ಎಷ್ಟೋ ಜನರಿಗೆ ಈ ಒಂದು ವಿಚಾರದಲ್ಲಿ ಹೆಚ್ಚಿನ ಮಾಹಿತಿ ತಿಳಿದಿರುವುದಿಲ್ಲ. ಹೌದು ದೇವಸ್ಥಾನಕ್ಕೆ ಹೋದ ನಂತರ ಮತ್ತೆ ವಾಪಸ್ಸು ಮನೆಗೆ ಬರುವಾಗ ಅನೇಕ ಮಂದಿ ತಮ್ಮ ನೆಂಟರು ಮನೆಗೆ ಅಥವಾ ಸ್ನೇಹಿತರ ಮನೆಗೆ ಭೇಟಿ ನೀಡಿ ನಂತರ ಮತ್ತೆ ಮನೆಗೆ ಬರುತ್ತಾರೆ ಹಾಗೆ ಕೆಲವರು ಪುಣ್ಯ ಕ್ಷೇತ್ರಗಳಿಗೆ ಹೋದಾಗ ಮತ್ತೆ ವಾಪಸ್ಸು ಬರುವಾಗ ತಮ್ಮ ಕುಟುಂಬಸ್ಥರ ಮನೆಯಲ್ಲಿ ತಮ್ಮ ನೆಂಟರಿಷ್ಟರ ಮನೆಯಲ್ಲಿ ತಂಗಿದ ನಂತರ ಮನೆಗೆ ಬರುವ ಒಂದು ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ.ಆದರೆ ಈ ಎಲ್ಲ ಕೆಲಸಗಳನ್ನು ನಾವು ಮಾಡುವುದರಿಂದ ನಮಗೆ ನಾವು ಮಾಡಿದಂತಹ ಪೂಜೆ ನಾವು ಮಾಡಿಕೊಂಡ ಪರಿಹಾರ ಲಭಿಸುತ್ತದೆಯೊ ಇಲ್ಲವೋ ಅಂತ ತಿಳಿಯೋಣ. ಸಂಪೂರ್ಣ ಲೇಖನವನ್ನು ತಿಳಿಯಿರಿ
ಹಾಗೆ ನೀವು ಕೂಡ ಇಂತಹ ಕೆಲವೊಂದು ವಿಚಾರಗಳಲ್ಲಿ ತಪ್ಪುಗಳನ್ನು ಮಾಡುತ್ತಾ ಇದ್ದರೆ ಇಂದಿನ ಲೇಖನವನ್ನು ತಿಳಿದ ನಂತರ ಅದನ್ನು ಸರಿಪಡಿಸಿಕೊಳ್ಳಿ. ಯಾವುದೆ ಕಾರಣಕ್ಕೂ ಹತ್ತಿರದಲ್ಲಿ ಇರುವ ದೇವಸ್ಥಾನಗಳಿಗೆ ಆಗಲಿ ಅಥವಾ ತೀರ್ಥ ಕ್ಷೇತ್ರಕ್ಕೆ ಹೋದಾಗಲೆ ಆಗಲಿ ನಾವು ಈ ದಿನ ತಿಳಿಸುವಂತ ಕೆಲವೊಂದು ವಿಚಾರಗಳನ್ನು ತಪ್ಪದೆ ಪಾಲಿಸುತ್ತ ಬನ್ನಿ.
ಪುಣ್ಯ ಕ್ಷೇತ್ರಗಳಿಗೆ ತೀರ್ಥಕ್ಷೇತ್ರಗಳಿಗೆ ಆಗಾಗ ಭೇಟಿ ನೀಡುವುದು ಒಳ್ಳೆಯದು ನಮ್ಮ ಶಾಸ್ತ್ರಗಳು ಕೂಡ ತಿಳಿಸುವುದು ಏನು ಅಂದರೆ ಪುಣ್ಯ ಕ್ಷೇತ್ರಗಳಿಗೆ ಹೋದಾಗ ನಾವು ದೇವರ ದರ್ಶನವನ್ನು ಪಡೆದುಕೊಳ್ಳುವುದಕ್ಕಿಂತ ಮುನ್ನ ದೇವರ ಸನ್ನಿಧಿಯಲ್ಲಿ ಇರುವಂತಹ ಪುಣ್ಯತೀರ್ಥದಲ್ಲಿ ಒಮ್ಮೆ ಮಿಂದು ಆ ಒಂದು ನೀರನ್ನು ನಮ್ಮ ಮೇಲೆ ಪ್ರೋಕ್ಷಣೆ ಮಾಡಿಕೊಂಡು ನಂತರ ದೇವರ ದರ್ಶನವನ್ನು ಪಡೆದುಕೊಳ್ಳುವುದು ಒಳ್ಳೆಯದು ಶ್ರೇಷ್ಠ ಅಂತ ಹೇಳ್ತಾರೆ.
ಎಷ್ಟೋ ಜನರಿಗೆ ಈ ಒಂದು ವಿಚಾರ ತಿಳಿದಿರುವುದಿಲ್ಲ ಪುಣ್ಯ ಕ್ಷೇತ್ರಕ್ಕೆ ಹೋದಾಗ ನಾವು ಮೊದಲು ಪುಣ್ಯ ತೀರ್ಥದಿಂದ ಸ್ನಾನ ಮಾಡಿ ಪುಣ್ಯ ತೀರ್ಥವನ್ನು ಪ್ರೋಕ್ಷಣೆ ಮಾಡಿದ ನಂತರ ದೇವರ ದರ್ಶನವನ್ನು ಪಡೆದುಕೊಳ್ಳಬೇಕು. ಇದರಿಂದ ನಮಗೆ ಒಳಿತಾಗುತ್ತದೆ ಅಂತ ಹೇಳಲಾಗುತ್ತದೆ.
ನಮ್ಮ ಪಾಪ ಕರ್ಮಗಳೆಲ್ಲ ತೊಳೆದು ನಂತರ ನಾವು ದೇವರ ದರ್ಶನವನ್ನು ಪಡೆದುಕೊಂಡರೆ ಒಂದು ದರ್ಶನ ಶ್ರೇಷ್ಠವಾಗಿರುತ್ತದೆ ದೇವರ ಅನುಗ್ರಹವನ್ನು ಕೂಡ ಪಡೆದುಕೊಳ್ಳಬಹುದು.ಅನೇಕರಿಗೆ ಗೊಂದಲ ಇರುತ್ತದೆ ದೇವಸ್ಥಾನಗಳಿಂದ ಬರುವಾಗ ಅಥವಾ ಪುಣ್ಯ ಕ್ಷೇತ್ರಗಳಿಂದ ಹಿಂದಿರುಗುವಾಗ ಮನೆಗೆ ನೇರವಾಗಿ ಹೋಗಬೇಕಾ ಅಥವಾ ಆಪ್ತರ ಮನೆಗೆ ಭೇಟಿ ನೀಡಿ ಬರುವುದರಿಂದ ಯಾವುದಾದರೂ ತೊಂದರೆ ಇದೆಯಾ ಅಂತ ಆದರೆ
ಈ ರೀತಿ ಅವತ್ತಿಗೂ ಮಾಡಬೇಡಿ ಪುಣ್ಯ ಕ್ಷೇತ್ರದಿಂದ ಹಿಂದಿರುಗುವಾಗ ಅಥವಾ ದೇವಸ್ಥಾನಗಳಿಂದ ಹಿಂದಿರುಗುವಾಗ ನೀವು ನೇರವಾಗಿ ಮನೆಗೆ ಬನ್ನಿ ಮನೆಗೆ ಬಂದ ನಂತರ ಕೂಡಲೆ ಕೈ ಕಾಲುಗಳನ್ನು ಸ್ವಚ್ಛ ಪಡಿಸಿಕೊಳ್ಳಬಾರದು ಮುಖವನ್ನು ತೊಳೆಯಬಾರದು ಕೆಲವರು ಈ ರೀತಿ ಮಾಡ್ತಾ ಇರ್ತಾರೆ.ನಾವು ಪುಣ್ಯ ಕ್ಷೇತ್ರದಿಂದ ಅಥವಾ ದೇವರ ಆಲಯದಿಂದ ಮನೆಗೆ ಬಂದಾಗ ಮನೆಯೆಲ್ಲ ಮೊದಲು ಓಡಾಡಬೇಕು. ನಂತರ ಐದು ನಿಮಿಷಗಳ ಕಾಲ ಕುಳಿತಿರಬೇಕು.
ನಾವು ಮುಖ ಕೈಕಾಲುಗಳನ್ನು ಸ್ವಚ್ಛ ಪಡಿಸಿಕೊಳ್ಳುವುದರಿಂದ ದೇವರು ನಮಗೆ ಏನು ಒಂದು ಅನುಗ್ರಹ ಮಾಡಿರುತ್ತಾರೆ ಆ ಒಂದು ಅನುಗ್ರಹವನ್ನು ಮತ್ತು ನಾವು ದೇವಸ್ಥಾನಕ್ಕೆ ಹೋದಾಗ ನಮ್ಮಲ್ಲಿ ಏನು ಸಾತ್ವಿಕ ಮನೋಭಾವವನ್ನು ಸಕಾರಾತ್ಮಕ ಶಕ್ತಿಯನ್ನು ಚಿಂತನೆಗಳನ್ನು ತುಂಬಿಸಿಕೊಂಡು ಬಂದಿರುತ್ತೆವೆ ಅದನ್ನೂ ಮನೆಯಲ್ಲಿಯೂ ಕೂಡ ನಾವು ನಮ್ಮ ಮೂಲಕ ಮನೆಗೆ ಪಸರಿಸುವ ಹಾಗೆ ಮಾಡಬೇಕು. ಆದ ಕಾರಣ ಕೈಕಾಲುಗಳನ್ನು ಸ್ವಚ್ಛ ಪಡಿಸದೆ ಮೊದಲು ಮನೆಯನ್ನು ಒಂದು ಸುತ್ತು ಬಂದು ನಂತರ ಸ್ವಚ್ಛವಾಗುವುದು ಒಳ್ಳೆಯದು ಅಂತ ಶಾಸ್ತ್ರಗಳು ಹೇಳುತ್ತವೆ.