ನೀವೇನಾದ್ರು ಈ ಒಂದು ಉಪಾಯವನ್ನು ಮಾಡಿದರೆ ಸಾಕು ಇಲಿಗಳು ನಿಮ್ಮ ಮನೆಯ ಹತ್ತಿರ ಸುಳಿಯುವುದಿಲ್ಲ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಿಮ್ಮ ಮನೆಯಲ್ಲಿ ಏನಾದರು ಇಲಿಗಳು ಹೆಚ್ಚಾಗಿದ್ದರೆ ಅಥವಾ ಇಲಿಗಳು ಬಹಳಾನೇ ಕಾಟ ಕೊಡುತ್ತಿದ್ದಾರೆ ಅದಕ್ಕಾಗಿ ನೀವು ಅದನ್ನು ಓಡಿಸುವುದಕ್ಕೆ ಬಹಳ ಪ್ರಯತ್ನಪಟ್ಟು ವಿಫಲರಾಗಿದ್ದರೆ, ಈ ದಿನ ನಾನು ತಿಳಿಸುವ ಮಾಹಿತಿಯನ್ನು ತಿಳಿದು ಈ ಮನೆಮದ್ದುಗಳನ್ನು ಪಾಲಿಸಿ ನೋಡಿ.ಇದರಿಂದ ಹೇಗೆ ನಿಮ್ಮ ಮನೆಯಲ್ಲಿ ಇಲಿಗಳು ನಾಶವಾಗುತ್ತವೆ ಇಲಿಗಳು ಮನೆ ಬಿಟ್ಟು ಹೋಗುತ್ತವೆ ಎಂಬುದನ್ನು ನೀವೇ ಗಮನಿಸಬಹುದು ಹಾಗಾದರೆ ಬನ್ನಿ ಈ ಮಾಹಿತಿಯನ್ನು ನೀವು ಕೂಡ ತಿಳಿದು ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ.

ಮನೆಯಲ್ಲಿ ಇಲಿಗಳ ಹಾವಳಿ ಹೆಚ್ಚಾಗಿದ್ದರೆ ಕೆಲವೊಮ್ಮೆ ಅದು ಕಾಲುಗಳಿಗೆ ಕಚ್ಚುತ್ತವೆ ಇನ್ನು ಮನೆಯಲ್ಲಿರುವ ಬಟ್ಟೆಗಳನ್ನು ಸಿಹಿ ಪದಾರ್ಥಗಳನ್ನು ಪ್ಲಾಸ್ಟಿಕ್ ಸಾಮಗ್ರಿಗಳನ್ನು ಬಿಡುವುದಿಲ್ಲ ಎಲ್ಲವನ್ನು ಕೂಡ ಕಚ್ಚಿಬಿಡುತ್ತದೆ ಈ ರೀತಿ ಮನೆಯಲ್ಲಿ ಇಲಿಗಳಾದರೆ ಬಹಳಾನೇ ಬವಣೆ ಪಡಬೇಕಾಗುತ್ತದೆ.ಇದಕ್ಕಾಗಿ ಮಾಡಿ ಸುಲಭವಾದ ಮನೆ ಮದ್ದು ಮೊದಲನೆಯ ಮನೆ ಮತ್ತು ಏನು ಅಂದರೆ ಒಂದು ಬೌಲನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಅಡುಗೆ ಸೋಡಾವನ್ನು ಹಾಕಿ ಅದಕ್ಕೆ ಒಂದು ಚಮಚ ಸಕ್ಕರೆ ಮತ್ತು ಕೋಕೋ ಪೌಡರ್ ಇದ್ದರೆ ಕೋಕೋ ಪೌಡರ್ ಇಲ್ಲವಾದಲ್ಲಿ ಚಾಕೊಲೇಟ್ ಅನ್ನೇ ನೀವು ಪುಡಿ ಮಾಡಿ ಹಾಕಬಹುದು.

ಇದನ್ನು ಚೆನ್ನಾಗಿ ಕಲಸಿ ಉಂಡೆ ರೀತಿ ಮಾಡಿ ಇಲಿಗಳು ಓಡಾಡುವಂತಹ ಜಾಗದಲ್ಲಿ ಅವುಗಳು ತಿನ್ನುವ ಹಾಗೆ ಇಡಬೇಕು ಇದರಿಂದ ಇಲಿಗಳು ನಾಶವಾಗುತ್ತದೆ ಮನೆ ಬಿಟ್ಟು ಹೋಗುತ್ತದೆ.ಎರಡನೆಯ ಪರಿಹಾರವೆಂದರೆ ಒಂದು ಬೌಲ್ನಲ್ಲಿ ಒಂದು ಚಮಚ ಬೋರಿಕ್ ಆಸಿಡ್ ಅನ್ನು ತೆಗೆದುಕೊಳ್ಳಬೇಕು ಈ ಬೋರಿಕ್ ಆಸಿಡ್ ಮಾರುಕಟ್ಟೆಯಲ್ಲಿ ಸಿಗುತ್ತದೆ ಒಂದು ಗಮನಿಸಿ ಈ ಬೋರಿಕ್ ಆಸಿಡ್ ಮಕ್ಕಳ ಕೈಗೆ ಸಿಗುವ ಹಾಗೆ ಇಡಬೇಡಿ.

ಹಾಗೆ ಈ ಬೋರಿಕ್ ಆಸಿಡ್ ನೊಂದಿಗೆ ಒಂದು ಚಮಚ ಸಕ್ಕರೆ ಮತ್ತು ಒಂದು ಚಮಚ ಕೊಕೊ ಪೌಡರ್ ಅಥವಾ ಚಾಕೋಲೆಟ್ ಪುಡಿಯನ್ನು ಹಾಕಿ ಬೆರೆಸಿಡಿ ಇಲಿಗಳು ಓಡಾಡುವ ಜಾಗದಲ್ಲಿಯೇ ಇದನ್ನು ಇಟ್ಟು ಅವುಗಳು ತಿನ್ನುವ ಹಾಗೆ ಇಡಬೇಕು ಇದನ್ನು ತಿನ್ನುವುದರಿಂದ ಕೂಡ ಇಲಿಗಳು ನಾಶವಾಗುತ್ತದೆ ಅಥವಾ ಮನೆ ಬಿಟ್ಟು ಹೋಗುತ್ತದೆ.ಇಲಿಗಳನ್ನು ಓಡಿಸುವುದಕ್ಕಾಗಿ ಮತ್ತೊಂದು ಸುಲಭ ವಿಧಾನವೇನು ಅಂದರೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಅನ್ನುವ ಪುಡಿ ಸಿಗುತ್ತದೆ ಇದನ್ನು ಸೀಮೆ ಸುಣ್ಣವನ್ನು ತಯಾರಿಸುವುದಕ್ಕೆ ಬಳಸಲಾಗುತ್ತದೆ.

ಒಂದು ಬೌಲನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಪ್ಲಾಸ್ಟರ್ ಆಫ್ ಪ್ಯಾರಿಸ್ ಪುಡಿಯನ್ನು ಹಾಕಬೇಕು ಅದಕ್ಕೂ ಕೂಡ ಸಕ್ಕರೆಯನ್ನು ಪುಡಿ ಮಾಡಿ ಇಲಿಗಳು ಅಟ್ರಾಕ್ಟ್ ಆಗುವ ಹಾಗೆ ಚಾಕೊಲೇಟ್ ಪುಡಿಯನ್ನು ಹಾಕಿ ನಂತರ ಇದನ್ನು ಕೂಡ ಇಲಿಗಳು ಓಡಾಡುವ ಜಾಗದಲ್ಲಿ ಇಡುವುದರಿಂದ ಅವುಗಳು ಇದನ್ನು ಸೇವಿಸಿದರೆ ಅವುಗಳ ನಾಶವಾಗುತ್ತದೆ.ಇನ್ನೊಂದು ಸುಲಭ ವಿಧಾನ ಅಂದರೆ ಇಲಿಗಳು ಓಡಾಡುವಂತಹ ಜಾಗದಲ್ಲಿ ಅಥವಾ ಇಲಿಗಳ ಬಿಲದ ಹತ್ತಿರ ಮೆಣಸಿನ ಪುಡಿಯನ್ನು ಹಾಕುವುದರಿಂದ ಅಥವಾ ಈ ಪೆಪ್ಪರ್ ಸ್ಪ್ರೆಯನ್ನು ಮಾಡುವುದರಿಂದ ಇಲಿಗಳು ಮನೆಯೊಳಗೆ ಬರುವುದಿಲ್ಲ.

ಹಾಗೆಯೇ ಅಡುಗೆ ಮನೆಯಲ್ಲಿ ಅಥವಾ ಪೂಜೆ ಮನೆಯಲ್ಲಿ ಇಲಿಗಳು ಓಡಾಡುತ್ತಿದ್ದರೆ ಕೆಲವೊಂದು ಜಾಗದಲ್ಲಿ ಈ ಪೆಪ್ಪರ್ ಪುಡಿಯನ್ನು ಹಾಕಿ ಆಗ ಅವುಗಳು ಅಂತಹ ಜಾಗಕ್ಕೆ ಬರುವುದಿಲ್ಲ.ಇವತ್ತು ಮಾಹಿತಿ ನಿಮಗೆ ಉಪಯುಕ್ತವಾಗಿ ದ್ದರೆ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದ

Leave a Reply

Your email address will not be published. Required fields are marked *