Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವು ತುಂಬಾ ತೆಳ್ಳಗೆ ಇದ್ದರೆ ಸ್ವಲ್ಪ ದಪ್ಪ ಆಗಬೇಕು ಅನ್ನುವವರು ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಿ ಎಷ್ಟೇ ತೆಳ್ಳ ಇದ್ದರೂ ಕೂಡ ಒಂದೇ ವಾರದಲ್ಲಿ ದಪ್ಪ ಆಗುತ್ತೀರಾ !!!!

ನೀವು ತುಂಬಾನೇ ತೆಳ್ಳಗಿದ್ದೆ ಹಾಗಾದರೆ ನೈಸರ್ಗಿಕವಾಗಿ ನೀವು ನಿಮ್ಮ ತೂಕವನ್ನು ಹೆಚ್ಚಿಸಿಕೊಳ್ಳಬೇಕು ಅಂತಿದ್ದೀರಾ ನಾವು ಹೇಳುವ ಈ ಪರಿಹಾರವನ್ನು ನೀವು ಮಾಡಿ ಹೌದು ಇದಕ್ಕಾಗಿ ನೀವು ಯಾವುದೇ ಪೌಡರ್ಗಳನ್ನು ಅಥವಾ ಮಾತ್ರೆಗಳನ್ನು ನುಂಗುವ ಅವಶ್ಯಕತೆ ಇಲ್ಲ

ಕೇವಲ ಒಣ ಹಣ್ಣುಗಳನ್ನು ಸೇವಿಸಿ ನೀವು ನಿಮ್ಮ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಹೌದು ಸಾಕಷ್ಟು ಮಾಹಿತಿಯಲ್ಲಿ ನಾವು ತಿಳಿಸಿಕೊಟ್ಟಿದ್ದಾರೆ ಈ ಒಣ ಹಣ್ಣುಗಳನ್ನು ಸೇವಿಸುವ ಮುಖಾಂತರ ತೆಳ್ಳಗಾಗಬಹುದು ಅಥವಾ ತೂಕವನ್ನು ಹೆಚ್ಚಿಸಿಕೊಳ್ಳಬಹುದು ಕೂಡ.

ಹಾಗಾದರೆ ಈ ಒಣ ಹಣ್ಣಿನಲ್ಲಿ ತೂಕ ಹೆಚ್ಚಿಸಿಕೊಳ್ಳುವುದಕ್ಕಾಗಿ ಸೇವಿಸ ಬೇಕಾಗಿರುವಂತಹ ಪದಾರ್ಥವು ಯಾವುದು ಅಂದರೆ ಒಣ ದ್ರಾಕ್ಷಿ. ದ್ರಾಕ್ಷಿಗಳನ್ನು ಒಣಗಿಸಿ ಮಾಡಿರುವಂತಹ ಈ ಒಣ ದ್ರಾಕ್ಷಿ ಅನ್ನು ಪ್ರತಿ ದಿನ ಎಷ್ಟು ಸೇವಿಸ ಬೇಕು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು,

ಯಾವಾಗ ಸೇವಿಸಬೇಕು ಹೇಗೆ ಸೇವಿಸಬೇಕು ಮತ್ತು ಈ ಒಣ ದ್ರಾಕ್ಷಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಆಗುವಂತಹ ಲಾಭಗಳೇನು ಅನ್ನುವುದನ್ನು ತಿಳಿಯೋಣ ಇಂದಿನ ಮಾಹಿತಿಯಲ್ಲಿ.

ಒಣದ್ರಾಕ್ಷಿಯಲ್ಲಿ ಅನೇಕ ಅನೇಕ ಪೋಷಕಾಂಶಗಳಿವೆ ಹಾಗೂ ತೂಕವನ್ನು ಹೆಚ್ಚು ಮಾಡುವಂತಹ ಅಂಶವೂ ಈ ಒಣ ದ್ರಾಕ್ಷಿಯಲ್ಲಿ ಇದೆ,ಈ ಒಣ ದ್ರಾಕ್ಷಿ ಅನ್ನು ಹೇಗೆ ಸೇವಿಸಬೇಕು ಅಂದರೆ,

ರಾತ್ರಿ ಒಂದು ಲೋಟ ನೀರಿಗೆ ಎಂಟರಿಂದ ಹತ್ತು ಒಣದ್ರಾಕ್ಷಿಯನ್ನು ಹಾಕಿ ನೆನೆಸಿಟ್ಟು, ನಂತರ ಈ ಒಣದ್ರಾಕ್ಷಿಯನ್ನು ಸೇವಿಸಬೇಕು ಮೊದಲು ಖಾಲಿ ಹೊಟ್ಟೆಯಲ್ಲಿ ಈ ಒಣದ್ರಾಕ್ಷಿಯನ್ನು ನೆನೆಸಿಟ್ಟ ನೀರನ್ನು ಕುಡಿಯಿರಿ ನಂತರ ದ್ರಾಕ್ಷಿಗಳನ್ನು ಸೇವಿಸಿ.

ಈ ರೀತಿ ನೀವು ಪ್ರತಿದಿನ ತಪ್ಪದೇ ಪಾಲಿಸುತ್ತಾ ಬರುವುದರಿಂದ ನಿಮ್ಮ ತೂಕದಲ್ಲಿ ನೀವು ಹೆಚ್ಚಳವನ್ನು ಕಾಣಬಹುದು ಹಾಗೆ ಈ ಒಂದು ಪರಿಹಾರ ನಿಮಗೆ ಉತ್ತಮ ಆರೋಗ್ಯದೊಂದಿಗೆ ತೂಕವನ್ನು ಹೆಚ್ಚಿಸಿಕೊಳ್ಳಲು ಸಹಕರಿಸುತ್ತದೆ, ಆದರೆ ಬೇರೆ ಚಿಕಿತ್ಸೆಗಳಾದರೆ ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು.

ಈ ಒಣ ದ್ರಾಕ್ಷಿ ಅಲ್ಲಿ ಕ್ಯಾಲ್ಷಿಯಂ ಅಂಶವು ಹೇರಳವಾಗಿದೆ ಆದ ಕಾರಣ ಒಣದ್ರಾಕ್ಷಿಯನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬರುವುದರಿಂದ ದೇಹದಲ್ಲಿ ಕ್ಯಾಲ್ಷಿಯಂ ಅಂಶವು ಹೆಚ್ಚಾಗುತ್ತದೆ

ಇದರ ಜೊತೆಗೆ ನಮಗೆ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಉಂಟಾಗುವುದಿಲ್ಲ ಹಾಗೆ ವಯಸ್ಸಾದ ಕಾಲದಲ್ಲಿ ಅನೇಕ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಬರುವುದಿಲ್ಲ.

ಈ ರೀತಿಯಾಗಿ ಒಣದ್ರಾಕ್ಷಿಯಲ್ಲಿ ಅಡಗಿರುವ ಅನೇಕ ಆರೋಗ್ಯಕರ ಲಾಭಗಳಿಂದ ನಾವು ಪ್ರತಿದಿನ ಈ ಒಣ ದ್ರಾಕ್ಷಿಯನ್ನು ಹಾಗೆ ಸೇರಿಸುವುದಕ್ಕಿಂತ ಇದನ್ನು ರಾತ್ರಿಯೆಲ್ಲ ನೆನೆಸಿಟ್ಟು ಸೇವಿಸುತ್ತಾ ಬಂದರೆ ಒಂದೊಳ್ಳೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು. ಲಿ

ವರ್ ಆರೋಗ್ಯವನ್ನು ಕಾಪಾಡುವುದರಲ್ಲಿ ಹೌದು ಯಕೃತ್ತಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುವ ಅಂಶವೂ ಕೂಡ ಈ ಒಣ ದ್ರಾಕ್ಷಿಯಲ್ಲಿ ಇದೆ, ಲಿವರ್ ಗೆ ಸಂಬಂಧಪಟ್ಟ ಸಮಸ್ಯೆಗಳು ಬರಬಾರದು ಅಂದರೆ ಈ ಒಣದ್ರಾಕ್ಷಿಯನ್ನು ಸೇವಿಸಬಹುದು.

ರಕ್ತಹೀನತೆ ಸಮಸ್ಯೆಯನ್ನು ದೂರ ಮಾಡುತ್ತದೆ ಹೌದು ಇದರಲ್ಲಿ ಇರುವಂತಹ ಐರನ್ ಅಂಶವು ರಕ್ತ ಹೀನತೆ ಸಮಸ್ಯೆಯನ್ನು ಪರಿಹರಿಸುವುದಲ್ಲದೆ, ರಕ್ತ ಶುದ್ಧೀಕರಣದಲ್ಲಿ ಕೂಡ ಒಣದ್ರಾಕ್ಷಿ ಪ್ರಯೋಜನಕಾರಿಯಾಗಿದೆ.

ಒಣದ್ರಾಕ್ಷಿಯಲ್ಲಿ ಕರಗದ ನಾರು ಮತ್ತು ಕರಗುವ ನಾರು ಈ ಎರಡೂ ಕೂಡ ಇದು ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ ಮತ್ತು ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ ಹಾಗೆ ಒಣದ್ರಾಕ್ಷಿಯನ್ನು ಚಿಕ್ಕಮಕ್ಕಳಿಗೂ ಕೂಡ ಪ್ರತಿದಿನ ನಿಯಮಿತವಾಗಿ ಮತ್ತು ಸ್ವಲ್ಪ ಪ್ರಮಾಣದಲ್ಲಿ ನೀಡುತ್ತಾ ಬನ್ನಿ, ಇದರಿಂದ ನಿಜಕ್ಕೂ ನಿಮಗೆ ಮತ್ತು ನಿಮ್ಮ ಮಕ್ಕಳಿಗೂ ಉತ್ತಮ ಆರೋಗ್ಯ ದೊರೆಯುತ್ತದೆ.

Leave a Reply

Your email address will not be published. Required fields are marked *