ನೀವೇನಾದ್ರು ಕಾರ್ತಿಕ ಹುಣ್ಣಿಮೆಯ ದಿನ ಈ ರೀತಿ ದೀಪಾರಾಧನೆ ಮಾಡಿ ನಂತರ ಈ ಒಂದು ಮರಕ್ಕೆ ಹೋಗಿ ಸಂಕಲ್ಪ ಮಾಡುವುದರಿಂದ ನಿಮಗೆ ಎಲ್ಲಿಲ್ಲದ ಪುಣ್ಯ ದೊರೆಯುತ್ತದೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಇದೇ ನವೆಂಬರ್ ತಿಂಗಳಿನಲ್ಲಿ ಆಗಲಿರುವ ಹುಣ್ಣಿಮೆ ಅಂದರೆ  ತಾರೀಕು 30ನೇ ತಾರೀಕಿನಂದು ಹುಣ್ಣಿಮೆ ಜರುಗಲಿದೆ ಆದರೆ ಎಷ್ಟೋ ಮಂದಿಗೆ ಗೊಂದಲವಿದೆ ಈ ಹುಣ್ಣಿಮೆ ಯಾವ ದಿವಸ ಇದೆ ಅಂತ ಅಂದರೆ 29ನೇ ತಾರೀಕಿನಂದು ಅಥವಾ 30ನೇ ತಾರೀಕಿನಂದು ಎಂದು.

ಹೌದು ಈ ತಿಂಗಳಿನಲ್ಲಿ ಬರಲಿರುವ ಹುಣ್ಣಿಮೆ ಈ ಎರಡೂ ದಿವಸಗಳು ಕೂಡ ಇದ್ದು ಹುಣ್ಣಿಮೆ ಭಾನುವಾರ ಮಧ್ಯಾಹ್ನ 12.47ಕ್ಕೆ ಶುರು ಆಗಲಿದ್ದು ಈ ಹುಣ್ಣಿಮೆಯ ಮಾರನೇ ದಿವಸ ಅಂದರೆ ಸೋಮವಾರ ಮಧ್ಯಾಹ್ನ 2.59ಕ್ಕೆ ಕೊನೆಯಾಗಲಿದೆ

ಹೌದು ಈ ಹುಣ್ಣಿಮೆಯ ತಿಥಿ ಫಲ ಇಷ್ಟು ಸಮಯದಲ್ಲಿದ್ದು ಈ ಕಾರ್ತಿಕ ಮಾಸದ ಹುಣ್ಣಿಮೆಯ ದಿವಸ ದಂದು ನೀವು ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ನಿಮಗೆ ಸಾಕಷ್ಟು ಪುಣ್ಯ ಲಭಿಸಲಿದೆ ಮತ್ತು ಸಕಲ ಬಾಧೆಗಳು ನಿವಾರಣೆ ಆಗಲಿದೆ.

ಹಾಗಾದರೆ ಈ ಕಾರ್ತಿಕದ ಹುಣ್ಣಿಮೆಯ ದಿವಸ ದಂದು ಯಾವ ದೇವರನ್ನು ಆರಾಧಿಸಬೇಕು ಈ ಹುಣ್ಣಿಮೆಯ ದಿವಸ ದಂದು ಮಾಡಬೇಕಾಗಿರುವ ಕೆಲಸಗಳೇನು ಎಂಬುದನ್ನು ತಿಳಿಯೋಣ ಬನ್ನಿ

ಭಾನುವಾರದ ದಿವಸದಂದು ಅಂದರೆ ಈ ದಿವಸದಂದು ಮಾಡಬೇಕಾಗಿರುವ ಕೆಲಸ ಏನು ಅಂದರೆ ಯಾರೋ ಮುನ್ನೂರ ಅರುವತ್ತೈದು ಬತ್ತಿಗಳ ದೀಪಾರಾಧನೆಯನ್ನು ಮಾಡುತ್ತಾರೊ, ಅಂತಹವರು ಭಾನುವಾರದ ದಿವಸದಂದು ಸಂಜೆ ಮನೆಯ ಬಳಿ ಇರುವ ದೇವಸ್ಥಾನಕ್ಕೆ ಹೋಗಿ ಅಥವಾ ಮನೆಯಲ್ಲಿಯೆ ದೀಪಾರಾಧನೆ ಅನ್ನು ಮಾಡಬಹುದು.

ಏನೋ ಸೋಮವಾರದ ದಿವಸದಂದು ಬೆಳಿಗ್ಗೆ ಎದ್ದು ಮನೆಯ ಬಳಿ ಬಾವಿ ಅಥವಾ ನದಿ ಇದ್ದರೆ ಆ ನೀರಿನಿಂದ ಸ್ನಾನ ಮಾಡಬಹುದು ಅಥವಾ ಈ ಸೌಲಭ್ಯಗಳು ಲಭ್ಯ ಇಲ್ಲ ಅಂದರೆ ಮನೆಯಲ್ಲಿಯೆ ಈ ಕಾರ್ತಿಕದ ಹುಣ್ಣಿಮೆಯ ದಿವಸ ದಂದು ಈ ಬಗೆಯ ಸ್ನಾನವನ್ನು ಮಾಡಿ

ಹೇಗೆ ಅಂದರೆ ಸ್ನಾನ ಮಾಡುವ ನೀರಿಗೆ ಕಲ್ಲುಪ್ಪು ಮತ್ತು ಅರಿಶಿಣವನ್ನು ಮಿಶ್ರಣ ಮಾಡಿ ಸ್ನಾನ ಮಾಡುವುದರಿಂದ ಸಮುದ್ರ ಸ್ನಾನದಷ್ಟೇ ಪುಣ್ಯ ಲಭಿಸುತ್ತದೆ. ಈ ದಿವಸದಂದು ಅಂದರೆ

ಸೋಮವಾರದ ದಿವಸದಂದು ಹುಣ್ಣಿಮೆ ವ್ರತಾಚಾರಣೆ ಮಾಡುವವರು ಸಂಜೆ ಸಮಯದಲ್ಲಿ ಮನೆಯ ಮುಂದೆ ದೀಪಾರಾಧನೆಯನ್ನು ಮಾಡಬೇಕು ಈ ಕಾರ್ತಿಕ ಸೋಮವಾರದ ದಿವಸದಂದು ಮನೆಯ ಮುಂದೆ ದೀಪಾರಾಧನೆಯನ್ನು ಮಾಡಿದಾಗ ದೀಪ ಮುಂದೆಯೇ ನೈವೇದ್ಯಯನ್ನು ಇರಿಸಬೇಕು.

ಹೌದು ದೇವರಿಗೆ ನೈವೇದ್ಯ ಅನ್ನೋ ತಯಾರಿಸಿ ದೇವರಿಗೆ ಸಮರ್ಪಿಸುತ್ತೇವೆ ಅದೇ ರೀತಿಯಲ್ಲಿ ಏನಾದರೂ ಸಿಹಿ ಮಾಡಿ ಈ ದೀಪಗಳಿಗೆ ನೈವೇದ್ಯ ಅನ್ನು ಅರ್ಪಿಸಬೇಕು. ಮತ್ತು ಈ ಸೋಮವಾರದ ದಿವಸದಂದು ಹುಣ್ಣಿಮೆ ವ್ರತಾಚರಣೆ ಮಾಡುವವರು ಉಪವಾಸ ಇದ್ದು

ಅಥವಾ ಲಘು ಉಪಾಹಾರವನ್ನು ಸೇವಿಸಿ ಬೆಳಿಗ್ಗೆ ಹತ್ತು ಗಂಟೆಗೆ ಮನೆಯ ಬಳಿ ಇರುವ ದೇವಾಲಯದ ಅರಳಿ ಮರಕ್ಕೆ ಹೋಗಿ ಇಪ್ಪತ್ತ್ ಒಂದು ಪ್ರದಕ್ಷಿಣೆ ಹಾಕಬೇಕು ಮತ್ತು ಅರಳಿಮರದ ಬಳಿ ದೀಪಾರಾಧನೆಯನ್ನು ಮಾಡಬೇಕು

ಈ ರೀತಿಯ ವ್ರತಾಚರಣೆ ಮಾಡುವುದರಿಂದ ಸಕಲ ಬಾಧೆಗಳು ನಿವಾರಣೆ ಆಗುತ್ತದೆ. ಯಾವುದೇ ದಾರಿದ್ರ್ಯ ದೋಷವಿದ್ದರೂ ಅದು ನಿವಾರಣೆ ಆಗಲಿದೆ ಈ ಕಾರ್ತಿಕ ಹುಣ್ಣಿಮೆಯ ದಿವಸ ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ.

ಈ ದಿವಸ ದಂದು ಅಂದರೆ ಸೋಮವಾರದ ಕಾರ್ತಿಕ ಹುಣ್ಣಿಮೆಯ ದಿವಸ ದಂದು ಶಿವ ವಿಷ್ಣು ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡುವುದು ತಮ್ಮ ಶ್ರೇಷ್ಠ ಆಗಿದ್ದು ಈ ದಿವಸದಂದು ದಾನವನ್ನು ಮಾಡುವುದರಿಂದ ಈ ಫಲಗಳನ್ನು ನೀವು ಪಡೆದುಕೊಳ್ಳಬಹುದು.

ಹಾಗೆ ನೆಲ್ಲಿಕಾಯಿಯನ್ನು ಈ ದಿವಸದಂದು ದಾನ ಮಾಡುವುದರಿಂದ, ನವಗ್ರಹ ದೋಷ ನಿವಾರಣೆ ಆಗುತ್ತದೆ. ಇದರ ಜೊತೆಗೆ ಸ್ವಯಂಪಾಕ ಅಂದರೆ ಧವಸ ಧಾನ್ಯಗಳನ್ನು ಬ್ರಾಹ್ಮಣರಿಗೆ ದಾನವಾಗಿ ನೀಡುವುದರಿಂದ ಪಿತೃ ದೋಷ ನಿವಾರಣೆ ಆಗುತ್ತದೆ.

Leave a Reply

Your email address will not be published. Required fields are marked *