ಈ ನಾಲ್ಕು ರಾಶಿಯಲ್ಲಿ ಹುಟ್ಟಿರುವ ವ್ಯಕ್ತಿಗಳಿಗೆ ಅವರ ಜೀವನದಲ್ಲಿ ನಿಜವಾದ ಪ್ರೀತಿ ಎಂದಿಗೂ ಸಿಗುವುದೇ ಇಲ್ಲವಂತೆ ಹಾಗಾದರೆ ಬನ್ನಿ ಆ ರಾಶಿಗಳು ಯಾವುವು ಮತ್ತು ಯಾವ ಕಾರಣಕ್ಕಾಗಿ ನಿಜವಾದ ಪ್ರೀತಿ ಇವರಿಗೆ ಸಿಗುವುದಿಲ್ಲ ಮತ್ತು ಇದಕ್ಕೆ ಪರಿಹಾರವೇನು ಎಂಬುದನ್ನು ತಿಳಿಯೋಣ.ಇಂದಿನ ಈ ಮಾಹಿತಿಯಲ್ಲಿ ನೀವು ಕೂಡ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ಬೇರೆಯವರಿಗೂ ಈ ಮಾಹಿತಿಯನ್ನು ಮಿಸ್ ಮಾಡದೇ ಶೇರ್ ಮಾಡಿ. ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.
ಮೊದಲನೆಯದಾಗಿ ನಾವು ಇರುವ ಹನ್ನೆರಡು ರಾಶಿಗಳಲ್ಲಿ ಅವುಗಳ ತತ್ವವನ್ನು ತಿಳಿಯುವುದಾದರೆ ಮೇಷ ಸಿಂಹ ಧನಸ್ಸು ಈ ರಾಶಿಯಲ್ಲಿ ಹುಟ್ಟಿರುವ ವ್ಯಕ್ತಿಗಳು ಅಗ್ನಿ ತತ್ವವನ್ನು ಹೊಂದಿರುತ್ತಾರೆ.ವೃಷಭ ಕನ್ಯಾ ಮತ್ತು ಮಕರ ರಾಶಿಗಳು ಪೃಥ್ವಿ ತತ್ವವನ್ನು ಹೊಂದಿರುವ ಮಿಥುನ ತುಲಾ ಮತ್ತು ಕುಂಭ ರಾಶಿಯವರು ವಾಯು ತತ್ವವನ್ನು ಹೊಂದಿರುತ್ತಾರೆ. ವೃಶ್ಚಿಕ ಘಟಕ ಮತ್ತು ಮೀನ ರಾಶಿಯ ವ್ಯಕ್ತಿಗಳು ಜಲತತ್ವವನ್ನು ಹೊಂದಿರುತ್ತಾರೆ.
ಈ ತತ್ವದ ಆಧಾರದ ಮೇರೆಗೆ ಜೀವನದಲ್ಲಿ ಯಾವ ನಾಲ್ಕು ರಾಶಿಗಳು ನಿಜವಾದ ಪ್ರೀತಿಯನ್ನು ಪಡೆದುಕೊಳ್ಳುವುದಿಲ್ಲ ಎಂದು ಹೇಳುವುದಾದರೆ ಮೇಷ, ಮಿಥುನ, ಸಿಂಹ ಮತ್ತು ಕುಂಭ ರಾಶಿಯಲ್ಲಿ ಹುಟ್ಟಿರುತಕ್ಕಂತಹ ವ್ಯಕ್ತಿಗಳು ಜೀವನದಲ್ಲಿ ನಿಜವಾದ ಪ್ರೀತಿಯನ್ನು ಪಡೆದುಕೊಳ್ಳುವುದಿಲ್ಲ.ಹಾಗೆ ಪಡೆದುಕೊಂಡರೂ ಯಾವುದಾದರೂ ಒಂದು ಕಾರಣಗಳಿಂದ ಆ ಪ್ರೀತಿ ದೂರವಾಗುತ್ತದೆ ಅಂತ ಕೂಡ ಹೇಳಲಾಗಿದೆ.ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯಲ್ಲಿ ಹುಟ್ಟಿರುವ ವ್ಯಕ್ತಿಗಳಿಗೆ ನಿಜವಾದ ಪ್ರೀತಿ ಸಿಗುವುದಿಲ್ಲ
ಯಾಕೆ ಅಂದರೆ ಮೇಷ ರಾಶಿಯಿಂದ ಪಂಚಮ ದಿಕ್ಕಿನಲ್ಲಿ ಸಿಂಹ ರಾಶಿಯ ಬರುವ ಕಾರಣ ಈ ಸಿಂಹ ರಾಶಿಯು ಅಗ್ನಿ ತತ್ವದ ರಾಶಿಯಾಗಿರುವ ಕಾರಣ ಇವರು ಮಾಡಿದ ಪ್ರೀತಿ ಶಾಶ್ವತವಾಗಿ ಉಳಿಯುವುದಿಲ್ಲ ಹಾಗೆ ಇವರಿಗೆ ನಿಜವಾದ ಪ್ರೀತಿ ಸಿಕ್ಕರೂ ಅದು ಹೆಚ್ಚಿನ ದಿನ ಇರುವುದಿಲ್ಲ ಎಂದು ಹೇಳಲಾಗುತ್ತದೆ.ಎರಡನೆಯದಾಗಿ ಮಿಥುನ ರಾಶಿ ಈ ರಾಶಿಯ ಪಂಚಮ ದಿಕ್ಕಿನಲ್ಲಿರುವ ರಾಶಿ ಎಂದರೆ ತುಲಾ ಈ ರಾಶಿಯ ವಾಯು ತತ್ತ್ವದ ಗುಣವನ್ನು ಹೊಂದಿದ್ದು ಇವರು ಮಾಡಿದ ಪ್ರೀತಿ ಗಾಳಿಯಲ್ಲಿ ತೇಲಿದಂತೆ ಪ್ರೀತಿಯು ಕೂಡ ಉಳಿಯುವುದಿಲ್ಲವಂತೆ.
ಮೂರನೆಯದಾಗಿ ಸಿಂಹ ರಾಶಿ ಈ ರಾಶಿಯಲ್ಲಿ ಹುಟ್ಟು ತಕ್ಕಂತಹ ವ್ಯಕ್ತಿಗಳ ಪಂಚಮ ದಿಕ್ಕಿನಲ್ಲಿ ಇರುವ ರಾಶಿ ಧನಸ್ಸು ರಾಶಿ ಈ ರಾಶಿಯು ಅಗ್ನಿ ತತ್ವವನ್ನು ಹೊಂದಿದ್ದು ಶಾಶ್ವತ ಪ್ರೀತಿ ಸಿಕ್ಕರೂ ಅದು ಯಾವುದಾದರೂ ಕಾರಣಗಳಿಂದ ಸುಟ್ಟು ಹೋಗುತ್ತದೆ ಎಂದು ಹೇಳಲಾಗುತ್ತದೆ.ನಾಲ್ಕನೆಯದ್ದು ಕುಂಭ ಈ ರಾಶಿಯ ಪಂಚ ದಿಕ್ಕಿನಲ್ಲಿ ಇರುವ ರಾಶಿಯನ್ನೇ ಮಿಥುನ ಇದು ವಾಯು ತತ್ವವನ್ನು ಹೊಂದಿದ್ದು ಗಾಳಿ ಹಾಗೆ ಪ್ರೀತಿ ತೇಲಾಡಿ ಅದು ಅವರ ಜೀವನದಿಂದ ದೂರ ಹೋಗುತ್ತದೆ ಎಂದು ಹೇಳಲಾಗುತ್ತದೆ.ಶಾಶ್ವತ ಪ್ರೀತಿಗಾಗಿ ಈ ನಾಲ್ಕು ರಾಶಿಯವರು ಮಾಡಬಹುದಾದಂತಹ ಪರಿಹಾರಗಳು ಏನು ಅಂತ ಹೇಳುವುದಾದರೆ ಮೇಷ ರಾಶಿಯವರು ಮಂಗಳವಾರದ ದಿನ ಲಕ್ಷ್ಮಿ ದೇವಾಲಯಕ್ಕೆ ಹೋಗಿ ದಾಳಿಂಬೆ ಹಣ್ಣನ್ನು ದಾನ ಮಾಡಬೇಕು.
ಮಿಥುನ ರಾಶಿಯವರು ಗುರುವಾರದ ದಿನದಂದು ವಿನಾಯಕನಿಗೆ ಪೂಜಿಸಬೇಕು ಜೊತೆಗೆ ಪೂಜೆ ಮಾಡುವಾಗ ನೈವೇದ್ಯಯಾಗಿ ಸಿಹಿ ತಿಂಡಿಯನ್ನು ಇಡಬೇಕು. ಈ ರೀತಿ ಮಾಡುವುದರಿಂದ ಶಾಶ್ವತ ಪ್ರೀತಿ ದೊರೆಯುತ್ತದೆ.ಹಾಗೂ ಸಿಂಹ ರಾಶಿಯವರು ಮಾಡಬೇಕಾಗಿರುವ ಪರಿಹಾರವೆಂದರೆ ಬುಧವಾರದ ದಿನದಂದು ಸೂರ್ಯ ದೇವನಿಗೆ ಒಂದು ತಂಬಿಗೆಯಲ್ಲಿ ನೀರನ್ನು ಹಿಡಿದು ಅದಕ್ಕೆ ಕುಂಕುಮ ಮತ್ತು ಕೆಂಪು ಬಣ್ಣದ ಹೂವನ್ನು ಹಾಕಿ ದೇವರಿಗೆ ಸಮರ್ಪಿಸಬೇಕು.ಕುಂಭ ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳು ಶಾಶ್ವತ ಪ್ರೀತಿಯನ್ನು ಪಡೆಯುವುದಕ್ಕಾಗಿ ಶನಿವಾರದಂದು ಆಂಜನೇಯ ದೇವಾಲಯಕ್ಕೆ ಹೋಗಿ ದಾಸವಾಳದ ಹೂವನ್ನು ನೀಡಬೇಕು.