Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆ ದೇವರ ಆಶೀರ್ವಾದ ನಿಮ್ಮ ಮೇಲೆ ಯಾವಾಗ್ಲೂ ಇರಬೇಕೆ ಹಾಗಾದ್ರೆ ಈ ಒಂದು ಚಿಕ್ಕ ಕೆಲಸ ಮಾಡಿ ಸಾಕು .. ಸದಾಕಾಲ ಮನೆಯ ದೇವರ ಆಶೀರ್ವಾದ ನಿಮ್ಮ ಮೇಲೆ ಮತ್ತು ನಿಮ್ಮ ಮನೆಯ ಮೇಲೆ ಇರುತ್ತೆ …!!

ಮನೆದೇವರ ಆಶೀರ್ವಾದ ನಿಮಗೆ ಸಿಗಬೇಕೆಂದರೆ ಈ ರೀತಿಯಾಗಿ ಮಾಡಿ. ಹೀಗೆ ಮಾಡಿದರೆ ಸದಾಕಾಲ ನಿಮ್ಮ ಮೇಲೆ ಮನೆ ದೇವರ ಆಶೀರ್ವಾದ ಹಾಗೂ ರಕ್ಷಣೆ ಸಿಗುತ್ತದೆ.ಹಾಯ್ ಸ್ನೇಹಿತರೆ ಎಲ್ಲರ ಮನೆಗೆ ಹಾಗೂ ಕುಲಕ್ಕೆ ಮನೆದೇವರು ಎಂದು ಇರುತ್ತದೆ. ಅವರವರ ಮನೆಯ ದೇವರಿಗೆ ನಡೆದುಕೊಳ್ಳುವುದು ಹಾಗೂ ಜಾತ್ರೆಯನ್ನು ಮಾಡುವುದು ಅವರ ಸಂಪ್ರದಾಯ ಆಗಿರುತ್ತದೆ. ಮೊದಲು ನಾವು ನಮ್ಮ ಮನೆಯ ದೇವರಿಗೆ ಆದ್ಯತೆ ಕೊಡಬೇಕು ಏಕೆಂದರೆ ನಮ್ಮ ವಂಶದಿಂದ ಬಂದ ಪದ್ಧತಿ ಹಾಗೂ ಸಂಪ್ರದಾಯ ಆಗಿರುತ್ತದೆ. ಕೆಲವೊಬ್ಬರು ಮನೆದೇವರ ಹೆಸರನ್ನು ಮಕ್ಕಳಿಗೆ ಇಡುತ್ತಾರೆ. ಯಾರಿಗೆ ಆಗಲಿ ಮನೆಯ ದೇವರ ಆಶೀರ್ವಾದ ಹಾಗೂ ರಕ್ಷಣೆ ತುಂಬಾ ಮುಖ್ಯ ಆಗಿರುತ್ತದೆ.

ಮೊದಲು ಪೂಜೆ ಮಾಡುವಾಗ ಮನೆ ದೇವರನ್ನು ಪೂಜಿಸಿ ನಂತರ ನಿಮ್ಮ ಇಷ್ಟ ದೇವರನ್ನು ಪೂಜಿಸಬೇಕು. ಹಾಗಾದರೆ ಸ್ನೇಹಿತರೆ ನಿಮ್ಮ ಮನೆ ದೇವರ ಆಶೀರ್ವಾದ ಹಾಗೂ ರಕ್ಷಣೆ ನಿಮಗೆ ಸಿಗಬೇಕೆಂದರೆ ಈ ಒಂದು ಉಪಾಯ ಮಾಡಿ. ಮನೆಯ ದೇವರಿಗೆ ವರ್ಷಕ್ಕೊಮ್ಮೆಯಾದರೂ ಹೋಗಿ ಹಣ್ಣು-ಕಾಯಿ ಮಾಡಿಸಿಕೊಂಡು ಬರಬೇಕು ಇದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ. ಹಾಗೆ ಮನೆಯಲ್ಲಿ ಇದರ ಸಮಸ್ಯೆಗಳು ಕೂಡ ಬರುವುದಿಲ್ಲ ನಿಮಗೆ ಎಂತಹ ದೋಷಗಳು ಇದ್ದರೂ ಮನೆ ದೇವರನ್ನು ಪೂಜಿಸುವುದರಿಂದ ದೂರವಾಗುತ್ತವೆ. ಮನೆಯವರೆಲ್ಲಾ ಸೇರಿ ಮನೆದೇವರಿಗೆ ಹೋಗುವುದು ಒಂದು ಖುಷಿಯಾಗುತ್ತದೆ. ಇದರಿಂದ ನಮ್ಮಲ್ಲಿರುವ ಬಾಂಧವ್ಯ ಹಾಗೂ ಪ್ರೀತಿ ಕೂಡ ಹೆಚ್ಚಾಗುತ್ತದೆ.

ಯಾವುದಾದರೂ ಅಪಘಾತವಾಗುವುದು ತಪ್ಪಿದರೆ ಮೊದಲು ಹಿರಿಯರು ಮನೆ ದೇವರನ್ನು ಮರೆಸುತ್ತಾರೆ ಹಾಗೆ ತುಪ್ಪದ ದೀಪವನ್ನು ಹಚ್ಚಿ ಪ್ರಾರ್ಥನೆ ಮಾಡುತ್ತಾರೆ. ಇದು ಅವರು ಅವರ ಮನೆ ದೇವರ ಮೇಲೆ ಇಟ್ಟಿರುವ ನಂಬಿಕೆ ಆಗಿರುತ್ತದೆ. ಮನೆಯಲ್ಲಿ ಮನೆದೇವರ ಫೋಟೋ ಯಾವಾಗಲೂ ಇರಬೇಕು. ಇದನ್ನು ಪ್ರತಿನಿತ್ಯ ಪೂಜಿಸುವುದರಿಂದ ಮನೆಯಲ್ಲಿ ದೇವರ ಆಶೀರ್ವಾದದಿಂದ ಎಲ್ಲದು ಒಳ್ಳೆಯದೇ ಆಗುತ್ತದೆ. ಹಾಗೆ ನಿಮ್ಮ ಮನೆಯ ದೇವರ ದಿನದಂದು ನಾನು ಮಾಡಿದ ನಂತರ ಊಟವನ್ನು ಮಾಡಿ. ಪ್ರತಿನಿತ್ಯ ಎದ್ದ ನಂತರ ಮನೆದೇವರನ್ನು ನೆನೆಸಿಕೊಳ್ಳಿ ಹಾಗೂ ಮಲಗುವಾಗ ನೆನಸಿಕೊಂಡು ಮಲಗಿ ಇದರಿಂದ ನಿಮಗೆ ರಕ್ಷಣೆ ಸಿಗುತ್ತದೆ.

ಹಾಗಾದರೆ ನಾನು ಹೇಳುವ ಒಂದು ಪರಿಹಾರವನ್ನು ನೀವು ನೋಡಿದರೆ ಖಂಡಿತವಾಗಿಯೂ ನಿಮಗೆ ಹಾಗೂ ನಿಮ್ಮ ಮನೆಗೆ ರಕ್ಷಣೆ ಸಿಗುತ್ತದೆ. ನೀವು ಮನೆದೇವರಿಗೆ ಹೋದಾಗ ಅಲ್ಲಿಯ ಪ್ರಸಾದವನ್ನು ಹಾಗೂ ಒಂದು ಹಿಡಿ ಮಣ್ಣನ್ನು ಮನೆಗೆ ತರಬೇಕು. ಅಲ್ಲಿ ಮಣ್ಣು ಸಿಗದಿದ್ದರೆ ನಿಮ್ಮ ಮನೆಯಲ್ಲಿ ಇರುವ ಮಣ್ಣನ್ನು ಉಪಯೋಗಿಸಿ ಇದನ್ನು ಒಂದು ಕೆಂಪು ಬಟ್ಟೆಯಲ್ಲಿ ಹಾಕಿ ಅದಕ್ಕೆ ಅರಿಶಿನ ಕುಂಕುಮ ಚಂದನ ಮತ್ತು ಹೂಗಳನ್ನು ಹಾಕಿ ಗಂಟು ಕಟ್ಟಿ ಅದನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು. ಪ್ರತಿನಿತ್ಯ ಇದನ್ನು ಮನೆಯ ಪೂಜೆ ಮಾಡಿದ ನಂತರ ಇದನ್ನು ಕೂಡ ಪೂಜಿಸಬೇಕು ಅದರಲ್ಲೂ ಮನೆಯ ವಾರದ ದಿನ ತಪ್ಪದೇ ಪೂಜಿಸಿ. ದೀಪ ಧೂಪಗಳಿಂದ ಇದನ್ನು ಪೂಜಿಸಬೇಕು

ಹೀಗೆ ಮಾಡುವುದರಿಂದ ನಿಮ್ಮ ಮನೆಯ ಎಲ್ಲಾ ದೋಷಗಳು ದೂರವಾಗಿ ಸಂತೋಷ ನೆಮ್ಮದಿ ಆರೋಗ್ಯ ಎಲ್ಲವೂ ಸಿಗುತ್ತದೆ. ನೀವು ಕಂಡ ಕನಸುಗಳೆಲ್ಲ ನೆರವೇರುತ್ತದೆ. ಮನೆಯಲ್ಲಿ ಯಾವುದೇ ತೊಂದರೆ ಇಲ್ಲದೆ ಆರೋಗ್ಯವಾಗಿ ಇರುತ್ತೀರಿ. ನಿಮ್ಮ ಮನೆಯವರೆಲ್ಲರ ರಕ್ಷಣೆ ಆ ದೇವರು ಮಾಡುತ್ತಾನೆ. ನಿಮ್ಮ ಮನೆಯಲ್ಲಿ ಯಾವುದೇ ಹಣಕಾಸಿನ ತೊಂದರೆಗಳು ಬರುವುದಿಲ್ಲ. ನಿಮ್ಮ ಮನೆ ಯಾವಾಗಲೂ ಯಶಸ್ಸು ಹಾಗೂ ಅಭಿವೃದ್ಧಿಯಿಂದ ಏಳಿಗೆ ಆಗುತ್ತದೆ. ಸ್ನೇಹಿತರೇ ಹಾಗಾದರೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದೆ ನಾನು ಭಾವಿಸುತ್ತೇನೆ ಇಷ್ಟವಾಗಿದ್ದರೆ ದಯವಿಟ್ಟು ಎಲ್ಲರಿಗೂ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ