ಮನೆಯಲ್ಲಿ ಗೃಹಿಣಿಯರು ಅಂದ ಮೇಲೆ ಅವರು ತಮ್ಮ ಮನೆಯ ಯಜಮಾನರು ಕೊಟ್ಟಂತಹ ಹಣವನ್ನು ಸ್ವಲ್ಪ ಸ್ವಲ್ಪ ಆದರೂ ಉಳಿತಾಯ ಮಾಡಿಕೊಂಡು ಬಂದಿರುತ್ತಾರೆ.
ಅಂತಹ ಹಣವನ್ನು ಇನ್ನೂ ಹೆಚ್ಚು ಮಾಡಿಕೊಳ್ಳುವುದಕ್ಕಾಗಿ ಆ ಹಣ ದ್ವಿಗುಣವಾಗಬೇಕಾದರೆ ಪರಿಹಾರ ಶಾಸ್ತ್ರದಲ್ಲಿ ಒಂದು ಒಳ್ಳೆಯ ರೀತಿಯಲ್ಲಿ ಉಲ್ಲೇಖವಾಗಿರುವ ಈ ಒಂದು ಪರಿಹಾರವನ್ನು ನೀವು ಸೋಮವಾರ ದಿನದಂದು ಕೈಗೊಳ್ಳಿ .
ಹಾಗೆ ಈ ಒಂದು ಪರಿಹಾರದ ನಂತರ ಏನು ಮಾಡಬೇಕು ಪರಿಹಾರವನ್ನು ಹೇಗೆ ಮಾಡುವುದು ಎಂಬುದನ್ನು ತಿಳಿಸುತ್ತೇನೆ ಹೀಗೆ ಮಾಡಿ ನೀವು ಕೂಡಿಟ್ಟ ಹಣವೂ ಒಂದು ಒಳ್ಳೆಯ ಕಾರ್ಯಕ್ಕೆ ಉಪಯೋಗವಾಗಿ ನಿಮ್ಮ ಬಳಿ ಇರುವ ಹಣ ಇನ್ನೂ ದ್ವಿಗುಣ ಆಗುವುದರಲ್ಲಿ ಸಂಶಯವಿಲ್ಲ.
ಯಾರಿಗೇ ಆಗಲಿ ಜೀವನದಲ್ಲಿ ಹಣದ ಅವಶ್ಯಕತೆ ಇದ್ದೇ ಇರುತ್ತದೆ ಹಣ ಬೇಡ ಅಂತ ಹೇಳುವವರು ಯಾರೂ ಇಲ್ಲ, ಹಣವನ್ನು ಸಂಪಾದಿಸುವುದು ಎಷ್ಟು ಕಷ್ಟವೋ ಅದನ್ನು ಉಳಿತಾಯ ಮಾಡುವುದು ಕೂಡ ಅಷ್ಟೇ ಕಷ್ಟವಾಗಿರುತ್ತದೆ.
ನಾವು ಹಣವನ್ನು ಉಳಿತಾಯ ಮಾಡುವಾಗ ಅನೇಕ ಅಡೆತಡೆಗಳು ಉಂಟಾಗಬಹುದು ಅಥವಾ ನಮ್ಮ ಬಳಿ ಹಣ ಇದೆ ಅಂತ ನಮಗೆ ಏನಾದರೂ ವಸ್ತುಗಳನ್ನು ಕೊಂಡುಕೊಳ್ಳಬೇಕು ಹಣದಿಂದ ಏನಾದರೂ ಮಾಡಬೇಕು ಅಂತ ಅನ್ಸ್ತಾ ಇರುತ್ತೆ .
ಆದರೆ ಆ ಹಣವೂ ಸರಿಯಾದ ಮಾರ್ಗದಲ್ಲಿ ಉಪಯೋಗವಾಗಬೇಕು ಅನ್ನೋ ಒಂದು ಆಸೆಯೂ ಕೂಡ ನಮ್ಮ ಮನಸ್ಸಿನಲ್ಲಿರುತ್ತದೆ. ನೀವು ಕೂಡಿಟ್ಟ ಹಣವೂ ಒಂದು ಒಳ್ಳೆಯ ಕಾರ್ಯಕ್ಕೆ ಉಪಯೋಗವಾಗಬೇಕು ಹಾಗೆ ಹಣ ದ್ವಿಗುಣವಾಗ ಬೇಕು ಅಂದರೆ ಪರಿಹಾರ ಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಈ ಒಂದು ಪರಿಹಾರವನ್ನು ಮಾಡಿ.
ಸೋಮವಾರ ಸಂಜೆ ಸಮಯದಲ್ಲಿ ಒಂದು ಜಾಡಿ ಅಂದರೆ ಭರಣಿಯನ್ನು ತೆಗೆದುಕೊಂಡು ಆ ಭರಣಿಯ ಪೂರ್ತಿ ಕಲ್ಲು ಉಪ್ಪನ್ನು ಹಾಕಬೇಕು. ಈ ಭರಣಿ ಪೂರ್ತಿ ಉಪ್ಪನ್ನು ಹಾಕಿದ ಬಳಿಕ ಅದನ್ನು ಒಂದು ಪೇಪರ್ ನಿಂದ ಮುಚ್ಚಿ ಅದರ ಮೇಲೆ ಗೋಮತಿ ಚಕ್ರವನ್ನು ಇಟ್ಟು ಮೂರು ಹೆಣ್ಣು ಕವಡೆಯನ್ನು ಇಡಬೇಕು.
ಗೋಮತಿ ಚಕ್ರ ಮತ್ತು ಕವಡೆ ಮಾರುಕಟ್ಟೆಯಲ್ಲಿ ಸಿಗುತ್ತದೆ ಕವಡೆಯನ್ನು ಕೇಳುವಾಗ ಕವಡೆಯನ್ನು ಕೇಳಿ ಕೊಂಡುಕೊಳ್ಳುವುದು ಒಳ್ಳೆಯದು.ಗೋಮತಿ ಚಕ್ರವನ್ನು ಇಲ್ಲಿ ಬಳಸುವುದು ಯಾಕೆ ಅಂದರೆ ,ವಿಷ್ಣು ದೇವನಿಗೆ ಸೇರಿದ ಈ ಒಂದು ಸುದರ್ಶನ ಚಕ್ರದ ಅಂಶವೇ ಗೋಮತಿ ಚಕ್ರವಾಗಿದ್ದು.
ಇದರ ಪೂಜೆ ಮಾಡುವುದರಿಂದ ಲಕ್ಷ್ಮೀ ದೇವಿಯೂ ಪ್ರಸನ್ನ ಗೊಳ್ಳುತ್ತಾರೆ ಹಾಗೆ ಲಕ್ಷ್ಮೀದೇವಿಯು ಸಮುದ್ರದಲ್ಲಿ ಹುಟ್ಟಿದ ಕಾರಣ ಸಮುದ್ರದಲ್ಲಿಯೇ ಹುಟ್ಟಿದ ಕವಡೆಯನ್ನು ಕೂಡ ಇಷ್ಟಪಡುತ್ತಾಳೆ. ಹಾಗೆ ಉಪ್ಪು ಕೂಡ ಸಮುದ್ರದಲ್ಲಿಯೇ ಹುಟ್ಟಿದ್ದು ಈ ಒಂದು ವಸ್ತುಗಳನ್ನು ಬಳಸಿ ಈ ಪರಿಹಾರವನ್ನು ಮಾಡುವುದರಿಂದ ನೀವು ಮನಸ್ಸಿನಲ್ಲಿ ಅಂದುಕೊಂಡಿದ್ದು ನಡೆಯುತ್ತದೆ.
ಈ ರೀತಿ ಭರಣಿಯಲ್ಲಿ ತುಂಬಿಸಿದ ಉಪ್ಪನ್ನು ನೀವು ಯಾವ ದಿಕ್ಕಿನಲ್ಲಿ ಇಟ್ಟು ಪೂಜಿಸಬೇಕು ಅಂದರೆ ನಿಮ್ಮ ಮನೆಯ ವಾಯುವ್ಯ ದಿಕ್ಕಿನಲ್ಲಿ ಇಡಬೇಕು ಸಾಮಾನ್ಯವಾಗಿ ವಾಯುವ್ಯ ದಿಕ್ಕಿನಲ್ಲಿ ಶೌಚಾಲಯ ಕಟ್ಟಿಸುತ್ತಾರೆ.
ಆದರೆ ನಿಮ್ಮ ಕೋಣೆಯಲ್ಲಿಯೂ ಕೂಡ ನಾಲ್ಕು ಆ ಮೂಲೆಯಲ್ಲಿ ಒಂದು ವಾಯುವ್ಯ ದಿಕ್ಕು ಆಗಿರುತ್ತದೆ ಅಲ್ಲಿ ಈ ಭರಣಿಯನ್ನು ಇಟ್ಟು ನೀವ ಉಳಿತಾಯ ಮಾಡಿದ ಹಣವನ್ನು ಭರಣಿಯ ಮೇಲೆ ಇಟ್ಟು ಇದನ್ನು ಪೂಜಿಸಬೇಕು. ನಂತರ ಮಾರನೇ ದಿವಸ ಈ ಉಳಿತಾಯದ ಹಣವನ್ನು ಬ್ಯಾಂಕಿಗೆ ಹೋಗಿ ಹಾಕಿ ಬರಬೇಕು ಅಂದರೆ ಮಂಗಳವಾರದ ದಿನದಂದು ಬ್ಯಾಂಕಿಗೆ ಹೋಗಿ ನೀವು ಹಣವನ್ನು ಡೆಪಾಸಿಟ್ ಮಾಡಿ ಬರಬೇಕು.
ನೀವು ಭರಣಿಯಲ್ಲಿ ಬಳಸಿರುವ ಕಲ್ಲು ಉಪ್ಪು ನಿಮ್ಮ ಮನೆಯ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಹಾಗೆ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ ನೀವು ಮನಸ್ಸಿನಲ್ಲಿ ಅಂದುಕೊಂಡ ಕೆಲಸ ಕಾರ್ಯಗಳು ಜರುಗುತ್ತದೆ ಮತ್ತು ನಿಮ್ಮ ಹಣ ದ್ವಿಗುಣವಾಗಲು ಲಕ್ಷ್ಮಿ ದೇವಿಯ ಆಶೀರ್ವಾದವೂ ಕೂಡ ದೊರೆಯುತ್ತದೆ.