ನೀವು ಊಟ ಮಾಡಿದ ನಂತರ ಹೀಗೆ ಮಾಡಿದರೆ ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ !!!!

16

ಊಟವಾದ ಬಳಿಕ ಮಾಡಬೇಕಾಗಿರುವ ಕೆಲಸ ಕಾರ್ಯಗಳು ಯಾವುವು ಹಾಗೆ ಊಟವಾದ ತಕ್ಷಣ ಮಾಡಬಾರದ ಕೆಲಸವೇನು ಇದರಿಂದ ಏನಾಗುತ್ತದೆ. ಹಾಗೆ ಉತ್ತಮ ಆರೋಗ್ಯಕ್ಕಾಗಿ ಊಟವಾದ ಬಳಿಕ ಏನನ್ನು ಮಾಡಬೇಕು .

ಎಂಬುದನ್ನು ತಿಳಿಯೋಣ ಇಂದಿನ ಈ ಮಾಹಿತಿಯಲ್ಲಿ ಪ್ರಿಯ ವೀಕ್ಷಕರೇ ತಪ್ಪದೇ ಈ ಒಂದು ಉಪಯುಕ್ತ ಆರೋಗ್ಯ ಮಾಹಿತಿಯನ್ನು ನೀವು ಕೂಡ ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಊಟವಾದ ತಕ್ಷಣ ಮಾಡಬಾರದ ಕೆಲಸವೇನು ಅಂದರೆ ವಾಕ್ ಮಾಡುವುದು ಅಥವಾ ಮಲಗಿಕೊಳ್ಳುವುದು .ಹೌದು ಊಟವಾದ ತಕ್ಷಣವೇ ವಾಕ್ ಮಾಡಬಾರದು ಇದರ ಬದಲಿಗೆ ತಾಂಬೂಲವನ್ನು ಸೇವಿಸಬೇಕು .

ಹೇಗೆ ಅಂದರೆ ಒಂದು ಎಲೆಯನ್ನು ತೆಗೆದುಕೊಂಡು ಅದರ ತೊಟ್ಟು ಮತ್ತು ತುದಿಯನ್ನು ತೆಗೆದು ಹಾಕಬೇಕು ಯಾಕೆ ಎಂದರೆ ಇದರಲ್ಲಿ ವಿಷ ಪೂರಕ ಅಂಶವೆಂದು ಇದು ಆರೋಗ್ಯವನ್ನು ಹಾಳು ಮಾಡುತ್ತದೆ.

ಹಾಗೆ ಎಲೆಯ ಮಧ್ಯಭಾಗದಲ್ಲಿ ತೂತವನ್ನು ಮಾಡಿ ಇದಕ್ಕೆ ಓಮಿನ ಕಾಳು ಸ್ವಲ್ಪ ಮತ್ತು ಸೋಂಪಿನ ಕಾಳನ್ನು ಸ್ವಲ್ಪ ಹಾಕಿ ಸ್ವಲ್ಪವೇ ಸುಣ್ಣವನ್ನುಹಾಕಿ ಇದನ್ನು ಸೇವಿಸಬೇಕು. ಇದರಿಂದ ನಮ್ಮ ದೇಹದಲ್ಲಿ ಮಾಡಿದ ಊಟ ಉತ್ತಮವಾಗಿ ಜೀರ್ಣಗೊಳ್ಳುತ್ತದೆ ಹಾಗೂ ಜೀರ್ಣಶಕ್ತಿ ಕೂಡ ವೃದ್ಧಿಯಾಗುತ್ತದೆ.

ನಮ್ಮ ಬಾಯಿಯಲ್ಲಿರುವ ಲಾಲಾರಸ ಎಲೆಯೊಂದಿಗೆ ಬೆರೆತು ಅದು ಹೊಟ್ಟೆಗೆ ಸೇರುತ್ತದೆ ಹಾಗೆ ಹೊಟ್ಟೆಯಲ್ಲಿರುವ ಆಮ್ಲವು ಲಾಲಾರಸದೊಂದಿಗೆ ಸೇರಿ ತಿಂದ ಆಹಾರವನ್ನು ಉತ್ತಮವಾಗಿ ಜೀರ್ಣ ಗೊಳಿಸಲು ಇದು ಸಹಕರಿಸುತ್ತದೆ.

ಊಟವಾದ ಬಳಿಕ ತಾಂಬೂಲವನ್ನು ಹಾಕಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡೆವು ಆದರೆ ಊಟವಾದ ಬಳಿಕ ಮಾಡದಿರುವಂತಹ ಮತ್ತೊಂದು ಕೆಲಸವಿದೆ ಅದೇನೆಂದರೆ ವಾಕ್ ಮಾಡಬಾರದು ಹಾಗೆ ಮಲಗಬಾರದು.

ವೀಕ್ಷಕರೇ ಇದರ ಜೊತೆಗೆ ಮತ್ತೊಂದು ವಿಚಾರವಿದೆ ಅದೇನೆಂದರೆ ಊಟವಾದ ಬಳಿಕ ಯಾವುದೇ ಯೋಗ ಆಗಲೇ ಎಕ್ಸಸೈಸ್ ಆಗಲಿ ಮಾಡಬಾರದು. ಆದರೆ ಊಟವಾದ ಬಳಿಕ ಈ ಒಂದೇ ಒಂದು ಆಸನವನ್ನು ಮಾಡುವುದರಿಂದ ಅನೇಕ ಪ್ರಯೋಜನವಿದೆ ತಿಂದ ಆಹಾರ ಉತ್ತಮವಾಗಿ ಬೇಗಾನೆ ಜೀರ್ಣಗೊಳ್ಳುತ್ತದೆ.

ಈ ಆಸನ ಯಾವುದು ಅಂದರೆ ಕೇವಲ ಹತ್ತರಿಂದ ಹದಿನೈದು ನಿಮಿಷಗಳವರೆಗೆ ವಜ್ರವನ್ನು ಹಾಕಿಕೊಂಡು ಕೂರಬೇಕು. ಈ ಆಸನವನ್ನು ಹಾಕುವುದು ಹೇಗೆ ಅಂದರೆ ಮುಸಲ್ಮಾನ್ ಬಾಂಧವರು ಪ್ರಾರ್ಥನೆಗಾಗಿ ಕುಳಿತುಕೊಳ್ಳುವ ಹಾಗೆ ಈ ಆಸನವನ್ನು ಮಾಡುವುದು .

ಈ ಒಂದು ಆಸನವನ್ನು ಹಾಕಿ ಕುಳಿತುಕೊಳ್ಳಬೇಕು, ಇದರಿಂದ ಹೊಟ್ಟೆಯ ಮೇಲೆ ಸ್ವಲ್ಪ ಫ್ರೆಷರ್ ಬಿದ್ದು ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.ಹೌದು ನಾವು ಊಟವಾದ ಬಳಿಕ ಬೇರೆ ವಿಚಾರಗಳ ಬಗ್ಗೆ ಯೋಚಿಸಬಾರದು.

ನಾವು ಮಾಡಿದ ಊಟದ ಬಗ್ಗೆ ಯೋಚಿಸಬೇಕು ಇದರಿಂದ ಜೀರ್ಣಾಂಗ ಶಕ್ತಿ ವೃದ್ಧಿಯಾಗುತ್ತದೆ ಆದ ಕಾರಣ ವಜ್ರ ಆಸನವನ್ನು ಹಾಕಿ ಕುಳಿತುಕೊಳ್ಳುವುದರಿಂದ ನಮ್ಮ ದೇಹದ ಪ್ರೆಷರ್ ಹೊಟ್ಟೆಯ ಮೇಲೆ ಕೇಂದ್ರೀಕೃತವಾಗಿ ಜೀರ್ಣಾಂಗ ಕ್ರಿಯೆ ಉತ್ತಮವಾಗುತ್ತದೆ,

ಊಟ ಮಾಡುವಾಗ ಹೊಟ್ಟೆ ಪೂರ್ತಿಯಾಗಿ ಊಟವನ್ನು ಮಾಡಬಾರದು ಯಾಕೆ ಅಂದರೆ ಉದಾಹರಣೆಗೆ ಮಿಕ್ಸಿ ಮಾಡುವಾಗ ಜಾರಿನ ಪೂರ್ತಿ ಪದಾರ್ಥವನ್ನು ತುಂಬಿದರೆ ಹೇಗೆ ಅದು ಸರಿಯಾಗಿ ಇರುವುದಿಲ್ಲವೋ, ಅದೇ ರೀತಿ ನಮ್ಮ ಹೊಟ್ಟೆಯ ವಿಚಾರದಲ್ಲಿಯೂ ಕೂಡ ನಾವು ಹೊಟ್ಟೆ ಪೂರ್ತಿ ಆಹಾರವನ್ನು ತಿಂದರೆ ಅದು ಸರಿಯಾಗಿ ಜೀರ್ಣವಾಗುವುದಿಲ್ಲ.

ನಾವು ತಿಂದಂತಹ ಆಹಾರ ಇನ್ನು ಬೇಕುಬೇಕು ಅಂತ ಅನ್ನಿಸಿದಲ್ಲಿ ಹೊಟ್ಟೆಯಲ್ಲಿ ಇನ್ನೂ ಸ್ವಲ್ಪ ಹಸಿವು ಹಾಗೆ ಇರಬೇಕಾಗುತ್ತದೆ. ಆ ರೀತಿ ನಾವು ಊಟವನ್ನು ಮಾಡಬೇಕು, ಇದರಿಂದ ಜೀರ್ಣಾಂಗ ಕ್ರಿಯೆ ಉತ್ತಮವಾಗಿರುತ್ತದೆ,

ನಾವು ತಿಂದ ಆಹಾರ ಪರಿಪೂರ್ಣವಾಗಿ ಜೀರ್ಣವಾದರೆ ನಮ್ಮ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ. ಜೀರ್ಣಾಂಗ ಕ್ರಿಯೆ ವೃದ್ಧಿಗಾಗಿ ಊಟವಾದ ಬಳಿಕ ಈ ದಿನ ನಿಮಗೆ ತಿಳಿಸಿದಂತಹ ಕ್ರಮವನ್ನು ಪಾಲಿಸಿ ಧನ್ಯವಾದ.

LEAVE A REPLY

Please enter your comment!
Please enter your name here