ಇಂದಿನ ಆಧುನಿಕ ಯುಗದಲ್ಲಿ ಜನರು ಎಲ್ಲವೂ ಸರಿಯಾಗಿದೆ ಅಂತ ಅಂದುಕೊಂಡು ಜೀವನವನ್ನು ನಡೆಸುತ್ತಿದ್ದಾರೆ ಆದರೆ ಅವರಿಗೆ ತಿಳಿದಿಲ್ಲ ನಾವು ನಮಗೆ ಅದೆಷ್ಟು ಮೋಸ ಮಾಡಿಕೊಳ್ಳುತ್ತಿದ್ದೇವೆ ಎಂದು,.
ಫ್ರೆಂಡ್ಸ್ ಗಮನಿಸಿ ಇತ್ತೀಚಿನ ದಿನಗಳಲ್ಲಿ ಎಷ್ಟು ಮೆಡಿಕಲ್ ಕಾಲೇಜುಗಳು ಆಸ್ಪತ್ರೆಗಳು ಹೆಚ್ಚುತ್ತಿವೆ ಎಂದು ಈ ಸಂಖ್ಯೆ ಹೆಚ್ಚುತ್ತಿದೆ ಅಂದರೆ ರೋಗಿಗಳ ಸಂಖ್ಯೆ ಕಡಿಮೆಯಾಗಬೇಕು, .
ಆದರೆ ಅದು ಹಾಗಾಗುತ್ತಿಲ್ಲ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆಯೂ ಕೂಡ ಹೆಚ್ಚುತ್ತಲೇ ಇದೆ ಇದಕ್ಕೆ ಕಾರಣವೇನು ಆಸ್ಪತ್ರೆಗಳ ತಪ್ಪಾ ಅಥವಾ ನಮ್ಮದೇ ತಪ್ಪಾ ಅಂತ ಹೇಳುವುದಾದರೆ ಆಸ್ಪತ್ರೆಗಳ ತಪ್ಪು ಅಲ್ಲ ಮುಖ್ಯವಾಗಿ ನಮ್ಮದೇ ತಪ್ಪು.
ಯಾಕೆ ಅಂತ ಕೇಳ್ತಿದ್ದೀರಾ ಹೌದು ನಾವು ರೂಢಿಸಿಕೊಂಡಿರುವ ಆಹಾರ ಪದ್ಧತಿಯಿಂದಲೇ ಇದೀಗ ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುವುದು ಮುಖ್ಯವಾಗಿ ನಾವು ತಿಳಿದೊ ತಿಳಿಯದೆಯೊ ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಬಳಸುತ್ತಿರುವ ಈ ಒಂದು ಬಿಳಿ ವಿಷ ಅನೇಕ ಜನರಿಗೆ ಅನಾರೋಗ್ಯ ಸಮಸ್ಯೆಯನ್ನು ತಂದೊಡ್ಡಿದೆ ಅಷ್ಟೇ ಅಲ್ಲದೆ ಹೃದ್ರೋಗ ಸಮಸ್ಯೆಗಳಿಗೂ ಕೂಡ ಕಾರಣ ಮಾಡುತ್ತಿದೆ.
ನಾನು ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಈಗಾಗಲೇ ನಿಮಗೆ ತಿಳಿದಿರಬಹುದು ಹೌದು ನಾನು ಮಾತನಾಡಿರುವುದು ಸಕ್ಕರೆ ಎಂಬ ಬಿಳಿ ವಿಷಯದ ಬಗ್ಗೆ ಇದು ರುಚಿಯಲ್ಲಿ ಸಿಹಿ ಆಗಿರಬಹುದು ಆದರೆ ನಮ್ಮ ಆರೋಗ್ಯಕ್ಕೆ ಅದೆಷ್ಟು ಮಾರಕ ಅಂತ ಮಾತ್ರ ಹೆಚ್ಚು ಜನರಿಗೆ ತಿಳಿದಿಲ್ಲ.
ಅನೇಕ ಸಂಶೋಧನೆಗಳು ತಿಳಿಸುತ್ತಿದೆ ಈ ಸಕ್ಕರೆ ಎಂಬುದು ಮನುಷ್ಯನ ಆರೋಗ್ಯದ ಮೇಲೆ ಅತ್ಯಂತ ಕೆಟ್ಟದಾಗಿ ಪರಿಣಾಮ ಬೀರುವ ಒಂದು ಸ್ಲೋ ಪಾಯ್ಸನ್ ಅಂದರೆ ತಪ್ಪಾಗಲಾರದು ಇದು ನಮ್ಮ ದೇಹದಲ್ಲಿ ಫ್ಯಾಟ್ ಕೊಲೆಸ್ಟ್ರಾಲ್ ಅನ್ನು ಹೆಚ್ಚು ಮಾಡುತ್ತದೆ ಇದರಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಮಾತ್ರವಲ್ಲದೆ ಅನೇಕ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ.
ಸಂಶೋಧನೆಯೊಂದು ತಿಳಿಸಿದೆ ಪ್ರಪಂಚದಲ್ಲಿ ಹೆಚ್ಚು ಮಂದಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂದರೆ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂದರೆ ಜೊತೆಗೆ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಅಂದರೆ ಅದೆಲ್ಲದಕ್ಕೂ ಕಾರಣ ಆಹಾರ ಪದ್ಧತಿಯೇ ಆಗಿದ್ದು ಅದರೊಟ್ಟಿಗೆ ಯಾರೂ ಹೆಚ್ಚಾಗಿ ಸಕ್ಕರೆ ಉಪ್ಪು ಮತ್ತು ಮೈದಾವನ್ನು ಬಳಸುತ್ತಾರೋ ಅಂತಹವರಲ್ಲಿ ಹೆಚ್ಚಿನ ಆರೋಗ್ಯ ಸಮಸ್ಯೆ ಕಂಡು ಬರುತ್ತದೆ ಎಂದು ಹೇಳುತ್ತಿದೆ.
ಹೀಗಾಗಿ ರುಚಿ ಹೆಚ್ಚಿಸುತ್ತದೆ ಎಂದು ಬಳಸುತ್ತಿರುವ ಈ ಸಕ್ಕರೆ ಆಗಲಿ ಅಥವಾ ಉಪ್ಪು ಆಗಲಿ ನಮ್ಮ ಮೂಳೆಗಳನ್ನು ಟೊಳ್ಳು ಮಾಡುತ್ತಿದೆ ಜೊತೆಗೆ ಇದು ನಮ್ಮ ಆರೋಗ್ಯವನ್ನು ಕ್ಷೀಣಿಸುತ್ತಾ ಬರುತ್ತಿದೆ ಆದರೆ ಇದು ನಮಗೆ ತಿಳಿಯುತ್ತಿಲ್ಲ ಅಷ್ಟೇ.
ಅನೇಕ ವಿಜ್ಞಾನಿಗಳು ತಿಳಿಸುವ ಹಾಗೆ ಈ ಸಕ್ಕರೆ ,ಉಪ್ಪು ,ಮತ್ತು ಮೈದಾ ಮನುಷ್ಯನ ಆರೋಗ್ಯದ ಮೇಲೆ ಅದೆಷ್ಟು ಕೆಟ್ಟದ್ದಾಗಿ ಪರಿಣಾಮ ಬೀರುತ್ತದೆ ಅಂದರೆ ಇದು ಮೂಳೆಗಳನ್ನು ಟೊಳ್ಳು ಮಾಡಿಸುತ್ತದೆ ಆಸ್ಟಿಯೋಪೊರೋಸಿಸ್ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ನಿದ್ರಾ ಹೀನತೆ ಸಮಸ್ಯೆಗಳ ಜೊತೆಗೆ ಇನ್ನೂ ಅನೇಕ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುವುದೇ ಇಂತಹ ಪದಾರ್ಥಗಳನ್ನು ಸೇವಿಸುವುದರಿಂದ.
ಆದ್ದರಿಂದ ಈ ಬಿಳಿ ವಿಷವಾಗಿರುವ ಪದಾರ್ಥವನ್ನು ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಕಡಿಮೆ ಬಳಸಿ ಅಥವಾ ತ್ಯಜಿಸಿಬಿಡಿ ಇದರಿಂದ ನಿಮಗೆ ಉತ್ತಮ ಆರೋಗ್ಯವೂ ಕೂಡ ದೊರೆಯುತ್ತದೆ.
ಆಸ್ಪತ್ರೆಗೆ ಓಡಾಡುವ ಪರಿಸ್ಥಿತಿಯು ಕೂಡ ಎದುರಾಗುವುದಿಲ್ಲ. ಹಾಗೆ ಈ ಬಿಳಿವಿಷದ ಮೇಲೆ ಅನೇಕ ಸಂಶೋಧನೆಗಳು ಕೂಡ ನಡೆದಿವೆ ಇದರ ಫಲಿತಾಂಶವೂ ಅತ್ಯಂತ ಭಯಂಕರವಾಗಿದೆ ಅಂತ ಕೂಡಾ ಹೇಳಲಾಗಿದೆ.
ಹಾಗಾದರೆ ಈ ಒಂದು ಚಿಕ್ಕ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನ ನಮಗೆ ಕಾಮೆಂಟ್ ಮುಖಾಂತರ ಹಂಚ್ಚಿಕೊಳ್ಳಿ ಮತ್ತು ನಿಮಗೆ ಈ ಮಾಹಿತಿ ಉಪಯುಕ್ತವಾದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.