ನೀವೇನಾದ್ರು ಕೇರಳ ಪರೋಟ ಮತ್ತು ಎಣ್ಣೆ ಬಳಸದೇ ಮಾಡಿದ ಹೆಸರುಕಾಳಿನ ಪಲ್ಯವನ್ನು ಈ ರೀತಿಯಾಗಿ ಒಂದು ಬಾರಿ ಮಾಡಿ ತಿಂದರೆ ಮತ್ತೆ ಮತ್ತೆ ಬೇಕು ಅನ್ನುತ್ತೀರಾ !!!!

20

ಹಾಯ್ ಫ್ರೆಂಡ್ಸ್ ಇಂದಿನ ಮಾಹಿತಿಯಲ್ಲಿ ನಾವು ತಿಳಿದುಕೊಳ್ಳೋಣ ಪರೋಟವನ್ನು ಹೇಗೆ ಮಾಡೋದು ಅಂತ ನಾವು ಈ ದಿನ ನಿಮಗೆ ತಿಳಿಸಿ ಕೊಳ್ಳಲು ಹೊರಟಿರುವುದು ಕೇರಳ ಪರೋಟ ಮಾಡುವ ವಿಧಾನ ಹೇಗೆ ಅಂತ.

ಇದೀಗ ಈ ರೆಸಿಪಿಯನ್ನು ತಿಳಿದುಕೊಳ್ಳೋಣ ಪರೋಟ ಮಾಡುವ ವಿಧಾನವನ್ನು ತಿಳಿದ ನಂತರ ಕರ್ರಿಯನ್ನು ಮಾಡುವುದು ಹೇಗೆ ಅಂತ ಕೂಡ ತಿಳಿದುಕೊಳ್ಳೋಣ.

ಪರೋಟ ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಎರಡು ಕಪ್ ಮೈದಾ ಅಂದರೆ ಇನ್ನೂರು ಗ್ರಾಂ ಮೈದಾ ಒಂದು ಸ್ಪೂನ್ ಸಕ್ಕರೆ ಕಾಲು ಕಪ್ ಎಣ್ಣೆ ಮತ್ತು ತುಪ್ಪ ಮಿಶ್ರಣ ಹಾಗೆ ಮುಕ್ಕಾಲು ಚಮಚ ಉಪ್ಪು.

ಮೊದಲಿಗೆ ಮೈದಾಹಿಟ್ಟನ್ನು ಹಾಕಿಕೊಂಡು ಇದಕ್ಕೆ ಸಕ್ಕರೆ ಮತ್ತು ತುಪ್ಪವನ್ನು ನಾವು ಹೇಳಿದ ಪ್ರಮಾಣದಲ್ಲಿ ಹಾಕಿ ನೀರನ್ನು ಹಾಕಿ ಹಿಟ್ಟು ಮಾಡಿಕೊಳ್ಳಬೇಕು ಹೇಗೆ ಅಂದರೆ ಒಂದೇ ಸಮನೆ ನೀರನ್ನು ಹಾಕಬೇಡಿ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕುತ್ತಾ ಈ ಮೈದಾಹಿಟ್ಟನ್ನು ನಾದಬೇಕು.

ಮೈದಾ ಹಿಟ್ಟನ್ನು ಕಲಿಸಿಕೊಂಡು ಆದಮೇಲೆ, ಇದನ್ನು ಏಳು ರಿಂದ ಎಂಟು ನಿಮಿಷಗಳವರೆಗೆ ಮತ್ತೆ ಚೆನ್ನಾಗಿ ನಾದಬೇಕು ಯಾಕೆ ಅಂದರೆ ಹಿಟ್ಟು ಮೃದುವಾಗಬೇಕು ಆದ ಕಾರಣ ಹಿಟ್ಟನ್ನು ಚೆನ್ನಾಗಿ ನಾದಬೇಕಾಗುತ್ತದೆ.

ಮೈದಾ ಹಿಟ್ಟನ್ನು ನಾದಿ ನಂತರ ಎರಡೂವರೆ ಗಂಟೆಗಳ ಕಾಲ ಈ ಹಿಟ್ಟನ್ನು ಹಾಗೇ ನೆನೆಯಲು ಬಿಡಬೇಕು ಆಗ ಹೊರಟ ಹಿಟ್ಟು ಚೆನ್ನಾಗಿ ರಕ್ಷಿಸುವುದಕ್ಕೆ ಆಗಿರುತ್ತದೆ ಹಾಗೇ ಸ್ವಲ್ಪ ಎಣ್ಣೆಯನ್ನು ಮಿಶ್ರಣ ಮಾಡಿ ಹಿಟ್ಟನ್ನು ನೆನೆಯಲು ಬಿಡಬೇಕು.

ಎರಡೂವರೆ ಗಂಟೆಗಳ ನಂತರ ಪರೋಟವನ್ನು ಲಟ್ಟಿಸಬೇಕು ಇದನ್ನು ಕೆಲವರು ಕೈಯಿಂದ ಕೂಡ ಲಟ್ಟಿಸುತ್ತಾರೆ ಇನ್ನು ಕೆಲವರು ಲಟ್ಟಣಿಗೆ ಸಹಾಯದಿಂದ ಲಟ್ಟಿಸುತ್ತಾರೆ.

ಪರೋಟವನ್ನು ಒಂದು ಬೋರ್ಡ್ ಮೇಲೆ ಹಿಟ್ಟನ್ನು ಒಂದು ದೊಡ್ಡ ನಿಂಬೆ ಹಣ್ಣಿನ ಗಾತ್ರದಲ್ಲಿ ಉಂಡೆ ಮಾಡಿಕೊಂಡು ಇಟ್ಟುಕೊಳ್ಳಿ ಸ್ವಲ್ಪ ಎಣ್ಣೆ ಸವರಿ ಇಟ್ಟುಕೊಳ್ಳಿ ನಂತರ ಹತ್ತು ನಿಮಿಷಗಳಾದ ಮೇಲೆ ಇದನ್ನು ಲಟ್ಟಿಸಬೇಕು.

ಪರೋಟವನ್ನು ನಟಿಸುವಾಗ ಪೂರ್ತಿ ತೆಳುವಾಗಿ ಲಟ್ಟಿಸಿ ಒಂದು ಚಾಕುವಿನ ಸಹಾಯದಿಂದ ಅಡ್ಡಲಾಗಿ ಕತ್ತರಿಸಿಕೊಂಡು ಬನ್ನಿ ತುದಿಯಲ್ಲ ಪರೋಟಾ ಹಿಟ್ಟನ್ನು ಲಟ್ಟಿಸಿದ ಮೇಲೆ ತುದಿಯನ್ನು ಹೊರತುಪಡಿಸಿ ಸರಿಯಾಗಿ ಲೇಯರ್ ಬರಬೇಕು

ಆ ರೀತಿ ಕಟ್ ಮಾಡಿಕೊಳ್ಳಿ ನಂತರ ಮತ್ತೆ ಇದನ್ನು ಸುತ್ತಿ ಅಂದರೆ ಪರೋಟಾ ಹಿಟ್ಟನ್ನು ಸುತ್ತಿಕೊಳ್ಳಬೇಕು. ಮತ್ತೊಮ್ಮೆ ವೃತ್ತಾಕಾರದಲ್ಲಿ ಉಂಡೆಯನ್ನು ಮಾಡಿ ಮೂರು ನಿಮಿಷಗಳ ವರೆಗೂ ಹಾಗೆ ಎಣ್ಣೆ ಸವರಿ ಇಡಬೇಕು.

ನಂತರ ಮತ್ತೊಮ್ಮೆ ಈ ಪರೋಟವನ್ನು ಸಣ್ಣದಾಗಿ ಲಟ್ಟಿಸಿ ಕೊಂಡರೆ ಸಾಕು ಪರೋಟ ಸ್ವಲ್ಪ ದಪ್ಪದಾಗಿಯೆ ಇದ್ದರೆ ಚೆನ್ನಾಗಿರುತ್ತದೆ. ಲಟ್ಟಣಿಗೆ ಸಹಾಯದಿಂದ ಅಥವಾ ಕೈಯಲ್ಲಿಯೆ ನೀವು ಲಟ್ಟಿಸಿಕೊಳ್ಳಿ.

ಪರೋಟವನ್ನು ಲಟ್ಟಿಸಿ ಕೊಳ್ಳುವಾಗ ಸ್ವಲ್ಪವೇ ಎಣ್ಣೆಯನ್ನು ಹಾಕಿ ನಂತರ ಲಟ್ಟಿಸಿಕೊಳ್ಳಿ. ಪರೋಟದ ಹಿಟ್ಟನ್ನು ಲಟ್ಟಿಸಿದ ಮೇಲೆ. ಇದೀಗ ಮಧ್ಯಮ ಉರಿಯಲ್ಲಿ ಇಟ್ಟು ಹೋರಾಟವನ್ನು ಸುಡಬೇಕು ಇದೀಗ ಪರೋಟ ತಯಾರಾಗಿದೆ ಇಷ್ಟೇ ಪರೋಟ ಮಾಡುವ ವಿಧಾನ.

ಪರೋಟ ಗೆ ಕರ್ರಿಯನ್ನು ಮಾಡುವುದು ಹೇಗೆ ಅಂತ ತಿಳಿಯೋಣ ಇದಕ್ಕೆ ಎಣ್ಣೆ ತುಪ್ಪ ಏನೂ ಬೇಡ ಸುಲಭವಾಗಿ ಒಳ್ಳೆ ಎನರ್ಜಿಟಿಕ್ ಕರ್ರಿಯನ್ನು ಮಾಡೋಣ.

ಇದಕ್ಕಾಗಿ ಬೇಕಾಗಿರುವುದು ನೂರು ಗ್ರಾಂ ಹೆಸರು ಕಾಳು ಗರಂಮಸಾಲ ಚಿಟಕಿ ಅರಿಶಿಣ ರುಚಿಗೆ ತಕ್ಕಷ್ಟು ಉಪ್ಪು ಹಸಿ ಶುಂಠಿ ತೆಂಗಿನ ಕಾಯಿ ಕೊತ್ತಂಬರಿ ಈರುಳ್ಳಿ ಟೊಮೆಟೊ ಎರಡರಿಂದ ಮೂರು ಹಸಿರು ಮೆಣಸಿನಕಾಯಿ.

ಸುಲಭವಾದ ಕರ್ರಿ ಇದೀಗ ಒಂದು ಕುಕ್ಕರನ್ನು ತೆಗೆದುಕೊಳ್ಳಿ ಇದಕ್ಕೆ ಈ ಮೇಲೆ ತಿಳಿಸಿದಂತಹ ಪ್ರಮಾಣದ ಎಲ್ಲಾ ಪದಾರ್ಥಗಳನ್ನು ಹಾಕಿಕೊಳ್ಳಿ. ಕೊತ್ತಂಬರಿ ಸೊಪ್ಪನ್ನು ಕೊನೆಯಲ್ಲಿ ಹಾಕಿಕೊಳ್ಳಬೇಕು.

ಹೆಸರು ಕಾಳನ್ನು ಏಳರಿಂದ ಎಂಟು ವಿಶಲ್ ಅನ್ನು ಹಾಕಿಸಿಕೊಳ್ಳಿ. ಇದೀಗ ವಿಶಾಲ್ ಹಾಕಿಸಿದ ನಂತರ ಇದಕ್ಕೆ ನೀವು ಒಗ್ಗರಣೆ ಹಾಕುವ ಅವಶ್ಯಕತೆ ಇಲ್ಲ ಸ್ವಲ್ಪ ಸ್ಮಾಶ್ ಮಾಡಿಕೊಳ್ಳಿ ಅಷ್ಟೇ ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಒಮ್ಮೆ ಕುದಿಸಿಕೊಳ್ಳಿ ಅಷ್ಟೇ ಸಾಕು.

LEAVE A REPLY

Please enter your comment!
Please enter your name here