ನಿಮ್ಮ ಮನೇಲಿ ಏನಾದ್ರು ಅಪ್ಪಿ ತಪ್ಪಿ ಈ ದೇವರಗಳ ಫೋಟೋ ಇಟ್ಕೊಂಡಿದ್ರೆ ಈಗ್ಲೇ ತೆಗೆದುಹಾಕಿ ಇಲ್ಲದಿದ್ದರೆ ಕಷ್ಟದ ಮೇಲೆ ಕಷ್ಟ ನಿಮಗೆ ಎದುರಾಗುತ್ತೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ಸಾಮಾನ್ಯವಾಗಿ ದೇವರಿಗೆಂದೇ ಪ್ರತ್ಯೇಕವಾದ ಕೋಣೆಯನ್ನು ನಾವು ಕಟ್ಟಿಸಿರುತ್ತೇವೆ. ಯಾಕೆ ಅಂದರೆ ದೇವರ ಆರಾಧನೆಯನ್ನು ಎಲ್ಲೆಲ್ಲಿಯೋ ಮಾಡಬಾರದೆಂದು, ಅದಕ್ಕಾಗಿ ಮನೆಯಲ್ಲಿ ದೇವರ ಕೋಣೆಯೊಂದನ್ನು ಇರಿಸಿರುತ್ತೇವೆ ಅದೇ ರೀತಿ ದೇವರ ಕೋಣೆಯಲ್ಲಿ ಆಗಲಿ ಮನೆಯಲ್ಲಿಯೇ ಆಗಲಿ ಕೆಲವೊಂದು ದೇವರ ಪಟಗಳನ್ನು ಇರಿಸಬಾರದು ಇದರಿಂದ ಮನೆಗೆ ತೊಂದರೆಗಳು ಉಂಟಾಗಬಹುದು ಆದ್ದರಿಂದ ತಪ್ಪದೆ ಇಂದಿನ ಮಾಹಿತಿಯಲ್ಲಿ ತಿಳಿಸಿ ಮನೆಯಲ್ಲಿ ಯಾವ ಕೆಲವೊಂದು ದೇವರ ಪಟಗಳನ್ನು ಯಾವ ಕಾರಣಕ್ಕಾಗಿ ಇರಿಸಬಾರದು ಎಂಬುದನ್ನು ನೀವೂ ಕೂಡ ತಿಳಿದು ಈ ವಿಚಾರದ ಬಗ್ಗೆ ಬೇರೆಯವರಿಗೂ ಕೂಡ ತಿಳಿಸಿಕೊಡಿ.

ಯಾಕೆ ಅಂದರೆ ಕೆಲವರು ಅರಿವಿಲ್ಲದೆ ಇಷ್ಟ ದೇವರ ಫೋಟೋಗಳನ್ನು ಮನೆಯಲ್ಲಿ ಇರಿಸಿಕೊಂಡಿರುತ್ತಾರೆ. ಆದರೆ ಈ ರೀತಿ ಪಟಗಳನ್ನ ಇರಿಸಿ ಮನೆಯಲ್ಲಿ ಪೂಜೆ ಸಲ್ಲಿಸುವುದರಿಂದ ಅದು ನಮಗೆ ಒಳಿತು ಮಾಡುವುದಕ್ಕಿಂತ ಮನೆಗೆ ತೊಂದರೆಗಳು ಉಂಟಾಗುವುದೇ ಹೆಚ್ಚಾಗಿರುತ್ತದೆ ಆದ್ದರಿಂದ ನೀವು ಮನೆಯಲ್ಲಿ ಕೆಲವೊಂದು ದೇವರ ಪಟಗಳನ್ನು ಇರಿಸಬೇಡಿ ಅದಕ್ಕೆ ಕಾರಣಗಳನ್ನು ಕೂಡ ತಿಳಿಯೋಣ

ಮೊದಲನೆಯದಾಗಿ ಬೈರವ ದೇವರ ಪಟವನ್ನು ಮನೆಯಲ್ಲಿ ಇರಿಸಬಾರದು. ಯಾಕೆ ಅಂತ ಹೇಳುವುದಾದರೆ ಭೈರವ ದೇವ ಶಿವನ ಸ್ವರೂಪ ರಾಗಿದ್ದರೂ ದೇವರನ್ನು ಒಲಿಸಿಕೊಳ್ಳುವುದಕ್ಕಾಗಿ ಮಂತ್ರ ಪ್ರಯೋಗ ಮಾಡಬೇಕಾಗುತ್ತದೆ ಇಲ್ಲವಾದಲ್ಲಿ ಬೈರವ ದೇವರ ಆರಾಧನೆ ಮಾಡುವುದು ಕೂಡ ವ್ಯರ್ಥ ಆದ್ದರಿಂದ ಮನೆಯಲ್ಲಿ ಭೈರವ ದೇವರ ಪಟವನ್ನು ಇರಿಸಿಕೊಳ್ಳಬಾರದು ಎಂದು ಹೇಳಲಾಗುತ್ತದೆ.

ಇನ್ನೂ ಶಿವನ ಸ್ವರೂಪರಾದ ನಟರಾಜನ ಮೂರ್ತಿಯ ಗಲಿಪಟ ವನ್ನಾಗಲಿ ಇರಿಸಬಾರದು ಯಾಕೆ ಅಂತ ಹೇಳುವುದಾದರೆ ನಟರಾಜ ನ ಈ ವಿಗ್ರಹವನ್ನು ಮನೆಯಲ್ಲಿ ಇರಿಸಿದರೆ ತಾಂಡವ ಆಡುತ್ತಿರುವ ನಟರಾಜನ ಮೂರ್ತಿಯನ್ನು ಮನೆಯಲ್ಲಿ ಇರಿಸಿದರೆ ಅದು ಮನೆಗೆ ಒಳಿತಾಗುವುದಿಲ್ಲ. ಆದ್ದರಿಂದ ಶಿವನ ಸ್ವರೂಪವೇ ಆಗಿದ್ದರೂ ಕೋಪದಲ್ಲಿ ಇರುವ ಶಿವನ ರೂಪದ ನಟರಾಜನ ಮೂರ್ತಿ ಅನ್ನು ಮನೆಯಲ್ಲಿ ಇರಿಸಿ ಪೂಜಿಸಬಾರದು.

ಮನೆಯಲ್ಲಿ ಯಾವುದೇ ಕಾರಣಕ್ಕೂ ಶಕ್ತಿದೇವತೆ ಅಂದರೆ ಉಗ್ರ ಸ್ವರೂಪರಾದ ದೇವಿಯ ಫೋಟೋಗಳನ್ನಾಗಲಿ ದೇವರ ಪಟಗಳನ್ನಾಗಲಿ ಇರಿಸಬಾರದು, ಉದಾಹರಣೆಗೆ ದುರ್ಗಾ ಮಾತೆ ಉಗ್ರ ಸ್ವರೂಪರಾದ ರೂಪವನ್ನು ತಾಳಿರುವ ಪಟವನ್ನು ಮನೆಯಲ್ಲಿ ಇರಿಸಿ ಪೂಜಿಸಬಾರದು. ಅಷ್ಟೇ ಅಲ್ಲ ವಿಘ್ನೇಶ್ವರನ ಪಟವನ್ನು ಮನೆಯಲ್ಲಿ ಇರಿಸುವುದು ಉತ್ತಮ ಶ್ರೇಷ್ಠ ಎಂದು ಹೇಳಲಾಗುತ್ತದೆ

ಆದರೆ ವಿನಾಯಕನ ಪಟವನ್ನು ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮನೆಯಲ್ಲಿ ಇರಿಸಬಾರದು ಎಂದು ಹೇಳಲಾಗುತ್ತದೆ. ಶಂಖವನ್ನು ಕೂಡ ಮನೆಯಲ್ಲಿ ಒಂದು ಸಂಖ್ಯೆಯಲ್ಲಿ ಮಾತ್ರ ಇರಿಸಿ ಪೂಜೆ ಮಾಡಬೇಕು, ಒಂದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಮನೆಯಲ್ಲಿ ಶಂಖವನ್ನು ಇರಿಸಿ ಪೂಜೆ ಅನ್ನು ಮಾಡಬಾರದು.

ಮನೆಯಲ್ಲಿ ಸೌಮ್ಯ ಸ್ವರೂಪರಾದ ದೇವರ ಪಟಗಳನ್ನು ಇರಿಸಿ ಅವುಗಳ ದರ್ಶನವನ್ನು ಮಾಡಬೇಕು ಮತ್ತು ಆ ದೇವರ ಪೂಜೆ ಮಾಡಬೇಕಾಗುತ್ತದೆ ಈ ರೀತಿ ಮನೆಯಲ್ಲಿ ಕೆಲವೊಂದು ದೇವರ ಫೋಟೋಗಳನ್ನು ಇರಿಸಬಾರದು ಹಾಗೂ ಅವುಗಳನ್ನು ಪೂಜಿಸಬಾರದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಮುರಿದ ವಿಗ್ರಹ ಗಳನ್ನು ಹೊಡೆದ ಫೋಟೋಗಳನ್ನು ಒಡೆದ ಕನ್ನಡಿಯನ್ನು ಮನೆಯಲ್ಲಿ ಇರಿಸಿಕೊಳ್ಳಬಾರದು ಅಂತ ಕೂಡ ಹೇಳಲಾಗುತ್ತದೆ.

ಈ ರೀತಿ ಇವತ್ತಿನ ಲೇಖನದಲ್ಲಿ ತಿಳಿಸಿದ ಈ ಮಾಹಿತಿಯನ್ನು ನೀವು ಕೂಡ ತಿಳಿದು ತಪ್ಪದೇ ಈ ಕೆಲವೊಂದು ವಿಚಾರಗಳನ್ನು ನೀವು ಕೂಡ ಪಾಲಿಸಿ ಮತ್ತು ಮನೆಯಲ್ಲಿ ವಿನಾಕಾರಣ ಉಂಟಾಗುವ ಜಗಳ ತೊಂದರೆಗಳು ತಾಪತ್ರೆಯ ಇವುಗಳಿಂದ ಪರಿಹಾರವನ್ನು ಪಡೆದುಕೊಳ್ಳಿ ಧನ್ಯವಾದಗಳು.

Leave a Reply

Your email address will not be published. Required fields are marked *