ದೇವರ ಪೂಜೆ ಮಾಡುವಾಗ ತೆಂಗಿನಕಾಯಿಯನ್ನು ಅರ್ಪಿಸುವುದು ನಮ್ಮ ವಾಡಿಕೆಯಾಗಿದೆ ಈ ಒಂದು ವಾಡಿಕೆಗೆ ಇಂತಿಷ್ಟೇ ಇತಿಹಾಸ ಇದೆ ಅಂತ ಹೇಳಲು ಅಸಾಧ್ಯ ಅಂದಿನಿಂದಲೂ ನಮ್ಮ ಪೂರ್ವಜರು ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸುವ ಸಂಪ್ರದಾಯವನ್ನು ರೂಢಿ ಮಾಡಿಕೊಂಡು ಬಂದಿದ್ದು ದೇವರ ಪೂಜೆಯೂ ಸಂಪೂರ್ಣವಾಗಬೇಕಾದರೆ ಕೊನೆಯಲ್ಲಿ ತೆಂಗಿನಕಾಯಿಯನ್ನು ಒಡೆದು ದೇವರಿಗೆ ಈ ಕಾಯಿಯನ್ನು ಸಮರ್ಪಿಸಿದ ನಂತರವೇ ಪೂಜೆ ಪರಿಪೂರ್ಣವಾಗುತ್ತದೆ ಎಂಬ ನಂಬಿಕೆಯಿದೆ.ಹಾಗಾದರೆ ದೇವರ ಪೂಜೆಯಲ್ಲಿ ದೇವರಿಗಾಗಿ ಅರ್ಪಿಸುವಂತಹ ತೆಂಗಿನಕಾಯಿ ಕೆಟ್ಟಿದ್ದರೆ ಅದರ ಅರ್ಥವೇನು ಎಂಬುದನ್ನು ತಿಳಿಯುವ ಬನ್ನಿ ಇಂದಿನ ಈ ಮಾಹಿತಿಯಲ್ಲಿ.
ಕೆಲವರು ಹೇಳ್ತಾರೆ ಪೂಜೆಯಲ್ಲಿ ತೆಂಗಿನಕಾಯಿ ಕೆಟ್ಟಿದ್ದರೆ ಅದು ಅಶುಭದ ಸಂಕೇತ ಕೆಟ್ಟದಾಗುತ್ತದೆ ಮನೆಗೆ ಏನಾದರೂ ಕೆಟ್ಟದ್ದು ಸಂಭವಿಸುವ ಸೂಚನೆ ಇದಾಗಿರುತ್ತದೆ ಅಂತ ಆದರೆ ಇಂತಹ ಮಾತುಗಳಿಗೆ ಕಿವಿಗೊಡಬೇಡಿ ಯಾಕೆ ಅಂದರೆ ಇದನ್ನು ನಾವು ವೈಜ್ಞಾನಿಕವಾಗಿಯೂ ಯೋಚನೆ ಮಾಡುವುದಾದರೆ, ಇದರಲ್ಲಿ ಯಾವುದೇ ವಿಚಾರಗಳು ಆಡಗಿರುವುದಿಲ್ಲ. ಇದಕ್ಕೆ ವೈಜ್ಞಾನಿಕವಾಗಿ ಇರುವ ಆಧ್ಯಾತ್ಮಿಕವಾಗಿಯೂ ಹಿನ್ನೆಲೆ ಕೂಡ ನೀಡಿಲ್ಲ,ಹಾಗೆ ತೆಂಗಿನ ಕಾಯಿ ಕೆಟ್ಟಿದ್ದರೆ ಅದು ಅದರ ಸ್ವಾಭಾವಿಕ ಗುಣವಾಗಿರುತ್ತದೆ ಅದನ್ನು ಪೂಜೆಗೆ ಸಮರ್ಪಿಸಿದಾಗ ಅದರಿಂದ ಯಾವುದೇ ರೀತಿಯ ಅವಘಡಗಳು ಅಪಘಾತವೆ ಆಗಲಿ ಜರುಗುವುದಿಲ್ಲ.
ತೆಂಗಿನ ಕಾಯಿಯನ್ನು ದೇವರಿಗೆ ಸಮರ್ಪಿಸಿ ವುದಕ್ಕಿಂತ ಮೊದಲು ಅದನ್ನು ಪರಿಪೂರ್ಣವಾಗಿ ಸಮರ್ಥಿಸುತ್ತವೆ ಅದರಿಂದ ದೇವರ ಪೂಜೆಗಾಗಿ ಅರ್ಪಿಸಿದ ತೆಂಗಿನಕಾಯಿ ಕೆಟ್ಟಿದೆಯೋ ಚೆನ್ನಾಗಿದೆಯೊ ತಿಳಿದಿರುವುದಿಲ್ಲ ಆದ ಕಾರಣ ಇದರಲ್ಲಿ ಭಕ್ತಾದಿಗಳ ಯಾವುದೇ ತಪ್ಪು ಇರುವುದಿಲ್ಲ, ಇದರಿಂದ ಆತನ ವೈಯಕ್ತಿಕ ಜೀವನದ ಮೇಲೆಯಾಗಲಿ ಅವನ ಜೀವನದ ಮೇಲೆ ಆಗಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳಾಗಲಿ ಕೆಟ್ಟದಾಗಲಿ ಆಗುವುದಿಲ್ಲ.ಇನ್ನೂ ಹೇಳಬೇಕೆಂದರೆ ಪೂಜೆಯಲ್ಲಿ ತೆಂಗಿನಕಾಯಿ ಕೆಟ್ಟಿದ್ದರೆ ಅದರಲ್ಲಿಯೂ ದೇವಸ್ಥಾನಗಳಿಗೆ ನೀಡಿದಂತಹ ದೇವರಿಗೆ ಸಮರ್ಪಿಸುವ ಈ ತೆಂಗಿನಕಾಯಿ ಕೆಟ್ಟಿದ್ದರೆ ಒಂದು ತೆಂಗಿನ ಕಾಯಿಯ ಮತ್ತೊಮ್ಮೆ ಸ್ವಚ್ಛ ಪಡಿಸಿ ಬೇರೆ ತೆಂಗಿನ ಕಾಯಿಯನ್ನು ದೇವರಿಗೆ ಸಮರ್ಪಿಸಲಾಗುತ್ತದೆ.
ಹೀಗಿರುವಾಗ ನಮ್ಮ ಸಂಪ್ರದಾಯಗಳು ಕೂಡ ಹೇಳುವ ಹಾಗೆ ಪೂಜೆಯ ಸಮಯದಲ್ಲಿ ತೆಂಗಿನಕಾಯಿ ಕೆಟ್ಟರೆ ಯಾವುದೇ ಅಶುಭವಲ್ಲ ಅದು ಶುಭದ ಸಂಕೇತವೇ ಆಗಿರುತ್ತದೆ ಯಾಕೆ ಎಂದರೆ ಈ ರೀತಿ ಪೂಜೆಯ ಸಮಯದಲ್ಲಿ ತೆಂಗಿನಕಾಯಿ ಕೆಟ್ಟಿದ್ದರೆ ಮುಂದೆ ನಡೆಯುವಂತಹ ಯಾವುದಾದರೂ ಅಶುಭವು ಇಂದೆ ಈ ರೂಪದಲ್ಲಿ ನಿವಾರಣೆಯಾಯಿತು ಎಂಬುದರ ಅರ್ಥ ಇದಾಗಿರುತ್ತದೆ.ಹಾಗಾಗಿ ಈ ತೆಂಗಿನಕಾಯಿ ಕೆಟ್ಟಾಗ ಮನೆಯಲ್ಲಿಯೇ ಆಗಲಿ ದೇವಸ್ಥಾನಗಳಲ್ಲಿ ಆಗಿರಲಿ ಅದಕ್ಕೆ ಯಾವುದೇ ಪರಿಹಾರಗಳು ಬೇಕಾಗಿರುವುದಿಲ್ಲ ಪೂಜೆ ಮಾಡುವಾಗ ತೆಂಗಿನಕಾಯಿ ಕೆಟ್ಟಿದ್ದರೆ ಕೈಕಾಲುಗಳನ್ನು ಮತ್ತೊಮ್ಮೆ ಸ್ವಚ್ಛ ಪಡಿಸಿ ದೇವರ ಪೂಜೆ ಮಾಡುವುದು ಒಳ್ಳೆಯದು
ಇದಕ್ಕಾಗಿ ಯಾವುದೇ ಚಿಂತೆ ಪಡುವುದು ಗಾಬರಿಯಾಗುವುದು ಬೇಡ. ವಾಹನಗಳಿಗೆ ಪೂಜೆ ಮಾಡುವಾಗ ತೆಂಗಿನಕಾಯಿ ಕೆಟ್ಟಿದ್ದರೆ ವಾಹನಗಳಿಗೆ ಆಗಿದ್ದಂತಹ ಕೆಟ್ಟ ದೃಷ್ಟಿ ನಿವಾರಣೆಯಾಯಿತು ಎಂಬುದರ ಸೂಚನೆ ಇದಾಗಿರುತ್ತದೆ ಅಂತೆ.ಹಾಗಾದರೆ ಈ ದಿನ ತಿಳಿಸಿದಂತಹ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಸನಾತನ ಸಂಸ್ಕೃತಿ ಆಚಾರ ವಿಚಾರಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ. ಮಾಹಿತಿಯನ್ನು ನೀವು ಕೂಡ ತಿಳಿದು ಬೇರೆಯವರಿಗೂ ಕೂಡ ಶೇರ್ ಮಾಡಿ ಧನ್ಯವಾದ ಶುಭ ದಿನ.