Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ವ್ಯಾಪಾರ ವ್ಯವಹಾರವನ್ನು ಮಾಡುತ್ತೀರಾ … ಹಾಗಾದ್ರೆ ಈ ರೀತಿಯ ರುದ್ರಾಕ್ಷಿಯನ್ನು ಧರಿಸುವುದರಿಂದ ನಿಮ್ಮ ವ್ಯಪಾರ ವ್ಯವಹಾರ ಏಳಿಗೆ ಹೊಂದುತ್ತೆ …!!!!

ಯಾವ ವ್ಯಾಪಾರ ಮಾಡುವವರು ಯಾವ ಯಾವ ತರದ ರುದ್ರಾಕ್ಷಿಯನ್ನು ಹಾಕಿದರೆ ಒಳ್ಳೆಯದು ಎಂದು ತಿಳಿಯಲು ನೀವು ಈ ಮಾಹಿತಿಯನ್ನು ಓದಿ.
ಸ್ನೇಹಿತರೆ ಬದುಕಲು ನೂರು ದಾರಿಗಳಿವೆ ಆದರೆ ನಮ್ಮ ದಾರಿಗಳು ಸರಿಯಾಗಿ ಇರಬೇಕು ಮನೆಯಲ್ಲಿರುವ ಕುಟುಂಬವನ್ನು ಜವಾಬ್ದಾರಿಯಿಂದ ನಿಭಾಯಿಸಿಕೊಂಡು ಹೋಗಬೇಕೆಂದರೆ ಪ್ರತಿಯೊಬ್ಬ ಮನುಷ್ಯನಿಗೆ ವ್ಯಾಪಾರದ ಅವಶ್ಯಕತೆ ತುಂಬಾ ಇದೆ. ವ್ಯಾಪಾರವು ಯಾವುದೇ ಆಗಿರಲಿ ನಮ್ಮ ಶ್ರದ್ಧೆ ಹಾಗೂ ಪರಿಶ್ರಮ ಇರಲೇಬೇಕು. ಹಾಗೆ ಯಾವುದೇ ವ್ಯಾಪಾರದಲ್ಲೂ ಕೂಡ ಒಂದು ಸಲ ಲಾಭ ಇದ್ದರೆ ಇನ್ನೊಂದು ಸಲ ನಷ್ಟ ಇರುತ್ತದೆ ಆದರೆ ಇದನ್ನು ನಾವು ಸಮನಾಗಿ ತೆಗೆದುಕೊಂಡು ವ್ಯಾಪಾರವನ್ನು ಬಿಡದೆ ಮುನ್ನಡೆಸಿಕೊಂಡು ಹೋಗಬೇಕು.

ವ್ಯಾಪಾರವನ್ನು ಪ್ರಾರಂಭ ಮಾಡುವ ಮೊದಲು ನಾವು ಒಳ್ಳೆಯ ಪ್ಲಾನ್ ಮಾಡಿಕೊಂಡಿರಬೇಕು. ಯಾವುದೇ ವ್ಯಾಪಾರದಲ್ಲಿ ಇದ್ದರೂ ನಾವು ಬಲವಾದ ನಂಬಿಕೆಯನ್ನು ಇಟ್ಟುಕೊಳ್ಳಬೇಕು ಅಂದರೆ ಅದರಿಂದ ಏನು ಲಾಭ ಆದರೂ ಅಥವಾ ಎಷ್ಟೇ ನಷ್ಟವಾದರೂ ಸಹಿಸಿಕೊಳ್ಳುವ ಧೈರ್ಯ ಹಾಗೂ ಶಕ್ತಿ ನಮ್ಮಲ್ಲಿರಬೇಕು. ವ್ಯಾಪಾರದಲ್ಲಿ ಮೋಸ ಮಾಡುವ ಜನರು ಇರುತ್ತಾರೆ ಹಾಗಾಗಿ ನಮಗೆ ಮೊದಲು ವ್ಯಾಪಾರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರಬೇಕು. ದೇವರ ಆಶೀರ್ವಾದ ಇದ್ದರೆ ಹಾಗೂ ಲಕ್ಷ್ಮಿದೇವಿಯ ಸಂಪೂರ್ಣ ಆಶೀರ್ವಾದ ಇರಬೇಕು ಎಂದರೆ ಈ ಒಂದು ಪರಿಹಾರವನ್ನು ಮಾಡಿಕೊಂಡು ನಿಮ್ಮ ವ್ಯಾಪಾರದಲ್ಲಿ ಹೇಳಿಕೆಯನ್ನು ಪಡೆದುಕೊಳ್ಳಿ.

ಸ್ನೇಹಿತರೆ ಹಾಗಾದರೆ ಯಾವ ವ್ಯಾಪಾರದಲ್ಲಿರುವವರು ಯಾವ ರುದ್ರಾಕ್ಷಿಯನ್ನು ಹಾಕಬೇಕು ಎಂದು ಈ ಮಾಹಿತಿಯಲ್ಲಿ ನಿಮಗೆ ತಿಳಿಸುತ್ತೇನೆ. ಮೊದಲನೆಯದಾಗಿ ರಾಜಕೀಯ ಮಾಡುವವರು ಯಾವ ರೀತಿ ಆದ ರುದ್ರಾಕ್ಷಿಯನ್ನು ಉಪಯೋಗಿಸಬೇಕು ಎಂಬುದನ್ನು ನೋಡೋಣ. ಇಂಥವರು ಏಕಮುಖ ಇರುವ ರುದ್ರಾಕ್ಷಿಯನ್ನು ಉಪಯೋಗಿಸಬಹುದು ಇಲ್ಲವಾದರೆ 13 ಮುಖ ಇರುವ ರುದ್ರಾಕ್ಷಿಯನ್ನು ಉಪಯೋಗಿಸಬೇಕು. ಇನ್ನು ಕಾಂಟ್ರಾಕ್ಟ್ ಫೀಲ್ಡಿನಲ್ಲಿ ಇರುವವರು 11 ಅಥವಾ ಹದಿನಾಲ್ಕು ಮುಖದ ರುದ್ರಾಕ್ಷಿಯನ್ನು ಹಾಕಿಕೊಳ್ಳಬಹುದು ಇದರಿಂದ ಅವರು ವ್ಯಾಪಾರದಲ್ಲಿ ಅಂದರೆ ತಾವು ಮಾಡುವ ಕೆಲಸದಲ್ಲಿ ತುಂಬಾ ಒಳ್ಳೆಯ ಫಲವನ್ನು ಕಾಣುತ್ತಾರೆ.

ಇನ್ನು ಕೋರ್ಟು ಕಚೇರಿಗಳಲ್ಲಿ ಕೆಲಸ ಮಾಡುವವರು ಅಂದರೆ ಲಾಯರ್ಸ್ ಜಡ್ಜ್ ಯಾರೇ ಆಗಲಿ ಎರಡು ಮುಖದ ರುದ್ರಾಕ್ಷಿಯನ್ನು ಉಪಯೋಗಿಸಿದರೆ ತುಂಬಾ ಒಳ್ಳೆಯದು. ಮತ್ತೆ ಹೋಟೆಲ್ ಬಿಸಿನೆಸ್ ಮಾಡುವವರು ಏಕ ಮುಖದ ರುದ್ರಾಕ್ಷಿ ಅಥವಾ 13 ಮುಖ ಇರುವ ರುದ್ರಾಕ್ಷಿಯನ್ನು ಉಪಯೋಗಿಸಬಹುದು ಇದರಿಂದಾಗಿ ಹೋಟೆಲ್ನಲ್ಲಿ ತುಂಬಾ ಲಾಭವನ್ನು ಇವರು ಪಡೆಯುತ್ತಾರೆ. ಇನ್ನು ಡಾಕ್ಟರ್ ವೃತ್ತಿಯಲ್ಲಿರುವವರು ಹನ್ನೊಂದು ಮುಖದ ರುದ್ರಾಕ್ಷಿಯನ್ನು ಹಾಕುವುದರಿಂದ ತುಂಬಾ ಒಳ್ಳೆಯದು ಇದರಿಂದಾಗಿ ಅವರು ಮಾಡುವ ಕೆಲಸದಲ್ಲಿ ಲಾಭ ಹಾಗೂ ಶುಭ ಎರಡು ಸಿಗುತ್ತದೆ. ಬ್ಯಾಂಕಲ್ಲಿ ಕೂಡ ಕೆಲಸ ಮಾಡುವವರು 11 ಅಥವಾ 13 ಮುಖದ ರುದ್ರಾಕ್ಷಿಯನ್ನು ಉಪಯೋಗಿಸಬೇಕು.

ಇನ್ನು ಸಿವಿಲ್ ಇಂಜಿನಿಯರ್ಗಳು 13 ಅಥವಾ 14 ಮುಖದ ರುದ್ರಾಕ್ಷಿಯನ್ನು ಉಪಯೋಗಿಸಬೇಕು. ಸಾಫ್ಟ್ವೇರ್ನಲ್ಲಿ ಕೆಲಸ ಮಾಡುವವರು 13 ಮುಖದ ಅಥವಾ ಗೌರಿ ಮುಖದ ರುದ್ರಾಕ್ಷಿಯನ್ನು ಉಪಯೋಗಿಸಬಹುದು. ಇನ್ನು ಸಿಎ ಆದವರು ಹನ್ನೆರಡು ಮುಖದ ರುದ್ರಾಕ್ಷಿಯನ್ನು ಉಪಯೋಗಿಸಿದರೆ ತುಂಬಾ ಅನುಕೂಲಕರ. ಪೋಲಿಸ್ ನೌಕರಿಯಲ್ಲಿರುವವರು ಯಾರೇ ಆದರೂ ಹದಿಮೂರು ಮುಖದ ರುದ್ರಾಕ್ಷಿಯನ್ನು ಹಾಕಿಕೊಂಡರೆ ಒಳ್ಳೆಯದು ಪೊಲೀಸ್ ಸ್ಟೇಷನ್ ನಲ್ಲಿ ಯಾರೇ ಇರಲಿ ಇವರು ಕೂಡ ಹದಿಮೂರು ಮುಖದ ರುದ್ರಾಕ್ಷಿಯನ್ನು ಹಾಕಿಕೊಳ್ಳಬೇಕು.

ಇನ್ನೂ ರೈತರು 11 ಮುಖದ ರುದ್ರಾಕ್ಷಿಯನ್ನು ಹಾಕಿಕೊಳ್ಳಬಹುದು. ಮೆಕ್ಯಾನಿಕಲ್ ಇಂಜಿನಿಯರ್ ಆದವರು ಹತ್ತು ಮುಖದ ರುದ್ರಾಕ್ಷಿಯನ್ನು ಹಾಕಿಕೊಳ್ಳಬಹುದು ಹಾಗೆ ಎಲೆಕ್ಟ್ರಿಕಲ್ ಇಂಜಿನಿಯರ್ ಆದವರು ಹನ್ನೊಂದು ಮುಖದ ರುದ್ರಾಕ್ಷಿಯನ್ನು ಹಾಕಿದ್ದರೆ ತುಂಬಾ ಒಳ್ಳೆಯದು. ಅದೇ ರೀತಿಯಾಗಿ ಟೀಚರ್ಸ್ ಆದವರು ಆರು ಮುಖದ ರುದ್ರಾಕ್ಷಿಯನ್ನು ಹಾಕಿಕೊಳ್ಳಬೇಕು. ಇನ್ನು ಯಾವುದೇ ವ್ಯಾಪಾರವನ್ನು ಮಾಡುವವರು 12 ಅಥವಾ ಹದಿನಾಲ್ಕು ಮುಖದ ರುದ್ರಾಕ್ಷಿಯನ್ನು ಹಾಕಿಕೊಳ್ಳಬಹುದು. ಇನ್ನು ಸಂಗೀತ ಕಲಾಕ್ಷೇತ್ರ ಇಂತಹ ವ್ಯಾಪಾರದಲ್ಲಿ ಇರುವವರು 13 ಮುಖದ ರುದ್ರಾಕ್ಷಿಯನ್ನು ಹಾಕಿಕೊಳ್ಳುವುದು ಒಳ್ಳೆಯದು.

ಸ್ನೇಹಿತರೆ ಹಾಗಾದರೆ ವ್ಯಾಪಾರದಲ್ಲಿ ಇರುವವರು ಯಾವ ಯಾವ ತರ ರುದ್ರಾಕ್ಷಿಯನ್ನು ಹಾಕಿಕೊಳ್ಳಬೇಕು ಎಂಬುದು ಈ ಮಾಹಿತಿಯಲ್ಲಿ ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ