ಪ್ರತಿಯೊಬ್ಬರಿಗೂ ಅವರದೇ ಆದ ಶೈಲಿ ಮದ್ದು ಅಭಿರುಚಿ ಇರುತ್ತದೆ, ಇದು ಯಾವುದು ಅವರಿಗೆ ಹೇಳಿ ಕೊಟ್ಟಿರುವುದಿಲ್ಲ ಬದಲಿಗೆ ಅವರ ಮನಸ್ಸೇ ಅದನ್ನ ಒತ್ತಾಯ ಮಾಡಿರುತ್ತದೆ,ಇನ್ನು ಹೀಗೆ ಚಿಂತಿಸಿದರೆ ಜೀವನ ಶೈಲಿ, ಅಡುಗೆ, ಬಟ್ಟೆ, ಕೆಲಸ ಇವೆಲ್ಲವೂ ಅವರ ರಾಶಿಯ ಅನುಗುಣವಾಗಿಯೇ ಇರುತ್ತದೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ, ಇನ್ನು ಅದೇ ಜೋತಿಷ್ಯ ಶಾಸ್ತ್ರವು ಯಾವ ರಾಶಿಯವರಿಗೆ ಯಾವ ಉಡುಪು ಶುಭ ಅಥವಾ ಅಶುಭ ವೆಂದು ಹೇಳಿದೆ ಅದನೊಮ್ಮೆ ನೀವು ಓದಿ.
ಮೇಷ : ಮೇಷ ರಾಶಿಯ ಮಂದಿಗೆ ಮಂಗಳನು ಅಧಿಪತಿಯಾಗಿರುವುದರಿಂದ ಅವರಿಗೆ ಪ್ಯೂರ್ ಹಾಗೂ ಸಿಂಥೆಟಿಕ್ ಮಾದರಿಯ ವಸ್ತ್ರಗಳಷ್ಟೇ ಸರಿ ಹೊಂದುತ್ತವೆ, ಮೇಷ ರಾಶಿಯವರಿಗೆ ಲೆದರ್, ಬೆಳ್ಳಿ, ಕಬ್ಬಿಣದ ವಸ್ತುಗಳು ಸರಿ ಹೊಂದುವುದಿಲ್ಲ, ನೀಲಿ, ಕೆಂಪು, ಕೇಸರಿ ಬಣ್ಣದ ಬಟ್ಟೆಗಳು ಇವರಿಗೆ ಉತ್ತಮ.ವೃಷಭ : ಹಸಿರು, ಬಿಳಿ, ಕಂದು ಮತ್ತಿತರ ದಟ್ಟ ಬಣ್ಣದ ಸಿಲ್ಕ್ ಬಟ್ಟೆಗಳು ಇವರಿಗೆ ಸರಿಯಾಗಿ ಹೊಂದುತ್ತವೆ, ಈ ಬಣ್ಣದ ಬಟ್ಟೆಗಳು ಸಾದಾ ಅರ್ಥಾತ್ ಡಿಸೈನ್ ರಹಿತ ಹಾಗೂ ಬಹುಬಣ್ಣದ ಲೇಯರ್ಗಳುಳ್ಳ ಈಗಿದ್ದರೆ ಇನ್ನೂ ಉತ್ತಮ.
ಮಿಥುನ : ಪರಿಶುದ್ಧ ಕಾಟನ್, ಹಾಗೂ ಲಿನೆನ್ ಬಟ್ಟೆಗಳು ಇವರಿಗೆ ಹೊಂದುತ್ತವೆ, ಹಸಿರು, ಬಿಳಿ ಇವರಿಗೆ ಅತ್ಯುತ್ತಮ, ಪ್ಲಾಟಿನಂ, ಚಿನ್ನ ಹಾಗೂ ಬೆಳ್ಳಿ ಇವರಿಗೆ ಹೊಂದಿಕೊಳ್ಳುತ್ತದೆ.ಕರ್ಕ : ಕರ್ಕ ರಾಶಿಯ ಮಂದಿಗೆ ಸಿಲ್ಕ್, ಕಾಟನ್ ಹಾಗೂ ಲೆನಿನ್ ಬಟ್ಟೆಗಳು ಅತ್ಯುತ್ತಮ, ಬಿಳಿ ಬಣ್ಣದ ಬಟ್ಟೆಗಳು ಅಥವಾ ತುಂಬ ಸರಳವಾದ ಡಿಸೈನ್ ಹೊಂದಿದ ಬಟ್ಟೆಗಳು ಇವರಿಗೆ ಒಳ್ಳೆಯದು.ಸಿಂಹ : ಸಿಂಹ ರಾಶಿಯ ಮಂದಿಗೆ ಕೆಂಪು, ಹಳದಿ ಹಾಗೂ ಕೇಸರಿ ಬಣ್ಣದ ಕಾಟನ್ ಬಟ್ಟೆಗಳು ಉತ್ತಮ ಲೆದರ್, ಫೆದರ್, ಬೆಳ್ಳಿ ಹಾಗೂ ಕಬ್ಬಿಣ ಇವರಿಗೆ ಒಳ್ಳೆಯದಲ್ಲ.
ಕನ್ಯಾ : ಕಾಟನ್ ಹಾಗೂ ಲಿನೆನ್ ಬಟ್ಟೆ ಇವರಿಗೆ ಒಳ್ಳೆಯದು, ಅಗಲವಾದ ಕಟ್ಗಳು ಅಥವಾ ಶೇಡ್ಗಳಿರುವ ಬಟ್ಟೆ ಅಷ್ಟು ಒಳ್ಳೆಯದಲ್ಲ ಬೆಳ್ಳಿ, ಪ್ಲಾಟಿನಂ ಚಿನ್ನ ಇವರಿಗೆ ಒಪ್ಪುತ್ತದೆ, ಎಮರಾಲ್ಡ್ ಒಳ್ಳೆಯದು.ತುಲಾ : ತುಲಾ ರಾಶಿಯ ಮಂದಿಗೆ ಸಿಂಥೆಟಿಕ್ ಸಿಲ್ಕ್ ಬಟ್ಟೆಗಳು ಒಳ್ಳೆಯದು ಕೆಂಪು, ಕೇಸರಿ ಬಣ್ಣದ ಬಟ್ಟೆಗಳು ಹೊಂದಿಕೆಯಾಗುವುದಿಲ್ಲ, ಬೆಳ್ಳಿ ಹಾಗೂ ಪ್ಲಾಟಿನಂ ಆಭರಣ ಕೂಡಾ ಉತ್ತಮವಲ್ಲ.ವೃಶ್ಚಿಕ : ವೃಶ್ಚಿಕ ರಾಶಿಯ ಮಂದಿಗೆ ಕಾಟನ್ ಜೊತೆ ಲೇಸ್ಗಳುಳ್ಳ ಬಟ್ಟೆ ಒಳ್ಳೆಯದು, ಕೆಂಪು, ಹಳದಿ ಹಾಗೂ ಕೇಸರಿ ಬಣ್ಣದ ಬಟ್ಟೆಗಳು ಉತ್ತಮ, ಬೆಳ್ಳಿ ಹಾಗೂ ಪ್ಲಾಟಿನಂ ಆಭರಣಗಳಿಂದ ದೂರವಿದ್ದರೆ ಉತ್ತಮ.
ಧನು : ಈ ರಾಶಿಯ ಮಂದಿಗೆ ಹಳದಿ, ತೆಳು ಕೇಸರಿ, ಕಿತ್ತಳೆ ಬಣ್ಣಗಳು ಹೊಂದುತ್ತವೆ, ಚಿನ್ನದ ಆಭರಣಗಳು ಚೆನ್ನಾಗಿ ಹೊಂದುತ್ತವೆ.ಮಕರ : ಈ ರಾಶಿಯ ಮಂದಿಗೆ ಕಾಟನ್, ಸಿಲ್ಕ್, ಲಿನೆನ್ ಮಾದರಿಗಳ ಬಟ್ಟೆ ಉತ್ತಮ ಕಪ್ಪು, ನೀಲಿ, ಕಂದು ಉತ್ತಮ, ತಾಮ್ರ ಹಾಗೂ ಚಿನ್ನದ ಬಳಕೆಯಿಂದ ದೂರವಿದ್ದರೆ ಉತ್ತಮ.ಕುಂಭ : ಈ ರಾಶಿಯ ಮಂದಿಗೆ ದಟ್ಟ ಬಣ್ಣದ ಬಟ್ಟೆಗಳು ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ.
ಮೀನ : ಈ ರಾಶಿಯವರು ಹಳದಿ, ಕಿತ್ತಳೆ, ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು, ಇವರಿಗೆ ಸಾಮಾನ್ಯವಾಗಿ ಎಲ್ಲಾ ಮಾದರಿಯ ಬಟ್ಟೆ ಹೊಂದುತ್ತವೆ.ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನೀವು ತಪ್ಪದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗು ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ..ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿಕೊಡಿ . ಧನ್ಯವಾದ ಶುಭದಿನ