ಸ್ನೇಹಿತರೇ ದಿನನಿತ್ಯ ನಾವು ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಎಷ್ಟೊಂದು ಸಮಸ್ಯೆಗಳನ್ನು ಎದುರಿಸುತ್ತೇವೆ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಷಯ.
ಅದರಲ್ಲೂ ಕೂಡ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಜನರು ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಅದೇನೆಂದರೆ ಹೃದಯಾಘಾತ ಇದು ಹೆಚ್ಚಾಗಿ ಈಗಿನ ಕಾಲದಲ್ಲಿ ಪ್ರತಿಯೊಬ್ಬರಲ್ಲೂ ಕಾಣಿಸುತ್ತಿದೆ.
ಯಾವುದೇ ವಯಸ್ಸಿನ ಅಂತರವಿಲ್ಲದೆ ಹಲವಾರು ಜನ ಈ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ನಾವು ಗಮನಿಸಬಹುದಾಗಿದೆ ಆದರೆ ಈ ಸಮಸ್ಯೆಗೆ ಕಾರಣ ತುಂಬಾ ಇದೆ .
ಕಾರಣಗಳನ್ನು ಹುಡುಕಿಕೊಂಡು ಈ ಕಾಯಿಲೆಗೆ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ಆದ್ದರಿಂದ ಈ ಹೃದಯಾಘಾತ ಸಂಭವಿಸದೇ ಇರುವ ರೀತಿಯಲ್ಲಿ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ನಾವು ಕೈಗೊಳ್ಳಬಹುದು ಆ ಮುಂಜಾಗ್ರತಾ ಕ್ರಮಗಳು ಯಾವುವು.
ಯಾವ ರೀತಿಯಾಂತಹ ಮನೆ ಮದ್ದಿನಿಂದಾಗಿ ಹೃದಯಾಘಾತ ಸಂಭವಿಸದ ರೀತಿಯಲ್ಲಿ ನೋಡಿಕೊಳ್ಳಬಹುದು ಎಂಬುದರ ಬಗ್ಗೆ ಈ ದಿನ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ನೀವು ಈ ಮನೆ ಮದ್ದನ್ನು ದಿನನಿತ್ಯ ತಪ್ಪದೆ ಉಪಯೋಗಿಸಿ ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ.
ಸಾಮಾನ್ಯವಾಗಿ ಕೆಲವೊಂದು ಕಾಯಿಲೆಗಳಿಗೆ ನಾವು ಆಸ್ಪತ್ರೆಗೆ ದಿನನಿತ್ಯ ಅಲೆಯುತ್ತಿರುತ್ತವೆ ಅಂಥದ್ದೇ ಒಂದು ಸಮಸ್ಯೆ ಹೃದಯ ಸಂಬಂಧಿ ಕಾಯಿಲೆಗಳು ಈ ಕಾಯಿಲೆಗಳಿಗೆ ಎಷ್ಟು ಆಸ್ಪತ್ರೆಗೆ ತೋರಿಸಿದರೂ ಉಪಯೋಗ ಆಗಿಲ್ಲ ಎಂದು ಹಲವಾರು ಜನ ಹೇಳಿರುವುದನ್ನು ನಾವು ಗಮನಿಸಿದ್ದೇವೆ.
ಆದರೆ ಈ ದಿನ ಸುಲಭವಾಗಿ ಮನೆಯಲ್ಲೇ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಹೇಗೆ ಹೃದಯ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ .ಇದಕ್ಕೆ ಬೇಕಾಗಿರುವ ಸಾಮಗ್ರಿಗಳು ನಿಂಬೆಹಣ್ಣು ಬೆಳ್ಳುಳ್ಳಿ ಶುಂಠಿ ಮತ್ತು ಚಕ್ಕೆ ಪುಡಿ.
ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ನಾಲ್ಕು ಭಾಗಗಳಾಗಿ ಸೀಳಿ ಅದರ ಜೊತೆಯಲ್ಲಿ ಒಂಬತ್ತರಿಂದ ಹತ್ತು ಬೆಳ್ಳುಳ್ಳಿ ಎಸಳುಗಳು ಮತ್ತು ಸಣ್ಣದಾಗಿ ಕತ್ತರಿಸಿದ ಒಂದು ಇಂಚಿನಷ್ಟು ಶುಂಠಿ ಮತ್ತು ಎರಡು ಚಮಚವಾಗುವಷ್ಟು ಚಕ್ಕೆ ಪುಡಿ ಈ ನಾಲ್ಕನ್ನು ತೆಗೆದುಕೊಳ್ಳಬೇಕು ಸ್ಟವ್ ಮೇಲೆ ಎರಡು ಗ್ಲಾಸ್ನಷ್ಟು ನೀರನ್ನು ಹಾಕಿ ಅದಕ್ಕೆ ನಿಂಬೆಹಣ್ಣು ಬೆಳ್ಳುಳ್ಳಿ ಶುಂಠಿ ಮತ್ತು ಚಕ್ಕೆ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು .
ನಿಂಬೆಹಣ್ಣಿನಲ್ಲಿ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುವ ಅಂಶ ಇರುವುದರಿಂದ ನಿಂಬೆಹಣ್ಣು ಉತ್ತಮ ಶುಂಠಿಯಲ್ಲಿ ವಿಟಮಿನ್ ಮಿನರಲ್ಗಳು ಹೇರಳವಾಗಿದೆ ಅದರ ಜೊತೆಯಲ್ಲಿ ರಕ್ತದಲ್ಲಿರುವ ಕೊಬ್ಬು ಅನ್ನು ಕಡಿಮೆ ಮಾಡಲು ಶುಂಠಿ ಸಹಾಯಕವಾಗಿದೆ.
ಚಕ್ಕೆ ಪುಡಿಯಲ್ಲಿ ಆ್ಯಂಟಿ ಅ್ಯಕ್ಸಿಡ್ಗಳು ಜಾಸ್ತಿ ಇರುವುದರಿಂದ ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡಲು ಹೆಚ್ಚು ಅನುಕೂಲ. ಈ ರೀತಿಯಲ್ಲಿ ಈ ನಾಲ್ಕು ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು ಅದಾದ ನಂತರ ಅದರ ಜೊತೆಯಲ್ಲಿಯೇ ಸ್ವಲ್ಪ ಸಣ್ಣಗಾಗುವವರೆಗೆ ರುಬ್ಬಬೇಕು ರುಬ್ಬಿದ ನಂತರ ಅದನ್ನು ಸೋಸಿ ಒಂದು ಗಾಜಿನ ಬಾಟಲಿಗೆ ಹಾಕಿ ಇಡಬೇಕು.
ಇದನ್ನು ಕಡಿಮೆ ಎಂದರೂ ಹತ್ತು ದಿನಗಳ ಕಾಲ ಬಳಸಬಹುದು. ಇದನ್ನು ಪ್ರತಿನಿತ್ಯ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ ಇದನ್ನು ಸೇವಿಸಲು ಕಷ್ಟ ಎನ್ನುವವರು ಸ್ವಲ್ಪ ಜೇನು ತುಪ್ಪವನ್ನು ಹಾಕಿಕೊಂಡು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಈ ರೀತಿಯ ಹಲವಾರು ಗುಣಗಳಿರುವ ಈ ನಾಲ್ಕು ಪದಾರ್ಥಗಳನ್ನು ಬೇಯಿಸಿ ರುಬ್ಬಿದ ಈ ನೀರನ್ನು ಕುಡಿಯುವುದರಿಂದ ಹೃದಯ ಸಂಬಂಧಿ ಯಾವುದೇ ಕಾಯಿಲೆಗಳಿದ್ದರೂ ಶೀಘ್ರವಾಗಿ ಹತೋಟಿಗೆ ಬರುತ್ತದೆ ಧನ್ಯವಾದಗಳು.