ಹೌದು ನಾವು ನಮ್ಮ ದೈನಂದಿನ ಕೆಲಸಗಳಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತವೆ. ಇದರಿಂದ ಅದು ನಮ್ಮ ಆರೋಗ್ಯದ ಮೇಲೆ ಕೆಲವೊಂದು ಕೆಟ್ಟ ಪರಿಣಾಮವನ್ನು ಬೀರಬಹುದು.
ಅಥವಾ ನಮ್ಮ ಆರ್ಥಿಕತೆಯ ಮೇಲೆ ಹೀಗೆ ನಾವು ನಮಗೆ ತಿಳಿಯದೇ ಇರುವ ತಪ್ಪುಗಳಿಂದ ಕೂಡ ನಾವು ಹಿಂದೆಯೇ ಉಳಿಯಬಹುದು ಅದೇ ರೀತಿಯಲ್ಲಿ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡಲು ಹೊರಟಿರುವಂಥ ಒಂದು ವಿಚಾರವೂ ಕೂಡ ಅದೇ ಆಗಿದೆ.
ನಮಗೆ ತಿಳಿಯದೇ ನಾವು ಮಾಡುತ್ತಿರುವ ಅಂತಹ ಈ ಒಂದು ತಪ್ಪಿನಿಂದ ಆಚೆ ಬನ್ನಿ ನಿಜಕ್ಕೂ ನೀವು ನಿಮ್ಮ ಜೀವನದಲ್ಲಿ ಎಷ್ಟೋ ಪಾಲು ಬದಲಾವಣೆಯನ್ನು ಕಾಣುತ್ತೀರಾ.
ನಮ್ಮ ಹಿಂದೂ ಸಂಪ್ರದಾಯದಲ್ಲಿ ಅನೇಕ ಪುರಾತನ ಗ್ರಂಥಗಳಿವೆ ಇದಕ್ಕೆ ವಿಶೇಷವಾದ ಸ್ಥಾನಮಾನವನ್ನು ಕೂಡ ನೀಡಲಾಗಿದೆ ಅಂತಹ ಒಂದು ಪುರಾಣ ಗ್ರಂಥಗಳು ಅಂದರೆ ಭಗವದ್ಗೀತೆ ಮತ್ತು ಗರುಡ ಪುರಾಣ ಈ ಪುರಾಣ ಗ್ರಂಥಗಳು ನಮಗೆ ತಿಳಿಸುವುದೇನೆಂದರೆ ಜೀವನದಲ್ಲಿ ಹೇಗಿರಬೇಕು ಹಾಗೆ ಸಮಾಜದಲ್ಲಿ ಎಂತಹ ವ್ಯಕ್ತಿಗಳೊಡನೆ ಅಂತಹ ವ್ಯಕ್ತಿತ್ವವನ್ನು ಹೊಂದಿರಬೇಕು ಎಂದು.
ಹಾಗಾದರೆ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡಲು ಹೊರಟಿರುವಂಥ ವಿಚಾರವೂ ಗರುಡ ಪುರಾಣಕ್ಕೆ ಸೇರಿದ್ದು ಈ ವಿಚಾರವೇನು ಅಂದರೆ ನಾವು ಪ್ರತಿದಿನ ಹಾಕಿಕೊಳ್ಳುವಂತಹ ಬಟ್ಟೆ ಹೇಗಿರಬೇಕು ನಾವು ಹಾಕಿಕೊಳ್ಳುವ ಬಟ್ಟೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹೇಗೆ ಪರಿಣಾಮ ಬೀರುತ್ತದೆ. ಇದು ನಮ್ಮ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆಯೋ ಇಲ್ಲವೋ ಎಂಬುದನ್ನು ತಿಳಿಸುತ್ತೇನೆ ತಪ್ಪದೇ ತಿಳಿಯಿರಿ.
ಹೌದು ಗರುಡ ಪುರಾಣ ತಿಳಿಸುತ್ತದೆ ನಾವು ದಿನನಿತ್ಯ ಧರಿಸಿಕೊಳ್ಳುವ ಬಟ್ಟೆಗಳು ಕೂಡ ನಮ್ಮ ಆರ್ಥಿಕತೆಯ ಮೇಲೆ ನಮ್ಮ ಜೀವನದ ಮೇಲೆ ಕೆಲವೊಂದು ಪರಿಣಾಮವನ್ನು ಬೀರುತ್ತದೆ ಹೇಗೆ ಅಂದರೆ ನಾವು ಯಾವಾಗಲೂ ಸ್ವಚ್ಛವಾಗಿರಬೇಕು.
ನಾವು ಇರುವಂತಹ ಜಾಗವೂ ಕೂಡ ಸ್ವಚ್ಛವಾಗಿರಬೇಕು ಹಾಗೆ ನಾವು ಧರಿಸುವ ಬಟ್ಟೆಗಳು ಕೂಡ ಅಷ್ಟೇ ಸ್ವಚ್ಛವಾಗಿರಬೇಕು, ಇಲ್ಲವಾದಲ್ಲಿ ನಮ್ಮ ಜೀವನ ದಾರಿ ರ್ಯವಾಗಿ ನಾವು ನಮ್ಮ ಜೀವನದಲ್ಲಿ ಯಾವ ಪುಣ್ಯವನ್ನು ಸಂಪಾದನೆ ಮಾಡದೇ ಸಮಾಜದಲ್ಲಿ ಗೌರವವನ್ನು ಸಂಪಾದನೆ ಮಾಡದೇ ಕೆಳಮಟ್ಟಕ್ಕೆ ಹೋಗುತ್ತಿರುತ್ತೇವೆ ಹೊರತು ಮೇಲ್ಮಟ್ಟಕ್ಕೆ ಹೋಗುವುದಕ್ಕೆ ಸಾಧ್ಯವೇ ಆಗುವುದಿಲ್ಲ.
ಹಾಗಾದರೆ ಪ್ರತಿದಿನ ನಾವು ಎಂತಹ ಬಟ್ಟೆಗಳನ್ನು ಧರಿಸಬೇಕು ಎಂದು ಹೇಳುವುದಾದರೆ ಪ್ರತಿ ದಿನ ಸ್ನಾನ ಮಾಡಿದ ನಂತರ ಮೈಲಿಗೆ ಬಟ್ಟೆಗಳನ್ನು ಮತ್ತೆ ಧರಿಸಬಾರದು ಮತ್ತು ಹೆಣ್ಣು ಮಕ್ಕಳು ಮಧ್ಯಾಹ್ನದವರೆಗೂ ಸ್ನಾನ ಮಾಡದೆ ಇರಬಾರದು ಈ ರೀತಿ ಮೈಲಿಗೆ ಬಟ್ಟೆಯನ್ನು ತೊಟ್ಟು ಮನೆಯಲ್ಲಿ ಓಡಾಡುವುದರಿಂದ ಮನೆಗೆ ದಾರಿದ್ರ್ಯ ವೆಂದು ಪುರಾಣ ತಿಳಿಸುತ್ತದೆ.
ಹರಿದ ಚಿಂದಿ ಬಟ್ಟೆ ಕೊಳಕು ಬಟ್ಟೆ ಇವೆಲ್ಲವೂ ನಮ್ಮ ಜೀವನದಲ್ಲಿ ಪರಿಣಾಮ ಬೀರುವುದಲ್ಲದೆ ಇಂತಹ ಚಿಂದಿ ಬಟ್ಟೆಗಳನ್ನು ಧರಿಸುವುದರಿಂದ ನಾವು ಕಷ್ಟಪಟ್ಟು ದುಡಿದ ಹಣವೂ ಕೂಡ ನಮ್ಮ ಕೈಯಲ್ಲಿ ಉಳಿಯುವುದಿಲ್ಲ ಆದ ಕಾರಣ ಪುರಾಣ ಹೇಳುತ್ತಿದೆ ಪ್ರತಿದಿನ ಸ್ನಾನ ಮಾಡಿದ ಬಳಿಕ ಮಡಿ ಬಟ್ಟೆಯನ್ನು ಧರಿಸಿ ಆದರೆ ಕೊಳಕು ಮೈಲಿಗೆ ಬಟ್ಟೆಯನ್ನು ಧರಿಸಬೇಡಿ.
ಹರಿದು ಚಿಂದಿಯಾಗಿರುವ ಬಟ್ಟೆಗಳನ್ನು ಕೂಡ ಧರಿಸಬಾರದು ಹಾಗೆ ಮೈ ಮೇಲೆ ಬಟ್ಟೆಗಳನ್ನು ತೊಟ್ಟಾಗ ಮೈಮೇಲೆಯೇ ಬಟ್ಟೆಗಳನ್ನು ಹರಿಯಬಾರದು ಇವೆಲ್ಲವೂ ದಾರಿದ್ರ್ಯಕ್ಕೆ ಮೂಲ ಹರಿದ ಬಟ್ಟೆಯನ್ನು ಹೋಲಿಗೆ ಹಾಕಿ ಧರಿಸಿಕೊಳ್ಳಬಹುದು,
ಆದರೆ ಹರಿದ ಬಟ್ಟೆ ಅನ್ನು ಧರಿಸಬೇಡಿ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.