ಎಕ್ಕದ ಗಿಡ ಈ ಒಂದು ಗಿಡದ ಮಹತ್ವವನ್ನು ತಿಳಿದರೆ ನೀವು ಕೂಡ ಇನ್ನು ಮುಂದೆ ನಿಮ್ಮ ಮನೆಯಲ್ಲಿ ವಾಸ್ತು ದೋಷ ನಿವಾರಣೆಗಾಗಿ ಎಕ್ಕದ ಹೂವಿನ ಮಾಲೆಯನ್ನು ಅಥವಾ ಎಕ್ಕದ ಹೂವನ್ನು ಮನೆಯಲ್ಲಿ ಇಡಲು ಪ್ರಾರಂಭಿಸುತ್ತೀರಿ,
ಹಾಗಾದರೆ ಈ ಒಂದು ಗಿಡದ ಮಹತ್ವವನ್ನು ಇತಿಹಾಸವನ್ನು ತಿಳಿಯೋಣ ಬನ್ನಿ ಇಂದಿನ ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಯಾವುದಾದರೂ ದುಷ್ಟಶಕ್ತಿಯ ಪ್ರಭಾವ ಆಗಿದ್ದರೆ ಈ ರೀತಿ ಕೆಲಸವನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಕಷ್ಟ ನಿವಾರಣೆಗೊಳ್ಳಲಿದೆ.
ಮೊದಲಿಗೆ ಎಕ್ಕದ ಗಿಡದ ಪೌರಾಣಿಕ ಕಥೆಯನ್ನು ಹೇಳುವುದಾದರೆ ಸಮುದ್ರ ಮಂಥನದ ವೇಳೆ ಅಮೃತ ಕ್ಕಿಂತ ಮೊದಲು ವಿಷ ಬಂದಿತ್ತು ಈ ವಿಷಯವನ್ನು ಈಶ್ವರನನ್ನು ಸೇರಿಸಿದರು ಆದರೆ ಈ ವಿಶ್ವದ ಜೊತೆ ಬಂದ ನೊರೆಯನ್ನು ಗಣಪತಿ ಒಂದೆಡೆ ಮಾಡಿದರು ಅದರಿಂದಲೇ ಎಕ್ಕದ ಗಿಡ ನಿರ್ಮಾಣವಾಯಿತು
, ಎಕ್ಕದ ಗಿಡದಲ್ಲಿಯೂ ಕೂಡ ಕೆಂಪು ಬಣ್ಣದ ಹೂವನ್ನು ಬಿಡುವ ಗಿಡವೂ ಕೂಡ ಇದೆ ಇದನ್ನು ನಾವು ಎಲ್ಲೆಡೆಯೂ ನೋಡಬಹುದು ಆದರೆ ಬಿಳಿ ಎಕ್ಕದ ಗಿಡವನ್ನು ಎಲ್ಲೆಂದರೆ ಅಲ್ಲಿ ನಾವು ಕಾಣ ಸಿಗುವುದಕ್ಕೆ ಸಾಧ್ಯವಿಲ್ಲ.
ಸುಮಾರು ಇಪ್ಪತ್ತು ಏಳು ವರ್ಷದ ಹಳೆಯ ಎಕ್ಕದ ಗಿಡದಲ್ಲಿ ತಾಂತ್ರಿಕ ಶಕ್ತಿಗೆ ಬಳಸುವ ಶಕ್ತಿ ಇರುತ್ತದೆ ಎಂದು ಕೂಡ ಹೇಳಲಾಗಿದೆ ಹಾಗೆ ಆ ಒಂದು ಬಿಳಿ ಎಕ್ಕದ ಗಿಡದ ಹೂವನ್ನು ವ್ಯಾಪಾರ ವಹಿವಾಟು ಮಾಡುವ ಸ್ಥಳದಲ್ಲಿ ಇಡುವುದರಿಂದ ಯಾವ ಕೆಟ್ಟ ದೃಷ್ಟಿಯೂ ತಗುಲುವುದಿಲ್ಲ .
ಮತ್ತು ಬಿಳಿ ಎಕ್ಕದ ಗಿಡದ ಹೂವಿನ ಮಾಲೆಯನ್ನು ಮಾಡಿ ಮನೆಯ ಮುಖ್ಯ ದ್ವಾರಕ್ಕೆ ಹಾಕುವುದರಿಂದ ಕೂಡ ಮನೆಗೆ ದುಷ್ಟಶಕ್ತಿಗಳ ಪ್ರವೇಶವಾಗುವುದಿಲ್ಲ ಎಂದು ಹೇಳಲಾಗಿದೆ.
ಹೀಗೆ ಈ ಬಿಳಿ ಎಕ್ಕದ ಗಿಡದ ಹಿಂದೆ ಮತ್ತೊಂದು ಕಥೆಯೂ ಇದೆ ಅದೇನೆಂದರೆ ಪಾರ್ವತಿ ದೇವಿಯು ಈಶ್ವರನಿಗೆ ಈ ಬಿಳಿ ಎಕ್ಕದ ಹೂವನ್ನು ಅರ್ಪಿಸಿ ಹೋಲಿಸಿಕೊಂಡರೆ ಈ ಒಂದು ಕಾರಣದಿಂದಲೇ ಬಿಳಿ ಎಕ್ಕದ ಗಿಡಕ್ಕೆ ಅಷ್ಟೊಂದು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ,
ಮನೆಯ ಅಕ್ಕಪಕ್ಕದಲ್ಲಿ ಈ ಬಿಳಿ ಎಕ್ಕದ ಗಿಡವನ್ನು ಬೆಳೆಸುವುದರಿಂದ ಒಳ್ಳೆಯದು ಇದರಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಕೂಡ ಇದೆ.
ಕಾಲಿಗೆ ಮುಳ್ಳು ಚುಚ್ಚಿದಾಗ ಅದನ್ನು ಹೊರ ತೆಗೆಯುವುದಕ್ಕೂ ಕೂಡ ಈ ಬಿಳಿ ಎಕ್ಕದ ಹಾಲನ್ನು ಬಳಸಲಾಗುತ್ತದೆ, ಇದು ತುಂಬಾನೇ ಹಳೆಯದಾದಂತಹ ಒಂದು ಮನೆ ಮದ್ದು ಕೂಡ ಆಗಿದೆ. ಬಿಳಿ ಎಕ್ಕದ ಗಿಡದ ಬೇರಿನಿಂದ ನಿರ್ಮಿಸಿದ ಗಣಪತಿಯು ಬಹಳಾನೇ ಶ್ರೇಷ್ಠ ಇದನ್ನು ಪೂಜಿಸುವುದರಿಂದ ಸುಖ ಶಾಂತಿ ಪ್ರಾಪ್ತಿಯಾಗುತ್ತದೆ ಎಂದು ಕೂಡ ಹಿರಿಯರು ಹೇಳುತ್ತಾರೆ.
ಗಣಪತಿಯ ಪೂಜೆಗೆ ಬಿಳಿ ಎಕ್ಕದ ಹೂವು ಶ್ರೇಷ್ಠ ಎನ್ನಲಾಗಿದೆ ಗಣಪತಿಗೆ ಮಂಗಳವಾರದ ದಿವಸದಂದು ಅಥವಾ ಸಂಕಷ್ಟ ದಿವಸದಂದು ಬಿಳಿ ಎಕ್ಕದ ಗಿಡದ ಹೂವನ್ನು ಅರ್ಪಿಸಿ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಿ.
ಹೀಗೆ ಬಿಳಿ ಎಕ್ಕದ ಗಿಡಕ್ಕೆ ಕೂಡ ಬಹಳ ಒಂದು ವೈಶಿಷ್ಟತೆ ಇದ್ದು ಇದನ್ನು ಪೂಜಿಸುವುದರಿಂದ ಬಹಳಷ್ಟು ಲಾಭಗಳಿವೆ ಹಾಗೆ ಬಿಳಿ ಎಕ್ಕದ ಗಿಡದ ಒಂದು ಹೂವನ್ನು ನೀವು ಮನೆಯಲ್ಲಿ ತಂದು ಇಡುವುದರಿಂದ ಅಲ್ಲಿ ನಕಾರಾತ್ಮಕ ಶಕ್ತಿ ದೂರವಾಗಿ ಮನೆಯಲ್ಲಿ ಸಕಾರಾತ್ಮಕತೆಯನ್ನು ಮೂಡಿಸುತ್ತದೆ.
ಇದಿಷ್ಟು ಇವತ್ತಿನ ಈ ಒಂದು ಮಾಹಿತಿ ಮುಂದಿನ ಮಾಹಿತಿಯಲ್ಲಿ ಇನ್ನಷ್ಟು ಆಸಕ್ತಿಕರ ವಿಚಾರಗಳನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ನಿಮಗೆ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಮಾಹಿತಿಗೆ ಒಂದು ಲೈಕ್ ಮಾಡಿ.