ನೀವು ಜೀವನದಲ್ಲಿ ಮುಂದೆ ಬರಬೇಕೆಂದರೆ ಈ ವಿಷಯಗಳನ್ನು ಯಾರಿಗೂ ಹೇಳದೆ ನಿಮ್ಮಲ್ಲೇ ಇಟ್ಟುಕೊಂಡಿರಬೇಕು ಹಾಗಿದ್ದರೆ ಮಾತ್ರ ನೀವು ಜೀವನದಲ್ಲಿ ಮುಂದೆ ಬರುತ್ತೀರಾ !!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಜೀವನದಲ್ಲಿ ಯಾವತ್ತಿಗೂ ಈ 5ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಂಡಿರಿ. ಈ 5ವಿಚಾರಗಳನ್ನು ತಿಳಿದ ನಂತರ ನಿಮಗೆ ಅನಿಸುತ್ತದೆ, ಈ ವಿಚಾರಗಳನ್ನು ನಾವು ಜೀವನದಲ್ಲಿ ಪಾಲಿಸಿದ್ದೇ ಆದಲ್ಲಿ ನಮ್ಮ ಜೀವನ ಹೇಗಿರುತ್ತದೆ ಅಂತ.

ಹೌದು ಫ್ರೆಂಡ್ಸ್ ಆ 5ವಿಚಾರಗಳನ್ನ ತಿಳಿಯುವುದಕ್ಕಾಗಿ ನೀವು ಈ ಮಾಹಿತಿಯನ್ನು ತಪ್ಪದೇ ತಿಳಿಯಿರಿ. ಹಾಗೆ ಈ ವಿಚಾರಗಳನ್ನು ತಿಳಿದ ನಂತರ ನಿಮಗೆ ಮಾಹಿತಿ ಸರಿ ಅನಿಸಿದ್ದಲ್ಲಿ ತಪ್ಪದೆ ನಿಮ್ಮ ಅನಿಸಿಕೆಯನ್ನು ಕೂಡ ಕಾಮೆಂಟ್ ಮಾಡುವುದನ್ನು ಮಾತ್ರ ಮರೆಯದಿರಿ.

ಮಾಹಿತಿ ತಿಳಿದು ಸುಮ್ಮನಾಗಬೇಡಿ ನೀವು ಇಂತಹ ಈ 5ವಿಚಾರಗಳನ್ನು ಕೇವಲ ಒಂದು ತಿಂಗಳು ಪಾಲಿಸಿ ನಿಮ್ಮ ಮತ್ತು ಜೀವನದಲ್ಲಿ ಆಗುವ ಬದಲಾವಣೆಯನ್ನು ನಿಮ್ಮ ಜೀವನದಲ್ಲಿ ಹೆಚ್ಚಾಗುವ ಖುಷಿಯನ್ನು ಅನುಭವಿಸುವುದಕ್ಕಾಗಿ ಇನ್ನೂ ಜೀವನ ಚೆನ್ನಾಗಿರುತ್ತದೆ.

ಮೊದಲನೆಯದಾಗಿ ಯಾವತ್ತಿಗೂ ನೀವು ಜೀವನದಲ್ಲಿ ಗುರಿಯನ್ನು ಹೊಂದಿರಬೇಕು. ಗುರಿ ಹೊಂದದೇ ಇರುವ ಮನುಷ್ಯ ಪ್ರಾಣಿಗಿಂತ ಕೀಳು ಅಂತ ಹೇಳ್ತಾರೆ, ಹಾಗೇ ಈ ಮಾತಿನಂತೆ ಜೀವನದಲ್ಲಿ ಗುರಿಯನ್ನು ಹೊಂದಿ.

ಆ ಗುರಿಯೇ ನಿಮ್ಮ ನಡೆಯನ್ನು ನಿರ್ಧರಿಸುತ್ತದೆ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಯಾವುದನ್ನು ಆಯ್ಕೆ ಮಾಡಿಕೊಳ್ಳಬಾರದು ಅಂತ ಮತ್ತು ನೀವು ನಿಮ್ಮ ಗುರಿ ತಲುಪುವುದಕ್ಕಾಗಿ ಪ್ರಯತ್ನಗಳನ್ನು ಕೂಡ ಮಾಡಬೇಕು ಅಷ್ಟೆ.

ಮತ್ತೊಂದು ಮುಖ್ಯವಾದ ವಿಚಾರ ಅಂದರೆ, ನೀವು ಜೀವನದಲ್ಲಿ ಹೊಂದಿರುವ ಗುರಿಯ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳಬೇಡಿ. ಇದರಿಂದ ನಿಮ್ಮ ಗುರಿಗೆ ಸಹಾಯ ಮಾಡುವುದಕ್ಕಿಂತ ನಿಮ್ಮ ಗುರಿಯಲ್ಲಿ ನಿಮ್ಮ ಕಾಲು ಎಳೆಯುವ ಮಂದಿಯೇ ಹೆಚ್ಚಾಗಿರುತ್ತಾರೆ.

ಆದ್ದರಿಂದ ನೀವು ಅಂದುಕೊಂಡದ್ದನ್ನು ಮತ್ತು ನಿಮ್ಮ ಜೀವನದ ಗುರಿಯನ್ನು ಸಕ್ಸಸ್ ಆಗುವ ವರೆಗೆ ಅದನ್ನು ಯಾರಿಗೂ ಹೇಳಬೇಡಿ.ಎರಡನೆಯದಾಗಿ ನಿಮ್ಮ ವೈಯಕ್ತಿಕ ಜೀವನ ಹೌದು ಇಂದಿನ ಮಂದಿಗೆ ಪರ್ಸನಲ್ ಲೈಫ್ ಅಂತ ಇರುವುದಿಲ್ಲ ಪರ್ಸನಲ್ ಲೈಫ್ ಅಂತ ಯಾವ್ದೋ ಕೇಳ್ತಾ ಇದ್ದೇವೆ ಅಂದರೆ

ಉದಾಹರಣೆಗೆ ಮನೆಗೆ ಬಂದು ಫ್ರಿಡ್ಜ್ ತಂದರೆ ಅದನ್ನು ಕೂಡ ಅಕ್ಕಪಕ್ಕದವರ ಬಳಿ ಹೇಳಿಕೊಳ್ಳುವುದು ಅಥವಾ ನಿಮ್ಮ ಜೀವನದ ಕೆಲವೊಂದು ವಿಚಾರಗಳನ್ನು ಬೇರೆಯವರ ಬಳಿ ಹೇಳಿಕೊಳ್ಳುವುದರಿಂದ ಅವರು ನಿಮ್ಮ ಜೀವನದಲ್ಲಿ ಅಡ್ವಾಂಟೇಜ್ ತೆಗೆದುಕೊಳ್ಳಬಹುದು.

ಸ್ನೇಹಿತರೆ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ನೀವು ಹೇಳಿಕೊಂಡಿದ್ದೆ ಆದಲ್ಲಿ ನಿಮಗೆ ಅನುಕಂಪ ದೊರೆಯುತ್ತದೆ ಅಂತ ನೀವು ಅಂದುಕೊಳ್ಳಬಹುದು ಆದರೆ ಅನುಕಂಪ ತೋರುವ ಆ ವಿಚಾರಗಳನ್ನು ಬೇರೆಯವರ ಬಳಿ ಮಾತನಾಡಿ ಖುಷಿ ಪಡುವ ಜನರೇ ಹೆಚ್ಚಾಗಿರುತ್ತಾರೆ. ಆದ್ದರಿಂದ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ನೀವು ಎಲ್ಲರ ಬಳಿ ಹೇಳಿಕೊಳ್ಳದೆ ಇರುವುದೇ ಒಳ್ಳೆಯದು.

ಮೂರನೆಯದಾಗಿ ಮಾಡಿದ್ದನ್ನು ಹೇಳುವುದು ಯಾವತ್ತಿಗೂ ಕೂಡ ಇದನ್ನು ಮಾಡಬೇಡಿ ಹಿಂದೆಲ್ಲ ಒಂದು ಗಾದೆ ಮಾತನ್ನು ಹೇಳ್ತಾ ಇದ್ರು. ಬಲಗೈ ಮಾಡಿದ್ದನ್ನು ಎಡಗೈಗೆ ತಿಳಿಯಬಾರದು ಅಂತ.

ಹೀಗೆ ಯಾಕೆ ಹೇಳ್ತಾ ಇದ್ರು ಅಂದ್ರೆ ನೀವು ಮಾಡಿದ ಸಹಾಯವನ್ನು ನೀವೇ ಹೇಳಿಕೊಳ್ಳಬಾರದು ನೀವು ಮಾಡುವಂತಹ ಸಹಾಯ ನಿಮ್ಮ ಬಳಿ ಸಹಾಯ ತೆಗೆದುಕೊಂಡ ವ್ಯಕ್ತಿ ಅದನ್ನು ಬೇರೆಯವರಿಗೆ ಹೇಳಬೇಕು ಹೊರತು.

ನೀವೇ ಆ ಸಹಾಯದ ಬಗ್ಗೆ ಬೇರೆಯವರಿಗೆ ಹೇಳುವುದಲ್ಲಾ, ಇದರಿಂದ ನಿಮಗೆ ಈ ಸಮಾಜದಲ್ಲಿ ಗೌರವ ಕಡಿಮೆಯಾಗ ಬಹುದು ಒಮ್ಮೆ ನೀವೇ ಯೋಚನೆ ಮಾಡಿ.

ನಾಲ್ಕನೆಯದಾಗಿ ನಿಮ್ಮ ಜೀವನದ ರಹಸ್ಯಗಳು ಎಷ್ಟೋ ಮಂದಿ ಖುಷಿ ವಿಚಾರಗಳನ್ನ ಅಷ್ಟಾಗಿ ಹೇಳಿಕೊಳ್ಳುವುದಕ್ಕೆ ಹೋಗುವುದಿಲ್ಲ ಆದರೆ ದುಃಖದ ವಿಚಾರಗಳನ್ನು ತಮ್ಮ ಅಕ್ಕಪಕ್ಕದಲ್ಲಿರುವವರಿಗೆ ಅಥವಾ ತಮ್ಮ ಗೆಳೆಯರಿಗೆ ತಮ್ಮ ಕುಟುಂಬಸ್ಥರಿಗೆ ಹೇಳಿಕೊಳ್ಳಲು ಇಚ್ಛಿಸುತ್ತಾರೆ ಆದರೆ ನಿಮ್ಮ ಜೀವನದಲ್ಲಿ ಕಷ್ಟವೇ ಬರಲಿ ಸುಖವೇ ಬರಲಿ ಅದನ್ನು ಸಮಾನವಾಗಿ ಸ್ವೀಕರಿಸಿ ಮತ್ತು ನಿಮ್ಮ ರಹಸ್ಯಗಳನ್ನು ಯಾರಿಗೂ ಬಿಟ್ಟುಕೊಡಬೇಡಿ. ಆಗ ನಿಮ್ಮವರೇ ನಿಮ್ಮನ್ನು ಕೀಳಾಗಿ ನೋಡಬಹುದು ನಿಮ್ಮ ರಹಸ್ಯ ತಿಳಿದ ವ್ಯಕ್ತಿಗಳು ನಿಮಗೆ ಶತ್ರು ಆದರೂ ಆಗಬಹುದು. ಆ ರಹಸ್ಯದಿಂದಲೇ ನಿಮ್ಮ ಜೀವನಕ್ಕೆ ಕಷ್ಟಗಳು ಬರಬಹುದು ಅಥವಾ ನಿಮ್ಮ ಗೆಳೆಯರು ನಿಮ್ಮ ಬಳಿ ರಹಸ್ಯ ಹೇಳಿದ್ದರೆ, ನೀವು ಅದನ್ನು ಬೇರೆಯವರ ಬಳಿ ಹೇಳ್ತೀರಾ ಆಗ ನೀವೇ ಯೋಚನೆ ಮಾಡ್ತೀರಾ ಬೇರೆಯವರಿಗೆ ಆ ರಹಸ್ಯ ಹೇಳಿದ್ವಲ್ಲಾ ಅಂತ. ಆಗ ಅದನ್ನೆ ಯೋಚನೆ ಮಾಡಿ ಇನ್ನಷ್ಟು ಸಮಯ ಹಾಳು ಅಷ್ಟೇ ಹೊರತು, ಯಾವ ಲಾಭವೂ ಇಲ್ಲ. ಆದ್ದರಿಂದ ನಿಮ್ಮ ಬಳಿ ಯಾರಾದರೂ ರಹಸ್ಯ ಹೇಳಿಕೊಂಡಿದ್ದಾರೆ ಅಂದರೆ ಅದೊಂದು ನಂಬಿಕೆ, ಅಷ್ಟೆ ಅದನ್ನು ಯಾರ ಬಳಿಯೂ ಹೇಳಬೇಡಿ.

ಕೊನೆಯದ್ದು ಹಣಕಾಸಿನ ಸ್ಥಿತಿ ಈ ಹಣಕಾಸಿನ ಸ್ಥಿತಿಯ ಬಗ್ಗೆ ನೀವು ಯಾವತ್ತಿಗೂ ಹೇಳಲೇಬಾರದು ಯಾಕೆ ಅಂದರೆ ಇಂದಿನ ಸಮಾಜವೇ ಆಗಿದೆ ವ್ಯಕ್ತಿಯನ್ನು ಹಣಕಾಸಿನ ಸ್ಥಿತಿಯ ಮೇಲೆ ಅಳೆಯುತ್ತದೆ ಆದ್ದರಿಂದ ನಿಮ್ಮ ಹಣಕಾಸಿನ ಸ್ಥಿತಿಯ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳಲು ಹೋಗಬೇಡಿ ಆಗ ನಿಮ್ಮನ್ನು ಜನ ನೋಡುವುದು ಬೇರೆ ಥರ ಇರುತ್ತದೆ ಆದ್ದರಿಂದ ನಿಮ್ಮ ಹಣಕಾಸಿನ ಸ್ಥಿತಿಯ ಬಗ್ಗೆಯೂ ಕೂಡ ಯಾರ ಬಳಿಯೂ ಹಂಚಿಕೊಳ್ಳಬೇಡಿ ಮತ್ತು ಹಣದ ವಿಚಾರದಲ್ಲಿಯೂ ಕೂಡ ಸಹಾಯ ಪಡೆಯುವ ಮುನ್ನ ನೂರಾರು ಬಾರಿ ಯೋಚನೆ ಮಾಡುವುದನ್ನು ಮರೆಯದಿರಿ. ಯಾಕಂದರೆ ಹಣ ಎಂಬುದು ಎಂತಹ ಸಂಬಂಧವನ್ನು ಕೂಡ ಹಾಳು ಮಾಡಬಹುದು

Leave a Reply

Your email address will not be published. Required fields are marked *