Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ಹಾಕುವಂತಹ ಸಹಿ ನಿಮ್ಮ ಜೀವನದ ಏಳಿಗೆಯನ್ನು ನಿರ್ಧಾರ ಮಾಡುತ್ತದೆ ನಿಮ್ಮ ಸಹಿಯನ್ನು ಈ ರೀತಿಯಾಗಿ ಹಾಕಿದರೆ ಅದೃಷ್ಟ ಯಾವಾಗಲೂ ನಿಮ್ಮ ಕಡೆ ಇರುತ್ತದೆ !!!!

ನಾವು ಹಾಕುವಂತಹ ಸಹಿಯೂ ಕೂಡ ನಮ್ಮ ಏಳಿಗೆಯನ್ನು ನಿರ್ಧರಿಸುತ್ತದೆ ಅಂತ ಹೌದು ನಾವು ಯಾವುದಾದರೂ ಮುಖ್ಯ ಕೆಲಸಗಳಿಗಾಗಿ ಅಥವಾ ಇನ್ಯಾವುದಾದರೂ ಕೆಲಸದ ವಿಷಯವಾಗಿ ಸಹಿ ಹಾಕುವಾಗ ಅಂದರೆ ಸಿಗ್ನೇಚರ್ ಹಾಕುವಾಗ ನಾವುಗಳು ಮಾಡುವ ತಪ್ಪುಗಳಿಂದ ಕೂಡ ನಮ್ಮ ಏಳಿಗೆ ಆಗುವುದಿಲ್ಲ

ಮತ್ತು ನಾವು ಜೀವನದಲ್ಲಿ ಮುಂದುವರಿಸುವುದಕ್ಕೂ ಕೂಡ ಆಗುವುದಿಲ್ಲ ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಅಡೆತಡೆ ಆಗುತ್ತಿರುತ್ತದೆ ಅಥವಾ ಇನ್ನೇನು ಜಯ ಎಂಬುದು ನಮ್ಮ ಕಣ್ಣೆದುರು ಇದೆ ಅನ್ನಬೇಕು,

ಅಷ್ಟರಲ್ಲಿ ಆ ಒಂದು ಜಯ ನಮ್ಮ ಕೈತಪ್ಪಿ ಹೋಗಿರುತ್ತದೆ, ಆ ರೀತಿಯಲ್ಲ ನಮ್ಮ ಜೀವನದಲ್ಲಿ ಎದುರಾಗುತ್ತಿದ್ದರೆ, ಅದಕ್ಕೆ ಒಂದು ಕಾರಣ ನಾವು ಸಹಿ ಹಾಕುವುದು ಕೂಡ ಇರಬಹುದು ಒಮ್ಮೆ ಯೋಚನೆ ಮಾಡಿ ನೋಡಿ.

ಎಷ್ಟೋ ಜನ ಸ್ಟೈಲ್ಗಾಗಿ ಅಥವಾ ಇನ್ಯಾವುದಾದರೂ ಕಾರಣಗಳಿಂದ ನಮ್ಮ ಸಹಿ ಬೇರೆಯವರಿಗೆ ತಿಳಿಯಬಾರದು ಅನ್ನು ಕಾರಣಗಳಿಂದ ವಿಧವಿಧವಾಗಿ ಸಹಿಯನ್ನು ಹಾಕುತ್ತಾ ಇರುತ್ತಾರೆ,

ಆದರೆ ನಾವು ಸರಿಯಾದ ಕ್ರಮದಲ್ಲಿ ಸಹಿ ಹಾಕುವುದು ಅವಶ್ಯಕವಾಗಿರುತ್ತದೆ ಯಾಕೆ ಅಂತೀರಾ ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ, ಯಾವ ರೀತಿ ಸಹಿ ಹಾಕಿದರೆ ಯಾವ ಒಂದು ಸಮಸ್ಯೆ ಜೀವನದಲ್ಲಿ ಎದುರಾಗುತ್ತದೆ ಅಂತ ತಿಳಿಯೋಣ ಈ ಮಾಹಿತಿಯಲ್ಲಿ.

ಮೊದಲನೆಯದಾಗಿ ಕೆಲವರು ಸಹಿಯನ್ನು ಹಾಕಿ ಕೆಳಗಡೆ ಬಂದು ನೀರನ್ನ ಇಳಿಯುತ್ತಾರೆ ಅಂದರೆ ಗೇಟನ್ನು ಹಾಕುತ್ತಾರೆ ಈ ರೀತಿಯ ಒಂದು ಸಹಿ ಹಾಕುವುದರಿಂದ ಅಂಥಹವರು ಜೀವನದಲ್ಲಿ ಅಭಿವೃದ್ಧಿ ಕಾಣುವುದಿಲ್ಲ

ಅಂತಹವರ ವ್ಯಕ್ತಿತ್ವ ಹೇಗಿರುತ್ತದೆ ಅಂದರೆ, ಯಾವುದೆ ಕೆಲಸವನ್ನಾಗಲಿ ಮುಂದೂಡುತ್ತಾ ಇರುತ್ತಾರೆ, ನಾಳೆ ಮಾಡಿದ್ರಾಯ್ತು ಮುಂದೆ ನೋಡಿದರಾಯಿತು ಅನ್ನೋ ಕಾರಣಗಳನ್ನು ಕೊಟ್ಟುಕೊಂಡು, ತಮ್ಮ ಜೀವನದಲ್ಲಿ ಪ್ರತಿಯೊಂದು ಕೆಲಸಗಳನ್ನು ಮುಂದೂಡುತ್ತಾ ಹೋಗುತ್ತಿರುತ್ತಾರೆ.

ಎರಡನೆಯದಾಗಿ ಸಹಿ ಹಾಕಿ ಕೊನೆಯ ಅಕ್ಷರವನ್ನು ಯಾರು ಎಳೆಯುತ್ತಾರೊ ಅಂತಹವರ ವ್ಯಕ್ತಿತ್ವ ಹೇಗಿರುತ್ತದೆ ಅಂದರೆ ನಿರುತ್ಸಾಹ ಕರು ಆಗಿರುತ್ತಾರೆ ಮತ್ತು ಅವರ ಜೀವನದಲ್ಲಿ ಎಲ್ಲವನ್ನೂ ಕೂಡ ನಿರ್ಲಕ್ಷ್ಯ ಮಾಡುವಂತಹ ಮನೋಭಾವ ಇವರದ್ದು ಆಗಿಕಿರುತ್ತದೆ.

ಯಾರು ತಾವು ಸಹಿ ಹಾಕಿದ ಮೇಲೆ ಅದರ ಮೇಲೆ ಒಂದು ಗೆರೆಯನ್ನು ಎಳೆಯುತ್ತಾರೆ ಅಂದರೆ ಕಾರ್ಟ್ ಮಾಡಿದ ಹಾಗೆ ಮಾಡುತ್ತಾರೋ ಅವರ ಜೀವನದಲ್ಲಿ ಹೆಚ್ಚಾಗಿ ಅನಾರೋಗ್ಯ ಸಮಸ್ಯೆ ಕಾಡುತ್ತಾ ಇರುತ್ತದೆ.

ಇನ್ನು ಕೆಲವರು ಸಹಿಯನ್ನು ಹಾಕಿ ಕೊನೆಯ ಅಕ್ಷರವನ್ನು ಸೇರಿಸಿ ಆ ಸಹಿಯ ಮೇಲೆ ಸೊನ್ನೆಯನ್ನು ಹಾಕುತ್ತಾರೆ ಅಂದರೆ ಸೊನ್ನೆಯ ಆಕಾರವನ್ನು ತಮ್ಮ ಸಹಿಯ ಸುತ್ತ ಹಾಕುತ್ತಾರೆ ಈ ರೀತಿ ಹಾಕುವುದರಿಂದ ಅವರು ತಮ್ಮನ್ನು ತಾವು ಅರ್ಥ ಮಾಡಿಕೊಳ್ಳುವುದಿಲ್ಲ ಅವರ ಕೆಪಾಸಿಟಿ ಅವರಿಗೆ ತಿಳಿದಿರುವುದಿಲ್ಲ .

ಇವರ ಜೀವನದಲ್ಲಿ ಹೇಗೆ ಆಗುತ್ತಿರುತ್ತದೆ ಅಂದರೆ ಎಲ್ಲವೂ ಚೆನ್ನಾಗಿ ಆಗುತ್ತಿರುತ್ತದೆ, ಇನ್ನೇನು ಕೊನೆಯಲ್ಲಿ ಜಯ ನಮ್ಮದೇ ಆಯಿತು ಅನ್ನೋ ಅಷ್ಟರಲ್ಲಿ ಅವರು ಎಲ್ಲವನ್ನೂ ಕೂಡ ಕಳೆದುಕೊಂಡು ಬಿಟ್ಟಿರುತ್ತಾರೆ ಕೊನೆಗೆ ಬೇಸರ ಮಾಡಿಕೊಳ್ಳುತ್ತಾರೆ ಹಾಗೆ ಇರುತ್ತದೆ ಇಂತಹವರ ಜೀವನ.

ಇನ್ನು ಕೆಲವರು ಸಹಿಯನ್ನು ಹಾಕಿ ಕೆಳಗಡೆ ಎರಡು ಗೀತನ ಇಳಿಯುತ್ತಾರೆ ಇಂಥವರ ಜೀವನದ ಸ್ಥಿತಿ ಹೇಗಿರುತ್ತದೆ ಅಂದರೆ ಇವರು ತುಂಬಾನೇ ಮೊಂಡ ಸ್ವಭಾವವನ್ನು ಹೊಂದಿರುತ್ತಾರೆ ತಾವು ಏನು ಅಂದುಕೊಳ್ತಾ ಇರ್ತಾರೊ, ಅದನ್ನು ಮಾಡಬೇಕು ಅದು ಸರಿಯೋ ತಪ್ಪೋ, ಅದನ್ನು ಮಾಡ್ಬೇಕು ಅಷ್ಟೆ ಅನ್ನುವುದು ಮನೋಭಾವವನ್ನು ಇವರು ಹೊಂದಿರುತ್ತಾರೆ.

ಹಾಗಾದರೆ ಜಯಾ ನಮ್ಮದಾಗಬೇಕಾದರೆ ಜೀವನದಲ್ಲಿ ಏಳಿಗೆ ಆಗಬೇಕಾದರೆ ನಾವು ಯಾವ ಕ್ರಮದಲ್ಲಿ ಸಹಿಯನ್ನು ಹಾಕಬೇಕು ಅಂದರೆ, ಸಹಿಯನ್ನು ಹಾಕಿ ಆ ಸಹಿಯ ಮೇಲೆ ಭಾಗದಲ್ಲಿ ಒಂದು ಗೆರೆಯನ್ನು ಎಳೆಯಬೇಕು, ಈ ರೀತಿ ಸಹಿ ಮಾಡುವುದರಿಂದ ಅಂಥಹವರ ಜೀವನದಲ್ಲಿ ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಜಯವನ್ನು ಸಾಧಿಸುತ್ತಾರೆ.

Leave a Reply

Your email address will not be published. Required fields are marked *