Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವು ಗಮನಿಸಿದೀರಾ ಯಾಕೆ ಇರುವೆಗಳು ಸಾಲಾಗಿ ಯಾಕೆ ಸಾಗುತ್ತವೆ ಗೊತ್ತಾ ..

ಇರುವೆಗಳು ಸಾಲಾಗಿ ಹೋಗುವುದನ್ನು ನೀವು ಗಮನಿಸಿರುತ್ತೀರಿ ಮನೆಗಳಲ್ಲಿ ಇರುವೆಗಳು ಸಾಲು ಸಾಲಾಗಿ ಹೋಗುತ್ತಿರುತ್ತವೆ ಯಾವುದೇ ಸಿಹಿ ಪದಾರ್ಥಗಳನ್ನು ಇಟ್ಟರೂ ಅದಕ್ಕೆ ಇರುವೆಗಳು ಮುತ್ತಿರುತ್ತದೆ ಆದರೆ ಇರುವೆಗಳು ಮಾತ್ರ ಸಾಲು ಸಾಲಾಗಿ ಯಾಕೆ ಹೋಗುತ್ತವೆ ಹಾಗೆ ಈ ಇರುವೆಗಳು ಸಾಲು ಸಾಲಾಗಿ ಹೋಗಲು ಕಾರಣವೇನು ಎಂದಾದರೂ ನೀವು ಯೋಚಿಸಿದ್ದೀರಾ .

ನಾವು ನಮ್ಮ ಸುತ್ತಮುತ್ತಲೇ ಇರುವಂತಹ ಅದೆಷ್ಟೊ ಪ್ರಶ್ನೆಗಳಿಗೆ ಉತ್ತರ ತಿಳಿದಿರುವುದಿಲ್ಲ ಆದರೆ ನಾವು ಆ ವಿಚಾರಗಳಲ್ಲಿ ಸಂಶಯ ಪಟ್ಟಿರುತ್ತಾರೆ ಆದರೆ ಅದಕ್ಕೆ ಉತ್ತರ ಪಡೆದುಕೊಳ್ಳಲು ಮುಂದಾಗುವುದಿಲ್ಲ .

ಆದರೆ ಸ್ನೇಹಿತರೇ ಹೀಗೆ ನಮ್ಮ ಸುತ್ತಮುತ್ತಲೂ ನಡೆಯುತ್ತಿರುವಂತಹ ಕೆಲವೊಂದು ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಇಂಟರೆಸ್ಟಿಂಗ್ ಇರುತ್ತದೆ ಅಂತಹ ವಿಚಾರಗಳ ಬಗ್ಗೆ ಉತ್ತರ ತಿಳಿದರೂ ಅದು ಕೂಡ ಖುಷಿ ಕೊಡುತ್ತವೆ .

ಇಂದಿನ ಮಾಹಿತಿಯಲ್ಲಿ ತಿಳಿಯೋಣ ಯಾಕೆ ಇರುವೆಗಳ ಸಾಲು ಸಾಲಾಗಿ ಹೋಗುತ್ತವೆ ಎಂದು ಇದಕ್ಕೆ ಉತ್ತರ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ ಅಷ್ಟು ಚಿಕ್ಕ ಇರುವೆ ಅಲ್ಲಿ ಇಂತಹ ಒಂದು ಗುಣವಿರುತ್ತದೆ ಎಂದು .ಹೌದು ಸ್ನೇಹಿತರೇ ಈ ಇರುವೆಗಳು ಸಾಲು ಸಾಲಾಗಿ ಹೋಗಲು ಕಾರಣವೇನು ಎಂದರೆ ಹೇಗೆ ಪಕ್ಷಿಗಳು ಬಾನಿನಲ್ಲಿ ಹಾರುವಾಗ ಆ ಪಕ್ಷಿಯ ಸಾಲುಗಳ ಮೊದಲಿನ ಪಕ್ಷಿ ನಾಯಕ ಪಕ್ಷಿಯಾಗಿ ಇರುತ್ತದೋ ಹಾಗೆಯೇ ಈ ಇರುವೆಗಳ ಸಾಲಿನಲ್ಲಿಯೂ ಕೂಡ ಒಬ್ಬ ನಾಯಕ ಇರುತ್ತಾನಂತೆ .

ಹೌದು ಹೇಗೆ ಮನುಷ್ಯನ ಜೀವನದಲ್ಲಿ ಆ ಮನುಷ್ಯರನ್ನು ಒಳ್ಳೆಯ ದಾರಿಯಲ್ಲಿ ಕೊಂಡೊಯ್ಯಲು ಅವನಿಗೆ ಒಬ್ಬ ನಾಯಕನ ಅಥವಾ ಗುರುವಿನ ಅವಶ್ಯಕತೆ ಇರುತ್ತದೆಯೋ ಹಾಗೆ ಈ ಒಂದು ಇರುವೆಯ ವಿಚಾರದಲ್ಲಿಯೂ ಕೂಡ . ನೀವು ಗಮನಿಸಿ ಇರುವೆಗಳು ಮನೆಯಲ್ಲಿ ಸಾಲಾಗಿ ಹೋಗುತ್ತಿರುತ್ತವೆ ಆ ಸಾಲನ್ನು ಕೆಡಿಸಿದರೂ ಕೂಡ ಮತ್ತೆ ಅವು ಆ ಸಾಲಿನಲ್ಲಿಯೇ ಹೋಗಲು ಮುಂದಾಗುತ್ತವೆ.

ಇದಕ್ಕೆ ಕಾರಣವೇನು ಅಂದರೆ ಇರುವೆಗಳು ಸಾಲಾಗಿ ಹೋಗುವಾಗ ಆ ಸಾಲಿನ ಮೊದಲ ಇರುವೆಯನ್ನು ನಾಯಕ ಇರುವೆ ಎಂದು ಕರೆಯಲಾಗುತ್ತದೆ ಇರುವ ಒಂದು ಫ್ಲುಯಿಡ್ ಅಂದರೆ ಒಂದು ದ್ರವ್ಯವನ್ನು ಬಿಡುತ್ತಾ ಹೋಗುತ್ತಿರುತ್ತದೆ . ಇರುವೆ ಬಿಡುವ ಆ ದ್ರವ್ಯ ಪದಕ್ಕೆ ಫೆರಂ ಎಂದು ಕರೆಯಲಾಗುತ್ತದೆ ಈ ಫೆರಂ ಅನ್ನು ಮೊದಲನೇ ಇರುವೆ ಬಿಡುತ್ತಾ ಹೋದಂತೆ ನಂತರ ಅದನ್ನು ಪಾಲಿಸಿಕೊಂಡು ಹಿಂದಿನ ಇರುವೆಗಳು ಹೋಗುತ್ತವೆ ಆ ಇರುವೆ ಹಿಂದೆಯೇ ನಂತರ ಹಿಂದೆ ಬರುವಂತಹ ಇರುವೆ ಕೂಡ ಆ ಒಂದು ಸಂ ಅನ್ನು ಬಿಡುತ್ತಾ ಹೋಗುತ್ತದೆ ಹೀಗೆ ಆ ದ್ರವ್ಯದ ಮುಖಾಂತರ ಪ್ರತಿ ಇರುವೆಗಳು ಕೂಡಾ ಸಾಲು ಸಾಲಾಗಿ ಹೋಗುತ್ತಿರುತ್ತವೆ .

ಇಂತಹ ಒಂದು ಪ್ರಕೃತಿಯನ್ನು ಇರುವೆಯಲ್ಲಿ ನೀಡಿರುವ ಪರಿಸರ ಯಾಕೆ ಅಂದರೆ ಇರುವೆಗಳು ಗೂಡನ್ನು ಬಿಟ್ಟು ಆಹಾರವನ್ನು ಹುಡುಕಲೆಂದು ಹೊರಟಾಗ ದೂರ ದೂರಕ್ಕೆ ಹೋಗಿ ಬಿಡುತ್ತವೆ ಆಗ ಮತ್ತೆ ಅವುಗಳಿಗೆ ಗೂಡನು ಸೇರಲು ಕಷ್ಟವಾಗಬಾರದು ಎಂಬ ಕಾರಣಕ್ಕಾಗಿ ಈ ರೀತಿ ಇರುವೆಗಳಲ್ಲಿ ಒಂದು ವಿಶೇಷವಾದ ಗುಣವನ್ನು ಪರಿಸರ ನೀಡಿದೆ ಅಂತಾನೇ ಹೇಳಬಹುದು .ಇರುವೆಗಳು ಆಹಾರವನ್ನು ಹುಡುಕಲೆಂದು ತಾನು ಗೂಡಿಂದ ಹೊರಟಾಗ ಫೆರಂ ಅನ್ನು ಬಿಟ್ಟಿರುತ್ತದೆ ಆ ಫೆರಂ ಅನ್ನು ಪಾಲಿಸಿಕೊಂಡು ಮತ್ತೆ ತನ್ನ ಗೂಡನ್ನು ಸೇರುತ್ತದೆ .

ಇದೀಗ ನಿಮ್ಮ ಸಂಶಯಕ್ಕೆ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ ಹಾಗೆ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ .

 

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ