ನೀವೇನಾದರೂ ವರಮಹಾಲಕ್ಷ್ಮಿ ಪೂಜಾ ವ್ರತವನ್ನು ಕೈಗೊಳ್ಳುತ್ತಿದ್ದೀರ, ಹಾಗಾದರೆ ಇಂದಿನ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ತಿಳಿದು ವರಮಹಾಲಕ್ಷ್ಮಿ ವ್ರತದ ಪೂಜಾ ವಿಧಾನವನ್ನು ತಿಳಿದು ಇಂದಿನ ವರಮಹಾಲಕ್ಷ್ಮಿ ವ್ರತವನ್ನು ಈ ರೀತಿ ಕೈಗೊಳ್ಳಿ .
ಮತ್ತು ಲಕ್ಷ್ಮಿ ಕೃಪೆಗೆ ಪಾತ್ರರಾಗಿ. ಇನ್ನೇನು ಬರುವ ಶುಕ್ರವಾರದ ದಿವಸದಂದು ವರಮಹಾಲಕ್ಷ್ಮಿ ಪೂಜಾ ವ್ರತವೂ ಬರಲಿದೆ. ಈ ಹಬ್ಬದ ದಿನದಂದು ಲಕ್ಷ್ಮೀದೇವಿಗೆ ಶ್ರದ್ಧೆ ನಿಷ್ಠೆಯಿಂದ ಪೂಜೆಯನ್ನು ಸಲ್ಲಿಸಿದರೆ ಲಕ್ಷ್ಮಿದೇವಿಯ ಆಶೀರ್ವಾದವೂ ಮನೆಗೆ ದೊರೆತು ಆರ್ಥಿಕ ಬಿಕ್ಕಟ್ಟುಗಳು ಪರಿಹಾರಗೊಂಡು ನಿಮ್ಮ ಜೀವನದಲ್ಲಿಯೂ ಸುಖ ಶಾಂತಿ ನೆಮ್ಮದಿಯನ್ನು ಪಡೆದುಕೊಳ್ಳಿ.
ಈ ವ್ರತವನ್ನು ಕೈಗೊಳ್ಳುವ ಹೆಣ್ಣು ಮಕ್ಕಳು ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುನ್ನವೇ ಎದ್ದು ಮನೆಯನ್ನು ಶುಚಿಗೊಳಿಸಿ ದೇವರ ಪೂಜೆಗಾಗಿ ಏರ್ಪಾಟು ಮಾಡಿಕೊಳ್ಳಬೇಕು ಇನ್ನು ಪೂಜೆ ಮಾಡುವವರು ಹಿಂದಿನ ದಿನವೇ ಪೂಜಾ ಸಾಮಗ್ರಿಗಳನ್ನು ಹೊಂದಿಸಿ ಇಟ್ಟುಕೊಂಡಿರಬೇಕಾಗುತ್ತದೆ.
ಮನೆಯನ್ನು ಶುಚಿಗೊಳಿಸಿ ವ್ರತವನ್ನು ಯಾರು ಕೈಗೊಳ್ಳುತ್ತಾರೋ ಅವರೇ ಕಳಶ ಪ್ರತಿಷ್ಠಾಪನೆ ಮಾಡಬೇಕು ಲಕ್ಷ್ಮೀದೇವಿಯನ್ನು ಉತ್ತರಾಭಿಮುಖವಾಗಿ ಪ್ರತಿಷ್ಠಾಪನೆ ಮಾಡುವುದಾದರೆ ದೇವಿಗೆ ಹಸಿರು ಬಣ್ಣದ ಸೀರೆಯನ್ನು ಉಡಿಸುವುದು ಶ್ರೇಷ್ಠ.
ಕಳಶ ಪ್ರತಿಷ್ಠಾಪನೆ ಮಾಡುವ ಮೊದಲು ಮನೆಗೆ ಮಾವಿನ ಎಲೆಯ ತೋರಣವನ್ನು ಕಟ್ಟಬೇಕು ನಂತರ ಪೂಜೆ ಮಾಡುವಾಗ ಬಾಳೆ ಕಂದನ್ನು ಕಟ್ಟಿ ಇದೀಗ ಕಲಶ ಪ್ರತಿಷ್ಠಾಪನೆ ಮಾಡಬೇಕು ಹೇಗೆ ಅಂದರೆ ಒಂದು ಕೊಡಪಾನವನ್ನು ತೆಗೆದುಕೊಂಡು ಅದರ ಪೂರ್ತಿ ಶುದ್ಧ ನೀರನ್ನು ಹಾಕಬೇಕು.
ಅದಕ್ಕೆ ಅಕ್ಕಿ ಕಲ್ಲುಸಕ್ಕರೆ ಬಾದಾಮಿ ದ್ರಾಕ್ಷಿ ಗೋಡಂಬಿ ಇವುಗಳನ್ನು ಸ್ವಲ್ಪವೇ ಹಾಕಿ ಈ ಕೊಡಪಾನದ ಬಾಯಿಗೆ ಮಾವಿನ ಎಲೆ ಅಥವಾ ವೀಳ್ಯದೆಲೆಯಿಂದ ಸಿಂಗರಿಸಬೇಕು ನಂತರ ಕೊಡಪಾನಕ್ಕೆ ಅರಿಶಿನ ಕುಂಕುಮ ಗಂಧವನ್ನು ಇಟ್ಟು ಅಲಂಕರಿಸಬೇಕು.
ದೇವಿಯ ಕಲಶವನ್ನು ಇಡುವ ಸ್ಥಳದಲ್ಲಿ ರಂಗೋಲಿಯನ್ನು ಬಿಡಬೇಕು ಮತ್ತು ಒಂದು ತಟ್ಟೆಯ ಮೇಲೆ ಅಕ್ಕಿಯನ್ನು ಹಾಕಿದ ನಂತರ ಅದರ ಮೇಲೆ ಕಳಶವನ್ನು ಇಡಬೇಕು, ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು ಸ್ವಚ್ಛ ಮಾಡಿ ಕಲಶದ ಮೇಲೆ ಇಟ್ಟು .
ಇದೀಗ ದೇವಿಯ ಮುಖವಾಡವನ್ನು ಇಡುವುದಾದರೆ ಮುಖವಾಡವನ್ನು ಕಾಯಿಗೆ ಹಾಕಿ ಅಲಂಕರಿಸಬೇಕು. ಇದಿಷ್ಟು ಮಾಡಿದ ಬಳಿಕ ದೇವಿಗೆ ಸೀರೆಯನ್ನು ಉಡಿಸಿ ಅರಿಶಿನ ಕುಂಕುಮವನ್ನು ಹಚ್ಚಿ ಅಲಂಕಾರ ಮಾಡಬೇಕು ಮತ್ತು ದೇವಿಗಾಗಿಯೆ ಇಟ್ಟಿರುವ ಒಡವೆಗಳಿದ್ದರೆ ಅದನ್ನು ಕೂಡ ಹಾಕಿ ದೇವಿಯನ್ನು ಪೂರ್ತಿಯಾಗಿ ಅಲಂಕರಿಸಬೇಕು.
ಇದಿಷ್ಟು ಮಾಡಿದ ಬಳಿಕ ದೇವಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಬೇಕು ಹೇಗೆ ಅಂದರೆ ಬಲಗೈನಲ್ಲಿ ಅಕ್ಷತೆ ಕಾಳುಗಳನ್ನು ಹಿಡಿದು ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳನ್ನ ದೇವಿಯನ್ನು ನೆನೆದು ದೇವಿಯ ಕಳಶಕ್ಕೆ ಹಾಕಬೇಕು. ಮನೆಯಲ್ಲಿ ಮಾಡಿದ ಸಿಹಿ ತಿಂಡಿಗಳನ್ನು ದೇವಿಗೆಂದು ಅರ್ಪಿಸಿ ಹಣ್ಣು ಹಂಪಲುಗಳನ್ನು ಸಮರ್ಪಿಸಬೇಕು ತುಪ್ಪದ ದೀಪವನ್ನು ಹಚ್ಚಿ ದೇವಿಯನ್ನು ಆರಾಧಿಸಬೇಕು.
ಈ ರೀತಿ ದೇವಿಯ ವ್ರತವನ್ನು ಕೈಗೊಂಡು ಪೂಜೆಯನ್ನು ಮಾಡುತ್ತಿರುವವರು ಅಂದರೆ ವ್ರತವನ್ನು ಕೈಗೊಳ್ಳುವವರು ಉಪವಾಸ ಇದ್ದು ದೇವಿಯ ಪೂಜೆಯನ್ನು ಮಾಡಬೇಕು ಹಾಗೆ ಒಂದು ತಟ್ಟೆಯಲ್ಲಿ ನೀರಿನೊಂದಿಗೆ ಅರಿಶಿನ ಮತ್ತು ಸ್ವಲ್ಪ ಸುಣ್ಣವನ್ನು ಬೆರೆಸಿ ಪಕ್ಕದಲ್ಲೇ ಇಟ್ಟಿರಬೇಕು, ದೇವಿಯ ಪೂಜೆಯ ನಂತರ ದೇವಿಗೆ ಈ ನೀರನ್ನು ಬಳಸಿ ದೃಷ್ಟಿಯನ್ನು ತೆಗೆಯಬೇಕು.
ದೇವಿಯ ಪೂಜೆಯನ್ನು ಮಾಡಿದ ನಂತರ ದೇವಿಯನ್ನು ಕೆಲವರು ಮನೆಯಲ್ಲಿ ಒಂದು ದಿನ ಮೂರು ದಿನ ಅಥವಾ ಐದು ದಿನಗಳವರೆಗೂ ಇಟ್ಟುಕೊಂಡು ಪೂಜಿಸುತ್ತಾರೆ, ಕೊನೆಯಲ್ಲಿ ದೇವಿಯ ವಿಸರ್ಜನೆ ಮಾಡುವುದು ಕೂಡ ದೇವಿಯ ಪ್ರಾಣ ಪ್ರತಿಷ್ಠಾಪನೆ ಮಾಡುವುದಷ್ಟೆ ಕ್ರಮಬದ್ಧವಾಗಿಯೇ ಮಾಡಬೇಕು.
ವಿಸರ್ಜನೆಯ ಪೂಜೆಯನ್ನು ಹೇಗೆ ಕೈಗೊಳ್ಳಬೇಕು ಅಂದರೆ ದೇವರಿಗೆ ಒಮ್ಮೆ ಪೂಜೆಯನ್ನು ಸಲ್ಲಿಸಿ ದೇವರ ಮುಂದೆ ಇಟ್ಟಿರುವ ರಂಗೋಲಿಯ ಒಂದು ಎಲೆಯನ್ನು ಅಳಿಸಬೇಕು ನಂತರ ದೇವಿಗೆ ಆರತಿಯನ್ನು ಬೆಳಗಿ ದೇವಿಯ ಕಳಸವನ್ನು ಸಡಿಲಿಸಿ ದೇವಿಗೆ ಸಮರ್ಪಿಸಿದ ಸಾಮಗ್ರಿಗಳನ್ನು ತೆಗೆದಿಡಬೇಕು.
ನಂತರ ದೇವರ ಪೂಜೆಗಾಗಿ ಬಳಸಿದ ಅಕ್ಷತೆ ಕಾಳು ರಂಗೋಲಿ ಹೂವು ಇವೆಲ್ಲವನ್ನು ಕೂಡ ನದಿಗೆ ಹಾಕಬಾರದು ನದಿಯ ದಂಡೆಯಲ್ಲಿ ಹಾಕಬೇಕು ಈ ಸಾಮಗ್ರಿಗಳನ್ನು ನದಿಗೆ ಹಾಕುವುದರಿಂದ ದೋಷವಾಗುತ್ತದೆ ಪೂಜೆಯ ಫಲ ದೊರೆಯಲಿಲ್ಲ ಎಂದು ಹೇಳಲಾಗುತ್ತದೆ.
ಕಳಶದಲ್ಲಿ ಹಾಕಿದ ಅಕ್ಕಿ ಬಾದಾಮಿ ದ್ರಾಕ್ಷಿ ಇವೆಲ್ಲವನ್ನು ಕೂಡ ಮನೆಯಲ್ಲಿ ಸಿಹಿಯನ್ನು ತಯಾರಿಸಿ ಮನೆಯ ಸದಸ್ಯರಿಗೆ ನೀಡಬೇಕು, ಈ ರೀತಿಯಾಗಿ ದೇವಿಯ ವ್ರತವನ್ನು ಕೈಗೊಂಡು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಿ.
Originally posted on July 27, 2020 @ 8:37 am