ಒಬ್ಬ ಮನುಷ್ಯ ಜೀವನದಲ್ಲಿ ಬೆಳೆಯುತ್ತಿದ್ದಾನೆ ಅಂದರೆ ಅಥವಾ ಅವನು ರಸ್ತೆಯಲ್ಲಿ ನಡೆದು ಬರುವಾಗ ಸ್ವಂತ ವಾಹನವನ್ನು ಕೊಂಡುಕೊಂಡು ವಾಹನದಲ್ಲಿ ಓಡಾಡುವಾಗ ಕಾರ್ ಕೊಂಡುಕೊಂಡಾಗ,ಅವನ ಬಗ್ಗೆ ಸಾಕಷ್ಟು ಜನ ಸಾಕಷ್ಟು ರೀತಿಯಲ್ಲಿ ಮಾತನಾಡುತ್ತಾರೆ. ಅದೇ ಜನ ವ್ಯಕ್ತಿಗೆ ಕಷ್ಟ ಅಂದಾಗ ಬರುವುದಿಲ್ಲ ಆದರೆ ಸುಖಾ ದಲ್ಲಿ ಇದ್ದಾಗ ಎಲ್ಲರೂ ಕೂಡ ವ್ಯಕ್ತಿಯ ಬಗ್ಗೆ ಮಾತನಾಡುತ್ತಾರೆ.ಆ ವ್ಯಕ್ತಿಯ ಜೊತೆ ಒಳ್ಳೆಯ ಒಡನಾಟವನ್ನು ಇಟ್ಟುಕೊಂಡಿರುತ್ತಾರೆ ಮತ್ತು ಹಿಂದೆ ಅವನ ಬಗ್ಗೆ ಮಾತನಾಡುತ್ತಾರೆ ಕೂಡ ಜನ ಕೆಟ್ಟರು ಕೂಡ ಮಾತಾಡ್ತಾರೆ ಬೆಳೆದರೂ ಕೂಡ ಮಾತಾಡ್ತಾರೆ.
ಹಿಂದೆ ಮಾತಾಡುವ ಜನರಿಂದ ದೃಷ್ಟಿದೋಷ ಆಗುತ್ತದೆ ಈ ರೀತಿ ದೃಷ್ಟಿದೋಷದಿಂದ ಜೀವನದಲ್ಲಿ ಹಲವು ತೊಂದರೆಗಳು ಕೂಡ ಉಂಟಾಗುತ್ತದೆ.ಹೌದು ದೃಷ್ಟಿದೋಷ ಎಂಬುದು ಸಾಮಾನ್ಯವಲ್ಲ ಕೆಲವರಿಗೆ ಅಂತೂ ಬಹಳ ಪೀಡಿಸುತ್ತದೆ ಈ ದೃಷ್ಟಿ ದೋಷ ಇದಕ್ಕಾಗಿ ಪರಿಹಾರವೇನು ಮತ್ತು ಶಾಸ್ತ್ರದ ಮುಖಾಂತರ ಹೋಗುವುದಾದರೆ ಈ ದೃಷ್ಟಿ ದೋಷವನ್ನು ಹೇಗೆ ನಿವಾರಿಸಿಕೊಳ್ಳಬಹುದು ಅಂತ ಹೇಳುವುದಾದರೆ,ದೃಷ್ಟಿ ದೋಷ ಪರಿಹರಿಸಿಕೊಳ್ಳುವುದಕ್ಕೆ ಉತ್ತಮವಾದ ಪರಿಹಾರಗಳಿವೆ. ಅದರಲ್ಲಿ ಒಂದು ಪರಿಹಾರವನ್ನು ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ.
ಒಂದೇ ಒಂದು ಬೆಳ್ಳುಳ್ಳಿಯಿಂದ ಈ ಪರಿಹಾರವನ್ನು ಮಾಡಿಕೊಳ್ಳಿ ನಿಮ್ಮ ಜೀವನದಲ್ಲಿ ಉಂಟಾಗುವಂತಹ ಕೆಟ್ಟ ಶಕ್ತಿಗಳ ಪ್ರಭಾವವನ್ನು ದೂರ ಮಾಡಿಕೊಳ್ಳಿ.ಮೊದಲಿಗೆ ಈ ದೃಷ್ಟಿದೋಷ ನಿವಾರಣೆಗಾಗಿ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ ಒಂದು ಗಡ್ಡೆ ಬೆಳ್ಳುಳ್ಳಿ ಅನ್ನು ತೆಗೆದುಕೊಂಡು ಅದನ್ನು ದೇವರ ಮುಂದೆ ಇರಿಸಿ. ಈ ತಂತ್ರವನ್ನು ಮಂಗಳವಾರದ ದಿವಸದಂದು ಮಾಡಬೇಕು.ಹೌದು ಮಂಗಳವಾರ ದಿವಸ ದಂದು ಈ ಪರಿಹಾರವನ್ನು ಮಾಡಿಕೊಳ್ಳುವುದು ಶ್ರೇಷ್ಠವಾಗಿದ್ದು, ಮಂಗಳವಾರ ಬೆಳಿಗ್ಗೆ ಒಂದು ಗಡ್ಡೆ ಬೆಳ್ಳುಳ್ಳಿ ಅನ್ನು ದೇವರ ಮುಂದೆ ಇರಿಸಿ.
ಅದನ್ನು ಪೂಜೆ ಮಾಡುವಾಗ ದೇವರ ಬಳಿ ಇಡಬೇಕು ದೀಪಾರಾಧನೆಯ ನಂತರ ಆ ಬೆಳ್ಳುಳ್ಳಿಯನ್ನು ತೆಗೆದುಕೊಂಡು ನೀವು ಆಚೆ ತೆಗೆದುಕೊಂಡು ಹೋಗುವಂತಹ ಪರ್ಸ್ ಗಳಲ್ಲಿ ಇಟ್ಟುಕೊಳ್ಳಿ. ಇನ್ನೂ ಗಂಡು ಮಕ್ಕಳಾದರೆ ಪರ್ಸ್ ತೆಗೆದುಕೊಂಡು ಹೋಗುವುದು ಇಲ್ಲ ಅಂದರೆ ಜೇಬಿನಲ್ಲಿಯೆ ಬೆಳ್ಳುಳ್ಳಿ ಅನ್ನು ಇಟ್ಟುಕೊಳ್ಳಬಹುದು.ಈ ರೀತಿ ಬೆಳ್ಳುಳ್ಳಿಯನ್ನು ನೀವು ಆಚೆ ಹೋಗುವಾಗ ನಿಮ್ಮ ಬಳಿ ಇಟ್ಟುಕೊಳ್ಳಿ ಆದರೆ ಯಾವುದೇ ಕಾರಣಕ್ಕೂ ಇದನ್ನು ಎಲ್ಲಿಯೂ ಮರೆಯಬಾರದು ಇಷ್ಟು ಮಾಡಿದರೆ ಸಾಕು ಅಂತ ನೀವು ಕೇಳಬಹುದು.
ಆದರೆ ಈ ಪರಿಹಾರವನ್ನು ನೀವು ಮಾಡಿಕೊಳ್ಳುವಾಗ ಮತ್ತೊಂದು ವಿಚಾರವನ್ನು ಪಾಲಿಸಬೇಕೋ ಅದೇನೆಂದರೆ ಆಚೆ ಹೋಗುವಾಗ ಹಣೆಗೆ ಗಂಧವನ್ನು ವೃತ್ತಾಕಾರದಲ್ಲಿ ಇರಿಸಿ,ಅದರ ಮಧ್ಯೆ ಕುಂಕುಮವನ್ನು ಇಟ್ಟುಕೊಳ್ಳಬೇಕು. ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಇಬ್ಬರು ಕೂಡ ಇದನ್ನು ಪಾಲಿಸಬೇಕು. ಇದರಿಂದ ಯಾವ ದುಷ್ಟ ಶಕ್ತಿಯೂ ಮತ್ತು ದೃಷ್ಟಿಶಕ್ತಿಯೂ ನಿಮ್ಮನ್ನು ಸೋಕುವುದಿಲ್ಲ.ನಿಮ್ಮ ಬಳಿ ಇಟ್ಟುಕೊಂಡಂತಹ ಬೆಳ್ಳುಳ್ಳಿಯನ್ನು ಎಷ್ಟೋ ದಿನಗಳ ವರೆಗೂ ಇಟ್ಟುಕೊಳ್ಳಬೇಕು ಅನ್ನೊ ಸಂಶಯ ನಿಮ್ಮಲ್ಲಿ ಇದ್ದರೆ, ಆ ಬೆಳ್ಳುಳ್ಳಿ ಒಣಗುವ ವರೆಗೂ ನಿಮ್ಮ ಬಳಿ ಇಟ್ಟುಕೊಳ್ಳಿ
ನಂತರ ಅದನ್ನು ಯಾರೂ ಓಡಾಡದೆ ಇರುವ ನಿರ್ಜನ ಪ್ರದೇಶಗಳಲ್ಲಿ ಹಾಕಿ. ನಂತರ ಮತ್ತೆ ಇದೇ ರೀತಿ ಪರಿಹಾರವನ್ನು ಮಂಗಳವಾರದ ದಿವಸದಂದು ಮಾಡಿಕೊಳ್ಳಿ ಈ ರೀತಿ ಮಾಡುವುದರಿಂದ ನಿಮಗೆ ತಗುಲುವ ಯಾವ ಕೆಟ್ಟ ಶಕ್ತಿ ದೃಷ್ಟಿ ಶಕ್ತಿ ಏನು ಮಾಡುವುದಕ್ಕೆ ಸಾಧ್ಯವಿಲ್ಲಾ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ