ನೀವೇನಾದ್ರು ದೀಪಾವಳಿ ಅಮಾವಾಸ್ಯೆ ದಿನ 11 ರೂಪಾಯಿ ನಾಣ್ಯಗಳನ್ನು ಅರಿಶಿನ ಬಟ್ಟೆಯಲ್ಲಿ ಇಟ್ಟು ಮೂಟೆ ಕಟ್ಟಿ ಇಟ್ಟರೆ ಅಪಾರ ಸಂಪತ್ತು ನಿಮ್ಮದಾಗುತ್ತೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೆ ಎಲ್ಲರ ಮನೆಗಳಲ್ಲಿಯೂ ಕೂಡ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತಾರೆ ಕೆಲವರು ಈ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಅನೇಕ ರೀತಿಯ ಪೂಜೆ ಪುನಸ್ಕಾರ ಗಳನ್ನು ಮಾಡುತ್ತಾರೆ.

ಇನ್ನೂ ಕೆಲವರು ಇನ್ನೂ ಮುಂತಾದ ರೀತಿ ಆದಂಥ ಪ್ರಯತ್ನಗಳನ್ನು ಮಾಡುತ್ತಾರೆ ಕೆಲವರು ಸಾಲ ಬಾಧೆಯಿಂದ ತಪ್ಪಿಸಿಕೊಳ್ಳಲು ಅನೇಕ ರೀತಿಯ ಪೂಜೆಗಳನ್ನು ಮಾಡುತ್ತಾರೆ.

ಅದೇ ರೀತಿಯಲ್ಲಿ ಆರ್ಥಿಕ ಸಮಸ್ಯೆ ಮತ್ತು ಸಾಲಬಾಧೆಯನ್ನು ಹೋಗಲಾಡಿಸಲು ನಾನು ಇಂದು ನಿಮಗೆ 1ಉಪಾಯವನ್ನು ಹೇಳಿ ಕೊಡುತ್ತೇವೆ. ಈಗ ನಿಮಗೆ ತಿಳಿಸಿಕೊಡುವಂತಹ ಪೂಜೆಗಳನ್ನು ಮಾಡಿದ್ದಲ್ಲಿ ನಿಮ್ಮ ಮನೆಯಲ್ಲಿರುವಂತಹ ಸಾಲಬಾಧೆ ಆರ್ಥಿಕ ಸಮಸ್ಯೆಯೂ ನಿಮ್ಮ ಮನೆಯಿಂದ ಹೋಗುತ್ತದೆ

ಹಾಗೆಯೇ ನಿಮ್ಮ ಮನೆಯಲ್ಲಿ ಇರುವಂತಹ ಆರ್ಥಿಕ ಸಮಸ್ಯೆಯೂ ದೂರವಾಗುತ್ತದೆ. ಹಾಗಾದರೆ ಈ ಆರ್ಥಿಕ ಸಮಸ್ಯೆಯನ್ನು ದೂರ ಮಾಡಿಕೊಳ್ಳಲು ಏನು ಮಾಡಬೇಕೆಂದರೆ ಹನ್ನೊಂದು ನಾಣ್ಯಗಳನ್ನು ತೆಗೆದುಕೊಂಡು ದೀಪಾವಳಿ ಅಮಾವಾಸ್ಯೆ ದಿನದಂದು ರಾತ್ರಿ ವೇಳೆ ಅದನ್ನು ಒಂದು ಹಳದಿ ವಸ್ತ್ರದ ಮೇಲೆ ಇಟ್ಟು ಈ ಹಳದಿ ವಸ್ತ್ರವನ್ನು ಮನೆಯ ಮೇಲೆ ಚಂದ್ರನ ಕಿರಣಗಳು ಬೀಳುವಂತೆ ಇಡಬೇಕು.

ಈ ರೀತಿ ಮನೆಯ ಮೇಲೆ ಇಡುವುದರಿಂದ ಚಂದ್ರನ ಕಿರಣಗಳು ಆ ವಸ್ತ್ರ ಮತ್ತು ಹನ್ನೊಂದು ರುಪಾಯಿಯ ನಾಣ್ಯದ ಮೇಲೆ ಬೀಳುತ್ತದೆ. ಇಡೀ ರಾತ್ರಿ ಈ ನಾಣ್ಯಗಳನ್ನು ಮನೆಯ ಮೇಲೆ ಇಟ್ಟಿರಬೇಕು

ಬೆಳಗ್ಗೆ ಎದ್ದ ನಂತರ ಈ ನಾಣ್ಯಗಳನ್ನು ಬಟ್ಟೆ ಸಮೇತ ತೆಗೆದುಕೊಂಡು ಬಂದು ಪೂಜೆ ಮನೆಯಲ್ಲಿ ಇಟ್ಟು ಲಕ್ಷ್ಮೀ ಪೂಜೆಯ ಜೊತೆಯಲ್ಲಿ ಈ ನಾಣ್ಯಗಳನ್ನು ಕೂಡ ಅಲಂಕರಿಸಿ ಪೂಜೆ ಮಾಡಬೇಕು.

ಪೂಜೆ ಮುಗಿದ ನಂತರ ಈ ನಾಣ್ಯಗಳನ್ನು ಆ ಹಳದಿ ಬಟ್ಟೆಯ ಸಹಾಯದಿಂದ ಗಂಟು ಕಟ್ಟಬೇಕು ಈ ರೀತಿ ಗಂಟುಕಟ್ಟಿದ ನಾಣ್ಯಗಳನ್ನು ನಾವು ಬೀರೂನಲ್ಲಿ ದುಡ್ಡನ್ನು ಇಡುವ ಜಾಗದಲ್ಲಿ ಈ ನಾಣ್ಯವನ್ನು ಲಕ್ಷ್ಮಿ ದೇವಿಯ ಹರಸುತ್ತ ಇಡಬೇಕು

ಈ ರೀತಿ ಮಾಡುವುದರಿಂದ ನಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ಕಾಲ ನೆಲೆಸಿರುತ್ತಾರೆ ನಂತರ ನಮ್ಮ ಮನೆಯಲ್ಲಿ ಇರುವಂತಹ ಆರ್ಥಿಕ ಸಮಸ್ಯೆಯಾಗಲಿ ಸಾಲಬಾಧೆ ಸಮಸ್ಯೆಯಾಗಲಿ ಎಂದೂ ನಮ್ಮನ್ನು ಕಾಡುವುದಿಲ್ಲ.

ಹಾಗೆಯೇ ನಾವು ಪ್ರತಿನಿತ್ಯ ಪೂಜೆ ಮಾಡುವಾಗ ಲಕ್ಷ್ಮೀದೇವಿಯನ್ನು ಸ್ಮರಿಸುತ್ತ ಪೂಜೆ ಮಾಡುವುದರಿಂದಲೂ ಕೂಡ ನಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.

ನಾವು ಈ ರೀತಿ ಹನ್ನೊಂದು ರೂಪಾಯಿಯ ನಾಣ್ಯಗಳನ್ನು ಪೂಜೆ ಮಾಡುವಾಗ ಅದು ದೀಪಾವಳಿಯ ಅಮಾವಾಸ್ಯೆಯೆ ಆಗಿರ ಬೇಕು ಬೇರೆ ಯಾವ ಅಮಾವಾಸ್ಯೆ ದಿನದಂದು ಈ ರೀತಿ ಮಾಡಿದರೆ ಇದರ ಫಲ ನಮಗೆ ದೊರೆಯುವುದಿಲ್ಲಾ.

ಆದ್ದರಿಂದ ಈ ಪೂಜೆಯನ್ನು ಮಾಡುವವರು ದೀಪಾವಳಿಯ ಅಮಾವಾಸ್ಯೆ ದಿನದಂದೇ ಮಾಡಬೇಕು. ಆದ್ದರಿಂದ ಈ ದಿನ ದೀಪಾವಳಿಯ ಅಮಾವಾಸ್ಯೆ ತಪ್ಪದೆ ಈ 1ಪರಿಹಾರವನ್ನು ಮಾಡಿಕೊಳ್ಳಿ ಲಕ್ಷ್ಮಿದೇವಿಯನ್ನು ಮನೆಗೆ ಆಹ್ವಾನಿಸಿ ಕೊಳ್ಳಿ.

ಇದೊಂದು ಸರಳ ಉಪಾಯವನ್ನು ಮಾಡಿ ಮನೆಯ ಆರ್ಥಿಕ ಪರಿಸ್ಥಿತಿ ಆರ್ಥಿಕ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಿ ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ

ನಿಮಗೂ ಕೂಡ ಮಾಹಿತಿ ಉಪಯುಕ್ತವಾಗಿದೆ ಈ ಪರಿಹಾರವನ್ನು ತಪ್ಪದೆ ಪಾಲಿಸಿ ಎಲ್ಲರಿಗೂ ದೀಪಾವಳಿ ಹಬ್ಬದ ಜೀವನದಲ್ಲಿ ಬೆಳಕನ್ನು ತರಲಿ ಶುಭ ದಿನ ಧನ್ಯವಾದಗಳು.

Leave a Reply

Your email address will not be published. Required fields are marked *