Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ದಿನದ ಈ ಒಂದು ಸಮಯದಲ್ಲಿ ಏನೇ ನುಡಿದರು ಅದು ನಿಮ್ಮ ಜೀವನದಲ್ಲಿ ನೆರವೇರುತ್ತದೆ !!!!

ಸಾಮಾನ್ಯವಾಗಿ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆಸುವಾಗ ಅಥವಾ ಯಾವುದೇ ಒಂದು ಒಳ್ಳೆಯ ವಿಚಾರದ ಬಗ್ಗೆ ಮಾತನಾಡುವಂತಹ ಸಮಯದಲ್ಲಿ ಒಳ್ಳೆಯ ಕಾಲವನ್ನು ನೋಡೋದನ್ನು ನೀವು ಗಮನಿಸಿರುತ್ತೀರಿ ಅಲ್ವಾ

ಅದೇ ರೀತಿಯಲ್ಲಿ ಇಂತಹ ಪ್ರತ್ಯೇಕವಾದ ಸಮಯದಲ್ಲಿ ನಾವು ಇಂತಹ ಕೆಲಸಗಳನ್ನು ಮಾಡಬೇಕು ಮತ್ತು ಪ್ರತ್ಯೇಕವಾದ ಸಮಯದಲ್ಲಿ ನಾವು ಅಂದುಕೊಂಡಿದ್ದು ನೆರವೇರುತ್ತದೆ ಈ ವಿಚಾರದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ.

ಹೌದು ಶಾಸ್ತ್ರಗಳ ಪ್ರಕಾರ ಈ ಒಂದು ಸಮಯದಲ್ಲಿ ನೀವು ಏನೆ ಅಂದುಕೊಂಡರೂ, ಅದು ನಿಜವಾಗುತ್ತದೆ ಫಲಕೊಡುತ್ತದೆ ಅಂತ ಹೇಳ್ತಾರೆ. ಹಾಗಾದರೆ ಆ ಒಂದು ಸಮಯ ಯಾವುದು ಅಂತ ಹೇಳ್ತೀವಿ ಈ ಮಾಹಿತಿ ಆನ್ನು ತಪ್ಪದೆ ಸಂಪೂರ್ಣವಾಗಿ ತಿಳಿಯಿರಿ.

ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಶಾಸ್ತ್ರಗಳ ಪ್ರಕಾರ ಯಮಗಂಡ ಕಾಲ ಗುಳಿಕ ಕಾಲ ಮತ್ತು ಒಳ್ಳೆಯ ಕಾಲ ಅಂತ ವಿಂಗಡಣೆ ಮಾಡಲಾಗಿರುತ್ತದೆ ಸಾಮಾನ್ಯವಾಗಿ ಒಳ್ಳೆಯ ಶುಭ ಕಾರ್ಯಗಳನ್ನು ಶುಭ ಸುದ್ದಿ ಮಾತನಾಡುವಂತಹ ಸಮಯವನ್ನು ಯಮಗಂಡ ಕಾಲದಲ್ಲಿ ಮಾಡುವುದಿಲ್ಲ ಮತ್ತು ಕೆಲವೊಂದು ವಿಚಾರಗಳನ್ನು ಮಾತನಾಡುವುದು ಎಲ್ಲ ಕೂಡ.

ಮನೆಯಲ್ಲಿ ಹಿರಿಯರಿದ್ದರೆ ನಿಮಗೆ ತಿಳಿಯುತ್ತದೆ ಯಾವಾಗಲೂ ಕೆಟ್ಟ ಮಾತುಗಳನ್ನು ಕೆಟ್ಟ ಯೋಚನೆಗಳನ್ನು ಮಾಡ್ತಾ ಇದ್ರೆ ಅಂತಹ ಯೋಚನೆಗಳನ್ನು ಮಾಡಬೇಡಿ ಅಥವಾ ಸೂರ್ಯಾಸ್ತದ ಬಳಿಕ ಕೆಲವೊಂದು ಮಾತುಗಳನ್ನಾಡಿದರೆ ಕೆಲವು ಯೋಜನೆಗಳನ್ನು ಮಾಡಿದರೆ ಅಂತಹ ಯೋಚನೆಗಳನ್ನು ಮಾಡಬಾರದು ಅಂತ ಕೂಡ ಬುದ್ಧಿ ಹೇಳುವುದನ್ನು ಕೇಳಿರುತ್ತೀರಿ ಅಲ್ವಾ ಅದೇ ರೀತಿಯಲ್ಲಿ ನೀವು ಅಶ್ವಿನಿ ದೇವತೆಗಳು ಅಸ್ತು ದೇವತೆಗಳು ಅನ್ನೋ ಹೆಸರನ್ನ ಕೂಡ ಕೇಳಿರುತ್ತೀರ.

ಸಂಜೆ ಸಮಯದಲ್ಲಿ ಈ ಅಶ್ವಿನಿ ದೇವತೆಗಳು ಲೋಕ ಸಂಚಾರ ಮಾಡ್ತಾ ಇರ್ತಾರಂತೆ ಯಾರು ಯಾವ ವಿಚಾರಗಳನ್ನು ಮಾತಾಡ್ತಾ ಇರ್ತಾರೆ ಆ ವಿಚಾರಗಳು ನಿಜವಾಗುವ ಸಾಧ್ಯತೆ ಇರುತ್ತದೆ

ಅಂತ ನಮ್ಮ ಹಿರಿಯರು ನಂಬುತ್ತಿದ್ದರು ಆದ ಕಾರಣವೇ ಸಂಜೆಯ ಸಮಯದಲ್ಲಿ ಅಂದರೆ ಸೂರ್ಯಾಸ್ತದ ಬಳಿಕ ಮನೆಯಲ್ಲಿ ನಾಮಸ್ಮರಣೆ ಮಾಡಬೇಕು ಒಳ್ಳೆಯ ಮಾತುಗಳನ್ನು ಆಡಬೇಕು ಒಳ್ಳೆಯದನ್ನೇ ಯೋಚನೆ ಮಾಡ್ಬೇಕು ಅಂತ ಹೇಳಲಾಗುತ್ತದೆ.

ಹಾಗಾದರೆ ಶಾಸ್ತ್ರಗಳು ಹೇಳುವ ಪ್ರಕಾರ ನಾವು ಅಂದುಕೊಂಡಂತಹ ವಿಚಾರಗಳು ಯಾವಾಗ ನಿಜವಾಗುತ್ತದೆ ಅಂತ ಹೇಳುವುದಾದರೆ ನಾವು ಅಂದುಕೊಂಡಂತಹ ವಿಚಾರಗಳು ನಿಜವಾಗುತ್ತದೆ ಅಂತೆ,

ಯಾವಾಗ ಅಂದರೆ ರಾತ್ರಿ ಸಮಯ ಮೂರು ರಿಂದ ಮೂರು ಹತ್ತು ಅಂದರೆ ಮೂರು ಗಂಟೆ ಹತ್ತು ನಿಮಿಷಗಳ ವರೆಗೂ ನಾವು ಏನನ್ನು ಅಂದುಕೊಳ್ತೇವೊ, ಆ ವಿಚಾರಗಳು ನಿಜವಾಗುತ್ತದೆ ಅಂತ ಶಾಸ್ತ್ರಗಳು ಹೇಳುತ್ತವೆ.

ನಾವು ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯರ ಒಂದು ಸಮಯದ ವ್ಯವಸ್ಥೆಯನ್ನು ಬಳಸುತ್ತೇವೆ. ಆದರೆ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಈ ಒಂದು ಮೂರು ಗಂಟೆ ಅನ್ನು ರಾತ್ರಿ ಅಂತಾನೇ ಪರಿಗಣಿಸಲಾಗುತ್ತದೆ ಆದರೆ ಪಾಶ್ಚಾತ್ಯರ ಸಮಯದ ವ್ಯವಸ್ಥೆ ಪ್ರಕಾರ ಈ ಮೂರು ಗಂಟೆ ಅಂದರೆ ಬೆಳಗಿನ ಮೂರು ಗಂಟೆಯ ಸಮಯ ಆಗಿರುತ್ತದೆ.

ಹಾಗಾದರೆ ನಾವು ತಿಳಿಸಿದಂತಹ ಈ ಒಂದು ಮಾಹಿತಿಯಲ್ಲಿ ನಿಮಗೆ ತಿಳಿಸಿದ ವಿಚಾರ ಉಪಯುಕ್ತವಾಗಿದೆ ಅಂತ ನಾನು ಭಾವಿಸುತ್ತೇವೆ. ನಿಮಗೂ ಕೂಡ ಮಾಹಿತಿ ಉಪಯುಕ್ತವಾಗಿದ್ದಲ್ಲಿ.

ನೀವು ಕೂಡ ಶಾಸ್ತ್ರಗಳನ್ನು ಸಂಪ್ರದಾಯಗಳನ್ನು ನಂಬುವುದಾದರೆ, ಮಾಹಿತಿಗೆ ತಪ್ಪದೇ ಲೈಕ್ ಮಾಡಿ ಹಾಗೂ ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಶುಭ ದಿನ ಎಲ್ಲರಿಗೂ ಒಳ್ಳೆಯದಾಗಲಿ ಧನ್ಯವಾದಗಳು.

Originally posted on December 27, 2020 @ 4:15 pm

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ