ನೀವೇನಾದ್ರು ಈ ಗಿಡವನ್ನು ಮನೆಯಲ್ಲೇ ಬೆಳೆಸಿ ಈ ಹೂವಿನಿಂದ ಪೂಜೆಯನ್ನು ಮಾಡಿದರೆ ಸಾಕು ನಿಮ್ಮ ಮನಸಿನಲ್ಲಿ ಇರುವ ಯಾವುದೇ ರೀತಿಯ ಬೇಡಿಕೆ ಗಳಾದ್ರು ಈಡೇರುತ್ತವೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈಗಾಗಲೇ ಹಿಂದಿನ ಮಾಹಿತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಹೂವುಗಳನ್ನು ಹೇಗೆ ದೇವರಿಗೆ ಸಮರ್ಪಿಸಬೇಕು ಎಂದು. ಹೌದು ನಾವು ಮನೆಯ ಸುತ್ತಮುತ್ತಲು ಬೆಳೆಸಿದ ಗಿಡಗಳಿಂದ ಹೂವನ್ನು ತಂದು ದೇವರಿಗೆ ಸಮರ್ಪಿಸಿದರೆ ಅದು ತುಂಬಾ ಶ್ರೇಷ್ಠ ಅಂತ ಹೇಳಲಾಗುತ್ತದೆ ಹಾಗೆ ನಾವು ಯಾವತ್ತಿಗೂ ಕೂಡ ಹೂವನ್ನು ಹಾಗೆ ಯಾರ ಮನೆಯಿಂದಲೂ ಕೂಡ ತರಬಾರದುಮತ್ತು ಅದನ್ನು ದೇವರಿಗೆ ಸಮರ್ಥಿಸಬಾರದು ಮಾರುಕಟ್ಟೆಯಲ್ಲಿ ತಂದ ಹೂವುಗಳಿಗೆ ನಾವು ಹಣವನ್ನು ನೀಡಿ ತರುತ್ತೇವೆ ಆದ ರೀತಿಯಲ್ಲಿ ಬೇರೆಯವರ ಮನೆಯಿಂದ ಹೂವನ್ನು ತರುವಾಗ ಅದನ್ನು ಹಾಗೇ ತಂದು ದೇವರಿಗೆ ಸಮರ್ಥಿಸಬಾರದು ಎಂದು ತಿಳಿಸಿದ್ದೇವೆ. ಹಾಗಾದರೆ ದೇವರಿಗೆ ಸಮರ್ಪಿಸುವ ಹೂವುಗಳನ್ನು ನಾವು ಹೇಗೆ ತರಬೇಕು ಎಂಬುದನ್ನು ಕೂಡ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ ಅದನ್ನು ತಿಳಿಸಿಕೊಡುತ್ತದೆ ಈ ಮಾಹಿತಿಯ ಮುಖಾಂತರ.

ಹೌದು ಗೋಲಾದೇವಿಯ ತಂದೆಯಾದ ವಿಷ್ಣು ಚಿತ್ತನೂ ದೇವರಿಗೆ ಹೂವನ್ನು ಸಮರ್ಪಿಸುವುದಕ್ಕಾಗಿ ಶುಭ್ರವಾಗಿ ಮಡಿಯಿಂದ ಹೋಗಿ ಹೂವನ್ನು ಕಿತ್ತು ತರುತ್ತಿದ್ದರಂತೆ ಮತ್ತು ಆ ಹೂವುಗಳನ್ನು ಭಕ್ತಿಪೂರ್ವಕವಾಗಿ ದೇವರಿಗೆ ಸಮರ್ಪಿಸುವುದಕ್ಕಾಗಿ ಆ ಹೂವುಗಳು ಮಡಿಯಿಂದ ಕೂಡಿರಬೇಕು ಎನ್ನುವುದಕ್ಕಾಗಿ ತಮ್ಮ ಬಾಯಿಗೆ ಮತ್ತು ಮೂಗಿಗೆ ಬಟ್ಟೆಯನ್ನು ಕಟ್ಟಿಕೊಂಡು ಹೂವನ್ನು ಕಿತ್ತು ತರುತ್ತಾ ಇದ್ದರಂತೆ.ಈ ರೀತಿಯಾಗಿ ಹೂವುಗಳನ್ನು ಸಂಪೂರ್ಣವಾಗಿ ಮಡಿಯಿಂದ ತಂದು ವಿಷ್ಣುಚಿತ್ತನ ವಿಷ್ಣು ದೇವರಿಗೆ ಸಮರ್ಪಣೆ ಮಾಡುತ್ತಾ ಇದ್ದರಂತೆ. ಹಾಗೆ ಶಾಸ್ತ್ರಗಳು ಕೂಡ ಹೇಳುವುದೇನೆಂದರೆ ಹೂವುಗಳನ್ನು ಕಿತ್ತು ತರುವುದಕ್ಕೆ ಹೋಗುವಾಗ ನಮ್ಮನ್ನು ನಾವು ಮೊದಲು ಶುಭ್ರವಾಗಿಟ್ಟುಕೊಳ್ಳಬೇಕು ಮಡಿಯಿಂದ ಹೂವನ್ನು ಕೀಳಬೇಕು.

ಇನ್ನು ಮನುಷ್ಯ ಪಾಲಿಸಬೇಕಾಗಿರುವ ಮತ್ತೊಂದು ವಿಚಾರವೇನು ಅಂದರೆ ಸ್ನಾನ ಮಾಡುವುದರಲ್ಲಿ ಕೂಡ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳಿಗೆ ಸ್ನಾನಾದಿಗಳಲ್ಲಿಯೂ ಕೂಡ ನಾಲ್ಕು ವಿಧವಿದ್ದು,ಮೊದಲನೆಯದಾಗಿ ರುಷಿ ಸ್ನಾನ ಅಂದರೆ ಋಷಿಗಳು ಬೆಳಿಗ್ಗೆ ಮೂರು ಗಂಟೆಯಿಂದ ಐದು ಗಂಟೆಯ ಒಳಗೆ ಸ್ನಾನವನ್ನು ಮುಗಿಸಿ ಸಂಧ್ಯಾವಂದನೆಯನ್ನು ಮಾಡುತ್ತಿದ್ದರಂತೆ. ನಂತರ ದೇವತಾ ಸ್ನಾನ ಅಂದರೆ ದೇವರುಗಳಿಗೆ ಅಭಿಷೇಕ ಮಾಡುವುದು ದೇವರಿಗೆ ಪೂಜೆ ಸಲ್ಲಿಸುವುದು ಈ ಸಮಯದಲ್ಲಿ ಸ್ನಾನ ಮಾಡಿದರೆ ಇನ್ನು ಶ್ರೇಷ್ಠ ಅಂತ ಹೇಳಲಾಗುತ್ತದೆ.

ಹಾಗಾದರೆ ಈ ದೇವತಾ ಸ್ನಾನ ಎಷ್ಟು ಸಮಯದಲ್ಲಿ ಇರುತ್ತದೆ ಅಂದರೆ ಐದು ಗಂಟೆಗಳಿಂದ ಆರು ಗಂಟೆಯ ಒಳಗೆ ಸ್ನಾನ ಮಾಡಿದರೆ ಅದನ್ನು ದೇವತಾ ಸ್ನಾನ ಅಂತ ಹೇಳ್ತಾರೆ. ಇದರ ಫಲಾ ಕೂಡ ಪರಿಣಾಮಕಾರಿಯಾಗಿ ಇರುತ್ತದೆ.ಇನ್ನು ಮನುಷ್ಯ ಸ್ನಾನ ಅಂದರೆ ಆರ ರಿಂದ ಏಳು ಗಂಟೆಗಳ ಒಳಗೆ ಮಾಡುವ ಸ್ನಾನವನ್ನು ಮನುಷ್ಯ ಸ್ನಾನ ಅಂತ ಕರೀತಾರೆ. ನಂತರ ಏಳು ಗಂಟೆಯ ಸಮಯದ ನಂತರ ಮಾಡುವ ಸ್ನಾನವನ್ನು ರಾಕ್ಷಸ ಸ್ನಾನ ಅಂತ ಹೇಳಲಾಗುತ್ತದೆ.ಆದರೆ ಮನುಷ್ಯರು ಋಷಿ ಸ್ನಾನ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಅಂದರೆ ಅಷ್ಟು ಬೆಳಗಿನ ಜಾವ ಎದ್ದು ಸ್ನಾನ ಮಾಡುವುದಕ್ಕೆ ಆಗುವುದಿಲ್ಲ ಆದರೆ ದೇವತಾ ಸ್ನಾನವನ್ನು ಮಾಡುವುದರಿಂದ ಶ್ರೇಷ್ಠ ಅಂತ ಶಾಸ್ತ್ರವು ಹೇಳುತ್ತದೆ ಹಿರಿಯರು ಕೂಡ ಹೇಳುತ್ತಾರೆ.ಹೆಚ್ಚಿನ ಆರೋಗ್ಯವನ್ನು ಹೆಚ್ಚಿನ ಆಸಕ್ತಿಯನ್ನು ಸದೃಢ ಆರೋಗ್ಯದ ಜೊತೆ ಸದೃಡ ದೇಹವನ್ನು ಪಡೆದುಕೊಳ್ಳುವುದಕ್ಕಾಗಿ ಇನ್ನೂ ಹೆಚ್ಚಿನ ಫಲಿತಾಂಶವನ್ನು ಪಡೆದುಕೊಳ್ಳುವುದಕ್ಕಾಗಿ ಮನುಷ್ಯರು ದೇವತಾ ಸ್ನಾನ ಮಾಡುವುದು ಶ್ರೇಷ್ಠ ಎಂದು ಹೇಳಲಾಗಿದೆ ಮತ್ತು ವಿಜ್ಞಾನವೂ ಕೂಡ ಇದನ್ನು ಒಪ್ಪುತ್ತದೆ.

Leave a Reply

Your email address will not be published. Required fields are marked *