Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವು ಇದನ್ನು ಉಪಯೋಗಿಸಿದರೆ ಜೀವನ ಪೂರ್ತಿ ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಆಗಲ್ಲ ಹಾಗೆಯೇ ಇದು ರಕ್ತವನ್ನು ವೇಗವಾಗಿ ಆಗಿ ಉತ್ಪತ್ತಿ ಮಾಡುತ್ತದೆ !!!!

ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ರಕ್ತಹೀನತೆ ಉಂಟಾಗುತ್ತಿದೆ. ಅಂದರೆ ರಕ್ತದ ಕೊರತೆಯುಂಟಾಗುತ್ತದೆ. ಅಂದರೆ ಅವರ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗುತ್ತಿದೆ.

ಇದರಿಂದ ತುಂಬಾನೇ ಮಾನಸಿಕ ಒತ್ತಡಕ್ಕೆ ಒಳಗಾಗುವುದು, ಯಾವುದರಲ್ಲೂ ಆಸಕ್ತಿ ಇರುವುದಿಲ್ಲ,ದಿನನಿತ್ಯ ನಿಶಕ್ತಿಯಿಂದ ಕೂಡಿರುವುದು ಹೀಗೆಲ್ಲಾ ಆಗುತ್ತದೆ ಇದಕ್ಕೆಲ್ಲ ಕಾರಣ ಅವರ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವುದು.

ಹಿಮೋಗ್ಲೋಬಿನ್ ಅಂಶ ಯಾಕೆ ಇರುವುದಿಲ್ಲ ಅಂದರೆ, ಅವರು ತಿನ್ನುವ ಪದಾರ್ಥದಲ್ಲಿ ಕಬ್ಬಿಣಾಂಶದ ಕೊರತೆ ಇರುತ್ತದೆ ಇದರಿಂದಾಗಿ ಅವರಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುತ್ತದೆ.

ಇದನ್ನು ನಾವು ಅನಿಮಿಯಾ ಹಾಗೂ ರಕ್ತಹೀನತೆ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಇರುತ್ತದೆ ಕಂಡುಬರುತ್ತದೆ. ನಾವು ಸಾಮಾನ್ಯವಾಗಿ ರಕ್ತದಲ್ಲಿ ಎರಡು ವಿಧಗಳನ್ನು ನೋಡುತ್ತೇವೆ.

ಅವು ಯಾವುದೆಂದರೆ ಮೊದಲನೆಯದಾಗಿ ಆರ್ಬಿಸಿ ಎರಡನೇದಾಗಿ ಡಬ್ಲ್ಯೂ ಬಿ ಸಿ. ಡಬ್ಲ್ಯೂ ಬಿ ಸಿ ಎಂದರೆ ವೈಟ್ ಬ್ಲಡ್ ಕಾರ್ಪಲ್ಸ್, ಆರ್ಬಿಸಿ ಎಂದರೆ ರೆಡ್ ಬ್ಲಡ್ ಕಾರ್ಪಲ್ಸ್. ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾಗುವುದರಿಂದ ನಮಗೆ ರಕ್ತಹೀನತೆ ಉಂಟಾಗುತ್ತದೆ.

ತುಂಬಾ ಜನರಿಗೆ ರಕ್ತಹೀನತೆ ಇದೆ ಎಂದು ಗೊತ್ತಾಗುವುದಿಲ್ಲ.ರಕ್ತ ಪರೀಕ್ಷೆಯನ್ನು ಮಾಡಿಸಿದರೆ ಮಾತ್ರ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇದೆ ಎಂದು ಗೊತ್ತಾಗುತ್ತದೆ. ಅದರಲ್ಲಿ ಹೆಣ್ಣುಮಕ್ಕಳಿಗೆ ತುಂಬಾನೇ ಬೇಗ ರಕ್ತಹೀನತೆ ಉಂಟಾಗುತ್ತದೆ.

ಇದಕ್ಕೆ ನಮ್ಮ ಮನೆಯಲ್ಲಿರುವ ಪದಾರ್ಥಗಳಿಂದ ನೇ ನಮ್ಮ ರಕ್ತವನ್ನು ಅಂದರೆ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿಕೊಳ್ಳಬಹುದು.ನಾವು ತಿನ್ನುವ ಕೆಲವು ಪದಾರ್ಥಗಳು ಹಾಗೂ ತರಕಾರಿಗಳು ಅದರಿಂದಲೇ ನಾವು ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿ ಕೊಳ್ಳಬಹುದು.

ಇದನ್ನು ನಾವು ಕಡೆಗಣಿಸಿದರೆ ಮುಂದೆ ಒಂದು ದಿನ ಒಂದು ಗಂಭೀರ ಕಾಯಿಲೆಗೆ ನಾವು ತುತ್ತಾಗುತ್ತೇವೆ. ರಕ್ತಹೀನತೆಗೆ ಮುಖ್ಯವಾಗಿ ನಾವು ತಿನ್ನುವ ಆಹಾರ ಕಾರಣವಾಗುತ್ತದೆ ಆಹಾರದಲ್ಲಿ ಯಾವಾಗಲೂ ಕಬ್ಬಿಣಾಂಶ ಇರಬೇಕು.

ಅದರಿಂದ ನಾವು ರಕ್ತವನ್ನು ಉತ್ಪತ್ತಿ ಮಾಡುವಂತಹ ಪದಾರ್ಥವನ್ನು ತಿನ್ನಬೇಕು. ಅಂದರೆ ನಾವು ಆಹಾರದಿಂದಲೇ ನಮ್ಮ ರಕ್ತವನ್ನು ಹೆಚ್ಚಿಸಿಕೊಳ್ಳಬಹುದು.

ಉದಾಹರಣೆಗೆ ಯಾವುದೇ ಒಂದು ವಾಹನವನ್ನು ನಡೆಸುವುದಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಹೇಗೆ ಬೇಕು ಹಾಗೆಯೇ ನಮ್ಮ ದೇಹಕ್ಕೆ ಅಂದರೆ ನಮ್ಮ ದೇಹ ಸುಲಲಿತವಾಗಿ ಕೆಲಸ ಮಾಡಲು ನಮಗೆ ರಕ್ತ ಬೇಕು.

ಇವತ್ತು ನಾನು ನಿಮಗೆ ನಮ್ಮ ದೇಹದಲ್ಲಿ ತುಂಬಾನೇ ವೇಗವಾಗಿ ರಕ್ತವನ್ನು ಉತ್ಪತ್ತಿ ಮಾಡುವ ಮನೆಮದ್ದನ್ನು ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ.ದಿನನಿತ್ಯ ನಾವು ಮೆಂತೆಕಾಳನ್ನು ತಿನ್ನುವುದರಿಂದ ಬೇಗನೆ ನಮ್ಮ ರಕ್ತವನ್ನು ಹೆಚ್ಚಿಸಿಕೊಳ್ಳಬಹುದು.

ಈ ಮೆಂತೆಯಲ್ಲಿ ಕಬ್ಬಿಣಾಂಶ ತುಂಬಾನೇ ಇದೆ ಹಾಗೂ ಫೈಬರ್ ಅಂಶ ಕೂಡ ಜಾಸ್ತಿನೇ ಇದೆ.ಅದೇ ಅಲ್ಲದೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಗುಣವನ್ನು ಕೂಡ ಈ ಮೆಂತೆಕಾಳು ಹೊಂದಿದೆ.ಮತ್ತೆ ನಮ್ಮ ಮುಳ್ಳುಗಳನ್ನು ಗಟ್ಟಿಮಾಡುವ ಶಕ್ತಿಯನ್ನು ಕೂಡ ಈ ಮೆಂತೆಕಾಳು ಹೊಂದಿದೆ.

ನಾವು ದಿನನಿತ್ಯ ವಾಗಿ ಒಂದು ಸ್ಪೂನ್ ಮೆಂತೆಯನ್ನು ತೆಗೆದುಕೊಂಡು ಒಂದು ಶುದ್ಧವಾದ ಒಂದು ಗ್ಲಾಸ್ ನೀರಿಗೆ ಮಿಶ್ರಣ ಮಾಡಬೇಕು. ಇದನ್ನು ನಾವು ರಾತ್ರಿ ನೀರಿನಲ್ಲಿ ನೆನೆಸಿಡಬೇಕು.ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಇದನ್ನು ತೆಗೆದುಕೊಳ್ಳಬೇಕು.

ಮುಖ್ಯವಾಗಿ ಸ್ನೇಹಿತರೆ ಈ ಮೆಂತೆ ನೀರನ್ನು ನೀವು ಕುಡಿಯಬೇಕು ಅದರ ಜೊತೆಗೆ ಮಿಶ್ರಣವಾಗಿರುವ ಕಾಳುಗಳನ್ನು ಕೂಡ ಚೆನ್ನಾಗಿ ಅಗಿದು ತಿನ್ನಬೇಕು.ಇದನ್ನು ಸತತವಾಗಿ ಒಂದು ತಿಂಗಳಕಾಲ ಮಾಡಬೇಕು ಹೀಗೆ ಮಾಡಿದರೆ ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಿ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಇದರಿಂದ ಮಂಡಿ ನೋವು ಸೊಂಟ ನೋವು ಬರುವುದಿಲ್ಲ ಹಾಗೆಯೇ ಮಧುಮೇಹ ಕೂಡ ಬರುವುದಿಲ್ಲ. ನೀವು ಜೀವನಪೂರ್ತಿ ತೆಗೆದುಕೊಂಡರೆ ನಿಮ್ಮ ಆರೋಗ್ಯದಲ್ಲಿ ಯಾವತ್ತೂ ಕೂಡ ಏರುಪೇರು ಆಗುವುದಿಲ್ಲ.

ಸ್ನೇಹಿತರೆ ಈ ನಮ್ಮ ಉಪಯುಕ್ತ ಆರೋಗ್ಯ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *