ನಿಮ್ಮ ಹೆಂಡತಿ ಮನೆಯಲ್ಲಿ ಅಕ್ಕಿ ಕಾಳುಗಳಿಂದ ಈ ರೀತಿ ಮಾಡಿದರೆ ಸಾಕು .. ತಾಯಿ ಮಹಾಲಕ್ಷ್ಮಿ ಸಂತೋಷವಾಗಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ಅನೇಕ ಜನರಿಗೆ ಆರ್ಥಿಕ ಸಮಸ್ಯೆಯೂ ತುಂಬಾನೇ ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ. ಅವರು ಎಷ್ಟು ಕಷ್ಟ ಪಟ್ಟರೂ ಕೂಡ ಅವರ ಕೈಯಲ್ಲಿ ಹಣ ಉಳಿಯುವುದಿಲ್ಲ.ಹೀಗಾಗಿ ಇವರುಗಳು ಜೀವನದಲ್ಲಿ ತುಂಬಾನೇ ಬೇಸತ್ತು ಬಿಡುತ್ತಾರೆ. ಈ ಆರ್ಥಿಕ ಸಮಸ್ಯೆಯನ್ನು ಸರಿದೂಗಿಸಲು ನೀವು ಕೆಲವು ನಿಯಮಗಳನ್ನು ಪಾಲಿಸಬೇಕು.ಹೀಗೆ ಕೆಲವೊಂದು ನಿಯಮಗಳನ್ನು ನೀವು ಪಾಲಿಸಿದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಯೂ ಖಂಡಿತ ಬರುವುದಿಲ್ಲ ಸ್ನೇಹಿತರೆ.

ನೀವು ಜೀವನದಲ್ಲಿ ಆರ್ಥಿಕ ಸಮಸ್ಯೆ ಅಥವಾ ಹಣಕಾಸಿನ ಸಮಸ್ಯೆಯಿಂದ ಯಾಕೆ ಬಳಲುತ್ತಿದ್ದೀರಾ ಎಂದರೆ ನಿಮ್ಮ ಮೇಲೆ ಲಕ್ಷ್ಮಿ ಕಟಾಕ್ಷವು ಆಗಿರುವುದಿಲ್ಲ ಅಂತಹ ಸಮಯದಲ್ಲಿ ನೀವು ಹಣಕಾಸಿನ ತೊಂದರೆಯಿಂದ ಬಳಲುತ್ತಿರುತ್ತೀರಾ .ಹಾಗೆಯೇ ಲಕ್ಷ್ಮಿ ಯನ್ನು ನಿಮ್ಮ ಕಡೆ ಒಲಿಸಿ ಕೊಳ್ಳಲು ಕೆಲವು ನಿಯಮಗಳನ್ನು ಲಕ್ಷ್ಮಿಗೆ ಮಾಡಬೇಕು.ನಿಯಮಗಳು ಯಾವುವು ಎಂದು ನಿಮಗೆ ನಾನು ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.

ಆ ದೇವಿಯ ಅನುಗ್ರಹ ನಿಮಗೆ ಬೇಕಾದರೆ ಯಾವುದೇ ಪ್ರಯತ್ನವಿಲ್ಲದೆ ಇದು ಸುಲಭವಾಗಿ ಸಿಗುವುದಿಲ್ಲ. ನಾವು ನಮ್ಮ ಕರ್ಮವನ್ನು ತಪ್ಪದೆ ಆಚರಿಸಬೇಕು ಆಮೇಲೆ ಲಕ್ಷ್ಮಿಯ ಅನುಗ್ರಹ ನಿಮ್ಮ ಮೇಲೆ ಹಾಗೆ ಆಗುತ್ತದೆ.ಲಕ್ಷ್ಮಿಯ ಅನುಗ್ರಹ ನಿಮ್ಮ ಮೇಲೆ ಆಗಬೇಕೆಂದರೆ ನಾವು ಪ್ರತಿದಿನ ಕೆಲವೊಂದು ಪದ್ಧತಿಗಳನ್ನು ರೂಡಿಸಿಕೊಳ್ಳಬೇಕು. ಪ್ರತಿನಿತ್ಯ ಸೂರ್ಯೋದಯದ ವೇಳೆಗೆ ಎದ್ದು ಮನೆಯನ್ನು ಸ್ವಚ್ಛಗೊಳಿಸಿಕೊಂಡು ಅಂಗಳವನ್ನು ಸಾರಿಸಿ ಕೊಂಡು ರಂಗೋಲಿ ಇಟ್ಟು ಮಹಾಲಕ್ಷ್ಮಿಯನ್ನು ಆಹ್ವಾನಿಸುವಂತೆ ಇರಬೇಕು ಮನೆ.

ಹಾಗೂ ಮನೆಯಲ್ಲಿ ಎಲ್ಲರೂ ಕೂಡ ಗೋಧೂಳಿ ಸಮಯದಲ್ಲಿ ಹಾಗೂ ಸೂರ್ಯೋದಯದ ಸಮಯದಲ್ಲಿ ತಪ್ಪದೆ ಮನೆಯಲ್ಲಿ ದೀಪವನ್ನು ಹಚ್ಚಬೇಕು. ಸುಮಂಗಲಿಯರು ಯಾವಾಗಲೂ ಮನೆಯಲ್ಲಿ ಲವಲವಿಕೆಯಿಂದ ಓಡಾಡುತ್ತಾ ಕನ್ನಡಿಯಂತೆ ಮನೆಯನ್ನು ತಿದ್ದಿ ಇಡಬೇಕು.ಹಾಗೂ ದೀಪವನ್ನು ಬೆಳಗುವಾಗ ತಪ್ಪದೇ ಎಳ್ಳೆಣ್ಣೆ ಅಥವಾ ತುಪ್ಪದ ದೀಪದಲ್ಲಿ ಬೆಳಗಬೇಕು. ಹಾಗೆಯೇ ತುಳಸಿ ಬೃಂದಾವನದ ಮುಂದೆ ದೀಪವನ್ನು ಬೆಳಗಿಸಬೇಕು. ದೀಪ ಬೆಳಗುವುದರಿಂದ ಮನಸ್ಸಿನ ಅಂಧಕಾರ ತೊಲಗುತ್ತದೆ.

ಸಂಜೆ ವೇಳೆಗೆ ತಪ್ಪದೇ ಹಿಂದಿನ ಬಾಗಿಲನ್ನು ಮುಚ್ಚಿ ಮುಂದಿನ ದ್ವಾರವನ್ನು ತೆಗೆದಿಡಬೇಕು. ಹಿಂದಿನ ಮನೆಯ ಬಾಗಿಲು ಮುಚ್ಚದೆ ಇದ್ದರೆ ಅಲ್ಲಿಂದ ದರಿದ್ರ ದೇವತೆ ಬಂದು ನಿಮ್ಮ ಮನೆಯಲ್ಲಿ ನೆಲೆಸುತ್ತಾರೆ . ಹಾಗಾಗಿ ಮರೆಯದೆ ಹಿತ್ತಲ ಬಾಗಿಲನ್ನು ಮುಚ್ಚಿಡಬೇಕು.ಹಾಗೆಯೇ ಹೆಂಗಸರಾಗಲಿ ಗಂಡಸರಾಗಲಿ ಮಕ್ಕಳಾಗಲಿ ಯಾರು ಕೂಡ ಸಂಜೆ ಹೊತ್ತಲ್ಲಿ ಉಗುರನ್ನು ಕತ್ತರಿಸಬಾರದು. ಹೀಗೆ ಮಾಡಬಾರದೆಂದು ಅನಾದಿಕಾಲದಿಂದಲೂ ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ.

ಹಾಗೆ ಸಂಜೆ ಹೊತ್ತಲ್ಲಿ ಕೆಟ್ಟ ಶಬ್ದಗಳಿಂದ ಕಿರುಚುತ್ತಾ ಇರಬಾರದು.ಸುಮಂಗಲಿಯರು ಒಂದು ಹಿಡಿಯ ಅಕ್ಕಿಯನ್ನು ತೆಗೆದುಕೊಂಡು ಶ್ರೀಲಕ್ಷ್ಮಿಯ ಫೋಟೋದ ಮುಂದೆ ಇಟ್ಟು ಧಾನ್ಯ ಲಕ್ಷ್ಮಿಯ ಪೂಜೆಯನ್ನು ಮಾಡಬೇಕು.ಇನ್ನು ಲಕ್ಷ್ಮಿಯನ್ನು ಪೂಜೆ ಮಾಡುವಾಗ ಶ್ರೀಮನ್ನಾರಾಯಣನ ಜೊತೆಗೆ ಪೂಜೆ ಮಾಡಬೇಕು. ಸತಿಪತಿ ಇರುವಂತಹ ಪೂಜೆ ಆಕೆಗೆ ಪ್ರೀತಿ ಆಗುತ್ತದೆ.ಎಲ್ಲಿ ಸತಿ ಇರುತ್ತಾಳೆ ಅಲ್ಲಿ ಪತಿಯು ಇರುತ್ತಾನೆ.

ಹೀಗೆ ನೀವು ಸತಿ ಪತಿಯನ್ನು ಪೂಜೆ ಮಾಡಿದಾಗ ಆಕೆ ಸಂತೋಷಗೊಂಡು ನಿಮ್ಮ ಮನೆಯಲ್ಲಿ ನಡೆಸುತ್ತಾಳೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *