ನೀವು ಏನಾದ್ರು ಯಾವುದೇ ದೇವಸ್ಥಾನಕ್ಕೆ ಹೋದಾಗ ಈ ಕೆಲಸವನ್ನು ಏನಾದರೂ ಮಾಡುತ್ತಿದ್ದರೆ ತಕ್ಷಣ ನಿಲ್ಲಿಸಿ !!!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ದೇವಸ್ಥಾನ ಅಥವಾ ದೇವಾಲಯ ಎಂದರೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಾಗಿರುವ ಸ್ಥಳ. ಅನೇಕ ಧರ್ಮಗಳ ನಂಬಿಕೆಯ ಪ್ರಕಾರ ದೇವಸ್ಥಾನವು ದೇವರು ನೆಲೆಸಿರುವ ಸ್ಥಳ.ಗೋಪುರ, ಹಿಂದೂ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ಮಾರಕ ರಚನೆಗಳು. ಮೂಲತಃ ಪ್ರತಿ ಹಿಂದೂ ದೇವಸ್ಥಾನಗಳ ದೈವ ಸನ್ನಿಧಿಗೆ ಆಭರಣ ಭೂಷಣವಾಗಿ ಗೋಪುರಗಳು ನಿರ್ಮಿಸಲ್ಪಟ್ಟಿರುತ್ತವೆ.ಗೋಪುರಗಳಲ್ಲಿ ದೇವ ದೇವತೆಯರ, ಪುರಾಣ ಪ್ರಸಂಗಗಳ, ಗರುಡ, ರಥ, ಸೂರ್ಯ, ಆಕಳು ಹೀಗೆ ಪವಿತ್ರ ವಸ್ತುಗಳನ್ನು ವಿಧ್ಯುಕ್ತವಾಗಿ ಕೆತ್ತಲಾಗಿರುತ್ತದೆ. ಅಲ್ಲದೆ ಕೆಲವು ಗೋಪುರಗಳ ಮೇಲೆ ಆಕರ್ಷಕ ಕಲಾಕೃತಿಗಳನ್ನು, ಯಕ್ಷ, ಗಂಧರ್ವ ಮುಂತಾದವರ ಶಿಲ್ಪಗಳನ್ನೂ ಸಹ ನಿರ್ಮಿಸಲಾಗಿರುತ್ತದೆ.

ಗೋಪುರಗಳ ರಚನಾ ಶೈಲಿಯಲ್ಲಿಯೂ ಸಹ ವೈವಿಧ್ಯತೆಗಳಿರುವುದನ್ನು ಕಾಣಬಹುದು. ಉದಾಹರಣೆಗೆ ಕೇರಳ ರಾಜ್ಯದಲ್ಲಿ ಸಾಮಾನ್ಯವಾಗಿ ದೇವಾಲಯಗಳ ಗೋಪುರಗಳು ವಿಶಿಷ್ಟ ವಿನ್ಯಾಸದಿಂದ ಕೂಡಿರುವುದನ್ನು ಕಾಣಬಹುದು.ಇನ್ನು ನೀವು ದೇವಾಲಯಕ್ಕೆ ಭೇಟಿ ಕೊಡುವ ಮುನ್ನ ಮಾಡಬೇಕಾದ ಕಾರ್ಯಗಳು.ದೇವಸ್ಥಾನವು ಭಗವಂತನ ಆಲಯ , ಅಲ್ಲಿ ಭಗವಂತನು ನೆಲೆಸಿರುತ್ತಾನೆ ಎಂಬುದು ನಮ್ಮ ನಂಬಿಕೆ,

ಹಾಗಿರುವಾಗ ನಾವು ದೇವಸ್ಥಾನಕ್ಕೆ ತೆರಳುವ ಮೊದಲು ಶುಚಿತ್ವವನ್ನು ಕಾಯ್ದುಕೊಳ್ಳಬೇಕು, ಪ್ರತಿ ದೇವಸ್ಥಾನದಲ್ಲಿಯೂ ಕೈಕಾಲು ತೊಳೆಯಲು ನೀರಿನ ವ್ಯವಸ್ಥೆಯನ್ನು ಖಂಡಿತವಾಗಿಯೂ ಮಾಡಲಾಗಿರುತ್ತದೆ, ಒಮ್ಮೆ ಅಲ್ಲಿಗೆ ಹೋಗಿ ನಿಮ್ಮ ಕೈ ಕಾಲನ್ನು ತೊಳೆದು ತಲೆಯ ಮೇಲೆ ಸ್ವಲ್ಪ ನೀರನ್ನು ಹಾಕಿ ಕೊಂಡು ದೇವಸ್ಥಾನಕ್ಕೆ ತೆರಳಿ.

ದೇವಸ್ಥಾನದ ಮುಖ್ಯ ದ್ವಾರದಿಂದ ದೇವಾಲಯದ ಒಳಕ್ಕೆ ಭೇಟಿ ನೀಡಿ ಹಾಗೂ ನೇರವಾಗಿ ಗರ್ಭಗುಡಿಯಲ್ಲಿರುವ ಮೂರ್ತಿಯ ದರ್ಶನವನ್ನು ಮಾಡಬಾರದು, ಬದಲಿಗೆ ಗೋಪಾಲ, ಸಿಂಹ ದ್ವಾರ, ಧ್ವಜ ಸ್ತಂಭ ಇವುಗಳನ್ನು ಪೂಜಿಸಿ ಮಾಡಿಕೊಳ್ಳಬೇಕು, ನಂತರ ದೇವಸ್ಥಾನದ ಗಂಟೆಗಳನ್ನು ಬಾರಿಸಿ ದೇವರ ದರ್ಶನ ಪಡೆಯಬೇಕು ಎಂದು ಶಾಸ್ತ್ರಗಳು ಹೇಳುತ್ತದೆ.ಮನೇಲಿ ಆಗಲಿ ಅಥವಾ ದೇವಾಲಯದಲ್ಲಿಯಾಗಲಿ ದೇವರಿಗೆ ಪೂಜೆಯನ್ನು ಸಲ್ಲಿಸುವ ಮೊದಲು ಗಂಟೆಯನ್ನು ಬಾರಿಸುವುದು ಅತಿ ಮುಖ್ಯ, ಹಿಂದೂ ಸಂಪ್ರದಾಯದ ಪ್ರಕಾರವಾಗಿ ಪೂಜೆಯ ವೇಳೆ ಗಂಟೆ ಇನ್ನೂ ಬಾರಿಸಲಾಗುತ್ತದೆ ಇನ್ನು ಈ ಗಂಟೆ ಬಾರಿಸಲು ಕಾರಣಗಳಾದರೂ ಏನು ಎಂಬ ಪ್ರಶ್ನೆಗೆ ನಿಮಗೆ ಅಚ್ಚರಿಯಾಗುವಂತೆ ವಿಷಯಗಳನ್ನು ತಿಳಿಸುತ್ತೇವೆ ಮುಂದೆ ಓದಿ.

ಗಂಟೆಯ ನಾದ ದಲ್ಲಿ ಓಂಕಾರ ಇರುತ್ತದೆ ಎನ್ನಲಾಗುತ್ತದೆ, ಈ ಗಂಟೆಗಳ ನಾದ ಭಕ್ತರ ಕಿವಿಯಲ್ಲಿ ಆನಂದವಾಗಿ ಕೇಳಿಸುತ್ತದೆ ಹಾಗೂ ಭಕ್ತರ ಏಕಾಗ್ರತೆಯನ್ನು ದೇವರ ಮೇಲೆ ಬರುವಂತೆ ಮಾಡುತ್ತದೆ.ಅತಿ ಮುಖ್ಯವಾಗಿ ದೇವರನ್ನು ವಿಗ್ರಹಕ್ಕೆ ಆಹ್ವಾನಿಸಲು ಈ ಗಂಟೆ ನಾದವನ್ನು ಮೊಳಗಿಸಲಾಗುತ್ತದೆ .ಹೀಗೆ ಪ್ರತಿಯೊಂದು ಭಾಗಕ್ಕೂ ಒಂದು ಪ್ರಾಮುಖ್ಯತೆ ಇದೆ, ಗಂಟೆ ನಾಲಿಗೆಯಲ್ಲಿ ಸರಸ್ವತಿ ದೇವಿ ಉದರದಲ್ಲಿ ಮಹಾರುದ್ರ, ಮುಖದ ಭಾಗದಲ್ಲಿ ವಾಸುಕಿ ಹಾಗೂ ಸೃಷ್ಟಿಕರ್ತ ಬ್ರಹ್ಮ ಇರುತ್ತಾನೆ ಎಂದು ಶಾಸ್ತ್ರ ಹೇಳುತ್ತದೆ ಆದ್ದರಿಂದ ಘಂಟೆಯನ್ನು ಬಹಳ ಬಹಳ ಪವಿತ್ರವೆಂದು ಭಾವಿಸಲಾಗುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯ ಬಗ್ಗೆ ನಿಮಗೆ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿಈ ಉಪಯುಕ್ತ ಮಾಹಿತಿ ಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಏಕೆಂದರೆ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಒಂದು ಒಳ್ಳೆಯ ವಿಷಯ. ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *