Categories
ಉಪಯುಕ್ತ ಮಾಹಿತಿ ಭಕ್ತಿ ಮಾಹಿತಿ

ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಈ ಒಂದು ಸಮಯದಲ್ಲಿ ಈ ರೀತಿಯಾಗಿ ಹೇಳಿ ತಥಾಸ್ತು ದೇವತೆಗಳು ನಿಮ್ಮ ಕೋರಿಕೆಗಳಿಗೆ ಅಸ್ತು ಎನ್ನುತ್ತಾರೆ !!!

ಅಶ್ವಿನಿ ದೇವತೆಗಳ ಹೆಸರನ್ನು ನೀವು ಕೇಳಿರುತ್ತೀರಿ ಹೌದು ಇವರು ಸಂಜೆ ಸಮಯದಲ್ಲಿ ಹೆಚ್ಚಾಗಿ ಸಂಚಾರ ಮಾಡುತ್ತಿರುತ್ತಾರೆ ಮತ್ತು ಇವರ ಕೆಲಸವೇನು ಅಂದರೆ ಯಾವಾಗಲೂ ತಥಾಸ್ತು ಎಂದು ಹೇಳುವುದೇ ಇವರ ಕಾರ್ಯವಾಗಿದ್ದು, ಹೆಚ್ಚಾಗಿ ಹೋಮ ಹವನಗಳು ನಡೆಯುವಂತಹ ಸ್ಥಳಗಳಲ್ಲಿ ಇವರು ಇರುತ್ತಾರಂತೆ.

ಈ ಅಶ್ವಿನಿ ದೇವತೆಗಳು ಯಾರಿರಬಹುದು ಅಂದರೆ ಸೂರ್ಯ ಪುತ್ರರು ಹೌದು ಇವರು ಕೂಡ ಸೂರ್ಯದೇವನ ಮಕ್ಕಳಾಗಿದ್ದು ಇವರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳುವುದರ ಜೊತೆಗೆ ಇಂದಿನ ಮಾಹಿತಿಯಲ್ಲಿ ನಾವು ಸಂಜೆ ಸಮಯದಲ್ಲಿ ಏಕೆ ಕೆಟ್ಟ ಶಬ್ದವನ್ನಾಗಲಿ ಕೆಟ್ಟ ಪದಗಳನ್ನಾಗಲಿ ಆಡಬಾರದು ಮತ್ತು ಈ ಸಮಯದಲ್ಲಿ ಯಾಕೆ ಹೆಚ್ಚಾಗಿ ದೇವರ ಸ್ಮರಣೆ ಅನ್ನು ಮಾಡಬೇಕು ಎಂಬುದನ್ನು ಕೂಡ ತಿಳಿಯೋಣ.

ಸೂರ್ಯದೇವನ ಪತ್ನಿಯಾದ ಸನ್ಯಾದೇವಿ ಒಮ್ಮೆ ಒಬ್ಬ ಋಷಿ ಮುನಿಯ ಶಾಪದಿಂದಾಗಿ ಅಶ್ವವಾಗಿ ಬಿಡುತ್ತಾಳೆ, ಇದರಿಂದ ಸೂರ್ಯದೇವನು ಕೂಡ ಅಶ್ವ ರೂಪವನ್ನು ತಾಳುತ್ತಾರೆ,

ಈ ಇಬ್ಬರು ಅಂದರೆ ಸೂರ್ಯದೇವ ಮತ್ತು ಆತನ ಪತ್ನಿ ಸನ್ಯಾ ದೇವಿಯು ಅಶ್ವ ರೂಪವನ್ನು ತಾಳಿದಾಗ ಅವರಿಗೆ ಜನಿಸಿದ ಮಕ್ಕಳೆ ಅಶ್ವಿನಿ ದೇವತೆಗಳು ಈ ಅಶ್ವಿನಿ ಕುಮಾರರನ್ನೆ ತಥಾಸ್ತು ದೇವರು ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ ಮನೆಯಲ್ಲಿ ಹಿರಿಯರಿದ್ದರೆ ನೀವು ಈ ಮಾತುಗಳನ್ನು ಕೇಳಿಸಿಕೊಂಡಿರುತ್ತಾರೆ ಅದೇನೆಂದರೆ ಸಂಜೆ ಸಮಯದಲ್ಲಿ ಯಾರಾದರೂ ಕಿರಿಕಿರಿ ಮಾಡುತ್ತಿದ್ದರೆ ಅಥವಾ ಕೆಟ್ಟ ಪದಗಳನ್ನು ಬಳಸುತ್ತಾ ಇದ್ದರೆ ಬೇಡದೆ ಇರುವ ಮಾತುಗಳನ್ನು ಆಡುತ್ತಾ ಇದ್ದರೆ,

ಬಾಯಿ ಮುಚ್ಚು ಅಂತ ಹೇಳ್ತಾರೆ, ಹಾಗಾದರೆ ನಮ್ಮ ಹಿರಿಯರು ಈ ರೀತಿ ಹೇಳುವುದಕ್ಕೆ ಕಾರಣವೇನು, ಇದರ ಹಿಂದೆ ಏನಿದೆ ಕಾರಣ ಎಂಬುದಕ್ಕೆ ಈ ಒಂದು ಅಶ್ವಿನಿ ದೇವತೆಗಳ ವಿಚಾರವೂ ಒಳಗೊಂಡಿದೆ.

ಸಂಜೆಯ ಸಮಯದಲ್ಲಿ ಅಶ್ವಿನಿ ದೇವತೆಗಳು ಅಂದರೆ ತಥಾಸ್ತು ದೇವರುಗಳು ಸಂಚಾರ ಮಾಡುತ್ತಿರುತ್ತಾರೆ, ಇವರು ಯಾವಾಗಲೂ ತಥಾಸ್ತು ಎಂದು ಅನ್ನುತ್ತಿರುತ್ತಾರೆ,

ಹಾಗೇನಾದರೂ ನಾವು ಕೆಟ್ಟ ಪದಗಳನ್ನು ಅಥವಾ ಕೆಟ್ಟದನ್ನು ಯೋಚನೆ ಮಾಡುತ್ತಿರುವುದಾಗಲಿ, ಕೆಟ್ಟ ಮಾತುಗಳನ್ನು ಆಡುವುದಾಗಲಿ ಆಡಿದರೆ, ಆ ಮಾತಿಗೆ ತಥಾಸ್ತು ಎಂದರೆ ಸಂಜೆಯ ಸಮಯದಲ್ಲಿ ಈ ಮಾತುಗಳು ನಿಜವಾಗಬಹುದು

ಎಂಬ ಕಾರಣದಿಂದಾಗಿ, ಹಿರಿಯರು ಮನೆಯಲ್ಲಿ ಕಿರಿಯರಿಗೆ ಹೇಳ್ತಾನೆ ಇರ್ತಾರೆ ಸಂಜೆಯ ಸಮಯದಲ್ಲಿ ಆದಷ್ಟು ಒಳ್ಳೆಯ ಮಾತುಗಳನ್ನಾಡಬೇಕು ದೇವರ ನಾಮಸ್ಮರಣೆ ಮಾಡಬೇಕು ಜಪ ತಪ ಮಾಡಬೇಕು ಎಂದು.

ಈ ಮಾಹಿತಿಯನ್ನು ತಿಳಿದ ನಂತರ ಆ ನಿಮಗೆ ತಿಳಿದಿರುತ್ತದೆ ಯಾಕೆ ಹಿರಿಯರು ಹೇಳುವ ಮಾತುಗಳು ಸತ್ಯ ಎಂದು ಹೇಳ್ತಾರೆ ಎಂದು ನಮ್ಮ ಹಿರಿಯರು ಏನನ್ನೇ ಹೇಳಿದರೂ ಏನನ್ನೇ ಮಾಡಿದರೂ ಯಾವುದೇ ಪದ್ಧತಿಗಳನ್ನು ಅನುಸಾರ ಮಾಡಿಕೊಂಡು ಬಂದಿದ್ದರೂ,

ಅದರ ಹಿಂದೆ ಅವರ ಅನುಭವಗಳ ನೈಜ ಘಟನೆಗಳ ವಿಚಾರವು ಅಡಗಿರುತ್ತದೆ ಎಂದು ನಾವು ಅರ್ಥ ಮಾಡಿಕೊಂಡು, ಇನ್ನು ಮುಂದೆಯಾದರೂ ನಮ್ಮ ಪೂರ್ವಜರು ಪಾಲಿಸಿಕೊಂಡು ಬಂದ ಆಚಾರ ವಿಚಾರ ಪದ್ಧತಿಗಳ ಬಗ್ಗೆ ಮಾಹಿತಿಯನ್ನು ತಿಳಿದು ಅದನ್ನು ಪಾಲಿಸಲು ಮುಂದಾಗೋಣ.

ಶಾಸ್ತ್ರಗಳು ಕೂಡ ಇದನ್ನೇ ಹೇಳತ್ತೆ ಸಂಜೆ ಸಮಯದಲ್ಲಿ ದೇವರ ಜಪ ತಪಗಳನ್ನು ಮಾಡುವುದರಿಂದ ಮತ್ತು ಸಂಜೆ ಸಮಯದಲ್ಲಿ ದೇವರಿಗೆ ಪೂಜೆಯನ್ನು ಸಲ್ಲಿಸುವುದರಿಂದ ಆಗ ನಾವು ಬೇಡಿಕೊಂಡ ಬೇಡಿಕೆಗಳು ಬೇಗಾನೆ ನೆರವೇರುತ್ತದೆ

ಎಂಬ ಕಾರಣದಿಂದಲೇ ಸಂಜೆ ಸಮಯದಲ್ಲಿ ಮನೆಯಲ್ಲಿ ಪ್ರಶಾಂತ ವಾತಾವರಣವನ್ನು ಕಾಪಾಡಿಕೊಳ್ಳಬೇಕು, ಸಂಜೆಯ ಸಮಯದಲ್ಲಿ ಮನೆಯಲ್ಲಿ ಆದಷ್ಟು ಒಳ್ಳೆಯ ಮಾತುಗಳನ್ನು ಒಳ್ಳೆಯ ಯೋಚನೆಗಳನ್ನು ಮಾಡುವುದು ಒಳ್ಳೆಯದು.

Leave a Reply

Your email address will not be published. Required fields are marked *