ಜೀವನ ಅಂದರೆ ಏನು ಜೀವನದಲ್ಲಿ ಬದುಕಲು ನಮಗೆ ಬೇಕಾಗಿರುವುದು ವಿಟಮಿನ್ M , ವಿಟಮಿನ್ M ಎಂದರೆ ಮನಿ ಅಥವ ಹಣ ಎಂದು ಅರ್ಥ, ನಿಮ್ಮ ಹತ್ತಿರ ಹಣ ಏನಾದರೂ ಇಲ್ಲ ಅಂದರೆ ನೀವು ಯಾವುದೇ ಕಾರಣಕ್ಕೂ ಮುಂದೆ ಹೋಗಲು ಆಗುವುದಿಲ್ಲ, ಎಷ್ಟೋ ಜನರ ರಿಲೇಶನ್ ಹಾಗೂ ಭಾಂದವ್ಯ ಇರುವುದು ಕೇವಲ ಹಣ ಇರುವಂತಹ ಒಂದು ಕಾಗದದಿಂದ.
ನಿಮ್ಮ ಹತ್ತಿರ ಹಣ ಇಲ್ಲ ಅಂದರೆ ನಿಮ್ಮ ನಿಮ್ಮ ನೆಂಟರ ನಿಮ್ಮ ಬಂಧು ಬಾಂಧವರು ಹಾಗೂ ನಿಮ್ಮ ಗೆಳೆಯರು ಕೂಡ ನಿಮ್ಮ ಹತ್ತಿರ ಸ್ನೇಹವನ್ನು ಮಾಡಲು ಇಷ್ಟಪಡುವುದಿಲ್ಲ. ಆದುದರಿಂದ ಹಣ ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗೆ ಬೇಕಾಗಿರುವಂತಹ ಒಂದು ಅಂಶ ಹಾಗಾದರೆ ಈ ಹಣವನ್ನು ನಾವು ಪಡೆಯ ಬೇಕಾದರೆ ಏನು ಮಾಡಬೇಕು.
ಹಾಗೂ ನಿಮ್ಮ ಮನೆಯಲ್ಲಿ ಯಾವಾಗಲೂ ಆರ್ಥಿಕ ಸಮಸ್ಯೆ ಬರದೇ ಇರಲು ನಾವು ಯಾವ ರೀತಿಯಾಗಿ ನಡೆದುಕೊಳ್ಳಬೇಕು ಎನ್ನುವಂತಹ ಸಂಪೂರ್ಣವಾದ ವಿಚಾರವನ್ನು ಈ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇನೆ.
ಒಂದು ಬಾರಿ ನಾವು ದುಡಿದ ಹಣ ನಮ್ಮ ಕೈಯಲ್ಲಿ ಇರುವುದಿಲ್ಲ ಏನೇ ಮಾಡಿದರೂ ಕೂಡ ಸಿಕ್ಕಾಪಟ್ಟೆ ಖರ್ಚು ಆಗುತ್ತದೆ ಹಾಗೂ ನಮ್ಮ ಕೈಯಲ್ಲಿ ಅದು ಜಾಸ್ತಿ ಹೊತ್ತು ಇರುವುದಿಲ್ಲ, ಕಾರಣ ಏನು ಅಂತ ನಾವು ಏನಾದರೂ ಸ್ವಲ್ಪ ಹುಡುಕಿದರೆ ಅದಕ್ಕೆ ಕಾರಣ ವಾಸ್ತು ಪ್ರಾಬ್ಲಮ್, ಏನು ಮಾಡಿದರೆ ನೀವು ಕಳೆದುಕೊಂಡಂತಹ ಮತ್ತೆ ಮರಳಿ ಬರುತ್ತದೆ?.
ಏನು ಮಾಡಿದರೆ ಸಂಪತ್ತು ನಿಮ್ಮ ಮನೆಯಲ್ಲಿ ಇರುತ್ತದೆ ಎನ್ನುವಂತಹ ಒಂದು ವಿಶೇಷವಾದ ಮಾಹಿತಿ ಅನ್ನು ನಾನು ಇವತ್ತು ಈ ಲೇಖನದ ಮುಖಾಂತರ ಕೊಡುತ್ತಿದ್ದೇನೆ. ಬನ್ನಿ ಹಾಗಾದರೆ ಇವತ್ತು ನಾವು ಕೆಲವೊಂದು ಸಲಹೆಗಳನ್ನು ಕೊಡುವುದರ ಮುಖಾಂತರ ನೀವು ದುಡಿದ ಹಣವನ್ನು ನಿಮ್ಮ ಮನೆಯಲ್ಲಿ ಇರುವ ಹಾಗೆ ಯಾವ ರೀತಿಯಾಗಿ ನಾವು ನಡೆದು ಕೊಂಡರೆ ಈ ರೀತಿಯಾಗಿ ಮಾಡಬಹುದೇನೋ ಅಂತಹ ವಿಚಾರವನ್ನು ತಿಳಿದು ಕೊಳ್ಳೋಣ.
ಮೊದಲನೇದಾಗಿ ನೀವೇನು ಮಾಡಬೇಕು ಅಂದರೆ ನಿಮ್ಮ ಮನೆಯಲ್ಲಿ ಇರುವಂತಹ ಹಣ ಇರುವಂತಹ ಜಾಗ ಎಂದರೆ ಬೀರು ಲಾಕರ್ಸ್ ಇವುಗಳನ್ನು ಉತ್ತರ ದಿಕ್ಕಿಗೆ ಇಡಬೇಕು, ಹೀಗೆ ಮಾಡುವುದರಿಂದ ನಿಮಗೆ ಕುಬೇರನ ಅನುಗ್ರಹ ದೊರಕುತ್ತದೆ ಎನುತ್ತದೆ ಪುರಾಣ. ಹೀಗೆ ಮಾಡುವುದರಿಂದ ಅಗತ್ಯವಾದಂತಹ ಖರ್ಚು ನಿಮ್ಮ ಕೈಯಿಂದ ಆಗುವುದಿಲ್ಲ. ನೀವು ಎಲ್ಲಾ ಮಲಗುವ ಕೋಣೆಯಲ್ಲಿಎದುರುಗಡೆ ಒಂದು ಕನ್ನಡಿಯನ್ನು ಹಾಕಬೇಕು.
ನೀವು ಹಲವಾರ ಮನೆಯಲ್ಲಿ ಬೆಡ್ ರೂಂ ನಲ್ಲಿ ಕನ್ನಡಿ ಇರೋದು ನೋಡಿರಬಹುದು, ಇದು ಒಂದು ಆರೋಗ್ಯಕ್ಕೆ ಸಂಬಂಧಪಟ್ಟಂತಹ ಹಾಗೂ ಆ ಹಣಕ್ಕೆ ಸಂಬಂಧಪಟ್ಟಂತಹ ಒಂದು ವಾಸ್ತು ನಿಯಮ, ಹೀಗೆ ನೀವೇನಾದರೂ ಕನ್ನಡಿಯನ್ನು ನಿಮ್ಮ ಲಾಕರ್ ಎದುರುಗಡೆ ಇಟ್ಟರೆ ಅಥವ ನಿಮ್ಮ ರೂಮಿನಲ್ಲಿ ಇಟ್ಟರೆ ನಿಮಗೆ ಆರೋಗ್ಯ ದಲ್ಲೂ ಕೂಡ ತುಂಬಾ ಚೇತರಿಕೆ ಕಂಡು ಬರುತ್ತದೆ ಹಾಗೂ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಆ ಹಣವು ನೀರಿನ ಹಾಗೆ ಹೊರಗಡೆ ಹೋಗುವುದಿಲ್ಲ.
ನೀವು ಹಣ ಅಥವ ಬಂಗಾರ ಇಡುವಂತಹ ಲಾಕರ್ ಜಾಗದಲ್ಲಿ ಯಾವಾಗಲು ಸ್ವಚ್ಛತೆಯನ್ನು ಮೆಂಟೇನ್ ಮಾಡಬೇಕು, ಇಲ್ಲವಾದಲ್ಲಿ ನಿಮಗೆ ಹಣವು ಹರಿದು ಬರುವುದಿಲ್ಲ ಹಾಗೂ ಹಣದ ನಷ್ಟ ಹೆಚ್ಚಾಗುತ್ತದೆ, ಅದೇ ರೀತಿ ನೀವು ಹಣವನ್ನು ಇಡುವಂತಹ ಜಾಗದಲ್ಲಿ ಅಥವಾ ಕೋಣೆಯಲ್ಲಿ ಪೂರ್ವದ ದಿಕ್ಕಿನಲ್ಲಿ ಕಿಟಕಿ ಇದ್ದರೆ ತುಂಬಾ ಒಳ್ಳೆಯದು,
ಹೀಗೆ ಮಾಡುವುದರಿಂದ ನೀವು ಮಾಡುವಂತಹ ವ್ಯಾಪಾರದಲ್ಲಿ ಸಿಕ್ಕಾಪಟ್ಟೆ ಲಾಭ ಹಾಗೆ ನಿಮ್ಮ ಮನೆಗೆ ಹಣದ ಹೊಳೆ ಹರಿದು ಬರುತ್ತದೆ . ನೀವೇನಾದರೂ ದಿನನಿತ್ಯ ನಾಣ್ಯಗಳನ್ನು ಹುಂಡಿಯಲ್ಲಿ ಹಾಕುತ್ತಿದ್ದರೆ ಆ ಹುಂಡಿಯನ್ನು ನಿಮಗೆ ಇಷ್ಟ ಬಂದ ಹಾಗೆ ಬೇರೆ ಬೇರೆ ಜಾಗದಲ್ಲಿ ಇಡ ಬಾರದು ಅದನ್ನು ಕೇವಲ ನೈಋತ್ಯದ ದಿಕ್ಕಿನಲ್ಲಿ ಮಾತ್ರ ಇಟ್ಟರೆ ನಿಮಗೆ ಏನಾದರೂ ಒಳ್ಳೆಯದು ಆಗುತ್ತದೆ ಇಲ್ಲವಾದರೆ ನಿಮ್ಮ ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ.
Originally posted on June 26, 2020 @ 6:55 am