ ಕೆಂಪು ಕುಂಕುಮ ಇನ್ನೊಂದು ನಿಂಬೆಹಣ್ಣಿಗೆ ಕಾಡಿಗೆಯನ್ನು ಎಡದಿಂದ ಬಲಕ್ಕೆ ಮತ್ತು ಬಲದಿಂದ ಎಡಕ್ಕೆ ಈ ರೀತಿಯಲ್ಲಿ ರೀತಿಯಲ್ಲಿ ಆ ಮಗುವಿಗೆ ನಿವಾಳಿಸಬೇಕು.
ಈ ರೀತಿ ನೀವಳಿಸಿದ ನಂತರ ಇದನ್ನು ಯಾರೂ ತುಳಿಯದ ಜಾಗದಲ್ಲಿ ಆಗ್ನೇಯ ದಿಕ್ಕಿನಲ್ಲಿ ಎಸೆಯಬೇಕು. ಈ ರೀತಿ ಮಾಡಿದರೆ ಮಕ್ಕಳಿಗೆ ತಗುಲಿದಂತಹ ನರ ದೃಷ್ಟಿ ದೋಷವು ನಿವಾರಣೆಯಾಗುತ್ತದೆ.
ನೋಡಿದರಲ್ಲ ಸ್ನೇಹಿತರೆ ನಿಮಗೆ ಯಾರಿಗಾದರೂ ಈ ರೀತಿಯ ಅನುಭವಗಳು ಆಗಿದ್ದರೆ ಈ ರೀತಿಯ ನರ ದೃಷ್ಟಿದೋಷಕ್ಕೆ ಒಳಪಟ್ಟಿದ್ದರೆ ಈ ರೀತಿ ಮಾಡುವುದರಿಂದ ಇಪ್ಪತ್ತ್ 4ಗಂಟೆಗಳಲ್ಲಿ ನಿಮಗೆ ತಗಲಿರುವ ನರ ದೃಷ್ಟಿದೋಷವು ನಿವಾರಣೆಯಾಗಿ ನಿಮಗೆ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಧನ್ಯವಾದಗಳು.