Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯ ಸದಸ್ಯರಿಗೆ ಹಾಗೂ ನಿಮಗೆ ಎಲ್ಲ ರೀತಿಯ ದೋಷಗಳು ತೊಲಗಿ ಕುಬೇರ ಆಗಬೇಕೆಂದರೆ ಗೋವಿನ ಹತ್ತಿರ ಈ ಸಣ್ಣ ಕೆಲಸ ಮಾಡಿ!!!!

ಜಾತಕದಲ್ಲಿ ಯಾವುದೇ ತರಹದ ಗ್ರಹದ ದೋಷ ಇರಲಿ ಅದಕ್ಕಾಗಿ ಆ ಒಂದು ದೋಷವನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಪೂಜ್ಯನೀಯ ಗೋವಿನ ಪೂಜೆಯನ್ನು ಈ ರೀತಿಯಾಗಿ ಈ ದಿವಸದಂದು ಮಾಡಿ,

ಹೌದು ಇರುವ ಏಳು ದಿನಗಳನ್ನು ನವಗ್ರಹಗಳಿಗೆ ಅನುಸಾರವಾಗಿ ಕಾಣಬಹುದಾಗಿದ್ದು, ಒಂದೊಂದು ವಾರಕ್ಕೂ ಒಂದೊಂದು ಗ್ರಹವು ಅಧಿಪತ್ಯವನ್ನು ವಹಿಸಿಕೊಂಡಿದೆ.

ಈ ರೀತಿಯಾಗಿ ಆ ವಾರದ ಆಧಿಪತ್ಯದ ಗ್ರಹವನ್ನು ಅಂದಿನ ದಿನ ನೆನೆಯುತ್ತಾ ಪೂಜೆ ಮಾಡಿ ಗೋವಿಗೆ ಧಾನ್ಯಗಳನ್ನು ಸಮರ್ಪಿಸುವುದರಿಂದ, ಸಕಲ ದೋಷಗಳು ನಿವಾರಣೆಯಾಗುತ್ತದೆ ಎಂದು ಶಾಸ್ತ್ರವು ಹೇಳುತ್ತದೆ.

* ವಾರದ ಮೊದಲನೆಯ ದಿನವಾದ ಭಾನುವಾರವನ್ನು ಸೂರ್ಯನಿಗೆ ಸಮರ್ಪಿಸಲಾಗಿದೆ, ಈ ಭಾನುವಾರದ ದಿವಸದಂದು ಸೂರ್ಯದೇವನನ್ನು ಪೂಜಿಸಬೇಕು ಮತ್ತು ಸೂರ್ಯದೇವನಿಗೆ ಇಷ್ಟವಾದ ಗೋಧಿಯನ್ನು ಗೋವಿಗೆ ದಾನ ನೀಡಬೇಕು,

ಹೇಗೆ ಅಂದರೆ ಗೋಧಿಯನ್ನು ಹಿಂದಿನ ದಿನವೆ ನೀರಿನಲ್ಲಿ ನೆನೆಸಿಟ್ಟು ಮಾರನೇ ದಿವಸ ಗೋವಿಗೆ ಪೂಜೆ ಮಾಡಿ ಮೂರು ಪ್ರದಕ್ಷಿಣೆಯನ್ನು ಗೋವಿಗೆ ಹಾಕಿ, ಈ ಗೋಧಿಯನ್ನು ಮುಕ್ಕೋಟಿ ದೇವರುಗಳು ನೆಲೆಯಾಗಿರುವ ಗೋವಿಗೆ ನೀಡಬೇಕು,

ನಂತರ ಗೋವಿಗೆ ಪೂಜೆಯನ್ನು ಸಲ್ಲಿಸುವಾಗ ಈ ಒಂದು ಮಂತ್ರವನ್ನು ಪಠಿಸಬೇಕಾಗುತ್ತದೆ, ಅದೇನೆಂದರೆ ” ರವಿಗ್ರಹ ದೋಷ ನಿವಾರಣಾರ್ಥಂ” ಎಂದು ಹೇಳಿಕೊಳ್ಳಬೇಕು.

* ಮನೋಕಾರಕ ಎಂದು ಕರೆಯುವ ಈ ಚಂದ್ರನನ್ನು ಸೋಮವಾರದ ದಿವಸದಂದು ಪೂಜೆ ಮಾಡಲಾಗುತ್ತದೆ ಚಂದ್ರನಿಗೆ ಇಷ್ಟವಾದ ಧಾನ್ಯ ಅಂದರೆ ಅಕ್ಕಿ ಹಿಂದಿನ ರಾತ್ರಿ ಅಕ್ಕಿಯನ್ನು ನೆನೆಸಿಟ್ಟು ಮಾರನೇ ದಿವಸ ಗೋಪೂಜೆಯನ್ನು ಮಾಡಿ ಮೂರು ಪ್ರದಕ್ಷಿಣೆಗಳನ್ನು ಹಾಕಿ ಅಕ್ಕಿಯನ್ನು ಸಮರ್ಪಿಸಬೇಕು,

ನಂತರ ಚಂದ್ರ ಗ್ರಹ ದೋಷ ನಿವಾರಣಾರ್ಥಂ ಎಂಬ ಮಂತ್ರವನ್ನು ಪಠಿಸುತ್ತಾ, ಗೋಪೂಜೆಯನ್ನು ಮುಗಿಸಬೇಕು. ಈ ರೀತಿ ಪೂಜೆಯನ್ನು ಮಾಡುವುದರಿಂದ ಚಂದ್ರ ಗ್ರಹಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಾಗಲಿ ನಿವಾರಣೆಗೊಳ್ಳುತ್ತದೆ.

* ಕುಜದೋಷ ಸಮಸ್ಯೆ ನಿಮ್ಮ ಜಾತಕದಲ್ಲಿ ಇದ್ದರೆ, ಮಂಗಳವಾರದ ದಿವಸದಂದು ತೊಗರಿ ಬೇಳೆಯನ್ನು ಹಿಂದಿನ ದಿನವೆ ನೆನೆಸಿ ಗೋಪೂಜೆಯನ್ನು ಮಾಡಿ, ಗೋವಿಗೆ ತೊಗರಿ ಬೇಳೆಯನ್ನು ಸಮರ್ಪಿಸುತ್ತಾ ಕುಜದೋಷ ನಿವಾರಣಾರ್ಥಂ ಎಂಬ ಮಂತ್ರವನ್ನು ಹೇಳಿಕೊಳ್ಳುತ್ತಾ ಗೋವಿನ ಪೂಜೆಯನ್ನು ಮಾಡಬೇಕು.

*ಬುಧಗ್ರಹ ದೋಷವಿದ್ದರೆ ಅಥವಾ ಸಕಲ ಅಷ್ಟೈಶ್ವರ್ಯ ಬುದ್ಧಿವಂತಿಕೆ ಪ್ರಾಪ್ತಿಯಾಗಬೇಕಾದರೆ, ಬುಧವಾರದ ದಿವಸದಂದು ಗೋಪೂಜೆಯನ್ನು ಮಾಡಿ, ಹೆಸರುಕಾಳನ್ನು ನೆನೆಸಿಟ್ಟು ಗೋವಿಗೆ ಸಮರ್ಪಿಸಬೇಕು, ನಂತರ ಬುಧಗ್ರಹ ದೋಷ ನಿವಾರಣಾರ್ಥಂ ಎಂಬ ಮಂತ್ರವನ್ನು ಪಡಿಸಬೇಕಾಗುತ್ತದೆ.

*ಪ್ರತಿಯೊಂದು ಕೆಲಸ ಕಾರ್ಯಗಳು ಸುಗಮವಾಗಿ ಸಾಗಬೇಕೆಂದರೆ ಗುರುಬಲದ ಅವಶ್ಯಕತೆ ತುಂಬಾನೆ ಇರುತ್ತದೆ ಈ ಗುರುಬಲ ಇಲ್ಲದಿದ್ದರೆ ಗುರುವಾರದ ದಿವಸದಂದು, ಗುರು ಗ್ರಹವನ್ನು ನೆನೆಯುತ್ತಾ ಈತನಿಗೆ ಪ್ರಿಯವಾದ ಕಡಲೆ ಕಾಳುಗಳನ್ನು ನೆನೆಸಿಟ್ಟು ಗೋವಿಗೆ ಸಮರ್ಪಿಸಬೇಕು,

ಹಾಗೆ ಗುರುಗ್ರಹ ದೋಷ ನಿವಾರಣಾರ್ಥಂ ಎಂದು ಮಂತ್ರವನ್ನು ಪಠಿಸುತ್ತಾ ಗುರುವಿನ ಆಶೀರ್ವಾದ ಪಡೆಯುವುದಕ್ಕಾಗಿ ಗೋಪೂಜೆಯನ್ನು ಗುರುವಾರದ ದಿವಸದ ಲೋಕ್ ಮಾಡಬೇಕಾಗುತ್ತದೆ.

*ಶುಕ್ರ ಬಲ ಶುಕ್ರ ಗ್ರಹ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ, ಹಿಂದಿನ ದಿವಸವೆ ಅವರೆಕಾಳುಗಳನ್ನು ನೆನೆಸಿಟ್ಟು ಶುಕ್ರವಾರದ ದಿವಸದಂದು ಗೋಪೂಜೆಯನ್ನು ಮಾಡುತ್ತಾ, ಈ ಅವರೆಕಾಳುಗಳನ್ನು ಗೋವಿಗೆ ಸಮರ್ಪಿಸಬೇಕು, ನಂತರ ಶುಕ್ರ ಗ್ರಹ ದೋಷ ನಿವಾರಣಾರ್ಥಂ ಎಂಬ ಮಂತ್ರವನ್ನು ಪಠಿಸುತ್ತಾ ಗೋಪೂಜೆಯನ್ನು ಮಾಡಬೇಕು.

*ಶನಿ ಗ್ರಹ ದೋಷ ಶನಿಯ ವಕ್ರ ದೃಷ್ಟಿಗೆ ಪಾತ್ರರಾಗಿದ್ದರೆ, ಶನಿಯ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ಶನಿವಾರದ ದಿವಸದಂದು ಎಳ್ಳನ್ನು ನೆನೆಸಿಟ್ಟು ಅದನ್ನು ಶನಿವಾರದ ದಿವಸದಂದು ಸೋಸಿ ಅದಕ್ಕೆ ಬೆಲ್ಲವನ್ನು ಹಾಕಿ ಉಂಡೆ ಮಾಡಬೇಕು, ನಂತರ ಇದನ್ನು ಶಿವನಿಗೆ ನೈವೇದ್ಯಯಾಗಿ ನೀಡಿ, ಗೋವಿಗೆ ದಾನವಾಗಿ ನೀಡಬೇಕು ಈ ರೀತಿ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ.

Leave a Reply

Your email address will not be published. Required fields are marked *