ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಕೋರಿಕೆಗಳು ಇರಲಿ ಅದು ಈಡೇರಬೇಕಾದರೆ ಅಮಾವಾಸ್ಯೆಯ ದಿನದಂದು ಈ ಒಂದು ಕೆಲಸವನ್ನು ಕೈಗೊಳ್ಳಿ ಈ ಪರಿಹಾರ ನಿಮಗೆ ನಿಜಕ್ಕೂ ಉತ್ತಮವಾದ ಫಲಿತಾಂಶ ನೀಡುತ್ತದೆ.ಹಾಗೆ ನಿಮ್ಮ ಕೋರಿಕೆಗಳು ಏನೇ ಇರಲಿ ಅದನ್ನು ಹೇಗೆ ಈಡೇರಿಸಿಕೊಳ್ಳುವುದು ಮತ್ತು ಹಣದ ವಿಚಾರವನ್ನು ಹೊರತುಪಡಿಸಿ ಬೇರೆ ವಿಚಾರಗಳಲ್ಲಿ ನಿಮಗೆ ಹಲವಾರು ಅಡೆತಡೆಗಳು ಆಗುತ್ತಿದ್ದರೆ ಅದಕ್ಕಾಗಿ ನೀವು ಅಮಾವಾಸ್ಯೆಯ ದಿನದಂದು ಈ ಪರಿಹಾರವನ್ನು ಕೈಗೊಳ್ಳಿ ಸುಲಭ ಪರಿಹಾರ ಉತ್ತಮ ಫಲಿತಾಂಶವನ್ನು ನೀಡುತ್ತದೆ ಈ ತಂತ್ರ.ಅಮಾವಾಸ್ಯೆಯ ದಿವಸದಂದು ಮನೆಯಲ್ಲಿ ಸಂಜೆಯ ಸಮಯದಲ್ಲಿ ಮಾಡಬೇಕಾಗಿರುವ ಈ ಒಂದು ಪರಿಹಾರವನ್ನು ಹೇಗೆ ಮಾಡಬೇಕು. ಅಂದರೆ ಪ್ರತಿಯೊಬ್ಬರ ಮನೆಯಲ್ಲಿ ಸಾಮಾನ್ಯವಾಗಿ ಲಕ್ಷ್ಮಿ ಸರಸ್ವತಿ ಮತ್ತು ಗಣಪತಿ ಇರುವ ಫೋಟೋ ಇದ್ದೇ ಇರುತ್ತದೆ.
ಅಕಸ್ಮಾತ್ ಇಲ್ಲ ಅಂದಲ್ಲಿ ಪೂಜಾ ಸಾಮಗ್ರಿಗಳು ದೊರೆಯುವ ಅಂಗಡಿಗೆ ಹೋಗಿ ಕೊಂಡುಕೊಂಡು ಬನ್ನಿ, ನಂತರ ಈ ಪೂಜೆಯನ್ನು ಮಾಡುವುದಕ್ಕೆ ಬೇಕಾಗಿರುವುದು ಕೆಂಪು ಬಣ್ಣದ ರೇಷ್ಮೆ ದಾರ.ಪೂಜೆಯನ್ನು ಮಾಡುವ ವಿಧಾನ ದೇವರ ಪಟದ ಮುಂದೆ ತುಪ್ಪದ ದೀಪವನ್ನು ಹಚ್ಚಿ ನಂತರ ದೇವರಿಗೆ ದಾಳಿಂಬೆ ಹಣ್ಣನ್ನು ನೈವೇದ್ಯವಾಗಿ ಸಮರ್ಪಿಸಬೇಕು. ಕೆಂಪು ಬಣ್ಣದ ದಾರವನ್ನು ತೆಗೆದುಕೊಂಡು ಅದರಲ್ಲಿ ರೇಷ್ಮೆ ದಾರ ಆಗಿರಬೇಕು .ಇದು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಪೂಜೆಯ ನಂತರ ಈ ದಾರವನ್ನು ತೆಗೆದುಕೊಂಡು ಅದಕ್ಕೆ ಗಂಧ ಅರಿಶಿನವನ್ನು ಹಚ್ಚಬೇಕು, ಇಪ್ಪತ್ತ್ ಒಂದು ಗಂಟುಗಳನ್ನು ಹಾಕಬೇಕು.
ಈ ರೀತಿ ಗಂಟುಗಳನ್ನು ಹಾಕುವಾಗ ಓಂ ಗಂಗಣಪತಯೇ ನಮಃ ಎಂದು ಹೇಳುತ್ತಾ ಒಂದೊಂದು ಗಂಟನ್ನು ಹಾಕುತ್ತಾ ಬರಬೇಕು. ಇದಿಷ್ಟು ಆದ ಬಳಿಕ ಆ ದಾರವನ್ನು ನಿಮ್ಮ ಕೈಗೆ ಐದು ಸುತ್ತು ಬರುವ ಹಾಗೆ ಕಟ್ಟಿಕೊಳ್ಳಬೇಕು.ಇದಿಷ್ಟು ಒಂದು ಪೂಜಾ ವಿಧಾನವಾದರೆ ಈ ಪೂಜೆಯನ್ನು ಮಾಡುವಾಗ ಹರಿಶಿನದ ಹೂವು ಅಂದರೆ ಶಾವಂತಿಗೆ ಹೂವು ಅನ್ನೇ ಬಳಸಬೇಕು ಯಾಕೆ ಅಂದರೆ ಈ ಸೇವಂತಿಗೆ ಹೂವಿಗೆ ಯಾವುದೇ ದೋಷ ಇರುವುದಿಲ್ಲ ಆದ ಕಾರಣ ಸೇವಂತಿಗೆ ಹೂವನ್ನು ಬಳಸಿದರೆ ಶ್ರೇಷ್ಠ.ಇನ್ನು ಪೂಜೆ ಮಾಡುವಾಗ ನೈವೇದ್ಯ ಆಗಿ ಸಮರ್ಪಿಸಿದ ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಸುಲಿದು ಸಿಪ್ಪೆಯನ್ನು ತೆಗೆದುಕೊಂಡು ನಿಮ್ಮ ಕೋರಿಕೆಯನ್ನು ಅದರ ಮೇಲೆ ಕೆಂಪು ಬಣ್ಣದ ಇಂಕಿನ ಲೇಖನವನ್ನು ಬಳಸಿ.
ಅದರ ಮೇಲೆ ನಿಮ್ಮ ಕೋರಿಕೆಯನ್ನು ಬರೆಯಬೇಕು. ಈ ರೀತಿ ನಿಮ್ಮ ಕೋರಿಕೆಯನ್ನು ಬರೆದಿಟ್ಟ ಸಿಪ್ಪೆಯನ್ನು ದೇವರ ಮುಂದೆ ಆ ದಿನವೆಲ್ಲ ಇರಿಸಬೇಕು .ನಂತರ ಅಂದರೆ ಅಮಾವಾಸ್ಯೆಯ ಮಾರನೆ ದಿವಸದಂದು ನಿಮ್ಮ ಮನೆಯ ಬಳಿ ಅಶ್ವತ್ಥಕಟ್ಟೆ ಇದ್ದರೆ ಅಲ್ಲಿ ಹೋಗಿ ಅಲ್ಲಿ ಮಣ್ಣಿನ ಒಳಗೆ ಈ ಸಿಪ್ಪೆಯನ್ನು ಹೂತಿಟ್ಟು ಬರಬೇಕು.ದೇವರಿಗಾಗಿ ಸಮರ್ಪಿಸಿದ ಪ್ರಸಾದವನ್ನು ಮನೆಯ ಸದಸ್ಯರು ಮಾತ್ರ ಸೇವಿಸಬೇಕು ಈ ಪ್ರಸಾದವನ್ನು ಬೇರೆಯವರಿಗೆ ನೀಡಬಾರದು. ಈ ರೀತಿ ನೀವು ಮಾಡುತ್ತಾ ಬಂದಲ್ಲಿ ನಿಮ್ಮ ಮನಸ್ಸಲ್ಲಿರುವ ಕೋರಿಕೆ ಈಡೇರುತ್ತದೆ.
ಉದಾಹರಣೆಗೆ ನಿಮ್ಮ ಮನೆಯಲ್ಲಿರುವ ಹೆಣ್ಣು ಮಗಳಿಗೆ ಒಳ್ಳೆಯ ಕಡೆ ಸಂಬಂಧವನ್ನು ಹುಡುಕುತ್ತಿರುತ್ತೀರ ಆಗ ಆ ಒಂದು ಕೋರಿಕೆಯನ್ನು ದೇವರ ಬಳಿ ಹೇಳಿಕೊಂಡು ನಾವು ಹೇಳುವ ರೀತಿ ಪರಿಹಾರವನ್ನು ಮಾಡುತ್ತಾ ಬಂದರೆ ನಿಮ್ಮ ಕೋರಿಕೆಯು ದೇವರಿಗೆ ಕೇಳಿಸಿ ನಿಮ್ಮ ಇಷ್ಟಾರ್ಥಗಳು ಬೇಗನೇ ಈಡೇರುತ್ತದೆ.ಈ ದಿನ ತಿಳಿಸಿದ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ ಶುಭ ದಿನ.