ನೀವೇನಾದ್ರು ಜಾಸ್ತಿ ಉಪ್ಪು ತಿಂದರೆ ಏನು ಆಗುತ್ತೆ ಗೊತ್ತಾ ಗೊತ್ತಾದ್ರೆ ಉಪ್ಪನ್ನು ಬಳಸುವುದು ಕಮ್ಮಿ ಮಾಡುತ್ತೀರಾ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆ ಮಾತನ್ನು ಸಾಮಾನ್ಯವಾಗಿ ಕೇಳಿರುತ್ತೀರಾ, ಆದರೆ ನಮ್ಮಲ್ಲಿ ಉಪ್ಪಿಗೆ ಯಾಕೆ ಇಷ್ಟೊಂದು ಪ್ರಾಧಾನ್ಯತೆಯನ್ನು ನಾವು ನೀಡುತ್ತೇವೆ,

ಯಾವುದೇ ಪೌಷ್ಟಿಕಾಂಶ ಇರದ ಈ ಉಪ್ಪನ್ನು ನಾವು ದಿನನಿತ್ಯ ಅದೆಷ್ಟು ಬಳಸುತ್ತೇವೆ ಅಂದರೆ, ಇದರಿಂದ ಯಾವ ಆರೋಗ್ಯಕರ ಲಾಭಗಳು ನಮಗೆ ದೊರೆಯುವುದಿಲ್ಲ, ಆದರು ರುಚಿಗೋಸ್ಕರ ಮಾತ್ರ ನಾವು ಪ್ರತಿಯೊಂದು ಆಹಾರದಲ್ಲಿಯೂ ಈ ಉಪ್ಪನ್ನು ಬಳಸುತ್ತೇವೆ.

ಈ ಉಪ್ಪನ್ನು ಬಳಸುವುದರಿಂದ ಏನಾಗುತ್ತದೆ ಯಾವ ಅಡ್ಡ ಪರಿಣಾಮ ಬೀರುತ್ತದೆ, ಇನ್ನೂ ಯಾವೆಲ್ಲ ಅನಾನುಕೂಲಗಳು ಆಗುತ್ತವೆ ಈ ಉಪ್ಪನ್ನು ತಿನ್ನುವುದರಿಂದ ಎಂಬುದನ್ನು ತಿಳಿಯೋಣ ಬನ್ನಿ ಇಂದಿನ ಮಾಹಿತಿಯಲ್ಲಿ, ತಪ್ಪದೇ ಸಂಪೂರ್ಣ ಮಾಹಿತಿಯನ್ನು ನೀವು ಕೂಡ ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ,

ಹಾಗೆ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ಇನ್ನು ಅನೇಕ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೋ ಮಾಡಿ.ಈ ಉಪ್ಪನ್ನು ನಾವು ಯಾವುದಕ್ಕೆ ಬಳಸುವುದಿಲ್ಲ ಹೇಳಿ ಚಿಟಕಿ ಉಪ್ಪನ್ನಾದರೂ ಆಹಾರದಲ್ಲಿ ಯಾವುದಾದರೂ ಒಂದು ಬಗೆಯಲ್ಲಿ ಬಳಸುತ್ತಲೆ ಇರ್ತೇವೆ,

ಕೇವಲ ರುಚಿಗಾಗಿ ಬಳಸುವ ಈ ಉಪ್ಪು ಅದೆಷ್ಟು ಅನಾರೋಗ್ಯ ಸಮಸ್ಯೆಗಳನ್ನು ತಂದಿಡುತ್ತದೆ ಗೊತ್ತಾ, ಯಾವ ಅಪೌಷ್ಟಿಕತೆಯೂ ಇಲ್ಲದೇ ಇರುವ ಈ ಉಪ್ಪನ್ನು ಕೇವಲ ನಾವು ಪ್ರತಿದಿನ ಹದಿನೈದು ಮಿಲಿಗ್ರಾಂನಷ್ಟು ಸೇವಿಸಬೇಕಾಗುತ್ತದೆ.

ಆದರೆ ಇದಕ್ಕಿಂತ ಹೆಚ್ಚು ಉಪ್ಪನ್ನು ಸೇವೆ ತರುವಂತಹ ಜನರು ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ಈಡಾಗುತ್ತಿರುವುದು ಕ್ಕೆ ಮೂಲ ಕಾರಣ ಉಪ್ಪು ಅಂತ ಹೇಳಿದರೆ ತಪ್ಪಾಗಲಾರದು.

ಈ ಸೋಡಿಯಂ ಫ್ಲೋರೈಡ್ ಅಂಶವೂ ದೇಹವನ್ನು ಅದೆಷ್ಟು ಕುಗ್ಗಿಸುತ್ತದೆ ಅಂದರೆ ಬಿಪಿ ಸಮಸ್ಯೆಯನ್ನು ಮಾತ್ರ ಉಂಟು ಮಾಡುವುದಿಲ್ಲ ಇದು ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಮತ್ತು ಉದರಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೂಡ ಉಂಟು ಮಾಡುತ್ತದೆ ಜೊತೆಗೆ ಕ್ಯಾನ್ಸರ್ನಂತಹ ಮಹಾಮಾರಿ ಕಾಯಿಲೆಯು ಕೂಡ ಈ ಉಪ್ಪನ್ನು ಸೇವಿಸುವುದರಿಂದ ಉಂಟಾಗುತ್ತದೆ ಅಂದರೆ ನಿಮಗೆ ನಂಬಲು ಅಸಾಧ್ಯವಾಗಿರುತ್ತದೆ.

ಹೌದು ಕೇವಲ ರುಚಿಗೆಂದು ಬಳಸುವ ಈ ಉಪ್ಪಿನಲ್ಲಿ ಅದೆಷ್ಟು ಆರೋಗ್ಯವನ್ನು ಹದಗೆಡಿಸುವ ಅಂಶ ಇದೆ ಅಂದರೆ, ಮೂರ್ಛೆ ರೋಗವನ್ನು ಕೂಡ ಉಂಟುಮಾಡುತ್ತದೆ,

ಇದರ ಜೊತೆಗೆ ಮೂತ್ರಪಿಂಡ ಗಳಲ್ಲಿ ಇರ ಬೇಕಾಗಿರುವಂತಹ ಖನಿಜಾಂಶಗಳ ಪ್ರಮಾಣವನ್ನು ಹೆಚ್ಚು ಮಾಡುತ್ತದೆ ಈ ಉಪ್ಪು ಮತ್ತು ಮೂಳೆಗಳು ಬಲವಾಗಿರಬೇಕಾದರೆ, ಇದಕ್ಕೆ ಕ್ಯಾಲ್ಶಿಯಂ ಅವಶ್ಯಕತೆ ಇರುತ್ತದೆ, ಆದರೆ ಈ ಕ್ಯಾಲ್ಷಿಯಂ ಜೊತೆಗೆ ಉಪ್ಪಿನ ಅಂಶ ಹೆಚ್ಚಾದರೆ ಮೂಳೆಗಳ ದುರ್ಬಲತೆಗೆ ಈ ಉಪ್ಪಿನ ಅಂಶ ಕಾರಣವಾಗುತ್ತದೆ.

ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಈ ಹೌದು ಉಪ್ಪಿನ ಅಂಶವನ್ನು ಹೆಚ್ಚಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಬಳಸುತ್ತಾ ಬರುವುದರಿಂದ ಹೃದಯದ ಮೇಲೆಯೂ ಕೂಡ ಇದು ಅಡ್ಡ ಪರಿಣಾಮವನ್ನು ಬೀರುತ್ತದೆ.

ಆದ ಕಾರಣವೇ ಉಪ್ಪಿನಲ್ಲಿ ಯಾವುದೇ ರೀತಿಯ ಪೌಷ್ಟಿಕಾಂಶ ಇರದೇ ಇರುವ ಕಾರಣ ಈ ಉಪ್ಪನ್ನು ಆದಷ್ಟು ಅಡುಗೆಯಲ್ಲಿ ಕಡಿಮೆ ಬಳಸುವುದೇ ಉತ್ತಮವಾಗಿದೆ ಮತ್ತು ನಿಮ್ಮ ಆರೋಗ್ಯ ಅಭಿವೃದ್ಧಿಗಾಗಿ ಆದಷ್ಟು ಕಡಿಮೆ ಪ್ರಮಾಣದಲ್ಲಿ ಉಪ್ಪಿನಂಶವನ್ನು ಸೇವಿಸಿ.

ಮತ್ತು ಸಂಸ್ಕಾರಿತ ಆಹಾರವನ್ನು ಅಂದರೆ ಪ್ರೊಸೆಸ್ ಫುಡ್ಗಳನ್ನು ಹೆಚ್ಚಾಗಿ ಸೇವಿಸದಿರಿ, ಇದರಿಂದ ಅನೇಕ ಅನಾರೋಗ್ಯ ಸಮಸ್ಯೆಗಳಿಗೆ ಈಡಾಗುವ ಸಾಧ್ಯತೆ ಇರುತ್ತದೆ.

ಉಪ್ಪು ನಾಲಿಗೆಗೆ ರುಚಿ ನೀಡುತ್ತದೆ ಎಂದು ಇದನ್ನು ಹೆಚ್ಚಾಗಿ ಸೇವಿಸುತ್ತಾ ಬಂದರೆ ನೋಡಿ ಅನೇಕ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ, ಇನ್ನು ಮುಂದೆ ಎಚ್ಚರದಿಂದ ಇರಿ ನಿಮ್ಮ ಆಹಾರ ಪದ್ಧತಿಯಲ್ಲಿ ಆದಷ್ಟು ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ಬಳಸಿ ಧನ್ಯವಾದ.

Leave a Reply

Your email address will not be published. Required fields are marked *