ಶ್ರೀ ಶಿವನ ಪೂಜೆಯನ್ನು ಶ್ರಾವಣ ಮಾಸದಲ್ಲಿಯೇ ಮಾಡಿದರೆ ಶ್ರೇಷ್ಠ ಅಂತ ಹೇಳುತ್ತಾರೆ ಹಾಗಾದರೆ ಶಿವನ ಪೂಜೆಯನ್ನು ಯಾಕೆ ಶ್ರಾವಣ ಮಾಸದಲ್ಲಿ ಮಾಡಬೇಕು ಶ್ರಾವಣಮಾಸದಲ್ಲಿ ಶಿವನ ಪೂಜೆ ಮಾಡುವುದರಿಂದ ಯಾವೆಲ್ಲ ಲಾಭ ಆಗುತ್ತದೆ.
ಶಿವನ ಸಕಲ ಆಶೀರ್ವಾದವನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಸಕಲ ಕಷ್ಟಗಳು ನಿವಾರಣೆಯಾಗಬೇಕಾದರೆ ಶಿವನ ಆರಾಧನೆಯನ್ನು ಹೇಗೆ ಮಾಡಬೇಕು ಎಂಬುದರ ಪ್ರತಿ ಮಾಹಿತಿಯನ್ನು ತಿಳಿಸುತ್ತೇನೆ.
ಇಂದಿನ ಮಾಹಿತಿಯನ್ನು ನೀವು ತಪ್ಪದೇ ತಿಳಿಯಿರಿ ಹಾಗೂ ನೀವು ಕೂಡ ಶಿವಭಕ್ತರಾಗಿದ್ದಾರೆ ಮಾಹಿತಿಗೊಂದು ಲೈಕ್ ಮಾಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ.
ಹೌದು ಶಿವನ ಪೂಜೆಯನ್ನು ಶ್ರಾವಣ ಮಾಸದಲ್ಲಿಯೇ ಅದರಲ್ಲಿಯೂ ಶ್ರಾವಣ ಸೋಮವಾರದಂದೆ ಮಾಡುವುದು ಶ್ರೇಷ್ಠ ಅಂತಾರೆ ಇದಕ್ಕೆ ಕಾರಣವನ್ನು ಹೇಳುವುದಾದರೆ,
ಒಮ್ಮೆ ಸತಿಯು ತನ್ನ ತಂದೆ ಶ್ರಾವಣ ಮಾಸದ ಸೋಮವಾರದ ದಿನದಂದು ಆಯೋಜಿಸಿದ್ದ ಯಜ್ಞಕುಂಡದಲ್ಲಿ ಶಿವನೆ ನನ್ನ ಮುಂದಿನ ಎಲ್ಲಾ ಜನ್ಮಗಳಲ್ಲಿ ಪತಿ ಆಗಬೇಕು ಅಂತ ಹೇಳಿ ತಾವು ಆಹುತಿಯಾಗುತ್ತಾರೆ,
ಆಗ ಸತಿಯಾ ಈ ಒಂದು ಭಕ್ತಿಯನ್ನು ಕಂಡು ಶಿವನು ಆಶೀರ್ವದಿಸುತ್ತಾರೆ ಹಾಗೆ ಮುಂದಿನ ಎಲ್ಲಾ ಜನ್ಮಗಳಲ್ಲೂ ಸತಿಯಾದ ಪಾರ್ವತಿಯು ಶಿವನ ಪತ್ನಿಯಾಗುತ್ತಾರೆ.
ಅಂದಿನಿಂದಲೂ ಶಿವನ ಆರಾಧನೆ ಮಾಡುವುದಕ್ಕೆ ಶ್ರೇಷ್ಠ ಮಾಸವೆಂದರೆ ಶ್ರಾವಣ ಮಾಸ ಎಂದು ಹೇಳಲಾಗುತ್ತದೆ, ಜೊತೆಗೆ ಆಷಾಢ ಮಾಸದಲ್ಲಿ ಬರುವ ಏಕಾದಶಿ ದಿನದಂದು ವಿಷ್ಣುವಿನ ಪೂಜೆಯನ್ನು ಮಾಡುವುದರಿಂದ ಶ್ರೇಷ್ಠ ಎನ್ನಲಾಗುವುದು.
ಹಾಗೆ ಈ ಆಷಾಢ ಮಾಸ ಕಳೆದು ಶ್ರಾವಣ ಬಂದಾಗ ವಿಷ್ಣು ವಿಶ್ರಾಂತಿಗೆ ತೆರಳಿದರೆ ಈಶ್ವರನು ಚತುರ್ದಶಿ ಯಲ್ಲಿ ವಿಶ್ರಾಂತಿಗೆ ಹೋಗುತ್ತಾರೆ ಈ ಸಮಯದಲ್ಲಿ ಶಿವನ ಮತ್ತೊಂದು ಅವತಾರವಾಗಿರುವ ಅಂದರೆ ಎರಡನೇ ರೂಪವಾಗಿರುವ ರುದ್ರಾವತಾರ ರೂಪಿ ಶಿವನು ಪ್ರಪಂಚವನ್ನು ಕಾಯುತ್ತಾರೆ.
ಶಿವನು ನಿದ್ರಿಸಲು ಹೊರಟ ಮೊದಲನೆ ದಿನವನ್ನು ಶಿವಶಯೊತ್ಸವ ಎಂಬ ಶುಭದಿನವಾಗಿ ಪೂಜೆ ಮಾಡಲಾಗುತ್ತದೆ ಹಾಗೆ ನಂತರ ಪ್ರಪಂಚವನ್ನು ರಕ್ಷಿಸಲು ರುದ್ರಾವತಾರಿಯಾದ ಶಿವನು ಉಗ್ರ ರೂಪವನ್ನು ತಾಳಿ ಬರುತ್ತಾರೆ,
ಇಂತಹ ಸಮಯದಲ್ಲಿ ಭೂಮಿಯಲ್ಲಿ ಸುಮಂಗಲಿಯರು ಹೆಣ್ಣು ಮಕ್ಕಳು ದೇವಸ್ಥಾನಗಳಿಗೆ ತೆರಳಿ ಶಿವನಿಗೆ ರುದ್ರಾಭಿಷೇಕವನ್ನು ಮಾಡಿಸುವುದರಿಂದ ಶಿವನ ಉಗ್ರ ರೂಪ ತಣ್ಣಗಾಗುತ್ತದೆ ಎಂದು ಹೇಳಲಾಗುತ್ತದೆ.
ಈ ಒಂದು ಶ್ರಾವಣ ಮಾಸದಲ್ಲಿಯೇ ಸಮುದ್ರ ಮಂಥನವೂ ನಡೆದಿತ್ತು ಈ ಸಮುದ್ರ ಮಂಥನದಲ್ಲಿ ಉಕ್ಕಿ ಬಂದ ವಿಷವನ್ನು ಶಿವನು ಕುಡಿದಾಗ ಅದನ್ನು ಪಾರ್ವತಿಯು ರಾತ್ರಿಯೆಲ್ಲ ತನ್ನ ಪತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ನಿದ್ರೆಯನ್ನು ಬಿಟ್ಟು ಸುಮಾರು ದಿನಗಳವರೆಗೂ ವ್ರತವನ್ನು ಮಾಡಿ ತನ್ನ ಗಂಡನ ಪ್ರಾಣವನ್ನು ಉಳಿಸಿಕೊಂಡಿರುತ್ತಾರೆ.
ಅಂತಹ ಒಂದು ಶ್ರಾವಣ ಮಾಸದಲ್ಲಿ ಹೆಣ್ಣುಮಕ್ಕಳು ಕೂಡ ಮಂಗಳಗೌರಿ ಉಪವಾಸ ವ್ರತ ಕೋಕಿಲ ವ್ರತ ಇಂತಹ ವ್ರತವನ್ನು ಕೈಗೊಂಡು ತಮ್ಮ ಸೌಭಾಗ್ಯವನ್ನು ರಕ್ಷಿಸಿಕೊಂಡು ತನ್ನ ಗಂಡನ ಆಯಸ್ಸನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೇಳಲಾಗಿದೆ.
ಹೀಗಾಗಿ ಈ ಎಲ್ಲ ಕಾರಣಗಳಿಂದ ಶ್ರಾವಣ ಮಾಸದಲ್ಲಿ ಶಿವನ ಪೂಜೆ ಮಾಡುವುದು ಶ್ರೇಷ್ಠ ಅದರಲ್ಲಿ ಶ್ರಾವಣ ಸೋಮವಾರದ ದಿನದಂದು ಈ ಒಂದು ಪೂಜೆಯನ್ನು ಕೈಗೊಳ್ಳುವುದು ಉತ್ತಮವೆಂದು ಹೇಳುವುದರ ಜೊತೆಗೆ ಈ ವರ್ಷದಲ್ಲಿ ಬರುವ ಶ್ರಾವಣ ಮಾಸದ ದಿನದಂದು ಐದು ಸೋಮವಾರಗಳು ಇದ್ದು ಶಿವನ ಪೂಜೆಯನ್ನು ಕೈಗೊಂಡು ಶಿವನ ಆಶೀರ್ವಾದಕ್ಕೆ ಪಾತ್ರರಾಗಿ.
ಈ ದಿನ ತಿಳಿಸಿದ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದಲ್ಲಿ ಓಂ ನಮ ಶಿವಾಯ ಎಂದು ಕಾಮೆಂಟ್ ಮಾಡಿ ಧನ್ಯವಾದ ಶುಭ ದಿನ ಶುಭವಾಗಲಿ.