ಕೆಲವರು ಎಷ್ಟು ಕಷ್ಟಪಟ್ಟು ವ್ಯಾಸಂಗ ಮಾಡಿರುತ್ತಾರೆ ಆದರೆ ಅವರು ಓದಿರುವುದಕ್ಕೆ ತಕ್ಕ ಹಾಗೆ ಅವರಿಗೆ ಕೆಲಸವೇ ದೊರೆತಿರುವುದಿಲ್ಲ, ಇನ್ನು ಕೆಲವರು ಸುಲಭವಾಗಿ ತಮ್ಮ ಓದನ್ನು ಮುಗಿಸಿರುತ್ತಾರೆ ಅಂತಹವರು ಉನ್ನತ ಮಟ್ಟಕ್ಕೆ ಏರುತ್ತಾರೆ,ಆದರೆ ನಮಗೆ ಇಂತಹ ಸಮಯದಲ್ಲಿ ಬರುವ ಒಂದೇ ಒಂದು ಯೋಚನೆ ಎಂದರೆ ನಾವು ಕಷ್ಟ ಪಟ್ಟು ಓದಿದ್ದರೂ ಯಾಕೆ ನಮಗೆ ಪ್ರತಿಫಲಕ್ಕೆ ತಕ್ಕ ಕೆಲಸ ದೊರೆಯುತ್ತಿಲ್ಲ, ನಾವು ಯಾಕೆ ಉನ್ನತ ಮಟ್ಟಕ್ಕೆ ಏರುವುದಕ್ಕೆ ಆಗುತ್ತಿಲ್ಲ ಎಂಬ ಅನಿಸಿಕೆ ಬರುವುದು ಸಹಜ.
ಇಂತಹ ಒಂದು ತೊಂದರೆ ನಿಮ್ಮ ಜೀವನದಲ್ಲಿಯೂ ಕೂಡ ಎದುರಾಗಿದೆಯಾ, ನೀವು ಕೂಡ ಉತ್ತಮ ವ್ಯಾಸಂಗವನ್ನು ಮಾಡಿ ಅದಕ್ಕೆ ತಕ್ಕ ವೃತ್ತಿಯನ್ನು ಪಡೆದುಕೊಂಡಿಲ್ಲವ, ಉನ್ನತ ಸ್ಥಾನಕ್ಕೆ ಏರುವುದಕ್ಕೆ ಸಾಧ್ಯವಾಗುತ್ತಿಲ್ಲವೇ ಅದಕ್ಕಾಗಿ ಅನೇಕ ಅಡೆತಡೆಗಳು ಎದುರಾಗುತ್ತಿದೆಯ. ಹಾಗಾದರೆ ಈ ಒಂದು ಪರಿಹಾರವನ್ನು ನೀವು ಮನೆಯಲ್ಲಿಯೇ ಮಾಡಬಹುದು ಮತ್ತು ನೀವು ಉನ್ನತ ಮಟ್ಟಕ್ಕೆ ಏರುವುದಕ್ಕೆ ಎದುರಾಗುತ್ತಿರುವ ಅಡೆತಡೆಗಳನ್ನು ಪರಿಹರಿಸಿಕೊಳ್ಳಬಹುದು.
ವ್ಯಾಸಂಗ ಮಾಡಿಯೂ, ಕಷ್ಟಪಟ್ಟರು ಜಯ ಎಂಬುದು ಸಿಗುತ್ತಿಲ್ಲ ಎಂಬುವವರು ಉನ್ನತ ಮಟ್ಟಕ್ಕೆ ಏರಲು ಕನಸು ಕಾಣುತ್ತಿರುವವರು ಈ ಪರಿಹಾರವನ್ನು ಕೈಗೊಳ್ಳಿ ಅದೇನೆಂದರೆ ಒಂದು ಹಳದಿ ಬಣ್ಣದ ವಸ್ತ್ರವನ್ನು ತೆಗೆದುಕೊಳ್ಳಬೇಕು.ನಂತರ ಈ ಬಟ್ಟೆಯನ್ನು ಶುಚಿ ಪಡಿಸಿ ಗುರುವಾರದ ದಿವಸದಂದು ಈ ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಏಳು ಅಚ್ಚು ಬೆಲ್ಲವನ್ನು, ಈ ವಸ್ತ್ರದಲ್ಲಿ ಇರಿಸಬೇಕು ನಂತರ ಬೆಲ್ಲದೊಂದಿಗೆ ಏಳು ಅರಿಶಿಣದ ಕೊಂಬನ್ನು ಕೂಡಾ ಇರಿಸಬೇಕಾಗುತ್ತದೆ ಮತ್ತು ಒಂದು ರೂಪಾಯಿ ನಾಣ್ಯವನ್ನು ಇದರಲ್ಲಿ ಇಟ್ಟು ಈ ವಸ್ತ್ರವನ್ನು ಕಟ್ಟಬೇಕು.
ಇದೀಗ ಈ ವಸ್ತ್ರವನ್ನು ದೇವರ ಮನೆಯಲ್ಲಿ ಇಟ್ಟು ಗುರುವಾರದ ದಿನದಂದು ಈ ಬಟ್ಟೆಗೆ ಪೂಜೆಯನ್ನು ಸಲ್ಲಿಸಬೇಕು ಪ್ರತಿದಿನವೂ ಪೂಜೆಯನ್ನು ಸಲ್ಲಿಸಬೇಕು, ಆದರೆ ಈ ಪರಿಹಾರವನ್ನು ಗುರುವಾರದ ದಿವಸದಂದು ಮಾಡಿ.ನಂತರ ಇದಕ್ಕೆ ಪ್ರತಿದಿನ ಪೂಜೆಯನ್ನು ಸಲ್ಲಿಸುತ್ತಾ ಬರಬೇಕು ಇದರಿಂದ ನಿಮ್ಮ ಜೀವನದಲ್ಲಿ ನಿಮಗೆ ಬೇಕಾಗುವ ಹುದ್ದೆ ನಿಮಗೆ ದೊರೆಯುತ್ತದೆ ಮತ್ತು ನೀವು ವ್ಯಾಸಂಗ ಮಾಡಿರುವ ಹಾಗೆ ನೀವು ಪಡೆದುಕೊಂಡಿರುವ ಪದವಿಗೆ ತಕ್ಕ ಹಾಗೆಯೇ ನಿಮಗೆ ಸಮಾಜದಲ್ಲಿ ಗೌರವವೂ ಹುದ್ದೆಯೂ ಕೂಡಾ ದೊರೆಯುತ್ತದೆ ನಿಮ್ಮ ಆಸೆಗಳು ನನಸಾಗುತ್ತದೆ.
ಹಾಗಾದರೆ ಈ ಒಂದು ಪರಿಹಾರವನ್ನು ಗುರುವಾರದ ದಿವಸದಂದು ಕೈಗೊಳ್ಳಿ ನಿಮ್ಮ ಕಷ್ಟಗಳಿಗೆ ತಕ್ಕ ಪ್ರತಿಫಲವನ್ನು ಪಡೆದುಕೊಳ್ಳಿ. ನೀವು ಮತ್ತೊಂದು ಪರಿಹಾರವನ್ನು ಮಾಡಬೇಕಾಗುತ್ತದೆ.ಅದೇನೆಂದರೆ ನೀವು ಸಂದರ್ಶನಕ್ಕಾಗಿ ಹೋಗುವಾಗ ಹೋಗುವ ದಾರಿಯಲ್ಲಿ ಬಿಳಿ ಬಣ್ಣದ ಹಸು ಅಥವಾ ಯಾವುದೇ ಬಣ್ಣದ ಹಸು ಎದುರಿನಲ್ಲಿ ಸಿಕ್ಕರೆ ಅದಕ್ಕೆ ಒಂದು ಬೆಲ್ಲವನ್ನು ತಿನ್ನಿಸಿ ನಂತರ ಸಂದರ್ಶನಕ್ಕಾಗಿ ಹೋಗುವುದರಿಂದ, ನಿಮಗೆ ಎದುರಾಗುವ ಅಡೆತಡೆಗಳು ತೊಂದರೆಗಳು ನಿವಾರಣೆಗೊಂಡು ಸಂದರ್ಶನವನ್ನು ನೀವು ಸುಲಭವಾಗಿ ಪಾಸು ಮಾಡಬಹುದು.
ಜೀವನದಲ್ಲಿ ಕಷ್ಟಗಳೇ ಎದುರಾಗುತ್ತಿದ್ದರೆ ಅವುಗಳನ್ನು ಎದುರಿಸುವ ಸ್ಥೈರ್ಯ ನಿಮ್ಮಲ್ಲಿ ಹೆಚ್ಚಬೇಕಾದರೆ ವಾರದಲ್ಲಿ ಒಂದು ದಿನ ಅಂದರೆ ಶನಿವಾರದ ದಿವಸದಂದು ಆಂಜನೇಯ ಸ್ವಾಮಿಯ ಗುಡಿಗೆ ಹೋಗಿ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದು ಕೊಂಡು ಬನ್ನಿ.ಇದರಿಂದ ನಿಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ನೀವು ಬೇಗನೆ ಎದುರಿಸಬಹುದು, ನಿಮಗೆ ಆ ಕಷ್ಟಗಳನ್ನು ಎದುರಿಸುವಂತಹ ಸ್ಥೈರ್ಯವೂ ಕೂಡ ಹೆಚ್ಚುತ್ತದೆ. ಇವತ್ತಿನ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗೆ ನಮ್ಮ ಫೇಸ್ಬುಕ್ ಪೇಜನ್ನು ಫಾಲೋ ಮಾಡಿ ಧನ್ಯವಾದ.