ನಿಮ್ಮ ಶ್ರೀಮತಿ ಏನಾದ್ರು ಅಕ್ಕಿಯಿಂದ ಹೀಗೆ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಅದೃಷ್ಟ ಬದಲಾಗುತ್ತೆ .!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸಂಪೂರ್ಣ ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ಶುಕ್ರವಾರದ ದಿವಸದಂದು ಈ ಒಂದು ಕೆಲಸವನ್ನು ಮಾಡಬೇಕು, ಜೊತೆಗೆ ಲಕ್ಷ್ಮಿದೇವಿಯ ಕೃಪಾಕಟಾಕ್ಷ ಆಗಬೇಕಾದರೆ ತಪ್ಪದೇ ಮನೆಯಲ್ಲಿ ಇಂತಹ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಈ ರೀತಿ ಮನೆಯಲ್ಲಿ ಪದ್ಧತಿ ನಿಯಮಗಳನ್ನು ಪಾಲಿಸಿಕೊಂಡು ಬನ್ನಿ.ಹಾಗೇ ನಾವು ಈ ದಿನ ತಿಳಿಸುವಂತಹ ಮಾಹಿತಿ ನಿಮಗೆ ಉಪಯುಕ್ತವಾಗಿ ಇದಲ್ಲಿ, ಇನ್ನೂ ಅನೇಕ ಆಚಾರ ವಿಚಾರ ಪದ್ಧತಿಗಳನ್ನು ಕುರಿತು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ, ಅನೇಕ ಪ್ರಯೋಜನಕಾರಿ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ಬುಕ್ ಪೇಜ್ ಅನ್ನು ತಪ್ಪದೆ ಫಾಲೋ ಮಾಡಿ.ಲಕ್ಷ್ಮೀ ದೇವಿಯ ಸಂಪೂರ್ಣ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ಮನೆಯಲ್ಲಿ ಈ ರೀತಿ ಮಾಡಿ ಅದೇನೆಂದರೆ ಪ್ರತಿದಿನ ಮನೆಯನ್ನು ಸ್ವಚ್ಛ ಪಡಿಸಬೇಕು ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ದೇವರ ನಾಮಸ್ಮರಣೆ ಮೊಳಗಿರುತ್ತದೆಯೊ ಅಲ್ಲಿ ಸಕಲ ದೇವರುಗಳ ಸಾನ್ನಿಧ್ಯವೂ ಕೂಡ ಇರುತ್ತದೆ, ಈ ರೀತಿಯಾಗಿ ನಾವು ಮನೆಯಲ್ಲಿ ಪ್ರತಿ ದಿನ ಮನೆಯನ್ನು ಸ್ವಚ್ಛ ಪಡಿಸಬೇಕು ಮತ್ತು ಮನೆಯಲ್ಲಿ ಪ್ರತಿ ದಿವಸ ಎರಡು ಬಾರಿ ದೀಪಾ ಆರಾಧನೆಯನ್ನು ಮಾಡಬೇಕು.

ನೆನಪಿನಲ್ಲಿ ಇಟ್ಟುಕೊಳ್ಳಿ ವೀಕ್ಷಕರೇ ದೀಪಾರಾಧನೆ ಅನ್ನು ಮಾಡುವ ಸಮಯದಲ್ಲಿ, ಅದರಲ್ಲಿಯು ಸಂಜೆ ಸಮಯದ ಗೋಧೂಳಿ ಕಾಲದಲ್ಲಿ ದೀಪ ಆರಾಧನೆಯನ್ನು ಮಾಡುವಾಗ ಮನೆಯಲ್ಲಿ ಹಿತ್ತಲಿನ ಬಾಗಿಲಿದ್ದರೆ ಅದನ್ನು ಮುಚ್ಚಬೇಕು ಮತ್ತು ಮನೆಯ ಸಿಂಹ ದ್ವಾರವನ್ನು ತೆರೆದಿಡಬೇಕು. ಯಾಕೆ ಅಂದರೆ ಮನೆಯಲ್ಲಿ ಅದರಲ್ಲಿಯೂ ,ಸಂಜೆ ಸಮಯದಲ್ಲಿ ದೀಪಾರಾಧನೆ ಮಾಡುವ ಸಮಯದಲ್ಲಿ ಹಿತ್ತಲಿನ ಬಾಗಿಲು ತೆರೆದಿದ್ದರೆ ಜ್ಯೇಷ್ಠಾ ದೇವಿಯ ಪ್ರವೇಶವಾಗುತ್ತದೆ ಅಂತೆ ಆದ ಕಾರಣ ಶಾಸ್ತ್ರಗಳು ಸಂಪ್ರದಾಯವೂ ಹೇಳುತ್ತದೆ, ಸಂಜೆ ಆಗುತ್ತಲೆ ಪೂಜೆ ಮಾಡುವ ಸಮಯದಲ್ಲಿ ಹಿತ್ತಲಿನ ಬಾಗಿಲು ಮುಚ್ಚಿರಬೇಕು ಮತ್ತು ಮನೆಯ ಸಿಂಹ ದ್ವಾರದ ಬಾಗಿಲು ತೆರೆದಿರಬೇಕು ಎಂದು.

ಮನೆಯಲ್ಲಿ ಲಕ್ಷ್ಮೀ ದೇವಿಯ ಪೂಜೆಯನ್ನು ಪ್ರತಿದಿನ ಮಾಡಬೇಕು ಮತ್ತು ಶುಕ್ರವಾರದ ದಿವಸದಂದು ತಾಯಿಯ ಪೂಜೆಯನ್ನು ಕೈಗೊಳ್ಳಬೇಕಾಗುತ್ತದೆ ಈ ದಿವಸದಂದು ಅಂದರೆ ಶುಕ್ರವಾರದ ದಿವಸದಂದು ಲಕ್ಷ್ಮೀದೇವಿಯನ್ನು ಮಾತ್ರವಲ್ಲದೆ ಲಕ್ಷ್ಮೀದೇವಿಯ ಪತಿಯಾದ ವಿಷ್ಣು ದೇವನನ್ನು ಕೂಡ ಆರಾಧಿಸಬೇಕು ಮತ್ತು ಪತಿಯಲ್ಲಿ ಇರುತ್ತಾರೆಯೋ ಅಲ್ಲಿ ಸತಿ ಇರುತ್ತಾರೆ ಸತಿ ಎಲ್ಲಿರುತ್ತಾರೋ ಅಲ್ಲಿ ಪತಿ ಇರುತ್ತಾರೆ ಆದ ಕಾರಣ ಲಕ್ಷ್ಮೀದೇವಿಯ ಫೋಟೋವನ್ನು ಇಡುವಾಗ, ಲಕ್ಷ್ಮೀದೇವಿಯ ಜೊತೆ ವಿಷ್ಣು ದೇವನು ಒಟ್ಟಿಗೆ ಇರುವ ಪಟವನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಲಕ್ಷ್ಮೀದೇವಿಯು ಸಂತಸಳಾಗುತ್ತಾಳೆ.ದೇವರ ಮನೆಯಲ್ಲಿ ಲಕ್ಷ್ಮೀದೇವಿಯ ಪಟದ ಪಕ್ಕವೆ ವಿಘ್ನೇಶ್ವರನಾದ ಗಣಪನ ಮೂರ್ತಿಯನ್ನು ಅಥವಾ ಪಟವನ್ನು ಇಡಬೇಕು ಮತ್ತು ಸಕಲ ಐಶ್ವರ್ಯ ಸಿದ್ಧಿಗಾಗಿ ನಾರಾಯಣನ ಪೂಜೆಯನ್ನು ಬುಧವಾರದ ದಿವಸದಂದು ಮಾಡಬೇಕು.

ಮನೆಗೆ ಅತಿಥಿಗಳು ಬರುತ್ತಾರೆ ಅಂದರೆ ಎಷ್ಟೆಲ್ಲ ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿ ಕೊಂಡಿರುತ್ತೇವೆ ಅದೇ ಲಕ್ಷ್ಮೀದೇವಿಯ ಮನೆಗೆ ಪ್ರವೇಶಿಸುತ್ತಾಳೆ ಅಂದರೆ ನಾವು ಆ ಸಮಯದಲ್ಲಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಉತ್ತಮ, ಹಾಗೆ ಮನೆಯ ಸಿಂಹದ್ವಾರದ ಹೊಸ್ತಿಲಿನ ಮುಂಭಾಗದಲ್ಲಿ ಲಕ್ಷ್ಮೀದೇವಿಯನ್ನು ಬರ ಮಾಡಿಕೊಳ್ಳುವುದಕ್ಕಾಗಿ, ಮನೆಯ ಮುಂದೆ ಸ್ವಚ್ಛವಾಗಿ ಮಾಡಿ ರಂಗೋಲಿಯನ್ನು ಬಿಟ್ಟು ಹೊಸ್ತಿಲಿಗೆ ಅರಿಶಿಣ ಕುಂಕುಮವನ್ನು ಹಚ್ಚಿ ಅಲಂಕರಿಸಬೇಕು.ಶುಕ್ರವಾರದ ದಿವಸದಲ್ಲಿ ಧಾನ್ಯವನ್ನು ಪೂಜಿಸಬೇಕು, ಲಕ್ಷ್ಮೀದೇವಿಯ ಅವತಾರವಾಗಿರುವ ಧಾನ್ಯ ಲಕ್ಷ್ಮಿ ಧನಲಕ್ಷ್ಮಿ ಸಂಪತ್ತು ಲಕ್ಷ್ಮೀ ಐಶ್ವರ್ಯಲಕ್ಷ್ಮಿ ಇವರುಗಳನ್ನು ಪೂಜಿಸುವುದರಿಂದ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುವುದರ ಜೊತೆಗೆ, ಅಷ್ಟ ಲಕ್ಷ್ಮೀಯರು ನೆಲೆಸಿರುತ್ತಾರೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *