Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ದೇವಸ್ಥಾನಕ್ಕೆ ಹೋಗಿ ಮನೆಗೆ ಬಂದು ಕಾಲು ತೊಳೆದರೆ ಏನಾಗುತ್ತೆ ಗೊತ್ತ !!!

ದೇವಸ್ಥಾನಗಳಿಗೆ ನಾವು ಹೋಗುವುದು ಪುಣ್ಯ ಸಂಪಾದನೆಗಾಗಿ ಹಾಗೂ ನಮ್ಮ ಪಾಪಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಹಾಗೆ ದೇವರ ದರ್ಶನ ಪಡೆದು ಮನಸ್ಸಿಗೆ ಶಾಂತಿ ಪಡೆದುಕೊಳ್ಳುವುದಕ್ಕಾಗಿ ಹಾಗೂ ದೇವರಿಂದ ನಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವುದಕ್ಕಾಗಿ ವರವನ್ನು ಪಡೆದುಕೊಳ್ಳುವುದಕ್ಕಾಗಿ ಹಾಗಾಗಿ ದೇವಸ್ಥಾನಗಳಿಗೆ ಹೋದಾಗ ಅಥವಾ ಮನೆಯ ದೇವರ ದೇವಸ್ಥಾನಕ್ಕೆ ಪುಣ್ಯಕ್ಷೇತ್ರಗಳಿಗೆ ದೇವರ ಸನ್ನಿಧಿಗೆ ಹೋದಾಗ ಕೆಲವರು ಈ ತಪ್ಪುಗಳನ್ನು ಮಾಡುತ್ತಾ ಇರುತ್ತಾರೆ.

ತಿಳಿದೋ ತಿಳಿಯದೆಯೋ ಮಾಡುವ ತಪ್ಪಿನಿಂದ ನಿಮಗೆ ಸೇರಬೇಕಾದ ಪುಣ್ಯವು ನಿಮ್ಮನ್ನು ಸೇರುತ್ತಾ ಇಲ್ಲ ಇದರಿಂದಾಗಿಯೇ ಎಷ್ಟೋ ಜನರಿಗೆ ದೇವಸ್ಥಾನಗಳಿಗೆ ಪುಣ್ಯಕ್ಷೇತ್ರಗಳಿಗೆ ಹೋಗಿ ಬಂದರೂ ಸಹ ಪುಣ್ಯಫಲ ದೊರೆತಿರುವುದಿಲ್ಲ.ಹೆಚ್ಚಿನ ಜನರು ಮಾಡುವ ತಪ್ಪುಗಳು ಅಂದರೆ ಪುಣ್ಯಕ್ಷೇತ್ರಗಳಿಗೆ ಅಂದರೆ ಸಾಮಾನ್ಯವಾಗಿ ದೂರದ ಊರುಗಳಿಗೆ ಹೋಗುತ್ತಾರೆ ದೂರದ ಊರುಗಳಿಗೆ ಹೋಗಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಮತ್ತೆ ಅಲ್ಲಿಯೇ ಹತ್ತಿರದಲ್ಲಿ ಇರುವ ನೆಂಟರಿಷ್ಟರ ಮನೆಗೆ ಭೇಟಿ ನೀಡಿ ಬರುತ್ತಾರೆ

ಮತ್ತು ಪರಿಚಯಸ್ಥರು ಕಾಫಿಗೆ ಕರೆದರು ಅಥವಾ ಇನ್ಯಾವುದಾದರೂ ಕೆಲಸಕ್ಕೆಂದು ಕರೆದರು ಅಂತ ನೇರವಾಗಿ ಪುಣ್ಯಕ್ಷೇತ್ರದಿಂದ ಅಥವಾ ದೇವರ ಸನ್ನಿಧಿಯಿಂದ ಅಂಥವರ ಮನೆಗೆ ಹೋಗಿ ಬಿಡುತ್ತೇವೆ ಆದರೆ ನಾವು ಮಾಡುತ್ತಿರುವ ತಪ್ಪು ಇಲ್ಲಿಯೇ ನಾವು ದೇವಸ್ಥಾನಕ್ಕೆ ಹೋದಾಗ ದೇವರಿಂದ ವರವನ್ನು ಪಡೆದುಕೊಂಡಿರುತ್ತೇವೆ. ದೇವಸ್ಥಾನಕ್ಕೆ ಹೋದಾಗ ಒಂದಿಷ್ಟು ಪುಣ್ಯ ಎಂಬುದು ನಮಗೆ ಲಭಿಸಿರುತ್ತದೆ. ಆ ಪುಣ್ಯದ ಭಾರವನ್ನು ನಾವು ಹೊತ್ತಿರುತ್ತೇವೆ ಅದೇ ಸಮಯದಲ್ಲಿ ನೀವು ನೇರವಾಗಿ ನಿಮ್ಮ ಪರಿಚಯಸ್ಥರ ಮನೆಗೆ ಅಥವಾ ಕುಟುಂಬಸ್ಥರ ಮನೆಗೆ ಹೋಗಿ ಬಂದರೆ, ಆ ಪುಣ್ಯದ ಭಾರ ನಿಮಗೆ ಸೇರುವುದರ ಬದಲು ನೇರವಾಗಿ ನೀವು ಹೋದ ಮನೆಗೆ ಲಭಿಸುತ್ತದೆ.

ಆದ್ದರಿಂದ ಗ್ರಂಥಗಳು ಶಾಸ್ತ್ರಗಳು ಧಾರ್ಮಿಕ ವಿಚಾರಗಳು ತಿಳಿಸುವುದು ಇವುಗಳನ್ನೇ ನೀವು ಪುಣ್ಯಕ್ಷೇತ್ರಗಳಿಗೆ ದೇವರ ಸನ್ನಿಧಿಗೆ ಮನೆದೇವರಿಗೆ ಹೋಗಿ ಬಂದಾಗ ನೇರವಾಗಿ ನಿಮ್ಮ ಮನೆಗೆ ಮೊದಲು ಹೋಗಿ ಸ್ವಲ್ಪ ಸಮಯ ಮನೆಯಲ್ಲಿ ಕುಳಿತು ಮನೆಯ ಎಲ್ಲ ಕೋಣೆಗಳಿಗೂ ಹೋಗಿ ಬಂದು ನಂತರ ನೀವು ಮುಂದಿನ ಕೆಲಸ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಕೆಲವರು ಈ ತಪ್ಪನ್ನು ಮಾಡುತ್ತಾ ಇರುತ್ತಾರೆ. ಸಾಮಾನ್ಯವಾಗಿ ಆಚೆ ಹೋಗಿ ಬಂದವರ ಹಾಗೆ ದೇವಸ್ಥಾನಕ್ಕೆ ಹೋಗಿ ಬಂದ ಕೂಡಲೇ ಕೈಕಾಲುಗಳ ಸ್ವಾಧೀನ ಪಡಿಸಿಕೊಂಡು ಬಿಡುತ್ತಾರೆ.

ಈ ರೀತಿ ಮಾಡುವುದರಿಂದ ನಿಮಗೆ ಯಾವ ಪುಣ್ಯವು ಲಭಿಸುವುದಿಲ್ಲ ನೀವು ಪಡೆದ ಪುಣ್ಯವೆಲ್ಲ ನೀರಿನ ಮೂಲಕ ಆಚೆ ಹೋಗಿ ಬಿಡುತ್ತದೆ ಆದ್ದರಿಂದ ಪುಣ್ಯ ಕ್ಷೇತ್ರಗಳಿಗೆ ಹೋದಾಗ ನಿಮಗೆ ಲಭಿಸಿದಂತಹ ಪುಣ್ಯ ನಿಮ್ಮದಾಗಬೇಕೆಂದರೆ ನೇರವಾಗಿ ಮನೆಗೆ ಹೋಗಬೇಕು ಮನೆಯಲ್ಲಿ ಸ್ವಲ್ಪ ಸಮಯ ಕುಳಿತು ನಂತರ ನಿಮ್ಮ ಮುಂದಿನ ಕೆಲಸ ಕಾರ್ಯಗಳನ್ನು ಕೈಗೊಳ್ಳಬೇಕು ಆಗಲೇ ನಿಮಗೆ ಪುಣ್ಯ ಕ್ಷೇತ್ರಕ್ಕೆ ಹೋಗಿ ಬಂದ ಫಲ ದೊರೆಯುವುದು.

ಇನ್ನು ಪುಣ್ಯ ಕ್ಷೇತ್ರಗಳಿಂದ ತಂದ ಪ್ರಸಾದವನ್ನು ಕೂಡ ತಂದ ದಿವಸವೇ ಎಲ್ಲರಿಗೂ ಹಂಚುವುದು ಬೇಡ ನಿಮ್ಮ ಮನೆಯಲ್ಲಿ ಒಂದು ದಿನ ಇರಿಸಿ ನಂತರ ಮಾರನೇ ದಿವಸ ಎಲ್ಲರಿಗೂ ಹಂಚಿ ಆ ಪ್ರಸಾದವನ್ನು ನೀವು ಸೇವಿಸುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ. ಇನ್ನೂ ಕಾಶಿಯಂತಹ ಪುಣ್ಯ ಕ್ಷೇತ್ರಕ್ಕೆ ಹೋದಾಗ ಕೆಲವರು ನಿಮ್ಮ ಕಾಲುಗಳನ್ನು ಸ್ಪರ್ಶ ಮಾಡಿ ಆಶೀರ್ವಾದವನ್ನು ಪಡೆಯುತ್ತಾರೆ. ಈ ತಪ್ಪನ್ನು ಕೂಡ ಮಾಡಬಾರದು ನೀವು ಇಂತಹ ಪುಣ್ಯ ಸ್ಥಳಗಳಿಗೆ ಹೋಗಿ ಬಂದಾಗ ಮೊದಲು ಮನೆಗೆ ಹೋಗಿ ನಂತರ ಇಂತಹ ಕೆಲಸಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ

ಯಾಕೆಂದರೆ ಹಿರಿಯರುಗಳು ಕಾಶಿಗೆ ಅಥವಾ ಪುಣ್ಯಕ್ಷೇತ್ರಗಳಿಗೆ ಹೋಗಿ ಬಂದಾಗ ಅವರ ಆಶೀರ್ವಾದವನ್ನು ಪಡೆದು ಕೊಳ್ಳಲು ಬರುತ್ತಾರೆ. ಆಗ ನೀರ ಆಶೀರ್ವಾದ ಮಾಡುವುದರ ಬದಲು ನಿಮ್ಮ ಮನೆಗೆ ಹೋಗಿ ಸ್ವಲ್ಪ ಸಮಯ ಕುಳಿತು ಅಥವಾ ಆಶೀರ್ವಾದ ಪಡೆದು ಕೊಳ್ಳಲು ಬಂದವರಿಗೆ ಸ್ವಲ್ಪ ಸಮಯ ಕುಳಿತಿರಲು ಹೇಳಿ ನಿಮ್ಮ ಮನೆಗೆ ಹೋಗಿ ನಂತರ ಬಂದು ಅವರಿಗೆ ಆಶೀರ್ವಾದ ನೀಡುವುದು ಒಳ್ಳೆಯದು.

Leave a Reply

Your email address will not be published. Required fields are marked *