ನೀವು ಕುಳಿತುಕೊಳ್ಳುವ ಆಧಾರದ ಮೇಲೆ ನೀವು ಎಂತವರು ಎಂದು ತಿಳಿದುಕೊಳ್ಳಬಹುದು ಅದು ಹೇಗೆ ಗೊತ್ತಾ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಮಾಹಿತಿಯಲ್ಲಿ ಕುಳಿತುಕೊಳ್ಳುವ ಆಧಾರದ ಮೇಲೆ ಅವರ ಗುಣ ಸ್ವಭಾವವನ್ನು ತಿಳಿದುಕೊಳ್ಳಬಹುದು ಅದು ಹೇಗೆ ಯಾವ ರೀತಿ ಕುಳಿತುಕೊಂಡರೆ ಅವರ ಗುಣಗಳು ಯಾವ ರೀತಿ ಆಗಿರುತ್ತವೆ ಎನ್ನುವ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ನಾನು ನಿಮಗೆ ತಿಳಿಸಿಕೊಡುತ್ತೇನೆ

ಸ್ನೇಹಿತರೆ ಸಾಮಾನ್ಯವಾಗಿ ಹುಟ್ಟುವ ದಿನದ ಆಧಾರದ ಮೇಲೆ ಹುಟ್ಟುವ ಸಮಯದ ಆಧಾರದ ಮೇಲೆ ಹಾಗೂ ಹುಟ್ಟುವ ತಿಂಗಳಿನ ಆಧಾರದ ಮೇಲೆ ಗುಣವನ್ನು ತಿಳಿದುಕೊಳ್ಳಬಹುದು ಆದರೆ ನಾವು ಹೇಳುವಂತಹ ಈ ಒಂದು ಮಾಹಿತಿಯಲ್ಲಿ

ನಾವು ಕುಳಿತುಕೊಳ್ಳುವ ಆಧಾರದ ಮೇಲೆ ಕೂಡ ನಮ್ಮ ಗುಣ ಸ್ವಭಾವ ಅಂದರೆ ಸಂಪೂರ್ಣವಾದ ಅಂತಹ ನಮ್ಮ ಗುಣ ತಿಳಿದುಕೊಳ್ಳಬಹುದು. ಹಾಗಾಗಿ ಈ ರೀತಿಯ ಗುಣಗಳನ್ನು ಯಾವ ರೀತಿಯಾಗಿ ಕುಳಿತುಕೊಂಡರೆ ಯಾವ ರೀತಿಯ ಗುಣಗಳು ಅವರದ್ದಾಗಿರುತ್ತದೆ ಎನ್ನುವ ಮಾಹಿತಿಯನ್ನು ಮುಂದೆ ತಿಳಿದುಕೊಳ್ಳೋಣ.

ಕೆಲವೊಬ್ಬರು ಕುಳಿತುಕೊಳ್ಳುವ ವಿದಾನವು ಬೇರೆಬೇರೆ ರೀತಿಯಾಗಿರುತ್ತದೆ ಆದರೆ ಇಂದಿನ ಲೇಖನದಲ್ಲಿ ನಾವು ಸಾಮಾನ್ಯವಾಗಿ ಎಲ್ಲರೂ ಕುಳಿತುಕೊಳ್ಳುವಂತಹ ವಿಧಾನವನ್ನು ತಿಳಿಸಿಕೊಡುತ್ತೇನೆ ಮೊದಲನೆಯದಾಗಿ ಕಾಲುಗಳನ್ನು ಬೆಂಡ್ ಮಾಡಿ ಕುಳಿತುಕೊಳ್ಳುವವರ ಸ್ವಭಾವ ಹೇಗಿರುತ್ತದೆ

ಎಂದರೆ ಈ ರೀತಿಯ ಕುಳಿತುಕೊಳ್ಳುವಂತಹ ಗುಣಸ್ವಭಾವಗಳು ಇವರು ಯಾವಾಗಲೂ ಕಲ್ಪನಾ ಶಕ್ತಿಯಲ್ಲಿ ಕಲ್ಪನೆಯನ್ನು ಮಾಡುತ್ತಿದ್ದಾರೆ ಹಾಗೂ ಇವರ ಮನಸ್ಸಿನಲ್ಲಿ ಯಾವಾಗಲೂ ಸಕಾರಾತ್ಮಕತೆ ಎನ್ನುವುದು ತುಂಬಿಕೊಂಡಿರುತ್ತದೆ.

ಆದರೆ ಕೆಲವೊಂದು ಸಾರಿ ಒಂದೊಂದು ವಿಷಯದಲ್ಲಿ ಇವರು ಸಿಕ್ಕಿಹಾಕಿಕೊಳ್ಳುತ್ತಾರೆ ಆದರೆ ಅವರಿಗೆ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ ಇದೇ ಇವರ ಒಂದು ನಕರಾತ್ಮಕ ಅಂಶ. ಸಾಮಾನ್ಯವಾಗಿ ಹೀಗೆ ಕುಳಿತುಕೊಳ್ಳುವುದು ಏನು ಮಾಡುತ್ತಾರೆ ಎಂದರೆ ತಪ್ಪುಗಳನ್ನು ಇನ್ನೊಬ್ಬರ ಮೇಲೆ ಹಾಕಲು ಕಾಯುತ್ತಿರುತ್ತಾರೆ.

ಕಾಲಿನ ಮೇಲೆ ಕಾಲು ಹಾಕಿ ಕುಳಿತು ಕೊಳ್ಳುವುದು ಈ ರೀತಿಯಾಗಿ ಕಾಲಿನ ಮೇಲೆ ಕಾಲು ಹಾಕಿ ಕುಳಿತು ಕೊಳ್ಳುವವರು ತುಂಬಾನೇ ಮೃದು ಸ್ವಭಾವದವರು ಆಗಿರುತ್ತಾರೆ ಹಾಗೆಯೇ ಜೀವನದಲ್ಲಿ ಏನಾದರೂ ಸಾಧಿಸುವಂತಹ ಛಲವನ್ನು ಹೊಂದಿರುತ್ತಾರೆ.

ಹಾಗೆಯೇ ಅವರು ಅಂದುಕೊಂಡ ಹಾಗೆ ಅವರು ಜೀವನದಲ್ಲಿ ತುಂಬಾನೇ ಮುಂದೆ ಬರುತ್ತಾರೆ.ಇನ್ನೊಂದು ರೀತಿಯಾದಂತಹ ಒಳ್ಳೆ ಗುಣ ಎಂದರೆ ಅವರು ಯಾವಾಗಲೂ ಇನ್ನೊಬ್ಬರಿಗೆ ಜೀವನವನ್ನು ಹೇಗೆ ನಡೆಸಬೇಕು ಎನ್ನುವ ವಿಚಾರದ ಬಗ್ಗೆ ಹೇಳುತ್ತಿರುತ್ತಾರೆ.

ಇವರು ಹಾಗೆಯೇ ಇನ್ನೊಬ್ಬರು ಬೆಳೆಯಲಿ ಎನ್ನುವ ಮನೋಭಾವವನ್ನು ಹೊಂದಿರುತ್ತಾರೆ.ಮೂರನೇದಾಗಿ ಕಾಲನ್ನು ಸ್ವಲ್ಪ ಅಗಲವಾಗಿ ಇಟ್ಟುಕೊಂಡು ಕುಳಿತುಕೊಳ್ಳುವವರ ಗುಣ ಸ್ವಭಾವ ಹೇಗಿರುತ್ತದೆ ಎಂದರೆ ಇವರು ಯಾವಾಗಲೂ ಮನೋರಂಜನೆ ವ್ಯಕ್ತಿಯಾಗಿರುತ್ತಾರೆ

ಇನ್ನೊಬ್ಬರಿಗೆ ಮನೋರಂಜನೆಯನ್ನು ಮಾಡುತ್ತಾ ಕಾಲ ಕಳೆಯುವ ರಾಗಿರುತ್ತಾರೆ.ಇವರು ಜೀವನದಲ್ಲಿ ಒಂದು ರೀತಿಯಾಗಿ ಆರಾಮಾಗಿ ಇರಲು ಬಯಸುತ್ತಾರೆ ಇವರು ಹುಟ್ಟಿದಾಗಿನಿಂದ ಯಾವುದೇ ಕಷ್ಟಗಳನ್ನು ಅನುಭವಿಸಿ ಬಂದಿರುವುದಿಲ್ಲ.

ಹಾಗಾಗಿ ಇವರು ಜೀವನದಲ್ಲಿ ಉನ್ನತ ಸ್ಥಾನಮಾನವನ್ನು ತಲುಪುತ್ತಾರೆ. ಹೌದು ಇವರು ತಾವು ಹೇಳಿದ್ದನ್ನು ಇನ್ನೊಬ್ಬರು ಕೇಳಬೇಕು ಎನ್ನುವ ಅಭಿಲಾಷೆಯನ್ನು ಹೊಂದಿರುತ್ತಾರೆ.

ಇನ್ನು ಕೊನೆಯದಾಗಿ ಕಾಲನ್ನು ಜೋಡಿಸಿಕೊಂಡು ನೇರವಾಗಿ ಕುಳಿತುಕೊಳ್ಳುವ ವರ ಗುಣ ಹೇಗಿರುತ್ತದೆ ಎಂದರೆ ಇವರು ಅತ್ಯಂತ ಕೋಪಿಷ್ಟ ವ್ಯಕ್ತಿಗಳಾಗಿರುತ್ತಾರೆ ಹಾಗೆಯೇ ಎಲ್ಲರನ್ನು ಒಂದೇ ರೀತಿಯಾಗಿ ನೋಡುವಂತಹ ಮನೋಭಾವವನ್ನು ಹೊಂದಿರುತ್ತಾರೆ

ಹಾಗೂ ಜೀವನದಲ್ಲಿ ಒಮ್ಮೆ ಗುರಿಯನ್ನಿಟ್ಟುಕೊಂಡು ಸಾಕು ಅದನ್ನು ಸಾಧಿಸುವವರೆಗೂ ಅದನ್ನು ಅರ್ಧಕ್ಕೆ ಬಿಡುವುದಿಲ್ಲ.ನೋಡಿದ್ರಲ್ಲ ಸ್ನೇಹಿತರೆ ನಿಮ್ಮ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು.

Leave a Reply

Your email address will not be published. Required fields are marked *