Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ನೀವು ಎಂದಾದರೂ ಖಾಲಿ ಹೊಟ್ಟೆಗೆ ತುಪ್ಪವನ್ನು ತಿಂದಿದ್ದೀರಾ ಹಾಗೆ ತಿಂದರೆ ಏನಾಗುತ್ತೆ ಗೊತ್ತ ಇಲ್ಲಿದೆ ವಿಶೇಷವಾದ ಮಾಹಿತಿ… !!!

ಸ್ನೇಹಿತರೇ ಸಾಮಾನ್ಯವಾಗಿ ನಾವು ದಿನನಿತ್ಯ ಆಹಾರವನ್ನು ಸೇವಿಸುವಾಗ ಅದು ಎಷ್ಟು ಕ್ಯಾಲೊರಿ ಇದೆ ಮತ್ತು ನಮ್ಮ ದೇಹಕ್ಕೆ ಅದರಿಂದ ಏನು ಉಪಯೋಗ ಎಂದು ಗಮನದಲ್ಲಿಟ್ಟುಕೊಂಡು ಆಹಾರವನ್ನು ಸೇವಿಸುತ್ತೇವೆ ಇಂತಹ ಆಹಾರಗಳನ್ನೆಲ್ಲ ಸೇವಿಸುವಾಗ ನಾವು ತುಂಬಾ ಗಮನವಿಟ್ಟು ಯೋಚಿಸಿ ಆಹಾರವನ್ನು ಸೇವಿಸುತ್ತೇವೆ.ಅಂಥದ್ದರಲ್ಲಿ ತುಪ್ಪ ಕೂಡ ಒಂದು ತುಪ್ಪವನ್ನು ಹೆಚ್ಚಾಗಿ ಸೇವಿಸುವುದರಿಂದ ದಪ್ಪಗಾಗುತ್ತಾರೆ ಎಂಬ ಕಲ್ಪನೆ ಅನೇಕ ಜನರಿಗಿದೆ ಆದರೆ ಈ ತುಪ್ಪವನ್ನು ಹೆಚ್ಚಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಯುರ್ವೇದದ ಪ್ರಕಾರ ಸಾವಿರಾರು ಉಪಯೋಗಗಳಿರುವುದನ್ನು ನಾವು ಗಮನಿಸಬಹುದಾಗಿದೆ ಅದರಲ್ಲಿ ಕೆಲವೊಂದು ಉಪಯೋಗಗಳನ್ನು ನಾವು ಈ ದಿನ ನಿಮಗೆ ತಿಳಿಸಿಕೊಡುತ್ತೇವೆ.

ಆ ಉಪಯೋಗಗಳನ್ನು ತಿಳಿದುಕೊಂಡು ನಂತರ ತುಪ್ಪವನ್ನು ಸೇವಿಸಬೇಕು ಸೇವಿಸಬಾರದು ಅದು ಖಾಲಿ ಹೊಟ್ಟೆಯಲ್ಲಿ ಎಂದು ತಿಳಿದುಕೊಳ್ಳಿ .ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಜೀವಕೋಶಗಳು ಚಟುವಟಿಕೆಯಿಂದ ಇರುತ್ತವೆ ಜೀವಕೋಶಗಳಿಗೆ ಹೆಚ್ಚು ಪೋಷಕಾಂಶಗಳು ತುಪ್ಪದಿಂದ ದೊರೆಯುವುದನ್ನು ನಾವು ಕಾಣಬಹುದಾಗಿದೆ.ಮತ್ತೊಂದೆಂದರೆ ತ್ವಚೆಯಲ್ಲಿರುವ ಶುಷ್ಕತೆಯನ್ನು ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಂಪೂರ್ಣವಾಗಿ ತೆಗೆದು ಹಾಕಬಹುದು ಮತ್ತು ಸಂಧಿವಾತದ ಸಮಸ್ಯೆ ಇದ್ದರೆ ಅದನ್ನು ಕೂಡ ಹೋಗಲಾಡಿಸಬಹುದು ಲಾಮಿಕೆಟ್ ಒಳಗೊಂಡಿರುವುದರಿಂದಾಗಿ ತುಪ್ಪವನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು ಕೀಲುಗಳಿಗೆ ಉತ್ತಮವಾದದ್ದು ತುಪ್ಪ .

ಜೊತೆಗೆ ಮೂಳೆಗೆ ಸಂಬಂಧಿಸಿದಂತೆ ಯಾವುದಾದರೂ ತೊಂದರೆಗಳಿದ್ದರೆ ತುಪ್ಪದ ಲೇಪವನ್ನು ಮಾಡುವುದರಿಂದಾಗಿ ಇದು ಬೇಗ ಗುಣವಾಗುತ್ತದೆ.ಮೆದುಳಿನ ಕಾರ್ಯಗಳನ್ನು ಇದು ಅತಿ ಹೆಚ್ಚು ಮಾಡುವುದನ್ನು ಗಮನಿಸಬಹುದಾಗಿದೆ .ಅದರಲ್ಲೂ ಕೂಡ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸುವುದರಿಂದಾಗಿ ಮೆದುಳು ಅತಿ ಹೆಚ್ಚಾಗಿ ಕಾರ್ಯನಿರ್ವಹಿಸುವುದನ್ನು ಗಮನಿಸಬಹುದಾಗಿದೆ ಅದರ ಜೊತೆಯಲ್ಲಿ ಬುದ್ಧಿಶಕ್ತಿ ಕೂಡ ಹೆಚ್ಚಾಗುತ್ತದೆ ಮತ್ತು ವ್ಯಕ್ತಿ ಯಾವಾಗಲೂ ಚಟುವಟಿಕೆಯಿಂದ ಇರುವುದನ್ನು ಕೂಡ ಗಮನಿಸಬಹುದಾಗಿದೆ .ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸುವುದರಿಂದ ದಪ್ಪಗಾಗುತ್ತಾರೆ ಎಂಬುದು ತಪ್ಪು ಕಲ್ಪನೆ ದೇಹದ ತೂಕವನ್ನು ನಿಯಮಿತವಾಗಿ ಸರಿ ಮಾಡಿಕೊಳ್ಳಲು ತುಪ್ಪ ಸಹಾಯಕವಾಗಿದೆ ಮತ್ತು ಕೂದಲು ಉದುರುವುದನ್ನು ಕಡಿಮೆ ಮಾಡಲು ಕೂಡ ತುಪ್ಪ ಸಹಾಯವಾಗುತ್ತದೆ .

ಅದು ಹೇಗೆ ಗೊತ್ತೆ ಬೆಳಗ್ಗೆ ಎದ್ದಕೂಡಲೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸುವುದರಿಂದ ಕೇಶಕ್ಕೆ ಅಂದ್ರೆ ಕೂದಲಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಿದ್ದರೂ ನಿವಾರಣೆಯಾಗುವುದು ಗಮನಿಸಬಹುದಾಗಿದೆ.ಜೊತೆಯಲ್ಲಿ ಕೂದಲಿನಲ್ಲಿ ಲ್ಯಾಕ್ಟೋಸ್ ಗಳನ್ನು ಇದು ಸುಧಾರಿಸಿರುವುದನ್ನು ಗಮನಿಸಬಹುದು ಮತ್ತು ಕೂದಲು ಅತಿ ಹೆಚ್ಚಾಗಿ ಶೈನ್ ಆಗುವುದನ್ನು ಕೂಡ ಗಮನಿಸಬಹುದು.ಸಾಮಾನ್ಯವಾಗಿ ಕೆಲವೊಬ್ಬರಿಗೆ ಹಾಲು ಮತ್ತು ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನು ಸೇವಿಸಿದರೆ ಅವರ ಜೀರ್ಣಕ್ರಿಯೆ ಸರಿಯಾಗುವುದಿಲ್ಲ ಆದರೆ ಬೆಳಗ್ಗೆ ಎದ್ದಕೂಡಲೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸರಿಯಾಗುತ್ತದೆ ಮತ್ತು ಲ್ಯಾಕ್ಟೋಸ್ ನ ಸಮಸ್ಯೆ ಇದ್ದರೆ ಕೂಡ ಸರಿದೂಗಿಸುತ್ತದೆ.

ಮತ್ತು ಕ್ಯಾನ್ಸರ್ನಂತಹ ಸಮಸ್ಯೆಗಳಿದ್ದರೆ ತುಪ್ಪವನ್ನು ನಿಯಮಿತವಾಗಿ ಸೇವಿಸುತ್ತಾ ಬರುವುದರಿಂದ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬಹುದು .ಮತ್ತು ದೇಹಕ್ಕೆ ಸಂಬಂಧಪಟ್ಟ ಹಾಗೆ ಶುಷ್ಕತೆಯ ಸಮಸ್ಯೆ ಇದ್ದರೆ ಎರಡು ಚಮಚ ತುಪ್ಪವನ್ನು ಹಾಕಿ ಅದನ್ನು ಬಿಸಿ ಮಾಡಿ ದೇಹಕ್ಕೆ ಹಚ್ಚುವುದರಿಂದ ಶುಷ್ಕತೆಯನ್ನು ಕಡಿಮೆ ಮಾಡಬಹುದು .ಮುಖದ ಮೇಲೆ ಯಾವುದೇ ರೀತಿಯಾದಂತಹ ಒಣಗಿದ ಅನುಭವ ನಿಮಗಾದರೆ ಒಂದು ಚಮಚ ತುಪ್ಪದ ಜೊತೆಗೆ ಒಂದು ಚಮಚ ಕಡಲೆ ಹಿಟ್ಟನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಮ್ಮ ಮುಖಕ್ಕೆ ಹಚ್ಚುವುದರಿಂದ ಮುಖ ಕಾಂತಿಯುತವಾಗಿ ಹೊಳೆಯುವುದನ್ನು ಗಮನಿಸಬಹುದು.ಈ ರೀತಿಯಲ್ಲಿ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸುವುದರಿಂದಾಗಿ ಅನೇಕ ಉಪಯೋಗಗಳಿರುವುದನ್ನು ಗಮನಿಸಬಹುದಾಗಿದೆ ಧನ್ಯವಾದಗಳು ಶುಭ ದಿನ .

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ