ಕೂದಲು ಉದ್ದವಾಗಿ ಬೆಳೆಯುವುದಕ್ಕೆ ಇದು ಬೆಸ್ಟ್ ಹೋಂ ರೆಮಿಡಿ ಅಂತ ಹೇಳಿದರೆ ತಪ್ಪಾಗಲಾರದು ಫ್ರೆಂಡ್ಸ್ ನೀವು ಇಂದಿನ ಮಾಹಿತಿಯನ್ನು ತಪ್ಪದೇ ತಿಳಿಯಲೇಬೇಕು
ಹೇಗೆ ಈಸಿಯಾಗಿ ಕೂದಲು ಉದುರುವ ಸಮಸ್ಯೆಯನ್ನು ಪರಿಹರಿಸಿಕೊಂಡು ಉದ್ದವಾದ ಕೇಶರಾಶಿಯನ್ನು ಪಡೆದುಕೊಳ್ಳಬಹುದು ಎಂಬುದನ್ನು, ಈ ಮನೆಮದ್ದನ್ನು ಪಾಲಿಸಿ ನೋಡಿ ನಂತರ ನಿಮಗೆ ಅನ್ನಿಸುತ್ತದೆ ನಿಜಕ್ಕೂ ಇದು ಕೆಲಸ ಮಾಡುತ್ತಿದೆ ಅಂತ.
ಇದೀಗ ಈ ಮನೆಮದ್ದನ್ನು ಪಾಲಿಸುವುದಕ್ಕೆ ಬೇಕಾಗಿರುವಂತಹ ಪದಾರ್ಥವು ಅಂದರೆ ಕಪ್ಪು ಎಳ್ಳಿನ ಪುಡಿ ಮತ್ತು ಬಿಳಿ ಎಳ್ಳಿನ ಪುಡಿ ಮತ್ತು ಕೊಬ್ಬರಿ ಎಣ್ಣೆ ಈ ಮೂರು ಪದಾರ್ಥಗಳು ಮಾತ್ರ ಸಾಕು.
ಈ ಮನೆ ಮಾತನ್ನು ತಯಾರಿಸುವುದಕ್ಕೆ. ಕೆಲವರಿಗೆ ಹೆಚ್ಚು ಸಮಯ ಇರುವುದಿಲ್ಲ ಕೆಲಸದ ಒತ್ತಡದಲ್ಲಿ ಅವರು ತಮಗಾಗಿ ಕೂಡ ಸಮಯವನ್ನು ವ್ಯರ್ಥ ಮಾಡುವುದಕ್ಕೆ ತಯಾರಿ ಇರುವುದಿಲ್ಲ ಅಂಥವರು ಈ ಒಂದು ಮನೆ ಮದ್ದನ್ನು ಸುಲಭವಾಗಿ ಮಾಡಬಹುದು.
ಕೆಲವರು ಹೇಳ್ತಾರೆ ಮೆಂತ್ಯೆ ಕಪ್ಪು ಎಳ್ಳು ಇವೆಲ್ಲವನ್ನೂ ಹುರಿದು ನಂತರ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಪುಡಿ ಹಾಕಿ ಬೇಯಿಸಿ ಅಂತ ಅಲ್ಲ ಆದರೆ ಈ ಮನೆ ಮದ್ದಿನಲ್ಲಿ ಅಂತಹ ಕಷ್ಟಗಳು ಎಂಥದ್ದೂ ಇಲ್ಲ ಆರಾಮವಾಗಿ ಈ ಮನೆಮದ್ದನ್ನು ನೀವು ತಯಾರಿಸಿಕೊಂಡು ಮಾಡಬಹುದು.
ಇದರಿಂದ ಕೂದಲುದುರುವ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ ಹಾಗೂ ನಿಮ್ಮ ಸಮಯವು ಕೂಡಾ ವ್ಯರ್ಥ ವೇನೂ ಆಗುವುದಿಲ್ಲ.
ಮೊದಲನೆಯದಾಗಿ ಕಪ್ಪು ಎಳ್ಳು ಮತ್ತು ಮೆಂತ್ಯೆ ಕಾಳುಗಳನ್ನು ತೆಗೆದುಕೊಂಡು ಸಣ್ಣದಾಗಿ ಪುಡಿ ಮಾಡಿಕೊಳ್ಳಿ ಪೂರ್ತಿಯಾಗಿ ಸಣ್ಣದಾಗಿ ಪುಡಿ ಮಾಡಿಕೊಂಡ ನಂತರ ಇದನ್ನು ಕೊಬ್ಬರಿ ಎಣ್ಣೆಗೆ ಹಾಕಿಕೊಳ್ಳಬೇಕು ಎಷ್ಟು ಪ್ರಮಾಣದಲ್ಲಿ ಹಾಕಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಡುತ್ತೇನೆ ಸರಿಯಾಗಿ ತಿಳಿದುಕೊಳ್ಳಿ ಈ ಕ್ರಮದಲ್ಲಿಯೆ ಪಾಲಿಸಿ ಇದರಿಂದ ಕೂದಲು ಉದುರುವ ಸಮಸ್ಯೆ ಖಂಡಿತವಾಗಿಯೂ ಕಡಿಮೆಯಾಗುತ್ತದೆ.
ನಿಮ್ಮ ಕೂದಲು ಉದ್ದವಾಗಿದ್ದರೆ ಐದು ಚಮಚ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ ಹಾಗೆ ಗಂಡು ಮಕ್ಕಳಾದರೆ ಎರಡು ಚಮಚ ಕೊಬ್ಬರಿ ಎಣ್ಣೆ ಸಾಕು, ಐದು ಚಮಚ ಕೊಬ್ಬರಿ ಎಣ್ಣೆಗೆ ಒಂದು ಚಮಚ ಹರಳೆಣ್ಣೆಯನ್ನು ತೆಗೆದುಕೊಳ್ಳಬೇಕು.
ಹರಳೆಣ್ಣೆಯನ್ನು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಅಂದರೆ, ಮೂರು ಚಮಚ ಕೊಬ್ಬರಿ ಎಣ್ಣೆಗೆ ಅರ್ಧ ಚಮಚ ಹರಳೆಣ್ಣೆ ಎಂಬ ಪ್ರಮಾಣದ ಆಧಾರದ ಮೇಲೆ ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆಯನ್ನು ತೆಗೆದುಕೊಳ್ಳಿ.
ಇದೀಗ ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆಯನ್ನು ತೆಗೆದುಕೊಂಡ ನಂತರ ಮೇಲೆ ತಯಾರಿಸಿ ಇಟ್ಟುಕೊಂಡಂತಹ ಮೆಂತೆ ಪುಡಿ ಮತ್ತು ಕಪ್ಪು ಎಳ್ಳಿನ ಪುಡಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಅಂದರೆ ಎರಡು ಪುಡಿಯನ್ನು ಒಂದೊಂದು ಚಮಚ ತೆಗೆದುಕೊಂಡು ಕೊಬ್ಬರಿ ಎಣ್ಣೆಯೊಂದಿಗೆ ಚೆನ್ನಾಗಿ ಮಿಶ್ರಿತ ಮಾಡಿ ಈ ರೆಮಿಡಿಯನ್ನು ಕೂದಲಿಗೆ ಎಣ್ಣೆ ಹಚ್ಚಿಕೊಳ್ಳುವ ರೀತಿ ಹಚ್ಚಿಕೊಳ್ಳಬೇಕು.
ಕಪ್ಪು ಎಳ್ಳು ಕೂದಲನ್ನು ಚೆನ್ನಾಗಿ ಪೋಷಣೆ ಮಾಡಿ ಕೂದಲು ಉದುರುವ ಸಮಸ್ಯೆಯನ್ನು ದೂರ ಮಾಡುತ್ತದೆ ಹಾಗೆ ಮೆಂತ್ಯೆ ಕಾಳು ಕೂಡ ಹೊಟ್ಟಿನ ಸಮಸ್ಯೆಯನ್ನು ದೂರ ಮಾಡುವುದಲ್ಲದೆ ಕೂದಲು ಚೆನ್ನಾಗಿ ಬೆಳೆಯಲು ಸಹಕರಿಸುತ್ತದೆ.
ಹೀಗೆ ವಾರಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಈ ಮನೆ ಮದ್ದನ್ನು ಪಾಲಿಸಿ ಇದರಿಂದ ನೀವು ಬಳಲುತ್ತಿರುವಂತಹ ಕೂದಲು ಉದುರುವ ಸಮಸ್ಯೆ ದೂರವಾಗಿ ಮೃದುವಾದ ಉದ್ದವಾದ ಕೇಶರಾಶಿಯನ್ನು ನೀವು ಪಡೆದುಕೊಳ್ಳಬಹುದು. ಕೊಬ್ಬರಿ ಎಣ್ಣೆಯಿಂದ ಕೂದಲಿಗೆ ಹಾರೈಕೆ ಮಾಡಿ ಸೊಂಪಾದ ಕೇಶರಾಶಿಯನ್ನು ಪಡೆದುಕೊಳ್ಳಿ ಧನ್ಯವಾದ.